ಬೆಂಗಳೂರು: ಎಲ್ಲೆಡೆ ವ್ಯಾಪಿಸಿರುವ ಕೊರೊನಾ ಸೋಂಕು ಹಲವು ಪ್ರತಿಷ್ಠಿತ ಆಸ್ಪತ್ರೆಗಳ ಸ್ಥಗಿತಕ್ಕೆ ಕಾರಣವಾಗಿದೆ.
ಜಯದೇವ, ಕಿದ್ವಾಯಿ, ನಿಮ್ಹಾನ್ಸ್ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ವಾರಗಳ ಕಾಲ ಚಿಕಿತ್ಸಾ ಸೇವೆಗೆ ಬ್ರೇಕ್ ಹಾಕಲಾಗಿತ್ತು. ಇದೀಗ ರಾಜ್ಯದ ಏಕೈಕ ಸರ್ಕಾರಿ ಕಿಡ್ನಿ ಆಸ್ಪತ್ರೆಗೂ ಕೊರೊನಾ ಕಾಟ ಎದುರಾಗಿದೆ.
ವಿಕ್ಟೋರಿಯಾ ಕ್ಯಾಂಪಸ್ನಲ್ಲಿರುವ ನೆಫ್ರೋ ಯುರಾಲಜಿ ವಿಭಾಗದಲ್ಲಿ ಸೋಂಕು ಬಿಟ್ಟೂ ಬಿಡದೆ ಕಾಡ್ತಿದೆ. ವೈದ್ಯರು, ಪಿಜಿ ವೈದ್ಯ ವಿದ್ಯಾರ್ಥಿಗಳು, ಹೌಸ್ ಕೀಪರ್ಗಳಿಗೂ ಕೊರೊನಾ ಸೋಂಕು ತಗುಲಿದೆ. ಒಂದು ವಾರದಲ್ಲೇ ಬರೋಬ್ಬರಿ 11 ಜನರಿಗೆ ಸೋಂಕು ದೃಢಪಟ್ಟಿದೆ.
ಸರಿಯಾಗಿ ಸ್ಯಾನಿಟೈಸ್ ಮಾಡದೇ ಸೋಂಕು ಹೆಚ್ಚುತ್ತಿದೆ ಎಂದು ಸಿಬ್ಬಂದಿ ವರ್ಗದಿಂದ ಆರೋಪವೂ ಕೇಳಿ ಬಂದಿದೆ. ಸೋಂಕು ತಡೆಗೆ ಕನಿಷ್ಠ ಮೂರು ದಿನ ಆಸ್ಪತ್ರೆಯನ್ನು ಕ್ಲೋಸ್ ಮಾಡುಬೇಕಾಗುತ್ತೆ. ಇಲ್ಲದಿದ್ದರೆ ಕಿಡ್ನಿ ಸಮಸ್ಯೆಯಿಂದ ಬರುವ ರೋಗಿಗಳಿಗೆ ಚಿಕಿತ್ಸೆ ಇಲ್ಲದಂತಾಗುತ್ತದೆ.
ಪಾಸಿಟಿವ್ ಪ್ರಕರಣಗಳು:
*ಜುಲೈ 2- ಜ್ಯೂನಿಯರ್ ಡಾಕ್ಟರ್ಗೆ ಕೊರೊನಾ ಪಾಸಿಟಿವ್.
*ಜುಲೈ 3- ಸಿಟಿ ಸ್ಕ್ಯಾನ್ ವಿಭಾಗದ ಸ್ಟಾಫ್ ನರ್ಸ್ಗೆ ಪಾಸಿಟಿವ್ ಹಾಗೂ ರಿಸೆಪ್ಷನಿಸ್ಟ್ಗೆ ಕೊರೊನಾ ಪಾಸಿಟಿವ್.
*ಜುಲೈ 4- ಡಯಾಲಿಸಿಸ್ ಸ್ಟೂಡೆಂಟ್ ಮತ್ತು ICU ಸಿಬ್ಬಂದಿಗೆ ಪಾಸಿಟಿವ್ ಹಾಗೂ ಹೌಸ್ ಕೀಪಿಂಗ್ ಸಿಬ್ಬಂದಿ ಒಬ್ಬರಿಗೆ ಪಾಸಿಟಿವ್.
*ಜುಲೈ 5- ಇಬ್ಬರು ICU ಸ್ಟಾಪ್ಗೆ ಪಾಸಿಟಿವ್.
*ಜುಲೈ 6- ಆಸ್ಪತ್ರೆಯ ಇತರೆ ಸಿಬ್ಬಂದಿ ಒಬ್ಬರಿಗೆ ಪಾಸಿಟಿವ್ ಹಾಗೂ ಇಬ್ಬರು ಹೌಸ್ ಕೀಪಿಂಗ್ ಸಿಬ್ಬಂದಿಗೆ ಪಾಸಿಟಿವ್.