ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಯಿತು ಎನ್ನುವಾಗಲೇ ಪಕ್ಕದ ಕೇರಳದಿಂದ ಬರುತ್ತಿರುವರಿಂದ ಸೋಂಕು ಹರಡುತ್ತಿದೆ. ಈ ಹಿನ್ನೆಲೆ, ಕೇರಳದಿಂದ ಬಂದಿರುವವರು ಟೆಸ್ಟ್ ಮಾಡಿಸದೇ ಇರುವವರ ಬಗ್ಗೆ ಆಯಾ ಕಂಪನಿ, ಶಿಕ್ಷಣ ಸಂಸ್ಥೆಗಳು ಮಾಹಿತಿ ನೀಡಬೇಕು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಓದಿ: ರಾಜ್ಯದಲ್ಲಿಂದು 438 ಮಂದಿಗೆ ಸೋಂಕು.. 6 ಮಂದಿ ಸಾವು..
ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್ಗಳಿಗೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದ್ದು, 5 ಅಥವಾ 5ಕ್ಕಿಂತ ಜಾಸ್ತಿ ಕೊರೊನಾ ಕೇಸ್ಗಳು ಪತ್ತೆಯಾದರೆ ಅದು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗುತ್ತದೆ. ಕಂಟೈನ್ಮೆಂಟ್ ವಲಯ ಎಂದು ಘೋಷಣೆ ಮಾಡಿದ 7 ದಿನಗಳ ಬಳಿಕ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಿಸಬೇಕು. ಶಿಕ್ಷಣ ಸಂಸ್ಥೆಗಳಲ್ಲಿ, ಹಾಸ್ಟೆಲ್ ಗಳಲ್ಲಿ ಕಡ್ಡಾಯ ಮಾಸ್ಕ್ ಹಾಕುವುದು, ಸ್ಯಾನಿಟೈಸರ್ ಬಳಕೆ ಮಾಡಬೇಕು, ಅಂತರ ಕಾಪಾಡಿಕೊಳ್ಳದೇ ಇದ್ದರೆ ಸಂಸ್ಥೆಯ ಮಾಲೀಕರೆ ಹೊಣೆಗಾರರು ಎಂದು ತಿಳಿಸಿದೆ.
ಕೇರಳದಿಂದ ಬರುವವರು ಶಿಕ್ಷಣಕ್ಕಾಗಿ, ಪ್ರವಾಸಕ್ಕಾಗಿ, ರೆಸಾರ್ಟ್ ಗಳಲ್ಲಿ ಉಳಿದುಕೊಳ್ಳುವವರಾಗಲೀ ಆರ್ಟಿ-ಪಿಸಿಆರ್ (RT-PCR) ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ಇರಬೇಕು. ಅದೂ ಕೂಡ 72 ಗಂಟೆಯ ಒಳಗೆ ಟೆಸ್ಟ್ ಮಾಡಿಸಿರಬೇಕು. ಕೇರಳದಿಂದ ಬಂದವರಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದರೆ ಅವರ ಸ್ಯಾಂಪಲ್ ಜೀನೋಮ್ ಸೀಕ್ವೆನ್ಸಿಂಗ್ಗೆ ಒಳಪಡಿಸಲಾಗುತ್ತೆ.
ಅಂತವರ ಟೆಸ್ಟ್ ಆಗುವ ತನಕ ಪ್ರತ್ಯೇಕವಾಗಿ ಇರುವಂತೆ ಸೂಚಿಸಬೇಕು. ನರ್ಸಿಂಗ್ ಕಾಲೇಜು, ಪ್ಯಾರಾ ಮೆಡಿಕಲ್ ಕಾಲೇಜುಗಳಲ್ಲಿ ಮತ್ತೊಮ್ಮೆ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಿಸಬೇಕು. ಕೇರಳದಿಂದ ವ್ಯಾಸಂಗಕ್ಕಾಗಿ ಬಂದವರು ಪದೇ ಪದೇ ಊರಿಗೆ ಹೋಗುವುದಕ್ಕೂ ಸರ್ಕಾರ ಬ್ರೇಕ್ ಹಾಕಿದೆ. ಒಂದು ವೇಳೆ ಕೇರಳಕ್ಕೆ ಹೋದರೆ ಬರುವಾಗ ಕಡ್ಡಾಯ ನೆಗೆಟಿವ್ ರಿಪೋರ್ಟ್ ತರಬೇಕು.
ಕೇರಳದಿಂದ ಬರುವ ವಿದ್ಯಾರ್ಥಿಗಳನ್ನ ಪೋಷಕರು ಭೇಟಿ ಮಾಡಲು ಕೋವಿಡ್ ನೋಡಲ್ ಆಫೀಸರ್ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ವಿದ್ಯಾರ್ಥಿಗಳು ಕೂಡ 72 ಗಂಟೆಗಳ ಒಳಗೆ ಟೆಸ್ಟ್ ಮಾಡಿರುವ ಕೋವಿಡ್ ನೆಗೆಟಿವ್ ರಿಪೋರ್ಟ್ ಸಲ್ಲಿಸಬೇಕು. ಹಾಸ್ಟೆಲ್ನಲ್ಲಿ ಉಳಿದುಕೊಳ್ಳುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳು ಇರುವಂತೆ ನೋಡಿಕೊಳ್ಳಬೇಕು. ಸೂಪರ್ ಸ್ಪ್ರೆಡರ್ ಕಾರ್ಯಕ್ರಮಗಳಿಗೆ ನಿಷೇಧಿಸುವುದು ಅಂದರೆ ಕಾಲೇಜು ಕ್ಯಾಂಪಸ್, ಹಾಸ್ಟೆಲ್ ಗಳಲ್ಲಿ ಗುಂಪುಗೂಡುವ ಕಾರ್ಯಕ್ರಮ, ಗುಂಪುಗೂಡಿ ಊಟ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ.
ಕೇರಳದಿಂದ ಬಂದು ಹೋಗುವ ವಿದ್ಯಾರ್ಥಿಗಳಿದ್ದರೆ ಪ್ರತಿ 15 ದಿನಗಳಿಗೊಮ್ಮೆ ಕೋವಿಡ್ ಟೆಸ್ಟ್ ಮಾಡಿಸಲೇಬೇಕು. ಕಳೆದ ಎರಡು ವಾರಗಳಿಂದ ಕೇರಳದಿಂದ ಬಂದಿರುವವರು ಟೆಸ್ಟ್ ಮಾಡಿಸಿಕೊಳ್ಳಲು ಆದೇಶಿಸಲಾಗಿದೆ. ಎಂಎನ್ಸಿ ಕಂಪೆನಿ, ಹೋಟೆಲ್, ರೆಸಾರ್ಟ್, ಲಾಡ್ಜ್, ಹೋಮ್ ಸ್ಟೇ ನಲ್ಲಿ ಕೆಲಸ ಮಾಡುತ್ತಿರುವವರು ಅವರ ದುಡ್ಡಿನಲ್ಲೇ ಕೋವಿಡ್ ಟೆಸ್ಟ್ ಮಾಡಿಸಬೇಕು. ಕಾಲೇಜುಗಳಲ್ಲಿ, ನರ್ಸಿಂಗ್ ಕಾಲೇಜುಗಳಲ್ಲಿ ಕೋವಿಡ್ ಟೆಸ್ಟ್ ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ.