ಬೆಂಗಳೂರು: ಲಾಕ್ಡೌನ್ ಇರುವ ಕಾರಣ ಯಾವುದೇ ಸಾರ್ವಜನಿಕ ಕಾರ್ಯಕ್ರಮವಿಲ್ಲದೆ ಮಹಾವೀರ ಜಯಂತಿ ಜರುಗಿತು. ಅಲ್ಲದೆ ನಗರದ ಎಲ್ಲಾ ಜೈನ ದೇವಾಲಯಗಳು ಸೇರಿ ಕೊರೊನಾ ವಿರುದ್ಧ ಹೋರಾಡಲು ಮುಖ್ಯಮಂತ್ರಿ ಪರಿಹಾರ ನಿಧಿಗೆ 51 ಲಕ್ಷ ರೂಪಾಯಿಗಳ ದೇಣಿಗೆ ನೀಡಲಾಯಿತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಜೈನ ಸಮುದಾಯದ ಮುಖ್ಯಸ್ಥ ಪ್ರಕಾಶ್ ಪಿರಗಲ್, ವಿಧಾನ ಪರಿಷತ್ ಸದಸ್ಯ ಲೆಹೆರ್ ಸಿಂಗ್ ಹಾಗೂ ಇನ್ನಿತರೆ ನಾಯಕರು ಭೇಟಿ ನೀಡಿ ಚೆಕ್ ನೀಡಿದರು.
ಕೊರೊನಾ ವೈರಸ್ ಭೀತಿ ಹಿನ್ನೆಲೆ ಮಹಾವೀರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸದೆ ಜೈನ ಸಮುದಾಯದವರು ಮನೆಯಲ್ಲೇ ಸರಳವಾಗಿ ಪೂಜೆ ನೆರವೇರಿಸಿದ್ದಾರೆ.