ಬೆಂಗಳೂರು: ಅಬಕಾರಿ ಸುಂಕ ಏರಿಕೆಯಾದ ಹಿನ್ನೆಲೆಯಲ್ಲಿ ಮದ್ಯ ಮಾರಾಟದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ.

ಲಾಕ್ಡೌನ್ನಿಂದ ದೇಶದ ಎಲ್ಲಾ ವಲಯಗಳು ಸಾಕಷ್ಟು ನಷ್ಟ ಅನುಭವಸುತ್ತಿವೆ. ಈ ನಡುವೆ ಎಣ್ಣೆ ಸಿಗದೆ ಕಂಗಾಲಾಗಿದ್ದ ಮದ್ಯ ಪ್ರಿಯರು ಬಾರ್ಗಳನ್ನು ತೆರಯುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಆರ್ಥಿಕತೆಯನ್ನು ಗಮನಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಬಾರ್ಗಳನ್ನು ತೆರೆದಿತ್ತು. ಆದರೆ ಮದ್ಯದ ಮೇಲೆ ಶೇ.17 ರಷ್ಟು ಸುಂಕ ಹೆಚ್ಚಳ ಮಾಡುವ ಮೂಲಕ ಶಾಕ್ ಕೊಟ್ಟಿತ್ತು. ಇದರಿಂದ ಮದ್ಯ ಮಾರಾಟದಲ್ಲಿ ಭಾರಿ ಇಳಿಕೆಯಾಗಿದೆ.
ಲಾಕ್ಡೌನ್ ಆದಾಗಿನಿಂದ ಇಲ್ಲಿಯವರೆಗೆ ಐಎಂಎಲ್ನಲ್ಲಿ ಶೇ.45 ರಷ್ಟು ಇಳಿಕೆಯಾಗಿದ್ರೆ, ಬಿಯರ್ ಮಾರಾಟದಲ್ಲಿ ಶೇ.82.38 ರಷ್ಟು ಇಳಿಕೆಯಾಗಿದೆ. ಈ ಕುರಿತಂತೆ ಅಬಕಾರಿ ಇಲಾಖೆಯಿಂದ ಅಧಿಕೃತ ಮಾಹಿತಿ ಈಟಿವಿ ಭಾರತ್ಗೆ ಲಭ್ಯವಾಗಿದೆ.
2018-19 ರಲ್ಲಿ ಐಎಂಎಲ್ 600.92 ರಷ್ಟು ಮಾರಾಟವಾಗಿದ್ರೆ, ಬಿಯರ್ 289.60 ರಷ್ಟು ಸೇಲ್ ಆಗಿತ್ತು. ಆದರೆ 2020ರ ಮಾರ್ಚ್ನಲ್ಲಿ ಲಾಕ್ಡೌನ್ ಹೇರಿದ ಪರಿಣಾಮ ಎಣ್ಣೆ ವಹಿವಾಟು ಒಮ್ಮೆ ಬಂದಾಗಿತ್ತು. 2019-20ರ ಮೇ ತಿಂಗಳವರೆಗಿನ ವರದಿ ಪ್ರಕಾರ ಕೇವಲ 22.47 ರಷ್ಟು ಐಎಂಎಲ್ ಹಾಗೂ 5.26 ರಷ್ಟು ಬಿಯರ್ ಮಾತ್ರ ಮಾರಾಟವಾಗಿದೆ. 2020-21ರಲ್ಲಿ ಕೇವಲ 57 ಕೋಟಿಯಷ್ಟೇ ಆದಾಯ ಬರುತ್ತಿದೆ. ಈ ಮೂಲಕ ಲಾಭಾಂಶಾದಲ್ಲಿ ಶೇ.28 ರಷ್ಟು ಇಳಿಕೆಯಾಗಿದೆ ಎಂಬ ಮಾಹಿತಿ ಅಬಕಾರಿ ಇಲಾಖೆ ಸಿದ್ಧ ಪಡಿಸಿರುವ ವರದಿಯಲ್ಲಿ ಲಭ್ಯವಾಗಿದೆ.
ಇನ್ನು ತಿಂಗಳಿಗೆ ಹೋಲಿಸಿದರೆ 2019-20 ರಲ್ಲಿ 2119.89 ಕೋಟಿ ಆದಾಯ ಬಂದಿದ್ದು, 2020-21 ರಲ್ಲಿ ಕೇವಲ 510 ಕೋಟಿ ಆದಾಯ ಬಂದಿದೆ. ಈ ಮೂಲಕ ಶೇಕ.75 ರಷ್ಟು ಮದ್ಯ ಮಾರಾಟದಲ್ಲಿ ಇಳಿಕೆಯಾಗಿದೆ. 2019-20 ರಲ್ಲಿ 21,486 ಕೋಟಿ ಆದಾಯ ಬಂದಿದ್ದು, ಇತ್ತ 2020-21 ರಲ್ಲಿ ಮೇ ವರೆಗೂ 510.15 ಕೋಟಿ ಲಾಭ ಗಳಿಸಿದೆ. ಈ ಮೂಲಕ ಶೇ.97 ರಷ್ಟು ಮದ್ಯ ಮಾರಾಟದಲ್ಲಿ ಇಳಿಕೆಯಾದಂತಾಗಿದೆ.