ETV Bharat / state

ಗುತ್ತಿಗೆದಾರರಿಗೆ ಬೇಕು ಉತ್ತರ ಭಾರತದ ಕಾರ್ಮಿಕರು: ಊರಿಗೆ ಹೊರಟವರಿಗೆ ಹಲವು ಆಮಿಷ

ವಲಸೆ ಕಾರ್ಮಿಕರು ತಮ್ಮ ಊರಿನತ್ತ ಹೆಜ್ಜೆ ಹಾಕಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮಹಾನಗರಗಳಲ್ಲಿ ನೆಲೆಸಿರುವ ವಲಸೆ ಕಾರ್ಮಿಕರು ಉದ್ಯಮಿಗಳಿಗೆ ಅನಿವಾರ್ಯವಾಗಿದ್ದಾರೆ. ಕಡಿಮೆ ಸಂಭಾವನೆಗೆ ಗುಣಮಟ್ಟದ ಕೆಲಸ ಮಾಡುವ ಇವರನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದ್ದು, ಗುತ್ತುಗೆದಾರರು ಇನ್ನಿಲ್ಲದ ಆಮಿಷ ಒಡ್ಡುತ್ತಿದ್ದಾರೆ.

contractors need workers from North India: question is if they want to stay
ಗುತ್ತಿಗೆದಾರರಿಗೆ ಬೇಕೇ ಬೇಕು ಉತ್ತರ ಭಾರತದ ಕಾರ್ಮಿಕರು: ಊರಿಗೆ ಹೊರಟವರಿಗೆ ಹಲವು ಆಮಿಷ
author img

By

Published : May 14, 2020, 11:38 PM IST

ಬೆಂಗಳೂರು: ಲಾಕ್​​​ಡೌನ್ ನಿಯಮಗಳನ್ನು ಸಡಿಲಿಸಿದ ಬಳಿಕ ಹೊರ ರಾಜ್ಯಗಳ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಇದೇ ವೇಳೆ ಉತ್ಪಾದನಾ ವಲಯ ಮತ್ತು ನಿರ್ಮಾಣ ವಲಯಗಳ ಕಾರ್ಯ ಚಟುವಟಿಕೆಗಳು ಪುನರಾರಂಭವಾಗಿವೆ. ಈ ನಿಟ್ಟಿನಲ್ಲಿ ಕೆಲಸಗಾರರ ಕೊರತೆ ಎದುರಾಗಿದ್ದು, ಉದ್ಯಮಿಗಳು ತಮ್ಮೊಂದಿಗೆ ಕೆಲಸ ಮಾಡಿಕೊಂಡಿದ್ದ ವಲಸೆ ಕಾರ್ಮಿಕರನ್ನೇ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ.

ತಮ್ಮಲ್ಲಿಯೇ ಕೆಲಸವನ್ನು ಮುಂದುವರಿಸಿಕೊಂಡು ಹೋದರೆ ಉಚಿತ ಊಟ, ವಸತಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಆಮಿಷ ಒಡ್ಡುತ್ತಾ ಕಾರ್ಮಿಕರ ಮನವೊಲಿಸುತ್ತಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಕೆಲಸವೂ ಇಲ್ಲದೆ ಸಂಪಾದನೆಯೂ ಇಲ್ಲದಂತಾಗಿದ್ದ ವಲಸೆ ಕಾರ್ಮಿಕರು ಲಾಕ್​ಡೌನ್​ ಅವಧಿಯಲ್ಲಿ ಅತ್ಯಂತ ಸಂಕಷ್ಟದ ದಿನಗಳನ್ನು ಎದುರಿಸಿದ್ದಾರೆ. ದುಡಿಯುವ ಶಕ್ತಿ ಇದ್ದರೂ ಬೇಡಿ ತಿನ್ನಬೇಕಾದಂತಹ ಪರಿಸ್ಥಿತಿ ಇವರನ್ನು ಮಾನಸಿಕವಾಗಿ ಹೈರಾಣಾಗಿಸಿದೆ. ಜೊತೆಗೆ ಕೊರೊನಾ ವೈರಸ್ ಪ್ರಾಣ ಭೀತಿ ಸೃಷ್ಟಿಸಿದೆ.

ಇವೆಲ್ಲದರಿಂದ ತೀವ್ರ ಬೇಸರಕ್ಕೆ ಒಳಗಾಗಿರುವ ವಲಸೆ ಕಾರ್ಮಿಕರು ತಮ್ಮ ಊರಿನತ್ತ ಹೆಜ್ಜೆ ಹಾಕಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮಹಾನಗರಗಳಲ್ಲಿ ನೆಲೆಸಿರುವ ವಲಸೆ ಕಾರ್ಮಿಕರು ಉದ್ಯಮಿಗಳಿಗೆ ಅನಿವಾರ್ಯವಾಗಿದ್ದಾರೆ. ನಮ್ಮದೇ ರಾಜ್ಯದ ಗ್ರಾಮೀಣ ಪ್ರದೇಶಗಳಿಂದ ಬಂದಿರುವ ಕಾರ್ಮಿಕರು ಕೆಲಸ ಮಾಡುತ್ತಾರಾದರೂ ಉತ್ತರ ಭಾರತದ ರಾಜ್ಯಗಳಿಂದ ಬಂದಿರುವ ಕಾರ್ಮಿಕರಂತೆ ಒಂದೆಡೆ ಹೆಚ್ಚು ಕಾಲ ನಿಲ್ಲುವುದಿಲ್ಲ. ಎರಡು ವಾರ ಕೆಲಸ ಮಾಡಿದರೆ ಮತ್ತೆರಡು ವಾರ ಹತ್ತಿರದಲ್ಲಿರುವ ತಮ್ಮ ಗ್ರಾಮಗಳಿಗೆ ಮದುವೆ, ಮುಂಜಿ, ತಿಥಿ ಮತ್ತಿತರ ನೆಪಗಳನ್ನು ಹೇಳಿಕೊಂಡು ಹೋಗಿ ಗೈರು ಹಾಜರಾಗುತ್ತಾರೆ. ಹೀಗಾಗಿ ಉದ್ಯಮಿಗಳಿಗೆ ರಾಜ್ಯದ ಕಾರ್ಮಿಕರಿಗಿಂತ ಹೊರ ರಾಜ್ಯಗಳ, ಅದರಲ್ಲೂ ಉತ್ತರ ಭಾರತ ಮೂಲದ ವಲಸೆ ಕಾರ್ಮಿಕರ ಮೇಲೆ ಹೆಚ್ಚು ವಿಶ್ವಾಸ.

ನಿಯತ್ತಾಗಿ ದುಡಿಯುವ, ಕಡಿಮೆ ಸಂಬಳ ಕೊಟ್ಟರೂ ಉತ್ತಮವಾಗಿ ಕೆಲಸ ಮಾಡುವ ಉತ್ತರ ಭಾರತ ಮೂಲದ ವಲಸೆ ಕಾರ್ಮಿಕರಿಗೆ ರಾಜ್ಯದ ಎಲ್ಲಾ ಮಹಾನಗರಗಳಲ್ಲಿ ಬೇಡಿಕೆ ಇದೆ. ಹೀಗಾಗಿಯೇ ಈ ಕಾರ್ಮಿಕರನ್ನು ಉಳಿಸಿಕೊಳ್ಳಲು ಉದ್ಯಮಿಗಳು ಸಂಬಳದ ಜೊತೆಗೆ ವಾಸಿಸಲು ಮನೆ, ಊಟಕ್ಕೆ ದಿನಸಿ ಪದಾರ್ಥಗಳು, ವಾರಕ್ಕೊಮ್ಮೆ ಮಾಂಸಾಹಾರ, ಕೆಲಸದ ಅವಧಿಗಳಲ್ಲಿ ಟೀ, ಕಾಫಿ ಸೇರಿದಂತೆ ಹಲವು ಸವಲತ್ತುಗಳನ್ನು ನೀಡುವುದಾಗಿ ಆಮಿಷ ಒಡ್ಡುತ್ತಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ಸಂಬಳವನ್ನು ಹೆಚ್ಚು ಮಾಡುವ ಆಸೆ ತೋರಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ನಗರದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರ ಮಾಲೀಕ ವಿಜಯಕುಮಾರ್, ಉತ್ತರ ಭಾರತ ಮೂಲದ ಕಾರ್ಮಿಕರ ಶ್ರಮ ಮತ್ತು ವಿನಯಪೂರ್ವಕ ನಡವಳಿಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಸ್ಥಳೀಯ ಕಾರ್ಮಿಕರಿಗೆ ಹೋಲಿಸಿದಲ್ಲಿ ಇವರು ಹೆಚ್ಚು ಶ್ರದ್ಧಯಿಂದ ಕೆಲಸ ಮಾಡುತ್ತಾರೆ. ಹೀಗಾಗಿಯೇ ಪೀಣ್ಯ ಸುತ್ತಮುತ್ತಲ ಕೈಗಾರಿಕೆಗಳಲ್ಲಿ ಬಿಹಾರ, ಒರಿಸ್ಸಾ ಮೂಲದ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಇದೀಗ ಇವರು ಊರುಗಳಿಗೆ ಹೊರಟು ನಿಂತಿದ್ದು, ಇಲ್ಲಿಯೇ ಉಳಿಸಿಕೊಳ್ಳಲು ಸಂಬಳದ ಜೊತೆಗೆ ಉಚಿತ ವಾಸ್ತವ್ಯ ಹಾಗೂ ಊಟಕ್ಕೆ ಪಡಿತರ ವ್ಯವಸ್ಥೆ ಮಾಡುತ್ತಿದ್ದೇವೆ. ಕೆಲಸದ ಅವಧಿಯಲ್ಲಿ ಟೀ, ಕಾಫಿ ಸೌಲಭ್ಯ ಕಲ್ಪಿಸಿದ್ದೇವೆ ಎನ್ನುತ್ತಾರೆ.

ಇದೇ ಮಾತುಗಳನ್ನು ಕಟ್ಟಡ ನಿರ್ಮಾಣ ಗುತ್ತಿಗೆದಾರರ ವೆಂಕಟೇಶ್ ಪುನರುಚ್ಚರಿಸುತ್ತಾರೆ. ಕಟ್ಟಡ ನಿರ್ಮಾಣ, ಮೇಲ್ಸೇತುವೆ, ರಸ್ತೆ, ಒಳಚರಂಡಿ ನಿರ್ಮಾಣ ಕಾಮಗಾರಿಗಳಲ್ಲಿ ಉತ್ತರ ಭಾರತ ಮೂಲದ ಕಾರ್ಮಿಕರೇ ಹೆಚ್ಚಾಗಿದ್ದಾರೆ. ವಲಸೆ ಕಾರ್ಮಿಕರು ಸಾಕಷ್ಟು ಕಾಲ ಒಂದೇ ವೃತ್ತಿ ಮಾಡುವುದರಿಂದ ಕೆಲಸದಲ್ಲಿ ನೈಪುಣ್ಯತೆ ಮತ್ತು ಕುಶಲತೆ ಉತ್ತಮವಾಗಿರುತ್ತದೆ. ಹೀಗಾಗಿಯೇ ಕಟ್ಟಡ ನಿರ್ಮಾಣಕ್ಕೆ ಮತ್ತು ಒಳಾಂಗಣ ವಿನ್ಯಾಸಕ್ಕೆ ಇವರನ್ನೇ ಹೆಚ್ಚು ಅವಲಂಬಿತರಾಗಿದ್ದೇವೆ.‌

ಕಡಿಮೆ ಸಂಭಾವನೆಗೆ ಗುಣಮಟ್ಟದ ಕೆಲಸ ಮಾಡುವ ಇವರನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದ್ದು, ಇದೀಗ ದಿನಗೂಲಿಯನ್ನು ಹೆಚ್ಚಿಸಬೇಕಾಗಿದೆ ಎನ್ನುತ್ತಾರೆ. ಒಟ್ಟಾರೆ ವಲಸೆ ಕಾರ್ಮಿಕರನ್ನು ಉಳಿಸಿಕೊಳ್ಳಲು ಉದ್ದಿಮೆಗಳು ಮತ್ತು ಗುತ್ತಿಗೆದಾರರು ಇನ್ನಿಲ್ಲದ ಆಮಿಷ ಒಡ್ಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.