ETV Bharat / state

ಲಾಕ್​ಡೌನ್​ ನಡುವೆ ರಸ್ತೆಗಿಳಿದ ಸಚಿವರ ಕಾರು ತಡೆದ ಕಾನ್ಸ್‌ಟೇಬಲ್‌... ವಿಡಿಯೋ ವೈರಲ್​!

ಬೆಂಗಳೂರಿನಲ್ಲಿ ಲಾಕ್​ಡೌನ್ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಕೆ.ಆರ್.ಮಾರ್ಕೆಟ್ ರಸ್ತೆ ಬಂದ್ ಮಾಡಲಾಗಿತ್ತು. ಈ ವೇಳೆ ಕಂದಾಯ ಸಚಿವ ಆರ್.ಅಶೋಕ್ ಅವರ ಕಾರು ಇದೇ ಮಾರ್ಗವಾಗಿ ಬಂದಿದ್ದು, ಸಂಚಾರಿ ಪೊಲೀಸ್ ಸಿಬ್ಬಂದಿ ಮಾಹಿತಿ ಮೇರೆಗೆ ವಾಪಸ್​ ಹೋಗಿದ್ದಾರೆ.

Constable block the minister's car on the road  at Bengalore
ಲಾಕ್​ಡೌನ್​ ನಡುವೆ ರಸ್ತೆಗಿಳಿದ ಸಚಿವರ ಕಾರನ್ನು ತಡೆದ ಕಾನ್ಸ್‌ಟೇಬಲ್
author img

By

Published : Jul 13, 2020, 8:23 PM IST

ಬೆಂಗಳೂರು: ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಿನ್ನೆ ಲಾಕ್​ಡೌನ್​​ ಜಾರಿಯಲ್ಲಿತ್ತು. ಈ ವೇಳೆ ರಸ್ತೆಗಿಳಿದಿದ್ದ ಸಚಿವರ ಕಾರನ್ನ ಕಾನ್ಸ್‌ಟೇಬಲ್ ತಡೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಲಾಕ್​ಡೌನ್​ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರ‌ ನಿಷೇಧ ಮಾಡಲಾಗಿತ್ತು. ಈ ವೇಳೆ ಕಂದಾಯ ಸಚಿವ ಆರ್.ಅಶೋಕ್ ಅವರ ಕಾರು ಕೆ.ಆರ್.ಮಾರ್ಕೆಟ್ ಫ್ಲೈ-ಓವರ್ ಹತ್ತಿರ ಬಂದಿದೆ. ರಸ್ತೆ ಬಂದ್​​ ಮಾಡಿ ಬ್ಯಾರಿಕೇಡ್ ಹಾಕಿದ್ದ ಕಾನ್ಸ್​​​ಟೇಬಲ್​ ದಾರಿ ಬಿಡುವಂತೆ ಸಚಿವರ ಪಿಎ ಹೇಳಿದ್ದಾರೆ.

ಲಾಕ್​ಡೌನ್​ ನಡುವೆ ರಸ್ತೆಗಿಳಿದ ಸಚಿವರ ಕಾರನ್ನು ತಡೆದ ಕಾನ್ಸ್‌ಟೇಬಲ್

ಲಾಕ್​ಡೌನ್​ನಿಂದಾಗಿ ಮಾರ್ಕೆಟ್ ರಸ್ತೆ ಬಂದ್ ಮಾಡಲಾಗಿದೆ. ಹೋಗುವುದಕ್ಕೆ ಸಾಧ್ಯವಿಲ್ಲ ಎಂದು ಕಾನ್ಸ್​ಟೇಬಲ್​​ ಹೇಳಿದ್ದರಿಂದ ಸಚಿವ ಆರ್.ಅಶೋಕ್ ‌ ಕಾರು ಯೂಟರ್ನ್ ಮಾಡಿ ವಾಪಸ್ ಹೋಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕಾರ್ಯಕ್ಕೆ ಶಹಬ್ಬಾಸ್​​ಗಿರಿ ವ್ಯಕ್ತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.