ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದ್ದು, ಇದೀಗ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಿಗೆ ಕೆಎಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ.
ಐಎಎಸ್ ಅಧಿಕಾರಿ ನವೀನ್ ರಾಜ್ ಸಿಂಗ್ ಅವರಿಗೆ ಈ ಕೆಳಕಂಡ ನೋಡಲ್ ಅಧಿಕಾರಿಗಳು ಎಲ್ಲಾ ಕಾರ್ಯದ ವರದಿ ಮಾಡಿಕೊಳ್ಳಬೇಕಾಗಿದೆ.
ದಯಾನಂದ ಭಂಡಾರಿ - ಯಲಹಂಕ ವಿಧಾನಸಭಾಕ್ಷೇತ್ರ, ಡಾ.ಕೆ.ಎನ್. ಅನುರಾಧ- ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ, ಡಾ. ಅಶಾ - ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರ, ಜಿ. ಪ್ರಭು - ಗಾಂಧಿನಗರ ವಿಧಾನಸಭಾ ಕ್ಷೇತ್ರ, ಪಿ.ಎಂ. ನಂದಿನಿ - ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ, ಎನ್. ಜಯಂತಿ - ರಾಜಾಜಿನಗರ ವಿಧಾನಸಭಾ ಕ್ಷೇತ್ರ, ಭೀಮಾಶಂಕರ್ - ಗೋವಿಂದರಾಜ ನಗರ, ಎಚ್. ಜಯ - ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ. ಈ ಅಧಿಕಾರಿಗಳು ಐಎಎಸ್ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರಿಗೆ ತಮ್ಮ ಕಾರ್ಯದ ವರದಿಗಳನ್ನು ಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅನುಪಮ - ವಿಜಯನಗರ ವಿಧಾನಸಭಾ ಕ್ಷೇತ್ರ, ಬಿ. ಶೋಭಾ - ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ, ಎ.ಎಂ .ಯೋಗೀಶ್ - ಬಸವನಗುಡಿ ವಿಧಾನಸಭಾಕ್ಷೇತ್ರ, ಕೈಕಶಾನ್ - ಪದ್ಮನಾಭನಗರ ವಿಧಾನಸಭಾ ಕ್ಷೇತ್ರ, ಪರಶುರಾಮ್ ಶಿನ್ನಾಳ್ಕರ್ - ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ, ವಿ. ಪಾತರಾಜು - ಜಯನಗರ ವಿಧಾನಸಭಾ ಕ್ಷೇತ್ರ. ಇವರು ಐಎಎಸ್ ಅಧಿಕಾರಿ ಮುನೀಶ್ ಮೌದ್ಗೀಲ್ ಅವರಿಗೆ ಕಾರ್ಯ ವರದಿಯನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಡಾ. ವೆಂಕಟೇಶ್ ಮೂರ್ತಿ - ಯಶವಂತಪುರ ವಿಧಾನಸಭಾ ಕ್ಷೇತ್ರ, ಬಾಳಪ್ಪ ಹಂದಿಗುಂದ - ಹೆಬ್ಬಾಳ ವಿಧಾನಸಭಾ ಕ್ಷೇತ್ರ, ಉಷಾರಾಣಿ - ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ, ಎಚ್.ಎಸ್. ಸತೀಶ್ ಬಾಬು - ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ, ಡಾ. ಎಂ. ಮಹೇಶ್ - ಮಹದೇವಪುರ ವಿಧಾನಸಭಾ ಕ್ಷೇತ್ರ ಇವರು ಐಎಎಸ್ ಅಧಿಕಾರಿ ಡಾ.ಆರ್. ವಿಶಾಲ್ ಅವರಿಗೆ ಕಾರ್ಯ ವರದಿಯನ್ನು ನೀಡಬೇಕು.
ಕೆ.ಎನ್.ಪ್ರವೀಣ್ - ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರ, ಕ್ಯಾತ್ಯಾಯಿನಿ ದೇವಿ - ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ, ಎಚ್.ಆರ್. ಶಿವಕುಮಾರ್ - ಸಿ.ವಿ. ರಾಮನ್‌ನಗರ ವಿಧಾನಸಭಾ ಕ್ಷೇತ್ರ, ಡಾ.ಎಸ್.ಎಸ್. ಮಧುಕೇಶ್ವರ್ - ಶಿವಾಜಿನಗರ ವಿಧಾನಸಭಾ ಕ್ಷೇತ, ಎಂ.ಕೆ. ಜಗದೀಶ್ - ಶಾಂತಿನಗರ ವಿಧಾನಸಭಾ ಕ್ಷೇತ್ರ. ಅನಿತಾ ಲಕ್ಷೀ - ದಾಸರಹಳ್ಳಿ ವಿಧಾನಸಭಾ ಕ್ಷೇತ್ರ. ಇವರು ಐಎಎಸ್ ಅಧಿಕಾರಿ ಡಾ.ಪಿ.ಸಿ. ಜಾಫರ್ ಅವರಿಗೆ ವರದಿ ಸಲ್ಲಿಸಬೇಕು.
ಎ.ಬಿ.ವಿಜಯಕುಮಾರ್ - ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ, ಡಾ.ಶಿವಣ್ಣ - ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ, ಇವರು ಐಎಎಸ್ ಅಧಿಕಾರಿ ಕ್ಯಾ. ಪಿ. ಮಣಿವಣ್ಣನ್ ಅವರಿಗೆ ವರದಿ ಮಾಡಲಿದ್ದಾರೆ. ಬಸವರಾಜು - ಆನೇಕಲ್ ಇವರು ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ಅವರಿಗೆ ಕಾರ್ಯವರದಿ ಸಲ್ಲಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.