ಬೆಂಗಳೂರು: ನೂರಾರು ಕೋಟಿಯ ನಕಲಿ ಬಿಲ್ಲು, ಕಳಪೆ ಕಾಮಗಾರಿ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡ ಅನೂಪ್ ಅಯ್ಯಂಗಾರ್ ನೇತೃತ್ವದಲ್ಲಿ ಇಂದು ಕಾವೇರಿ ಥೀಯಟರ್ ಮುಖ್ಯ ರಸ್ತೆಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಸ್ಥಳೀಯ ಶಾಸಕ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ವಿರುದ್ಧ 100ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದರು. ಪಾಲಿಕೆಯ ವಾರ್ಡ್‌ಗಳಲ್ಲಿ ನಕಲಿ ಬಿಲ್ಲುಗಳನ್ನು ಪಾಸ್ ಮಾಡಲಾಗಿದೆ. ಬಿಬಿಎಂಪಿ ಅಧಿಕಾರಿಗಳೇ ತಮ್ಮ ಅಸಹಾಯತೆ ವ್ಯಕ್ತಪಡಿಸಿದ್ದಾರೆ. ಇದನ್ನು ಸಂಪೂರ್ಣವಾಗಿ ವಿಚಾರಣೆಗೆ ಒಳಪಡಿಸಬೇಕು. ಡಾ.ಸಿ ಎನ್ ಅಶ್ವತ್ಥ ನಾರಾಯಣ ಒತ್ತಡದಿಂದ ನಕಲಿ ಬಿಲ್‌ಗಳು ರೆಡಿಯಾಗಿವೆ ಎಂದು ಘೋಷಣೆ ಕೂಗಿದರು.
ಕಾಂಗ್ರೆಸ್ ಪಕ್ಷದ ಮುಖಂಡ ಅನೂಪ್ ಅಯ್ಯಂಗಾರ್ ಮಾತನಾಡಿ, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಾದ ಸಮಸ್ಯೆಯನ್ನು ತನ್ನ ಕ್ಷೇತ್ರದಲ್ಲೇ ಪ್ರಶ್ನಿಸುವುದು ತನ್ನ ಹಕ್ಕು, ಅನ್ಯಾಯದ ವಿರುದ್ದ ಹೋರಾಡುವುದು ತಪ್ಪು ಎನ್ನುವ ರೀತಿಯಲ್ಲಿ ಆಗಿ ಹೋಗಿದೆ. ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಬ್ರಹ್ಮಾಂಡ ಭ್ರಷ್ಟಚಾರವಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಡತಗಳಿಗೆ ಬೆಂಕಿಯಿಟ್ಟ ಪ್ರಕರಣ 10 ವರ್ಷಗಳಿಂದ ತನಿಖೆಯಲ್ಲಿದೆ. ಈ ಕುರಿತು ಸಿಐಡಿ ಶೀಘ್ರಗತಿಯಲ್ಲಿ ವಿಚಾರಣೆ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಲೋಕಾಯುಕ್ತಕ್ಕೆ ದೂರು: ಸ್ಯಾಂಕಿ ಕೆರೆ ನವೀಕರಣ ಹೆಸರಿನಲ್ಲಿ ಲೂಟಿ ಮತ್ತು ರಸ್ತೆ, ಪುಟ್ಪಾತ್ ಗುಂಡಿಗಳ ನಗರವಾಗಿದೆ. ಇದರ ವಿರುದ್ದ ಹೋರಾಟ ಮಾಡಿದವರನ್ನು ಹತ್ತಿಕ್ಕುವ ಕಾರ್ಯವಾಗುತ್ತಿದೆ. ಇದರ ಸಮಗ್ರ ವರದಿ ಜೊತೆಯಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಅನೂಪ್ ಅಯ್ಯಂಗಾರ್ ತಿಳಿಸಿದರು.
ಇದನ್ನೂ ಓದಿ: ರಾಯಚೂರು: ಎನ್ಐಎ ದಾಳಿ ಖಂಡಿಸಿ ಪಿಎಫ್ಐ ಕಾರ್ಯಕರ್ತರ ಪ್ರತಿಭಟನೆ