ಬೆಂಗಳೂರು: ಮಕ್ಕಳ ಭವಿಷ್ಯದ ವಿಚಾರದಲ್ಲೂ ರಾಜಕೀಯ ಬೆರೆಸಿದ ಕಾಂಗ್ರೆಸ್ ಧೋರಣೆಗೆ ಈಗ ಉತ್ತರ ಸಿಕ್ಕಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.
ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್ ತನ್ನ ವೈಯುಕ್ತಿಕ ರಾಜಕೀಯ ಲಾಭಕ್ಕಾಗಿ, ಹಿಜಾಬ್ ವಿವಾದಕ್ಕೆ ಪುಷ್ಟಿ ನೀಡಿತು. ವಿದ್ಯಾರ್ಥಿನಿಯರು ತರಗತಿ ಮತ್ತು ಪರೀಕ್ಷೆಗೆ ಹಾಜರಾಗದಂತಹ ವಾತಾವರಣ ನಿರ್ಮಿಸಿತ್ತು. ಈಗ ನ್ಯಾಯಾಲಯದ ತೀರ್ಪು ಬಂದಿದೆ. ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕೆಲ ಮತೀಯ ಶಕ್ತಿಗಳು ಅನಗತ್ಯವಾಗಿ ಪ್ರಚೋದನೆ ನೀಡಿದವು. ಇದರಿಂದ ವಿದ್ಯಾರ್ಥಿನಿಯರ ಶಿಕ್ಷಣ ವಿಚಾರದಲ್ಲಿ ಗೊಂದಲ ಸೃಷ್ಟಿಯಾಯ್ತು ಎಂದು ವಾಗ್ದಾಳಿ ನಡೆಸಿದೆ.
-
ಹಿಜಾಬ್ ವಿಚಾರದಲ್ಲಿ ವಿದ್ಯಾರ್ಥಿನಿಯರ ಪರ ವಾದ ಮಾಡುವುದಕ್ಕೆ @INCKarnataka ತನ್ನದೇ ಪಕ್ಷದ ನ್ಯಾಯವಾದಿಗಳನ್ನು ನಿಯೋಜನೆ ಮಾಡಿತ್ತು.
— BJP Karnataka (@BJP4Karnataka) March 15, 2022 " class="align-text-top noRightClick twitterSection" data="
ಶಿಕ್ಷಣದಲ್ಲಿ ಮತ ರಾಜಕಾರಣ ಬೆರೆಸುವ ಹತಾಶ ಪ್ರಯತ್ನ ಇದಾಗಿತ್ತು.
ಉದಯೋನ್ಮುಖ ವಿಫಲ ನಾಯಕಿ ಪ್ರಿಯಾಂಕಾ ವಾದ್ರಾ ಕೂಡಾ ಚಿತಾವಣೆ ನೀಡಿದ್ದನ್ನು ಮರೆಯಲು ಸಾಧ್ಯವೇ?#YesToUniform_NoToHijab
">ಹಿಜಾಬ್ ವಿಚಾರದಲ್ಲಿ ವಿದ್ಯಾರ್ಥಿನಿಯರ ಪರ ವಾದ ಮಾಡುವುದಕ್ಕೆ @INCKarnataka ತನ್ನದೇ ಪಕ್ಷದ ನ್ಯಾಯವಾದಿಗಳನ್ನು ನಿಯೋಜನೆ ಮಾಡಿತ್ತು.
— BJP Karnataka (@BJP4Karnataka) March 15, 2022
ಶಿಕ್ಷಣದಲ್ಲಿ ಮತ ರಾಜಕಾರಣ ಬೆರೆಸುವ ಹತಾಶ ಪ್ರಯತ್ನ ಇದಾಗಿತ್ತು.
ಉದಯೋನ್ಮುಖ ವಿಫಲ ನಾಯಕಿ ಪ್ರಿಯಾಂಕಾ ವಾದ್ರಾ ಕೂಡಾ ಚಿತಾವಣೆ ನೀಡಿದ್ದನ್ನು ಮರೆಯಲು ಸಾಧ್ಯವೇ?#YesToUniform_NoToHijabಹಿಜಾಬ್ ವಿಚಾರದಲ್ಲಿ ವಿದ್ಯಾರ್ಥಿನಿಯರ ಪರ ವಾದ ಮಾಡುವುದಕ್ಕೆ @INCKarnataka ತನ್ನದೇ ಪಕ್ಷದ ನ್ಯಾಯವಾದಿಗಳನ್ನು ನಿಯೋಜನೆ ಮಾಡಿತ್ತು.
— BJP Karnataka (@BJP4Karnataka) March 15, 2022
ಶಿಕ್ಷಣದಲ್ಲಿ ಮತ ರಾಜಕಾರಣ ಬೆರೆಸುವ ಹತಾಶ ಪ್ರಯತ್ನ ಇದಾಗಿತ್ತು.
ಉದಯೋನ್ಮುಖ ವಿಫಲ ನಾಯಕಿ ಪ್ರಿಯಾಂಕಾ ವಾದ್ರಾ ಕೂಡಾ ಚಿತಾವಣೆ ನೀಡಿದ್ದನ್ನು ಮರೆಯಲು ಸಾಧ್ಯವೇ?#YesToUniform_NoToHijab
ಇನ್ನಾದರೂ ಕಾಂಗ್ರೆಸ್ ಪಕ್ಷ ವಿದ್ಯಾರ್ಥಿಗಳ ಭವಿಷ್ಯ ಜೊತೆ ಚೆಲ್ಲಾಟವಾಡದಿರಲಿ. ಈ ಪ್ರಕರಣದಲ್ಲಿ ಹಿಜಾಬ್ ಒಳಗಿರುವ ಮತ ಗಟ್ಟಿಗೊಳಿಸಲು ಯತ್ನಿಸಿದ ಸಿದ್ದರಾಮಯ್ಯಗೆ ತೀವ್ರ ಹಿನ್ನಡೆಯಾಗಿದೆ. ಸಿದ್ದರಾಮಯ್ಯ ಅವರು "ಹಿಜಾಬ್ ಧರಿಸುವುದು ಮೂಲಭೂತ ಹಕ್ಕು" ಎಂದು ಪ್ರತಿಪಾದಿಸಿದ್ದರು. ಈಗ ನ್ಯಾಯಾಲಯವೇ, ಹಿಜಾಬ್ ಇಸ್ಲಾಂ ಮತದ ಅವಿಭಾಜ್ಯ ಅಂಗವಲ್ಲ ಎಂಬ ತೀರ್ಪು ನೀಡಿದೆ ಎಂದು ತಿಳಿಸಿದೆ.
ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್, ಎಸ್‌ಡಿಪಿಐ, ಸಿಎಫ್‌ಐ ಮೂಗು ತೂರಿಸಿದ್ದರಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಯ್ತು. ಕಾಂಗ್ರೆಸ್ ಪಕ್ಷದ ಇಬ್ಬಗೆ ನೀತಿ, ಮತ ರಾಜಕಾರಣಕ್ಕಾಗಿ ಒಡೆದಾಳು ನೀತಿಯ ಪರಿಣಾಮವಾಗಿ ಸಾವಿರಾರು ವಿದ್ಯಾರ್ಥಿನಿಯರು ಪರೀಕ್ಷೆಯಿಂದ ಹಿಂದೆ ಸರಿದರು. ಇದಕ್ಕೆಲ್ಲಾ ಕಾಂಗ್ರೆಸ್ ನೇರ ಹೊಣೆ. ಹಿಜಾಬ್ ವಿಚಾರದಲ್ಲಿ ವಿದ್ಯಾರ್ಥಿನಿಯರ ಪರ ವಾದ ಮಾಡುವುದಕ್ಕೆ ಕಾಂಗ್ರೆಸ್ ತನ್ನದೇ ಪಕ್ಷದ ನ್ಯಾಯವಾದಿಗಳನ್ನು ನಿಯೋಜನೆ ಮಾಡಿತ್ತು. ಶಿಕ್ಷಣದಲ್ಲಿ ಮತ ರಾಜಕಾರಣ ಬೆರೆಸುವ ಹತಾಶ ಪ್ರಯತ್ನ ಇದಾಗಿತ್ತು ಎಂದು ಕಿಡಿಕಾರಿದೆ.
ಇದನ್ನೂ ಓದಿ: ನಮಗೆ ಶಿಕ್ಷಣ, ಹಿಜಾಬ್ ಎರಡೂ ಮುಖ್ಯ.. ಹಿಜಾಬ್ ಪರ ಉಡುಪಿ ವಿದ್ಯಾರ್ಥಿನಿಯರ ಮಾತು
ಉದಯೋನ್ಮುಖ ವಿಫಲ ನಾಯಕಿ ಪ್ರಿಯಾಂಕಾ ವಾದ್ರಾ ಕೂಡ ಚಿತಾವಣೆ ನೀಡಿದ್ದನ್ನು ಮರೆಯಲು ಸಾಧ್ಯವೇ?. ಶಾಲಾ ಹಂತದಲ್ಲೇ ಬಗೆಹರಿಯಬಹುದಾದ ಹಿಜಾಬ್ ವಿಚಾರವನ್ನು ನ್ಯಾಯಾಲಯದವರೆಗೆ ಎಳೆದು ತರುವ ಅಗತ್ಯವಿರಲಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸರ್ಕಾರ ಜಾರಿಗೊಳಿಸಿದ ಸಮವಸ್ತ್ರ ನೀತಿಯಲ್ಲಿ ತಪ್ಪಿಲ್ಲ. ಸಮವಸ್ತ್ರ ಮೂಲಭೂತ ಹಕ್ಕುಗಳ ಮೇಲಿನ ಸಮಂಜಸ ನಿರ್ಬಂಧ ಎಂದು ಕೋರ್ಟ್ ಅಭಿಪ್ರಾಯಪಟ್ಟಿರುವುದು ಸ್ವಾಗತಾರ್ಹ ಎಂದಿದೆ.