ಬೆಂಗಳೂರು : ಕಾಂಗ್ರೆಸ್‌ನವರು ಅಗೌರವದಿಂದ ನಡೆಸಿಕೊಂಡ ಡಾ. ಬಿ ಆರ್ ಅಂಬೇಡ್ಕರ್ ಅವರ ಹೆಸರನ್ನೇ ಇಂದಿರಾ ಕ್ಯಾಂಟೀನ್ಗೆ ಇಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಿ ಅಂತಾ ಸಿಎಂಗೆ ಹೇಳಿದ್ದೇನೆ. ಕಾಂಗ್ರೆಸ್‌ನವರು ಅಗೌರವದಿಂದ ನಡೆಸಿಕೊಂಡ ಅಂಬೇಡ್ಕರ್ ಹೆಸರನ್ನೇ ಇಂದಿರಾ ಕ್ಯಾಂಟೀನ್ಗೆ ಇಡಲಿ. ದೇಶದಲ್ಲಿ ಸಾಮಾನ್ಯರು ಅನ್ನ ತಿನ್ನಲು ಸಾಧ್ಯವಾಗಿದ್ದು ಅಂಬೇಡ್ಕರ್ ಅವರಿಂದ. ಅವರ ಹೆಸರನ್ನೇ ಇಡಲಿ ಎಂದು ಒತ್ತಾಯಿಸಿದರು.
ಪ್ರಿಯಾಂಕ ಖರ್ಗೆ ಅವರ ವಾಜಪೇಯಿ ಮೇಲಿನ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಪ್ರಿಯಾಂಕ್ ಖರ್ಗೆ ಗಾಂಧಿ ಕುಟುಂಬದ ನಿರೀಕ್ಷೆ ಪ್ರಕಾರ ಮಾತನಾಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅಜಾತಶತ್ರು. ಪ್ರಿಯಾಂಕ ಖರ್ಗೆ ಕುಟುಂಬ ರಾಜಕಾರಣದಿಂದ ಬಂದವರು. ಅವರು ಅಟಲ್ ಬಿಹಾರಿ ವಾಜಪೇಯಿಯವರ ಇತಿಹಾಸ ಓದಿಕೊಳ್ಳಲಿ. ಕಾಂಗ್ರೆಸ್‌ನವರು ವಿಷಯಾಂತರ ಮಾಡಬಾರದು ಎಂದರು.
ಸಿ ಟಿ ರವಿ ಹೇಳಿಕೆಗೆ ಮುಗಿ ಬೀಳುವ ಕೆಲಸ ಮಾಡಿದ್ದಾರೆ. ವಾಜಪೇಯಿ ಪ್ರಧಾನಿ ಆದಾಗ ಚತುಷ್ಪಥ ರಸ್ತೆ ಮಾಡಿದ್ದರು. ಆಗ ವಾಜಪೇಯಿ ಹೆಸರಿಟ್ಟುಕೊಂಡಿರಲಿಲ್ಲ. ಕೇವಲ ವಾಜಪೇಯಿ ಭಾವಚಿತ್ರ ಹಾಕಿದ್ದರು. ಅಧಿಕಾರಕ್ಕೆ ಬಂದ ಮರು ದಿನವೇ ಯುಪಿಎ ಸರ್ಕಾರ ವಾಜಪೇಯಿ ಭಾವಚಿತ್ರ ತೆಗೆದು ಹಾಕಿತ್ತು.
ವಾಜಪೇಯಿ ಬಗ್ಗೆ ಅಪಾರ ಗೌರವ, ನಂಬಿಕೆ ಆದರ್ಶ ಜೀವನದ ಬಗ್ಗೆ ಶ್ರೇಷ್ಠ ಕಲ್ಪನೆಗಳಿವೆ. ನೆಹರೂ ವಿಲಾಸಿ ಜೀವನ ಎಲ್ಲರಿಗೂ ಗೊತ್ತಿದೆ. ಸಿ ಟಿ ರವಿ ಏನು ಹೇಳ್ತಾರೆ ಅನ್ನೋದು ಕೂಡ ಚರ್ಚೆಯಾಗಲಿ ಎಂದರು.
ಇದನ್ನೂ ಓದಿ: ಅವರವರೇ ಸಿಎಂ ಆದರೆ ದಲಿತರು ಯಾವಾಗ CM ಆಗೋದು?: ಮಾಜಿ ಐಎಎಸ್ ಅಧಿಕಾರಿ ಕೆ.ಶಿವರಾಂ ಪ್ರಶ್ನೆ