ಬೆಂಗಳೂರು: ಸರ್ಕಾರದ ಹೊಸ ಆದೇಶದಂತೆ ಕೊರೊನಾ ಪಾಸಿಟಿವ್ ಕೇಸ್ ಬರುವ ವ್ಯಕ್ತಿಯ ಮನೆಯ ನೂರು ಮೀಟರ್ವರೆಗೆ ಮಾತ್ರ ಕಂಟೇನ್ಮೆಂಟ್ ಮಾಡಲಾಗುತ್ತಿದೆ.
ಕಳೆದ 60 ದಿನದಿಂದ ಸೀಲ್ಡೌನ್ ಆಗಿದ್ದ ಪಾದರಾಯನಪುರದಲ್ಲಿ ಈಗ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈಗ 11ನೇ ಕ್ರಾಸ್ನ ಒಂದು ಭಾಗದಲ್ಲಿ ನಿನ್ನೆ ಸಂಜೆ ಬ್ಯಾರಿಕೇಡ್ಗಳನ್ನು ತೆರವು ಮಾಡಿ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಕಳೆದ ವಾರ 9 ಮತ್ತು 10ನೇ ಕ್ರಾಸ್ನ ಕೆಲ ಭಾಗಗಳಲ್ಲಿ ಓಡಾಟಕ್ಕೆ ಅವಕಾಶ ಮಾಡಲಾಗಿತ್ತು.
ಪಾದರಾಯನಪುರದ 68 ಕೇಸ್ಗಳಲ್ಲಿ ಸಕ್ರಿಯ ಪ್ರಕರಣಗಳು ಈಗ ಕೇವಲ ನಾಲ್ಕು ಕೇಸ್ಗಳು ಮಾತ್ರ ಇವೆ. ಇಲ್ಲಿ ಮಾತ್ರ ಕಂಟೇನ್ಮೆಂಟ್ ಮಾಡಲಾಗಿದೆ. ಇದೀಗ ಹೊಸ ಪ್ರಕರಣಗಳು ಪತ್ತೆಯಾಗದ ಕಾರಣ ಹಾಗೂ ಯಾವ ಭಾಗದಲ್ಲಿ ಸೋಂಕಿತರು ಇಲ್ಲವೋ ಆ ಭಾಗವನ್ನ ಕಂಟೇನ್ಮೆಂಟ್ ಝೋನ್ನಿಂದ ಮುಕ್ತಿ ಮಾಡಲಾಗಿದೆ. ಇಂದು ಸಂಜೆ ಈ ಬಗ್ಗೆ ಅಧಿಕೃತ ಆದೇಶ ಮಾಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದರು.