ಬೆಂಗಳೂರು: ರಾಜ್ಯದ ಜನರಿಗೆ ಕೊರೊನಾ ವೈರಸ್ ಬಿಗ್ ಶಾಕ್ ನೀಡುವುದು ಗ್ಯಾರಂಟಿ. ಯಾಕೆಂದರೆ ಈಗ ಊಹಿಸಲು ಆಗದ ಹಾಗೇ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರಿಕೆ ಆಗಲಿದೆ.
ಈಗಾಗಲೇ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,000ದ ಗಡಿದಾಟಿದ್ದು, ಇನ್ನು ಕೇವಲ ಒಂದೇ ಒಂದು ವಾರದಲ್ಲಿ ಸೋಂಕಿತರ ಸಂಖ್ಯೆ 10,000ಕ್ಕೆ ತಲುಪಲಿದೆ. ಈ ನಡುವೆ ಟಾಸ್ಕ್ಫೋರ್ಸ್ ತಂಡವು ಈ ಎರಡು ತಿಂಗಳು ಬಹಳ ಕಷ್ಟಕರವಾಗಿ ಇರಲಿದ್ದು, ಆಗಸ್ಟ್ ವೇಳೆಗೆ 20 ಸಾವಿರದಿಂದ 25 ಸಾವಿರಕ್ಕೆ ಏರಿಕೆ ಆಗಲಿದೆ ಅಂತ ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ನಡೆಸಿರುವ ಸರ್ವೆಯಲ್ಲಿ ಈ ಆಘಾತಕಾರಿ ವಿಷಯ ಬಯಲಾಗಿದ್ದು, ಆಗಸ್ಟ್ 15 ರ ವೇಳೆಗೆ ಸೋಂಕಿತರ ಸಂಖ್ಯೆ ಏರುವ ನಿರೀಕ್ಷೆ ಇದೆ. ನಿತ್ಯ ಕೊರೊನಾದ ಹೆಚ್ಚಳ ಶೇ. 3 ರಷ್ಟು ಜಾಸ್ತಿಯಾಗುತ್ತಿದ್ದು, 3 ನೇ ಹಂತಕ್ಕೆ ಸೈಲೆಂಟ್ ಆಗಿ ತಲುಪುತ್ತಿದ್ಯಾ ಅನ್ನೋ ಆತಂಕ ಹೆಚ್ಚಿದೆ.
ಈ ಹಿನ್ನೆಲೆ ಇಲಾಖೆಯು ಜನರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆಗಾಗ ಕೈ ತೊಳೆದುಕೊಳ್ಳುವುದು, ಸಾಮಾಜಿಕ ಅಂತರವನ್ನ ಪಾಲಿಸಲೇಬೇಕಿದೆ ಅಂತ ಎಚ್ಚರಿಕೆಯನ್ನ ಅಧಿಕಾರಿಗಳು ನೀಡುತ್ತಿದ್ದಾರೆ. ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಖಂಡಿತ ಆಪತ್ತು ಬೆನ್ನ ಹಿಂದೆ ಅಂಟಿಕೊಳ್ಳಲಿದೆ. ಸರಿಯಾದ ಸಮಯ ಪ್ರಜ್ಞೆಯಿಂದ ತಿಳಿವಳಿಕೆಯಿಂದ ಎಲ್ಲರೂ ನಡೆದುಕೊಳ್ಳೋವುದೊಂದೇ ಈಗ ಉಳಿದಿರುವ ಮಾರ್ಗ.