ETV Bharat / state

ಕರ್ನಾಟಕದಲ್ಲಿ ಭಾರಿ ಪ್ರವಾಹ...ರಾಷ್ಟ್ರೀಯ ವಿಪತ್ತೆಂದು ಘೋಷಿಸುವಂತೆ ಮಾಜಿ ಪ್ರಧಾನಿ ಒತ್ತಾಯ!

ಮಳೆ ಅವಾಂತರ
author img

By

Published : Aug 9, 2019, 9:57 AM IST

Updated : Aug 9, 2019, 8:34 PM IST

20:33 August 09

ಸಿಎಂ ಭೇಟಿ ವೇಳೆ ಸ್ಥಳೀಯರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್​ ಆಗಿಲ್ಲ:ಗದಗ ಜಿಲ್ಲಾಧಿಕಾರಿ

  • ಸಿಎಂ ಭೇಟಿ ವೇಳೆ ಸ್ಥಳೀಯರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್​ ಆಗಿಲ್ಲ
  • ಗದಗ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಹಾಗೂ ಪೊಲೀಸ್​ ವರಿಷ್ಠಾಧಿಕಾರಿ ಶ್ರೀನಾಥ್​ ಜೋಶಿ ಸ್ಪಷ್ಟನೆ
  • ಸ್ಥಳೀಯರನ್ನ ದೂರ ಸರಿಸಲು ಪೊಲೀಸರು ಲಾಠಿಗಳನ್ನ ನೆಲಕ್ಕೆ ಬಡೆದಿದ್ದಾರೆ
  • ಲಾಠಿ ಪ್ರಹಾರದ ಬಗ್ಗೆ ಟಿವಿ ಮಾಧ್ಯಮಗಳಲ್ಲಿ ಬಿತ್ತರಗೊಂಡ ಸುದ್ದಿ ತಪ್ಪು

19:42 August 09

ಪ್ರವಾಹದಿಂದ ಕರ್ನಾಟಕ ನಲುಗಿದೆ... ನೆರವಿಗೆ ಬನ್ನಿ ಎಂದ ಹೆಚ್​ಡಿಡಿ

  • The flood situation in Karnataka has worsened.
    I strongly urge @PMOIndia to declare the floods in Karnataka as National disaster of severe nature and extend additional support at the earliest.@narendramodi #KarnatakaFlood

    — H D Devegowda (@H_D_Devegowda) August 9, 2019 " class="align-text-top noRightClick twitterSection" data=" ">

ಭಾರಿ ಮಳೆಯಿಂದಾಗಿ ಕರ್ನಾಟಕದ ಸ್ಥಿತಿ ಗಂಭೀರವಾಗಿದೆ.  ರಾಜ್ಯದಲ್ಲಿ ಈ ಪರಿಸ್ಥಿತಿಯನ್ನು ಗಮನಿಸಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು. ಹಾಗೂ ಸಂಕಷ್ಟದಲ್ಲಿರುವ ಸಂತ್ರಸ್ತರ ನೆರವಿಗೆ ಪ್ರಧಾನಿ ಹಾಗೂ ಕೇಂದ್ರ ಸರ್ಕಾರ ಧಾವಿಸಬೇಕು. ಸಾಕಷ್ಟು ಪ್ರಮಾಣದಲ್ಲಿ ಹಣಕಾಸು ನೆರವು ನೀಡಬೇಕು ಎಂದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಟ್ವೀಟ್​ ಮಾಡುವ ಮೂಲಕ ಒತ್ತಾಯಿಸಿದ್ದಾರೆ.

19:26 August 09

ಜಲಾಶಯಗಳ ನೀರಿನ ಮಟ್ಟದ ಬಗ್ಗೆ ಬಿಎಸ್​ವೈ ಟ್ವೀಟ್​​

  • ಕೊಡಗು ಜಿಲ್ಲೆಯ 58 ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ 
  • 15 ಪ್ರದೇಶಗಳಲ್ಲಿ ಭೂ ಕುಸಿತದಿಂದ ರಸ್ತೆ ಸಂಪರ್ಕ ಕಡಿತ
  • ಕೊಡಗನಲ್ಲಿ ಒಟ್ಟು 34 ಪರಿಹಾರ ಕೇಂದ್ರಗಳು
  • 817 ಕುಟುಂಬಗಳ ಒಟ್ಟು 2866 ಮಂದಿಗೆ ಆಶ್ರಯ
  • ಜಿಲ್ಲೆಯಲ್ಲಿ ಈವರೆಗೆ 247 ಜನ, 11  ಜಾನುವಾರಗಳ ರಕ್ಷಣೆ
  • ಹೆಗ್ಗಳ ಗ್ರಾಮದ ತೋರ ಪ್ರದೇಶದಲ್ಲಿ 300 ಕುಟುಂಬಗಳನ್ನು ರಕ್ಷಣೆ
  • ಪ್ರವಾಹ ಸ್ಥಳದಲ್ಲಿ ಬೀಡು ಬಿಟ್ಟಿರುವ ಅಧಿಕಾರಿ, ಸಿಬ್ಬಂದಿಗಳು
  • ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಭಾರತೀಯ ಸೇನಾ ತುಕಡಿ, ಗೃಹ ರಕ್ಷಕ ದಳ
  • ಅಗ್ನಿಶಾಮಕ ದಳ, ಪೊಲೀಸ್ ಇಲಾಖೆಗೆ ಸಂಘ ಸಂಸ್ಥೆಗಳ ಸಾಥ್
  • ಭರದಿಂದ ಸಾಗಿದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ
  • ಆಗಸ್ಟ್​ 14ರವರೆಗೆ ಚಾರ್ಮುಡಿ ಘಾಟ್​ ರಸ್ತೆ ಸಂಪೂರ್ಣ ಬಂದ್​​

19:15 August 09

ಆಲಮಟ್ಟಿ, ಕೆಆರ್​ ಸಾಗರ ಜಲಾಶಯದ ನೀರಿನ ವಿವರ

  • ಆಣೆಕಟ್ಟು ವಿವರ: 09 ಆಗಸ್ಟ್ 2019 ಮಧ್ಯಾಹ್ನ 12 30ರ ಸ್ಥಿತಿ
    -----
    ನಾರಾಯಣಪುರ:
    ನದಿಗೆ ಹೊರ ಹರಿವು 437749 ಕ್ಯುಸೆಕ್ಸ್,
    ಒಳ ಹರಿವು 430000 ಕ್ಯುಸೆಕ್ಸ್,
    ಜಲಾಶಯ ಮಟ್ಟ 487.88 ಮೀಟರ್

    — CM of Karnataka (@CMofKarnataka) August 9, 2019 " class="align-text-top noRightClick twitterSection" data=" ">
  • ಆಲಮಟ್ಟಿ ಜಲಾಶಯದ ನೀರಿನ ವಿವರ
  • ಒಳಹರವು: 4,50,000 ಸಾವಿರ ಕ್ಯೂಸೇಕ್
  • ಹೊರಹರವು: 4,50,000 ಕ್ಯೂಸೇಕ್..
  • ಜಲಾಶಯದ ಈ ಕ್ಷಣದ ಮಟ್ಟ...517,10 ಮೀಟರ್​ 
  • ಗರಿಷ್ಠ ಸಂಗ್ರಹ...519.60 ಮೀಟರ್​ 
  • ಜಲಾಶಯದ ಸಂಗ್ರಹ ಸಾಮರ್ಥ್ಯ:123 ಟಿಎಂಸಿ
  • ಕೆ.ಆರ್.ಸಾಗರ ನೀರಿನ  ಮಟ್ಟ
  • ಒಳಹರಿವು-73284 ಕ್ಯೂಸೆಕ್
  • ಹೊರಹರಿವು-469 ಕ್ಯೂಸೆಕ್
  • ಸಂಗ್ರಹ-24.417 ಟಿಎಂಸಿ

18:46 August 09

ಕೊಡಗಿನಲ್ಲಿ ಮುಂದುವರಿದ ವರುಣನ ಮರಣ ಮೃದಂಗ

  • ಕೊಡಗಿನಲ್ಲಿ ಮುಂದುವರಿದ ವರುಣನ ಮರಣ ಮೃದಂಗ
  • ಪ್ರವಾಹ, ಭೂ ಕುಸಿತದಿಂದ ಮೃತರ ಸಂಖ್ಯೆ ಏಳಕ್ಕೆ ಏರಿಕೆ
  • ವಿರಾಜಪೇಟೆ ತಾಲ್ಲೂಕಿನ ಕೊರಂಗಾಲದಲ್ಲಿ ಐವರು ಸಾವು
  • ಕೋರಂಗಾಲದ ಯಶವಂತ ಅತ್ತೇರಿ, ಬಾಲಕೃಷ್ಣ ಬೋಳನ, ಯಮುನಾ ಬೋಳನ, ಉದಯ ಕಾಳನ, ವಸಂತ್ ಮೃತರು
  • ವಿರಾಜಪೇಟೆ ತಾಲ್ಲೂಕಿನ ತೋರದಲ್ಲಿ ಇಬ್ಬರು ಸಾವು
  • ತೋರ ಗ್ರಾಮದ ತಾಯಿ ಜಾನಕಿ (45) ಮಗಳು ಲಿಖಿತ(14) ಮೃತರು
  • ವಿರಾಜಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಮತ್ತೆರಡು ಕುಟುಂಬಗಳು ಕಣ್ಮರೆ
  • ವಿರಾಜಪೇಟೆ ಭಾಗದಲ್ಲಿ ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

18:04 August 09

ಮನಸ್ಸು ತುಡಿಯುತ್ತಿದ್ದರೂ, ನನ್ನ ದುರಾದೃಷ್ಟಕ್ಕೆ ಅದು ಸಾಧ್ಯವಾಗುತ್ತಿಲ್ಲ: ಸಿದ್ದರಾಮಯ್ಯ ಟ್ವೀಟ್​​

  • 4 ದಿನದ ಹಿಂದೆ ನಾನು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ವೈದ್ಯರು ಕೆಲವು ದಿನಗಳ‌ ಕಡ್ಡಾಯ ವಿಶ್ರಾಂತಿಯನ್ನು ಸೂಚಿಸಿದ್ದಾರೆ. ಈ ನಡುವೆ ಉತ್ತರ ಕರ್ನಾಟಕ ಭಾಗ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿದೆ, ಅಲ್ಲಿ ಹೋಗಿ ಪರಿಹಾರ ಕಾರ್ಯಗಳಲ್ಲಿ ಭಾಗವಹಿಸಬೇಕೆಂದು ಮನಸ್ಸು ತುಡಿಯುತ್ತಿದ್ದರೂ, ನನ್ನ ದುರಾದೃಷ್ಟಕ್ಕೆ ಅದು ಸಾಧ್ಯವಾಗುತ್ತಿಲ್ಲ. pic.twitter.com/jgoIjXFv29

    — Siddaramaiah (@siddaramaiah) August 9, 2019 " class="align-text-top noRightClick twitterSection" data=" ">
  • 4 ದಿನದ ಹಿಂದೆ ನಾನು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ವೈದ್ಯರು ಕೆಲವು ದಿನಗಳ‌ ಕಡ್ಡಾಯ ವಿಶ್ರಾಂತಿಯನ್ನು ಸೂಚಿಸಿದ್ದಾರೆ. ಈ ನಡುವೆ ಉತ್ತರ ಕರ್ನಾಟಕ ಭಾಗ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿದೆ, ಅಲ್ಲಿ ಹೋಗಿ ಪರಿಹಾರ ಕಾರ್ಯಗಳಲ್ಲಿ ಭಾಗವಹಿಸಬೇಕೆಂದು ಮನಸ್ಸು ತುಡಿಯುತ್ತಿದ್ದರೂ, ನನ್ನ ದುರಾದೃಷ್ಟಕ್ಕೆ ಅದು ಸಾಧ್ಯವಾಗುತ್ತಿಲ್ಲ.
  • ನಾನು ಆಡಳಿತ ಪಕ್ಷದಲ್ಲಿಯೇ ಇರಲಿ, ವಿರೋಧ ಪಕ್ಷದಲ್ಲಿಯೇ ಇರಲಿ ಜನರ ಸಂಕಷ್ಟಕ್ಕೆ ನೆರವಾಗುವುದು ಆದ್ಯ ಕರ್ತವ್ಯವೆಂದು ನಂಬಿ ರಾಜಕಾರಣ ಮಾಡುತ್ತ ಬಂದವನು. ಈ ಕಾರಣಕ್ಕಾಗಿಯೇ ನನ್ನ ಬದಲು ನನ್ನ ಮಗ, ವರುಣಾ ಕ್ಷೇತ್ರದ ಶಾಸಕರಾದ ಯತೀಂದ್ರ ಅವರನ್ನು ಪ್ರವಾಹ ಸಂತ್ರಸ್ತರಿಗೆ ನೆರವಾಗುವಂತೆ ಕಳುಹಿಸಿದ್ದೇನೆ.

17:52 August 09

ರಾಜ್ಯದ ಪರಿಸ್ಥಿತಿ ವೀಕ್ಷಣೆಗೆ ನಾಳೆ ಖುದ್ದಾಗಿ ಕೇಂದ್ರ ಹಣಕಾಸು ಸಚಿವೆ

ಬಿಎಸ್​ ಯಡಿಯೂರಪ್ಪ ಹೇಳಿಕೆ
  • ಮಲಪ್ರಭಾ ನದಿಯ ಬೆನ್ನಿಹಳ್ಳಿ ನೀರಿನ ಪ್ರವಾಹಕ್ಕೆ ಅನೇಕ ಗ್ರಾಮಗಳು ತುತ್ತಾಗಿವೆ
  • ಒಟ್ಟು ನರಗುಂದ ಮತಕ್ಷೇತ್ರದ 16 ಗ್ರಾಮ ಹಾಗೂ ಉಳಿದ 11 ಗ್ರಾಮಗಳಲ್ಲಿ ನೆರೆಹಾವಳಿ
  • ಒಟ್ಟು 27 ಗ್ರಾಮದ 3626 ಕುಟುಂಬ 65,630 ಜನಸಂಖ್ಯೆ ಪ್ರವಾಹಕ್ಕೆ ಸಿಲುಕಿದ್ದಾರೆ
  •  ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಬದ್ದವಾಗಿದೆ.ರಾಜ್ಯದ ಪರಿಸ್ಥಿತಿ ವೀಕ್ಷಣೆಗೆ ಖುದ್ದಾಗಿ ಹಣಕಾಸು ಸಚಿವೆ 
  • ನಾಳೆ ಬಾಗಲಕೋಟ,ಬಿಜಾಪುರ ಜಿಲ್ಲೆಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಭೇಟಿ
  • ಬಾಗಲಕೋಟ,ಬಿಜಾಪುರ ಕ್ಷೇತ್ರಗಳಲ್ಲಿ ವೀಕ್ಷಣೆ,ಪ್ರಧಾನಿ ಅವರೇ ಖುದ್ದಾಗಿ ಕಳುಹಿಸಿಕೊಡುತ್ತಿದ್ದಾರೆ
  • ನಮ್ಮ ರಾಜ್ಯದ ನೆರೆಹಾವಳಿಯ ಗಂಭೀರ ಪರಿಸ್ಥಿತಿ ಕೇಂದ್ರಕ್ಕೆ ಮನವರಿಕೆಯಾಗಿದೆ.
  • ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಲಿರುವ ಕೇಂದ್ರ ಹಣಕಾಸು ಸಚಿವೆ
  • ಈಗಾಗಲೇ ರಾಜ್ಯ ಸರ್ಕಾರ ತುರ್ತು ಪರಿಸ್ಥಿತಿಗೆ 100ಕೋಟಿ ರೂ ಹಣ ಮಂಜೂರು
  • ಎರಡು ದಿನಗಳ ಕಾಲ ವಿವಿಧ ಕ್ಷೇತ್ರಗಳ ನೆರೆಹಾವಳಿ ಪ್ರದೇಶಕ್ಕೆ ಭೇಟಿ ನೀಡಿರುವೆ

17:46 August 09

ಮಹಾ ಕೋರಿಕೆ ಮೆರೆಗೆ ಆಲಮಟ್ಟಿಯಿಂದ ಹೆಚ್ಚುವರಿ ನೀರು ಬಿಡುಗಡೆ: ಸಿಎಂ ಘೋಷಣೆ

ಮಹಾರಾಷ್ಟ್ರ ಸಿಎಂ ಪಡ್ನವಿಸ್​​ ಕೋರಿಕೆ ಮೆರೆಗೆ ಆಲಮಟ್ಟಿ ಡ್ಯಾಂನಿಂದ ಸುಮಾರು 4. 80 ಲಕ್ಷ ಕ್ಯೂಸೆಕ್​ ನೀರನ್ನು  ಹೊರಗೆ ಹರಿ ಬಿಡಲಾಗುತ್ತಿದೆ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ.  ​  

17:39 August 09

ರೋಣ ತಾಲೂಕು ತಹಶೀಲ್ದಾರ್ ಶರಣಮ್ಮ‌ ಕಾರಿಗೆ ಫುಲ್ ಕ್ಲಾಸ್

Gadag vedio

ಹೊಳೆ ಆಲೂರು ಗ್ರಾಮದ ರೈಲು ನಿಲ್ದಾಣದಲ್ಲಿ ತಹಶೀಲ್ದಾರ್ ಗೆ ಫುಲ್ ಕ್ಲಾಸ್

ಗದಗ: ನಾವು ಜೋಳಿಗೆ ಹಿಡಿದು ಮಕ್ಕಳಿಗೆ ಅನ್ನ ನೀಡ್ತೀವಿ 

ಮನೀವು ಇಲ್ಲಿಂದ ಹೋಗ್ಬಿಡಿ ಅಂತ ತರಾಟೆ

ರೋಣ ತಾಲೂಕು ತಹಶೀಲ್ದಾರ್ ಶರಣಮ್ಮ‌ ಕಾರಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಪೊಲೀಸರು

ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ರೈಲು ನಿಲ್ದಾಣದಲ್ಲಿ ಘಟನೆ

ಕಳೆದ ರಾತ್ರಿಯಿಂದ ರೈಲ್ವೇ ನಿಲ್ದಾಣದಲ್ಲಿ ಇರೋ ನೆರೆ ಸಂತ್ರಸ್ತರು

ಮಲಪ್ರಭ  ನದಿ ಪ್ರವಾಹದಿಂದ ಜಲಾವೃತವಾಗಿರೋ ಹೊಳೆ ಆಲೂರು ಗ್ರಾಮಸ್ಥರು

17:27 August 09

ಸಿಎಂ ಡ್ರೈವರ್ ಗೆ ಅವಾಚ್ಯ ಶಬ್ದಗಳಿಂದ ಬೈದ ಜನರು

BSY

ಪ್ರವಾಹ ಪೀಡಿತ ಕೊಣ್ಣೂರು ಗ್ರಾಮಕ್ಕೆ ಸಿಎಂ ಬಿಎಸ್​ವೈ  ಭೇಟಿ 

ನೆರೆ ಪರಿಸ್ಥಿತಿ ಅವಲೋಕಿಸಿ ಸಂತ್ರಸ್ತರ ವಿಚಾರ ಮಾಡದೇ ಹೋದ ಸಿಎಂ

ವಾಪಸ್ ತೆರಳುವಾಗ ನಮ್ಮ‌ ಜೊತೆ ಮಾತಾಡುವಂತೆ ಒತ್ತಾಯಿಸಿದ ಗ್ರಾಮಸ್ಥರು

ಗ್ರಾಮಸ್ಥರ ಚದುರಿಸಲು ಲಘು‌ ಲಾಠಿ ಪ್ರಹಾರ ಮಾಡಿದ ಪೊಲೀಸರು

ರೊಚ್ಚಿಗೆದ್ದ ಗ್ರಾಮಸ್ಥರ ರಿಂದ ಪೊಲೀಸರು ಹಾಗೂ ಸಿಎಂ ಬಿಎಸ್ ವೈ ವಾಹನಕ್ಕೆ ದಿಗ್ಭಂಧನ

ಪೊಲೀಸ್ ವಾಹನವನ್ನು ಗುದ್ದಿ ಹೇಗೆ ಹೊಗ್ತಾ ಇದ್ದೀರಿ ಎಂದು ಪ್ರಶ್ನೆ ಮಾಡಿದ ಗ್ರಾಮಸ್ಥರು

ಕೊನೆಗೂ ಕ್ಷಮೆ ಕೇಳಿ ಮುನ್ನಡೆದ ಪೊಲೀಸರು

ಸಿಎಂ ಡ್ರೈವರ್​​​ಗೆ ಅವಾಚ್ಯ ಶಬ್ದಗಳಿಂದ ಬೈದ ಜನರು
 
17:22 August 09

  • ಪ್ರವಾಹ ಪೀಡಿತ ಕೊಣ್ಣೂರು ಗ್ರಾಮಕ್ಕೆ ಸಿಎಂ ಬಿಎಸ್​ವೈ ಭೇಟಿ ನೀಡಿದ್ದು. ನೆರೆ ಪರಿಸ್ಥಿತಿ ಅವಲೋಕಿಸಿ ಸಂತ್ರಸ್ತರ ವಿಚಾರ ಮಾಡದೆ ಹೋದ ಸಿಎಂ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು. ಗ್ರಾಮಸ್ಥರ ಚದುರಿಸಲು ಲಘು‌ ಲಾಠಿ ಪ್ರಹಾರ ಮಾಡಿದ ಪೊಲೀಸರು. ಗ್ರಾಮಸ್ಥರಿಂದ ಪೊಲೀಸರ ಹಾಗೂ ಬಿಎಸ್​ವೈ ವಾಹನಕ್ಕೆ ದಿಗ್ಭಂಧನ.
     
16:46 August 09

ಕೊಡಗು ಜಿಲ್ಲೆಯಲ್ಲಿ ಕುಸಿದ ಮನೆ

ಮಹಾಮಳೆಗೆ ಕುಸಿದ ಮನೆ
  • ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮನೆ ಕುಸಿದು ಬಿದ್ದಿದೆ
  • ಕಾವೇರಿ ನದಿ ತೀರ ಪ್ರದೇಶದ ಬಲಮುರಿಯಲ್ಲಿ ಘಟನೆ
  • ಸಂಪೂರ್ಣ ಜಲಾವೃತವಾಗಿದ್ದರಿಂದ ಮನೆ ಗೋಡೆ ಕುಸಿತ

16:36 August 09

ಜೀವ ಉಳಿಸಿಕೊಳ್ಳೋಕೆ ನೀರಲ್ಲೆ ನಡೆದು ಬರುತ್ತಿರೋ ಗ್ರಾಮಸ್ಥರು

  • ಮಲಪ್ರಭಾ ಪ್ರವಾಹದಲ್ಲಿ ಸಿಲುಕಿರೋ ಹೊಳೆ ಆಲೂರು ಗ್ರಾಮಸ್ಥರು
  • ಗ್ರಾಮಸ್ಥರಿಂದಲೇ ನೆರೆಯಲ್ಲಿ ಸಿಕ್ಕವರ ರಕ್ಷಣೆ
  • ವೃದ್ಧೆಯನ್ನು ಟೇಬಲ್ ಮೇಲೆ ಕೂರಿಸಿಕೊಂಡು ರಕ್ಷಿಸಿದ ಸ್ಥಳೀಯರು
  • ಜೀವ ಉಳಿಸಿಕೊಳ್ಳೋಕೆ ನೀರಲ್ಲೆ ನಡೆದು ಬರುತ್ತಿರೋ ಗ್ರಾಮಸ್ಥರು
  • ಸುರಕ್ಷಿತ ಪ್ರದೇಶಕ್ಕೆ ತೆರಳುತ್ತಿರೋ ಗ್ರಾಮಸ್ಥರು
  • ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮ
  • ಸಮಸ್ಯೆ  ಇದ್ದರೂ  ರಕ್ಷಣಾ ಕಾರ್ಯ ಕೈಗೊಳ್ಳದ ಗದಗ ಜಿಲ್ಲಾಡಳಿತ
  • ಬರಿಗೈಯಲ್ಲಿ ವಾಪಾಸ್ ತೆರಳಿದ ಹೆಲಿಕ್ಯಾಪ್ಟರ್
  • ನೆರೆ ಸಂತ್ರಸ್ತರನ್ನು ರಕ್ಷಣೆ ಮಾಡಲು ಬಂದಿದ್ದ ಹೆಲಿಕ್ಯಾಪ್ಟರ್
  • ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ‌ ಘಟನೆ
  • ಗ್ರಾಮದ ಮೂರಂತಸ್ತಿನ ಮಹಡಿಯಲ್ಲಿ ಇರೋ 6 ಕ್ಕೂ ಹೆಚ್ಚು ಸಂತ್ರಸ್ತರು
  • ಕಟ್ಟಡ ನೆನೆದಿರೋದ್ರಿಂದ ಕೆಳಗೆ ಇಳಿಯಲು ಅವಕಾಶ ಇಲ್ಲದೆ ವಾಪಸ್ ತೆರಳಿದ ಕ್ಯಾಪ್ಟರ್
  • ಆತಂಕದಲ್ಲಿಯೇ ಇನ್ನೂ ಕಟ್ಟಡದ ಮೇಲೆಯೇ ಇರೋ ಸಂತ್ರಸ್ತರು

16:09 August 09

ಈ ಜಿಲ್ಲೆಗಳಲ್ಲಿ ಆಗಸ್ಟ್​​ 15 ರ ವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆಯಲ್ಲಿ  ದಕ್ಷಿಣ ಕನ್ನಡ, ಉತ್ತರ ಕನ್ನಡ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಚಿಕ್ಕೋಡಿ, ಶಿವಮೊಗ್ಗ, ಬೀದರ್​, ಯಾದಗಿರಿ, ಕೊಪ್ಪಳ, ಕಲಬುರಗಿ,  ಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್​ 15 ರವೆರೆಗೆ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.

15:25 August 09

  • ಚಿಕ್ಕಮಗಳೂರಿನ ಹಲವು ಕಡೆ ಗುಡ್ಡ ಕುಸಿದಿದೆ. ಜಿಲ್ಲೆಯ ಹಲವೆಡೆ ಈ ರೀತಿಯಾಗಿದ್ದು, ಜನರು ಭಯದಲ್ಲಿ ಜೀವನ ನಡೆಸುತ್ತಿದ್ದಾರೆ.
  • ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮಸ್ಥರು ಮಲಾಪ್ರಭಾ ಪ್ರವಾಹದಲ್ಲಿ ಸಿಲುಕಿದ್ದು. ಸುರಕ್ಷಿತ ಸ್ಥಳ ಹುಡುಕುತ್ತಿದ್ದಾರೆ.

15:07 August 09

heavy rain
ನದಿಯಂತಾದ ರಸ್ತೆ
  • ಶಿವಮೊಗ್ಗದಲ್ಲಿ ಹೆಸರುವಾಸಿಯಾಗಿದ್ದ ಬಾಂಬೆ ಬಂಗಲೆ ಕುಸಿಯುವ ಸಾಧ್ಯತೆ ಇದೆ. ಇದು ಐತಿಹಾಸಿಕ ಬಂಗಲೆ ಆಗಿದ್ದು ಹೆಚ್ಚಾಗಿ  ಪ್ರವಾಸಿಗರು ಇದನ್ನು ನೋಡಲು ಬರುತ್ತಿದ್ದರು. 
  • ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿದೆ. ಈ ಕಾರಣಕ್ಕಾಗಿ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ. 
  • ಕಲಬುರಗಿಯ ಕೆಲವು ಗ್ರಾಮಗಳು ಮುಳುಗಡೆ ಭೀತಿಯಲ್ಲಿವೆ, ಈಗಾಗಲೇ ಭೀಮಾನದಿಯಿಂದ ಜಮೀನುಗಳ ಜಲಾವೃತಗೊಂಡಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಜನರು ಸ್ಥಳಾಂತರವಾಗುತ್ತಿದ್ದಾರೆ. 
  • ಹಾವೇರಿ ಜಿಲ್ಲೆಯ ಹಾನಗಲ್​ ತಾಲೂಕಿನ ಕೂಡಲ, ಹರವಿ, ಅಲ್ಲಾಪುರ ಗ್ರಾಮಗಳು ಜಲಾವೃತಗೊಂಡಿವೆ. 

14:44 August 09

ಭಾರೀ ಮಳೆಗೆ ನಲುಗಿದ ಬೆಳಗಾವಿ
  • ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಪ್ರವಾಹ ಉಂಟಾಗಿದ್ದು, ಜನರನ್ನ ಸುರಕ್ಷಿತ ಸ್ಥಳಗಳಿಗೆ ಕಳಿಸಲು ಅಗ್ನಿ ಶಾಮಕದಳ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ನಗರದ ಶಾಂತಮ್ಮ ಲೇವಟ್ ನ 70 ಕ್ಕೂ ಹೆಚ್ಚು ಮನೆಗಳ ನಿವಾಸಿಗಳನ್ನ ಸುರಕ್ಷಿತ ಸ್ಥಳಗಳಿಗೆ ಕಳಿಸಲಾಗುತ್ತಿದೆ. 
  • ನಂಜನಗೂಡು- ಊಟಿ‌ ರಸ್ತೆಯ ಮಲ್ಲನಮೂಲೆ‌ ಮಠ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಸೆಲ್ಫಿ ಸ್ಪಾಟ್ ಆಗಿ ಪರಿವರ್ತನೆಗೊಂಡಿದೆ. ಕಬಿನಿ ಜಲಾಶಯದಿಂದ 1.25 ಲಕ್ಷ ಕ್ಯೂಸೆಕ್ ನೀರು ಹೊರ ಬಿಡುತ್ತಿರುವುದರಿಂದ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಮಲ್ಲನಮೂಲೆ ಮಠದ ಬಳಿ ನೀರು ತುಂಬಿ ರಸ್ತೆಯ ಮೇಲೆ ಹರಿಯುತ್ತಿದೆ. ಇನ್ನು ಬಂಚಳ್ಳಿಹುಂಡಿಯಲ್ಲಿಯೇ ವಾಹನಗಳನ್ನು ಮುಂದೆ ಹೋಗದಂತೆ ಪೊಲೀಸರು ತಡೆಯುತ್ತಿದ್ದಾರೆ.

14:18 August 09

ಭಾರೀ ಮಳೆ
  • ಉತ್ತರಕನ್ನಡ ಜಿಲ್ಲೆಯ ಕದ್ರಾ ಹಾಗೂ ಸೂಪಾ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಬಿಡುಗಡೆಮಾಡಲಾಗಿದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದು ಸೂಚನೆ ನೀಡಿದೆ. 
  • ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿರುವ ಸಂಗಮ ಕ್ಷೇತ್ರ ಮುಳುಗಡೆಯಾಗಿದೆ.
  • ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುತ್ತಿರುವ ಮಲಪ್ರಭಾ ನದಿಯ ಪ್ರವಾಹದಿಂದ ಐತಿಹಾಸಿಕ ಸ್ಮಾರಕಗಳು  ನಡುಗಡ್ಡೆ ಆಗಿದೆ. ವಟುಗಳ ಕಾಶಿ,ವಿಭೂತಿ ತಯಾರಿಸುವ ಕೇಂದ್ರ ಬಾದಾಮಿ ತಾಲೂಕಿನ ಶಿವಯೋಗ ಮಂದಿರದಲ್ಲಿ ಮಲಪ್ರಭಾ ನದಿ ಪ್ರವಾಹದಿಂದ ಸಂಪೂರ್ಣ ಜಲಾವೃತಗೊಂಡಿದೆ.

14:10 August 09

ಬೆಳಗಾವಿಯಲ್ಲಿ ಹೆಲಿಕಾಪ್ಟರ್​ ಮುಖಾಂತರ ರಕ್ಷಣಾ ಕಾರ್ಯ
  • ಬಾಗಲಕೋಟೆಯಲ್ಲಿ  ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಬಿಎಸ್​ ಯಡಿಯೂರಪ್ಪ
  • ಬಾಗಲಕೋಟೆಯಲ್ಲಿ ಮೂರುದಿನಗಳಿಂದ ಸಿಲುಕಿದ್ದ ಏಳು ಜನರನ್ನು ಸೇನಾ ಹೆಲಿಕಾಪ್ಟರ್​ ಮುಖಾಂತರ ರಕ್ಷಣೆ

13:35 August 09

  • K'taka: Union Minister Pralhad Joshi today visited flood-hit Hubli. He says "10 NDRF teams have already been sent here. State govt has requested for 5 more NDRF teams. As soon as I came to know all these things are needed, I spoke to Union Home Minister&apprised him of situation" pic.twitter.com/2ECcrBhEg2

    — ANI (@ANI) August 9, 2019 " class="align-text-top noRightClick twitterSection" data=" ">
  • ಹಾವೇರಿ ಜಿಲ್ಲೆಯ ಹಾನಿಪೀಡಿತ ಪ್ರದೇಶಗಳಿಗೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಮುತ್ತಳ್ಳಿ, ವರದಾ ಹಳ್ಳಿ ಹಾಗೂ ಹಾನಗಲ್ ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. 
  • ದಕ್ಷಿಣ ಕನ್ನಡದ ಅಣಯೂರಲ್ಲಿ ಪ್ರವಾಹಕ್ಕೆ  ಸಿಲುಕಿದ್ದ ಅಜ್ಜನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. 
  • ಬೆಳಗಾವಿಯ ರಾಮದುರ್ಗದ ಹೊರವಲಯದಲ್ಲಿ ನಿರ್ಮಾಣ ಮಾಡಲಾಗಿದ್ದ ತೂಗು ಸೇತುವೆ ಭಾರೀ ಮಳೆಗೆ ಮುರಿದುಬಿದ್ದಿದೆ. 

13:31 August 09

ಹೇಮಾವತಿ ಭರ್ತಿ
  • ಚಿಕ್ಕಮಗಳೂರು ಮತ್ತು ಮೂಡಿಗೆರೆ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೇವಲ ಚಿಕ್ಕಮಗಳೂರು ಮಾತ್ರವಲ್ಲದೆ ಇಡೀ ಜಿಲ್ಲೆ ತತ್ತರಿಸಿದೆ. ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
  • ದಿನದಿಂದ ದಿನಕ್ಕೆ ಮಳೆಯ ಪ್ರಮಾಣ ಅಧಿಕವಾಗಿದ್ದು, ಯಗಚಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. 3.5 ಟಿಎಂಸಿ ಸಾಮರ್ಥ್ಯವನ್ನು ಹೊಂದಿರುವ ಜಲಾಶಯ ಭರ್ತಿಯಾಗಿದ್ದು, ಜಲಾಶಯಕ್ಕೆ 8 ಸಾವಿರ ಕ್ಯೂಸೆಕ್ ಒಳಹರಿವು ಬರುತ್ತಿರುವುದರಿಂದ 5 ಗೇಟುಗಳನ್ನು ತೆರೆಯಲಾಗಿದ್ದು, ದಶಕಗಳ ಬಳಿಕ ಯಗಚಿ ಜಲಾಶಯ ತುಂಬಿ ತುಳುಕುತ್ತಿದೆ.

  • ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಕೊಡಂಬೂರು ಗ್ರಾಮದಲ್ಲಿ ಜಲಾವೃತಗೊಂಡು ಸಂಕಷ್ಟದಲ್ಲಿ ಸಿಲುಕಿದ್ದವರನ್ನು ಎನ್‌ಡಿಆರ್‌ಎಫ್ ಹಾಗೂ ಪೊಲೀಸ್ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
  •  ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಹಲವಾರು ಕಡೆಗಳಲ್ಲಿ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ. ಸಿದ್ಧಾಪುರದ ನಿರಾಶ್ರಿತರ ಕೇಂದ್ರಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

13:21 August 09

ಸಿಎಂ ಬಿಎಸ್​ ಯಡಿಯೂರಪ್ಪರಿಂದ ವೈಮಾನಿಕ ವೀಕ್ಷಣೆ
  • ಬೆಳಗಾವಿಯ ಘಟಪ್ರಬಾನದಿಯಲ್ಲಿ ಯುವತಿ ನಾಪತ್ತೆಯಾಗಿದ್ದಾಳೆ. ಈಕೆ ಬಟ್ಟೆ ತೊಳೆಯಲು ಹೋದ ವೇಳೆ ಈ ಘಟನೆ ನಡೆದಿದ್ದು, ಶೋಧ ಕಾರ್ಯ ಮುಂದುವರೆದಿದೆ. 

13:01 August 09

ಚಿಕ್ಕೋಡಿಯಲ್ಲಿ ಭಾರೀ ಮಳೆ
  • ಭಾರೀ ಮಳೆಗೆ ಕೊಡಗಿನಲ್ಲಿ ಮಣ್ಣು ಕುಸಿದಿದ್ದು, ಇಬ್ಬರ ದೇಹಗಳು ಪತ್ತೆಯಾಗಿವೆ. ಇನ್ನು ಮೂವರು ಮಣ್ಣಿನಲ್ಲಿ ಸಿಲುಕಿದ್ದಾರೆ. ಇವರೆಲ್ಲರೂ ರೈತರಾಗಿದ್ದಾರೆ. 
  • ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ಹಾಗೂ ಕೃಷ್ಣ ನದಿಯ ಪ್ರವಾಹಕ್ಕೆ ಸಿಲುಕಿದ್ದ 32 ಜನರನ್ನು ಜಿಲ್ಲಾಡಳಿತವು ಹೆಲಿಕ್ಟಾಪ್ಟರ್ ಮುಖಾಂತರ ರಕ್ಷಣೆ ಮಾಡಿದೆ.
  • ಮಲೆನಾಡಿನಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಕಾರು ಪಲ್ಟಿಯಾಗಿದೆ. ಈ ವೇಳೆ ನಾಲ್ವರಿಗೆ ಗಾಯವಾಗಿದ್ದು, ಓರ್ವನ ಸ್ಥಿತಿ ಗಂಭೀರ. 

12:58 August 09

ಶಿವಮೊಗ್ಗದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಡ್ರೋಣ್​ ದೃಶ್ಯ
  • ರಾಯಚೂರು ಜಿಲ್ಲೆಯ ಕರಕಲ್ ಗಡ್ಡಿ ನಡುಗಡ್ಡೆಯಲ್ಲಿ ಸಿಲುಕಿರುವ ಆರು ಜನ ರಕ್ಷಣೆಗೆ ಹೆಲಿಕಾಫ್ಟರ್ ಬಳಕೆ ಮಾಡುವ ಚಿಂತನೆ ನಡೆದಿದೆ.   
  • ಎಲ್ಲಿ ನೋಡಿದರಲ್ಲಿ ನೀರು ಕಾಣುತ್ತಿದೆ. ಯಾವ ಕಡೆ ಹೋಗಬೇಕೆನ್ನುವುದು ದೋಚುತ್ತಿಲ್ಲ. ನಮ್ಮನ್ನು ಇಲ್ಲಿಂದ ಪಾರು ಮಾಡಿ‌ ಎಂದು ಬೆಳಗಾವಿ‌ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. 
  • ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಹಾ ಮಳೆಗೆ ಜಿಲ್ಲೆಯ ಜೀವನದಿ ಹೇಮಾವತಿ ಭರ್ತಿಯಾಗುವ ಮುನ್ನವೇ 6 ಕ್ರಸ್ಟ್ ಗೇಟ್ ಗಳಿಂದ ನೀರನ್ನು ಹೊರಬಿಡಲಾಗುತ್ತಿದೆ.

12:53 August 09

ಚಿಕ್ಕೋಡಿಯಲ್ಲಿ ಭಾರೀ ಮಳೆ
  • ಹುಬ್ಬಳ್ಳಿಯಲ್ಲಿ ಶಾಲಾ-ಕಾಲೇಜುಗಳಿಗೆ ನುಗ್ಗಿದ ನೀರು. ಬೆಳಗಲಿ ಶಾಲೆಯ ಒಳಗಡೆ ಇದ್ದ ವಸ್ತುಗಳ  ಸ್ಥಳಾಂತರ 
  • ಧಾರವಾಡ ತಾಲೂಕಿನ ಜೊಗೆಯಲ್ಲಾಪೂರದಲ್ಲಿ ಸುಮಾರು 8 ಮನೆಗಳು ಕುಸಿದಿವೆ.   ಈ ಹಿನ್ನೆಲೆ ಇಲ್ಲಿನ ಜನರಿಗೆ ಜನರು ದಿಕ್ಕು ತೋಚದಂತಾಗಿದ್ದು, ಕಣ್ಣೀರು ಹಾಕುತ್ತಿದ್ದಾರೆ. 

12:51 August 09

  • ಉತ್ತರದ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗೆ ಮುಂದಾಗುವಂತೆ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ಜನರಲ್ಲಿ, ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
  • ಜಿಲ್ಲೆಯಲ್ಲಿ ಮಳೆ ಅಪಾರ ಹಾನಿಯುಂಟು ಮಾಡಿದೆ. ಈಗ ನಾವೆಲ್ಲ ಸೇರಿ ಅವರಿಗೆ ಸ್ಪಂದಿಸಬೇಕಿದೆ. ನಾನು ಹಾಗೂ ನನ್ನ ಸಂಸ್ಥೆ ನಮ್ಮ ಕೈಲಾದಷ್ಟು ಕೆಲಸ ಮಾಡ್ತಿದ್ದೀವಿ. ಅದೇ ರೀತಿ ನೀವೂ ಸಹ ನಿಮ್ಮ ಸುತ್ತಮುತ್ತ ಇರುವಂತಹ ಸೇವಾಕೇಂದ್ರಗಳಿಗೆ ಹೋಗಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಅಪ್ಪು, ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

12:20 August 09

ಅಪಾಯದ ಮಟ್ಟ ತಲುಪಿದ ಕಬಿನಿ
  • ಭಾರೀ ಮಳೆಯಿಂದಾಗಿ ಚಾಮರಾಜನಗರದ ಹೆಚ್.ಡಿ ಕೋಟೆ ಹ್ಯಾಂಡ್ ಪೋಸ್ಟ್‌ನಿಂದ ಜಕ್ಕಳ್ಳಿಗೆ ಹೋಗುವ ಮಾರ್ಗ ಮಧ್ಯೆ ನೀರಿನ ರಭಸಕ್ಕೆ ರಸ್ತೆ ಕೊಚ್ಚಿ ಹೋಗಿದೆ.
  • ಮೈಸೂರು-ಮಡಿಕೇರಿ, ಮೈಸೂರು-ಹೆಚ್.ಡಿ ಕೋಟೆ ನಡುವಿನ ಬಸ್ ಸಂಚಾರ‌ ಸ್ಥಗಿತಗೊಳಿಸಲಾಗಿದೆ. ಕಬಿನಿ ಜಲಾಶಯದಿಂದ ನೀರು ಹೊರಬಿಟ್ಟಿರುವ ಪರಿಣಾಮ ಮೈಸೂರು-ನಂಜನಗೂಡು ನಡುವಿನ ರಸ್ತೆ ನೀರಿನಲ್ಲಿ ಮುಳುಗಡೆಯಾಗಿದೆ.

  • ಕಬಿನಿ ನದಿ ಪ್ರವಾಹಕ್ಕೆ ದಕ್ಷಿಣ ಕಾಶಿ ನಂಜನಗೂಡಿನ ಬಳಿ ಹಲವು ದೇವಸ್ಥಾನಗಳು ಜಲಾವೃತಗೊಂಡಿದ್ದು, ಜನರಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮೈಸೂರು ಊಟಿ ಹೆದ್ದಾರಿ ಬಂದ್ ಮಾಡಲಾಗಿದೆ.

12:14 August 09

ಹೇಮಾವತಿ ಭರ್ತಿ
  • ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ದಿನದಿಂದ ದಿನಕ್ಕೆ ತುಂಗಾ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಶೃಂಗೇರಿ ದೇವಾಲಯದ ಗಾಂಧಿ ಪಾರ್ಕ್, ಯಾತ್ರಿ ನಿವಾಸಕ್ಕೂ ನೀರು ನುಗ್ಗಿದೆ. ಅಲ್ಲದೆ ಶೃಂಗೇರಿಯ ಕಿಗ್ಗಾ ಹಾಗೂ ಎಸ್ ಕೆ ಬಾರ್ಡರ್, ಕೆರೆ ಕಟ್ಟೆಯಲ್ಲಿ ಭಾರಿ ಮಳೆಯಾಗುತ್ತಿದೆ.

  • ಹಾಸನದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂ ಕುಸಿತ ಉಂಟಾಗಿದೆ. ಈ ವೇಳೆ ಒಂದು ಕಾರು ಈ ಭೂಕಸಿತಕ್ಕೆ ಸಿಲುಕಿ ನಜ್ಜುಗುಜ್ಜಾಗಿದೆ. 

12:05 August 09

ಭಾರೀ ಮಳೆಗೆ ನಲುಗಿದ ಬೆಳಗಾವಿ
  •  ಮಹಿಳೆಯರು ಸೇರಿದಂತೆ 20 ಕ್ಕೂ ಹೆಚ್ಚು ಜನರು ನಡು ನೀರಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಜರುಗಿದೆ

  • ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮದ ಭಗಂಡೇಶ್ವರ ದೇವಾಲಯದ ಮೆಟ್ಟಿಲಿನ ಮೇಲೂ ನೀರು ನುಗ್ಗಿದ್ದು, ದೇವಾಲಯ ಸಂಪೂರ್ಣ ಜಲಾವೃತವಾಗಿದೆ.

    .

11:54 August 09

  • ಬಾಗಲಕೋಟೆಯಲ್ಲಿ ಹೆಲಿಕಾಪ್ಟರ್​ ಬಳಸಿ ರಕ್ಷಣಾ ಕಾರ್ಯ, ಈ ಮುಖಾಂತರ ಸಂತ್ರಸ್ತರಿಗೆ ಆಹಾರ ಪೂರೈಕೆಯನ್ನು ಕೂಡ ಮಾಡಲಾಗುತ್ತಿದೆ. 

11:51 August 09

ಮಂಡ್ಯದಲ್ಲಿ ಭಾರೀ ಮಳೆ
  •  ಕಬಿನಿ ಜಲಾಶಯದಿಂದ 1 ಲಕ್ಷಕ್ಕಿಂತ ಹೆಚ್ಚು ಕ್ಯೂಸೆಕ್​ ನೀರನ್ನು ಹೊರ ಬಿಡಲಾಗಿದ್ದು, ಪರಿಣಾಮ ನಂಜನಗೂಡಿನ ಬಳಿಯ ಕಪಿಲ ನದಿಯಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿರುವುದಕ್ಕೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

  • ಹುಬ್ಬಳ್ಳಿಯಲ್ಲಿ ಮುಂದುವರೆದ ವರುಣ, ಅಪಾರ್ಟ್​ಮೆಂಟ್​ಗೆ ನುಗ್ಗಿದ ನೀರು, ಹೊರಬರಲಾಗದೆ ಪರದಾಡುತ್ತಿರುವ ಅಪಾರ್ಟ್​ಮೆಂಟ್​ ವಾಸಿಗಳು 

11:49 August 09

11:31 August 09

  • ಹಾನಗಲ್ ತಾಲೂಕಿನ ಶ್ಯಾಡಗುಪ್ಪಿಯಲ್ಲಿ ಮಳೆ ನೀರಿನಿಂದಾಗ ಕೆರೆ ಕೋಡಿ ಬಿದ್ದಿದೆ. ಪರಿಣಾಮ ರೈತರ ಜಮೀನಿಗೆ ನೀರು ನುಗ್ಗಿ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಗಳಿಗೆ ಹಾನಿಯಾಗಿದೆ.

11:29 August 09

ಮಹಾ ಮಳೆಗೆ ಎರಡನೇ ಬಲಿ
  • ಗದಗ ಜಿಲ್ಲೆಯ ಕೊಣ್ಣೂರು ಗ್ರಾಮಕ್ಕೆ ಏಕಾಏಕಿ ನೀರು ನುಗ್ಗಿದ ಪರಿಣಾಮ ಗ್ರಾಮ ಜಲಾವೃತವಾಗಿದ್ದು, ರಕ್ಷಣಾ ಕಾರ್ಯಾಚರಣೆಯ ವಿಫಲವಾಗಿದೆ. ಪರಿಣಾಮ ಸುಮಾರು 20 ಜನರು ಕಳೆದ 19 ಗಂಟೆಗಳಿಂದ ಪ್ರಾಣ ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ.

11:27 August 09

  • ವೈಮಾನಿಕ ವೀಕ್ಷಣೆ್ಗೆ  ತೆರಳಿದ ಸಿಎಂ , ಇದಾದ ನಂತರ ಬಾಗಲಕೋಟೆಯ ಪ್ರಮುಖ ಸ್ಥಳಗಳಿಗೆ ತೆರಳಿ, ಅಲ್ಲಿ ಮಳೆಯಿಂದ ಆಗಿರುವ ಅನಾಹುತಗಳನ್ನು ಪರಿಶೀಲನೆ ನಡೆಸಲಿದ್ದಾರೆ. 

11:26 August 09

  • ಶಿವಮೊಗ್ಗದಲ್ಲಿ ಕಳೆದ 4 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಲವಗೊಪ್ಪದ ಸೇವಾಲಾಲ್ ಬೀದಿಯ ಶೇಖರ್ ನಾಯಕ್ ಎಂಬುವವರ ಮನೆ ಕುಸಿದಿದೆ.

11:23 August 09

  • ರಾಯಚೂರಿನ ಗುರ್ಜಾಪುರ ಬ್ಯಾರೇಜ್​ ಸಂಪೂರ್ಣ ಮುಳುಗಿ ಹೋಗಿದೆ. ಇದು ವೈಟಿಪಿಎಸ್​ ವಿದ್ಯುತ್​ ಘಟಕಕ್ಕೆ ನೀರು ಪೂರೈಕೆ ಮಾಡುತ್ತಿತ್ತು. 
  • ವೈಟಿಪಿಎಸ್​ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. 

11:20 August 09

heavy rain
ಭಾರೀ ಮಳೆ
  • ಸರ್ಕಾರ 2, 5 ಸಾವಿರ ಪರಿಹಾರದ ಹಣ ಕೋಡೋಕೆ ಬಂದರೆ ಬೇಡ ಎನ್ನಿ. ಕೊಡುವುದಾದ್ರೆ ಸೂಕ್ತ ಪರಿಹಾರ ಕೊಡಲಿ. ಇಲ್ಲದೇ ಹೋದ್ರೆ, ನಾನೇ ನನ್ನ ಜಮೀನು ಮಾರಾಟ ಮಾಡಿ ಪರಿಹಾರ ನೀಡುವೆ ಎಂದು ಧಾರವಾಡ ಜಿಲ್ಲೆಯ ಶಾಸಕ ಅಮೃತ ದೇಸಾಯಿ ನಿರಾಶ್ರಿತರಿಗೆ ತಿಳಿಸಿದ್ದಾರೆ.
  • ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಡಗರ. ಆದ್ರೆ, ರಾಜ್ಯದ ನಾನಾಕಡೆ ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹ ಜನರಲ್ಲಿ ಕಣ್ಣೀರಿನ ಕೋಡಿ ಹರಿಸಿದೆ. ಈ ಹಿನ್ನೆಲೆಯಲ್ಲಿ ಪ್ರವಾಹ ತಗ್ಗಿಸುವಂತೆ ಪ್ರಾರ್ಥಿಸಿ ಸಿಎಂ ಬಿ.ಎಸ್.ಯಡಿಯೂರಪ್ಪ ವರಮಹಾಲಕ್ಷ್ಮಿ ಪೂಜೆ ನೆರವೇರಿಸಿದ್ದಾರೆ.

11:05 August 09

heavy rain
ಭಾರೀ ಮಳೆ
  • ಬೆಳಗಾವಿಯ ಹಲವು ಕಡೆ ನದಿಯಂತಾದ ರಸ್ತೆಗಳು, ಕೊಚ್ಚಿಕೊಂಡು ಹೋಗುತ್ತಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕದಳ ಸಿಬ್ಬಂದಿ. ಬೇರೆ ಕಡೆ ಜನರನ್ನು ಸ್ಥಳಾಂತರ ಮಾಡುತ್ತಿರುವ ಸಕ್ಷಣಾ ಸಿಬ್ಬಂದಿ 

11:01 August 09

heavy rain
ನದಿಯಂತಾದ ರಸ್ತೆ
  • ಸಂತ್ರಸ್ತರಿಗೆ ಅಲ್ಲಲ್ಲಿ ಸಾರ್ವಜನಿಕರು ಸೇವೆ ಮಾಡುತ್ತಿದ್ದಾರೆ. ಗದಗದ ರೈಲ್ವೇ ನಿಲ್ದಾಣದಲ್ಲಿ ಜೈನ ಸಮುದಾಯದವರು ಬೆಳಗ್ಗಿನ ಉಪಹಾರವನ್ನು ಸಂತ್ರಸ್ತರಿಗೆ ನೀಡುತ್ತಿದ್ದಾರೆ. 
  • ನಾಳೆ ಮಂಗಳೂರು ಭಾಗದ ಕಡೆ ಪರಿಶೀಲನೆಗೆ ತೆರಳುತ್ತೇನೆ ಎಂದ ಸಿಎಂ ಬಿಎಸ್​ವೈ 

10:48 August 09

  • ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ. ಕುಮಾರಧಾರ ನದಿಯೂಕೂಡ ತುಂಬಿದ್ದು ರಭಸವಾಗಿ ಹರಿಯುತ್ತಿದೆ.

10:41 August 09

  • ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಗೂಂಡವಾಡ ಗ್ರಾಮದಲ್ಲಿ ಗುಂಡು ಅಪ್ಪಾಸಾಬ ಅಂಗಲಿ (33) ಎಂಬ ವ್ಯಕ್ತಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಗೂಂಡವಾಡದಿಂದ ಕುಡಚಿ ಪಟ್ಟಣಕ್ಕೆ ಹೋಗುವಾಗ ನದಿಯಲ್ಲಿ ಕೊಚ್ಚಿ ಹೋಗಿ ಸಾವನಪ್ಪಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.  

10:38 August 09

ಭಾರೀ ಮಳೆ
  • ಉತ್ತರ ಕನ್ನಡದಲ್ಲಿ ಭೋರ್ಗರೆಯುತ್ತಿರುವ ವರುಣ, ಹಲವು ಕಡೆ ರಸ್ತೆ ಬಂದ್​, ಬೇಡ್ತಿ ನದಿಯ ರಭಸಕ್ಕೆ ಕೊಚ್ಚಿ ಹೋದ ಮಂಚಿಕೇರಿ ಸೇತುವೆ.
  • ಶಿರಸಿ, ಸಿದ್ದಾಪುರ ಮುಂತಾದೆಡೆ ಭಾರೀ ಮಳೆ
  • ಉಂಚಳ್ಳಿ ಫಾಲ್ಸ್​ನಲ್ಲಿ ರಭಸದಿಂದ ಸುರಿಯುತ್ತಿರುವ ನೀರು

10:35 August 09

  • ಬೆಳಗಾವಿಯಲ್ಲಿ ಮುಂದುವರೆದ ರಕ್ಷಣಾಕಾರ್ಯ, ಸೇನಾ ಹೆಲಿಕಾಪ್ಟರ್​ ಮುಖಾಂತರ ಏರ್​ ಲಿಪ್ಟ್​ 
  • ಇದುವರೆಗೂ 25 ಮಂದಿಯನ್ನು ರಕ್ಷಣೆ ಮಾಡಿದ ಸೇನೆ
  • ನಡುಗಡ್ಡೆಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡುವ ಕಾರ್ಯ ಮುಂದುವರಿಕೆ, ರೂಗಿ, ಹಳಲಿಯ ನಡುಗಡ್ಡೆಯಲ್ಲಿ  ಸಿಲುಕಿಕೊಂಡಿರುವ ಜನ

10:29 August 09

  • ಬೆಳಗಾವಿ ಜಿಲ್ಲೆಯ ಗೋಗಾಕ ತಾಲೂಕಿನಲ್ಲಿ ರಕ್ಷಣಾ ಕಾರ್ಯ ಮಾಡುವಾಗ ಓರ್ವ ವೃದ್ಧನನ್ನು ಬಿಟ್ಟುಬಂದ ರಕ್ಷಣಾ ಸಿಬ್ಬಂದಿ
  • ಈ ವರೆಗೆ ರಾಜ್ಯದಲ್ಲಿ 42 ಕೇಂದ್ರಗಳನ್ನು ತೆರೆಯಲಾಗಿದೆ
  • ಸುಧಾಮೂರ್ತಿಯಿಂದ ಸಿಎಂ ಫಂಡ್​ಗೆ 10 ಕೋಟಿ 
  • ಬಾಗಲಕೋಟೆಯ ಜಲಾವೃತ ಪ್ರದೇಶಗಳಿಗೆ ಸಿಎಂ ಯಡಿಯೂರಪ್ಪ ಭೇಟಿ 
  • ನಿರಾಶ್ರಿತರಿಗೆ ಅಭಯ ನೀಡಿದ ಯಡಿಯೂರಪ್ಪ

10:11 August 09

  • ಕಬಿನಿ ಭರ್ತಿಯಾದ ಹಿನ್ನೆಲೆ ನದಿಗಳಿಗೆ ನೀರು ಬಿಡುಗಡೆ ಮಾಡಲಾಗಿದ್ದು, ನಂಜನಗೂಡು ಹೆದ್ದಾರಿ  ಸಂಪೂರ್ಣ ಮುಳುಗಡೆಯಾಗಿದೆ. 
  • ನಂಜನಗೂಡು-ಊಟಿ ಸಂಚಾರ ಬಂದ್​ 

10:09 August 09

  • ಬೆಳಗವಿಯ ಹಿಂಡಲಗಾ ಜೈಲಿಗೂ ನುಗ್ಗಿದ ನೀರು, ರಾತ್ರಿ ಇಡೀ ನೀರಿನಲ್ಲೇ ಕಳೆದ ಕೈದಿಗಳು, ಸುಮಾರು 700 ಕ್ಕೂ ಹೆಚ್ಚು ಕೈದಿಗಳಿರುವ ಜೈಲು

10:03 August 09

  • ಪ್ರವಾಹ ಪೀಡಿತ ಸಂತ್ರಸ್ತರಿಗೆ ಕೇಂದ್ರದಿಂದ ಸಹಕಾರ ನೀಡುವ ಬರವಸೆ: ಬಿಎಸ್​ವೈ 
  • ಚಿಕ್ಕೋಡಿ ಪಟ್ಟಣದಲ್ಲಿನ ನಡುಗಡ್ಡೆಯಲ್ಲಿ ಸಿಲುಕಿರುವರನ್ನು ರಕ್ಷಣೆ ಮಾಡಲು ಆಗಮಿಸಿದ ನೌಕಾಪಡೆ ​ 
  • ಕಾರವಾರದಿಂದ ಬಂದ ಎರಡು ನೌಕಾದಳ ತಂಡ 
  • ಸದಗಲಾ, ಇಂಗಳಿ,ಯಡೂರಿನಲ್ಲಿ ಕಾರ್ಯಾಚಣೆ ಮಾಡಲು ಆಗಮಿಸಿದ ನೌಕಾಪಡೆ 

09:58 August 09

  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೂಡ ಭಾರಿ ಮಳೆ ಸುರಿಯುತ್ತಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
  • ಬೇಕಾದಷ್ಟು ಮಾತ್ರ ಮಳೆ ಕರುಣಿಸು, ಪ್ರವಾಹದಿಂದ ಜನರನ್ನು ರಕ್ಷಿಸು ಎಂದು ಬಿಜೆಪಿ ಮುಖಂಡ ಹಾಗೂ ಶಾಸಕ ಕೆ ಎಸ್ ಈಶ್ವರಪ್ಪ ಇಂದು ಬೆಳಿಗ್ಗೆ ಮೈಸೂರುಗೆ ಆಗಮಿಸಿ  ಶ್ರೀ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ ಬೇಡಿಕೊಂಡಿದ್ದಾರೆ.
  • ಬೆಳಗಾವಿಯ ಹಿಂಡಲಗಾ ಜೈಲಿಗೂ ನುಗ್ಗಿದ ಮಳೆ ನೀರು, ರಾತ್ರಿ ಇಡೀ ನೀರಿನಲ್ಲೇ ಕಳೆದ ಕೈದಿಗಳು, 700 ಹೆಚ್ಚು ಕೈದಿಗಳಿರುವ ಜೈಲು 

09:37 August 09

ಮಹಾ ಕೋರಿಕೆ ಮನ್ನಿಸಿದ ಕರ್ನಾಟಕ ಸರ್ಕಾರ... ಆಲಮಟ್ಟಿಯಿಂದ 4.8 ಲಕ್ಷ ಕ್ಯೂಸೆಕ್​​ ನೀರು ಹೊರಕ್ಕೆ!

  • ಭಾರಿ ಮಳೆ ಸುರಿಯ ಪರಿಣಾಮ ಹವಾಮಾನ ವೈಪರೀತ್ಯವಾಗಿರುವುದರಿಂದ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡುವ ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ

  • ಮಳೆಯಿಂದ ಉತ್ತರ ಕರ್ನಾಟಕ ನಲುಗಿದ್ದು, ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಈ ಜನಗಳ ಕಷ್ಟಕ್ಕೆ ಮುಸ್ಲಿಂ ಸಮುದಾಯದ ಜನರು ಸಹಾಯಹಸ್ತ ಚಾಚಿದ್ದಾರೆ. ಗಂಜಿ ಕೇಂದ್ರಗಳಿಗೆ ಹಣ್ಣು-ಹಂಪಲ, ಆಹಾರ ಸಾಮಗ್ರಿಗಳನ್ನು ದಾನವಾಗಿ ನೀಡುತ್ತಿದ್ದಾರೆ.
  • ರಾಯಚೂರು ಜಿಲ್ಲೆಯ ಕುರವಕುಲ ನಡುಗಡ್ಡೆಯಲ್ಲಿ ವಾಸಿಸುವ ಜನ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಸಂತೆಯಲ್ಲಿ ಖರೀದಿಸಿ, ಬಳಿಕ ಎನ್​​ಡಿಆರ್​ಎಫ್​​ ತಂಡದ ಸಹಾಯದೊಂದಿಗೆ ಮರಳಿ ಗ್ರಾಮಕ್ಕೆ ತೆರಳಿದ್ದಾರೆ.
  • ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಭಾರಿ ಅವಾಂತರವನ್ನೇ ಸೃಷ್ಟಿಸಿದೆ. 

ರಾಜ್ಯದಲ್ಲಿ ವರುಣದ ಆರ್ಭಟ ಇನ್ನೂ ಜೋರಾಗಿದ್ದು, ಅಲ್ಲಲ್ಲಿ ಅಹಿತಕರ ಘಟನೆಗಳು ಕೂಡ ಸಂಭವಿಸುತ್ತಿವೆ, ಜನ ಜಾನುವಾರುಗಳ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲಾಡಳಿತ ಹಾಗೂ ಸಂಘ ಸಂಸ್ಥೆಗಳು ನೆರವಿಗೆ ಧಾವಿಸಿವೆ. 

Intro:Body:

rain live news 

Conclusion:
Last Updated : Aug 9, 2019, 8:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.