ETV Bharat / state

ಸಿಎಂಗೆ ಚಾರ್ಲಿ ನೋಡಿ ಬರುವ ಕಣ್ಣೀರು ಜನರ ಕಷ್ಟ ನೋಡಿ ಬರುವುದಿಲ್ಲ: ಕಾಂಗ್ರೆಸ್ ಟ್ವೀಟ್​ - ಬಿಜೆಪಿ ಭ್ರಷ್ಟೋತ್ಸವ

ಬಿಜೆಪಿ ಸರ್ಕಾರದ ಸಚಿವರಿಗೆ ಜನರ ಬಗ್ಗೆ ಕನಿಷ್ಠ ಕಾಳಜಿ ಇಲ್ಲದಿರುವುದು ದುರಂತ ಎಂದು ಸರ್ಕಾರದ ವಿರುದ್ದ ಕಾಂಗ್ರೆಸ್​ ಟ್ವೀಟ್ ಮಾಡಿದೆ.

ಸಿಎಂ ಬೊಮ್ಮಾಯಿ ಹಾಗೂ ಕಾಂಗ್ರೆಸ್​
ಸಿಎಂ ಬೊಮ್ಮಾಯಿ ಹಾಗೂ ಕಾಂಗ್ರೆಸ್​
author img

By

Published : Aug 21, 2022, 10:50 PM IST

Updated : Aug 21, 2022, 11:01 PM IST

ಬೆಂಗಳೂರು: ಭ್ರಷ್ಟ ಬಿಜೆಪಿ ಸರ್ಕಾರಿ ಹುದ್ದೆಗಳನ್ನೇ ಮಾರಿಕೊಳ್ಳುತ್ತಿದೆ. ಇವರಿಗೆ ಜನರ ಕಷ್ಟಕ್ಕಿಂತ ಸಿನಿಮಾ ನೋಡುವುದೇ ಮುಖ್ಯವಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.

ಕಾಂಗ್ರೆಸ್ ಟ್ವೀಟ್​
ಕಾಂಗ್ರೆಸ್ ಟ್ವೀಟ್​

ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರದ ಸಚಿವರಿಗೆ ಜನರ ಬಗ್ಗೆ ಕನಿಷ್ಠ ಕಾಳಜಿ ಇಲ್ಲದಿರುವುದು ದುರಂತ. ಅತಿವೃಷ್ಟಿಯಿಂದ ರೈತರು ತಿಂಗಳಿಂದ ಗೋಳಾಡುತ್ತಿದ್ದರೂ, ಭೇಟಿ ನೀಡಿ ರೈತರ ಕಷ್ಟ ಕೇಳದ ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ಮೊನ್ನೆ ಲೈಫ್ 360, ನಿನ್ನೆ ಗಾಳಿಪಟ 2, ದಿನಕ್ಕೊಂದು ಸಿನಿಮಾ ನೋಡಿಕೊಂಡು ಮಜವಾಗಿದ್ದಾರೆ! ಇಂತವರ ಕೈಯಲ್ಲಿ ರಾಜ್ಯ ನರಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದೆ.

  • ಬೆಳೆ ಹಾನಿಯಿಂದ ರೈತರ ಬದುಕು ಸೂತ್ರ ಹರಿದ ಗಾಳಿಪಟವಾಗಿದೆ, @bcpatilkourava ಅವರಿಗೆ 'ಗಾಳಿಪಟ2' ಸಿನೆಮಾ ಮುಖ್ಯವಾಗಿದೆ.
    ರೈತರ ಸಂಕಷ್ಟದ ಲೈಫನ್ನು ನೋಡುವುದ ಬಿಟ್ಟು 'ಲೈಫ್360' ಸಿನೆಮಾ ನೋಡಲು ಹೋಗಿದ್ದಾರೆ

    ಸಿಎಂಗೆ 'ಚಾರ್ಲಿ'ಗೆ ಬರುವ ಕಣ್ಣೀರು ಜನರ ಕಷ್ಟ ನೋಡಿ ಬರುವುದಿಲ್ಲ.

    ಸಿನೇಮದಂತೆ ಜನರ ಬದುಕನ್ನೂ THE END ಮಾಡಲಿದೆ ಈ ಸರ್ಕಾರ!

    — Karnataka Congress (@INCKarnataka) August 21, 2022 " class="align-text-top noRightClick twitterSection" data=" ">

ಬೆಳೆ ಹಾನಿಯಿಂದ ರೈತರ ಬದುಕು ಸೂತ್ರ ಹರಿದ ಗಾಳಿಪಟವಾಗಿದೆ. ಬಿ. ಸಿ ಪಾಟೀಲ್ ಅವರಿಗೆ 'ಗಾಳಿಪಟ 2' ಸಿನೆಮಾ ಮುಖ್ಯವಾಗಿದೆ. ರೈತರ ಸಂಕಷ್ಟದ ಲೈಫನ್ನು ನೋಡುವುದು ಬಿಟ್ಟು 'ಲೈಫ್ 360' ಸಿನೆಮಾ ನೋಡಲು ಹೋಗಿದ್ದಾರೆ. ಸಿಎಂಗೆ 'ಚಾರ್ಲಿ'ಗೆ ಬರುವ ಕಣ್ಣೀರು ಜನರ ಕಷ್ಟ ನೋಡಿ ಬರುವುದಿಲ್ಲ. ಸಿನಿಮಾದಂತೆ ಜನರ ಬದುಕನ್ನೂ 'ದಿ ಎಂಡ್’ ಮಾಡಲಿದೆ ಈ ಸರ್ಕಾರ!

ಜನದ್ರೋಹಿ ಬಿಜೆಪಿ ಸರ್ಕಾರಕ್ಕೆ ಜನರಿಗಿಂತ ಸಿನೆಮಾ ಪ್ರಮೋಷನ್ ಮುಖ್ಯ ಎನ್ನಲು ಉದಾಹರಣೆಗಳು ಎಂದು ವಿವರ ನೀಡಿರುವ ಕಾಂಗ್ರೆಸ್ ಪಾವಗಡ ಬಸ್ ಅಪಘಾತವಾಗಿದ್ದಾಗ – ಸಿಎಂ ಆರ್​ಆರ್​ಆರ್​ ಚಿತ್ರದಲ್ಲಿದ್ದರು. ಹುಬ್ಬಳ್ಳಿಯ ಜನ ಮಳೆ ಅವಾಂತರದಿಂದ ನರಳುತ್ತಿದ್ದಾಗ – ಶೆಟ್ಟರ್- 'ಕಂಡ್ಹಿಡಿ ನೋಡಣ' ದಲ್ಲಿದ್ದರು. ಅತಿವೃಷ್ಟಿಯಿಂದ ರೈತರು ಕಂಗೆಟ್ಟಿರುವಾಗ - ಬಿ. ಸಿ ಪಾಟೀಲ್ ಮೊನ್ನೆ ಲೈಫ್ 360, ನಿನ್ನೆ ಗಾಳಿಪಟ 2! ಎಂದು ದೂರಿದೆ.

ಹುದ್ದೆಗಳ ಮಾರಾಟ: 40% ಸರ್ಕಾರದಲ್ಲಿ ಸರ್ಕಾರಿ ಹುದ್ದೆಗಳು ಸಂತೆಯ ತರಕಾರಿಗಳಂತೆ ಮಾರಾಟವಾಗುತ್ತಿವೆ. ಪಿಎಸ್ಐ ನಿಂದ ಹಿಡಿದು ಶಿಕ್ಷಕರವರೆಗೂ ಪ್ರತಿಯೊಂದು ನೇಮಕಾತಿಯಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬರ್ತಿವೆ. ತನ್ನ ಭ್ರಷ್ಟಾಚಾರದಿಂದ ಅರ್ಹ ಯುವ ಸಮುದಾಯಕ್ಕೆ ಉದ್ಯೋಗ ವಂಚಿಸುತ್ತಿರುವ @BJP4Karnataka ಸರ್ಕಾರ ಯುವಕರ ಭವಿಷ್ಯವನ್ನು ಹಾಳುಗೆಡವಿದೆ ಎಂದು ದೂರಿದೆ.

ಶಾಸಕರ ಖರೀದಿಯಿಂದ ರಚನೆಯಾದ 40% ಸರ್ಕಾರದಲ್ಲಿ ಎಲ್ಲವೂ ಖರೀದಿ ವ್ಯವಹಾರವೇ! ವಿಧಾನಸೌಧ ಈಗ ಖರೀದಿ, ಮಾರಾಟಗಳು ನಡೆಯುವ 'ವ್ಯಾಪಾರ ಸೌಧ'ವಾಗಿ ಮಾರ್ಪಟ್ಟಿದೆ. ಪ್ರತಿ ಇಲಾಖೆಯ ನೇಮಕಾತಿಯಲ್ಲೂ ಕೋಟಿ ಕೋಟಿ ವ್ಯವಹಾರ ನಡೆಯುತ್ತಿದೆ. ಈ ಎಲ್ಲಾ ಅಕ್ರಮಗಳು ಮಂತ್ರಿಗಳ ಕಮಿಷನ್ ಇಲ್ಲದೆ ನಡೆಯಲು ಸಾಧ್ಯವಿಲ್ಲವೆನ್ನುವುದು ಸತ್ಯ ಎಂದಿದೆ.

ಬಿಜೆಪಿ ಭ್ರಷ್ಟೋತ್ಸವ ಟ್ಯಾಗ್ ಲೈನ್ ಅಡಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಿಎಂ ಬಸವರಾಜ ಬೊಮ್ಮಾಯಿ ಅವರೇ, ಮಾತೆತ್ತಿದರೆ ಕಾಂಗ್ರೆಸ್​ನವರ ಸಿದ್ದರಾಮಯ್ಯ ಅವರ, ಡಿ.ಕೆ ಶಿವಕುಮಾರ್ ಅವರ ಸರ್ಟಿಫಿಕೇಟ್ ಬೇಕಿಲ್ಲ ಎನ್ನುತ್ತಿದ್ರಿ. ಸುರೇಶ್ ಗೌಡ, ಯತ್ನಾಳ್, ಮಾಧುಸ್ವಾಮಿಯವರಲ್ಲದೆ ಈಗ ನಿಮ್ಮದೇ ಶಾಸಕ ನೆಹರು ಒಲೆಕರ್ ಅವರು ಸರ್ಟಿಫಿಕೇಟ್​ಗೂ ಮೀರಿ ಕಪ್ಪು ಬಾವುಟವನ್ನೇ ಕೊಡ್ತಿದ್ದಾರೆ. ಇದು ನಿಮ್ಮ ಆಡಳಿತದ ಫಲವಲ್ಲದೆ ಇನ್ನೇನು? ಎಂದಿದೆ.

ಭ್ರಷ್ಟೋತ್ಸವಕ್ಕೆ ಮಾಡಿದ ಕಪಾಳಮೋಕ್ಷ: 40% ಕಮಿಷನ್ ಸರ್ಕಾರದಲ್ಲಿ ಭ್ರಷ್ಟಾಚಾರವು ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿದೆ. ವಿಧಾನಸೌಧದ ಗೋಡೆಗಳಿಂದ ಹಿಡಿದು ಗ್ರಾಮ ಮಟ್ಟದ ಕಚೇರಿಯ ಕುರ್ಚಿಗಳವರೆಗೂ ಹಣ ಕೇಳುತ್ತವೆ! 'ಹಣ ನೀಡದಿದ್ದರೆ ಕಡತಗಳು ಕದಲುವುದಿಲ್ಲ' ಎಂಬ ಹೈಕೋರ್ಟಿನ ಹೇಳಿಕೆ ರಾಜ್ಯ ಬಿಜೆಪಿ ಆಡಳಿತದಲ್ಲಿನ ಬಿಜೆಪಿ ಭ್ರಷ್ಟೋತ್ಸವಕ್ಕೆ ಮಾಡಿದ ಕಪಾಳಮೋಕ್ಷ ಎಂದು ಲೇವಡಿ ಮಾಡಿದೆ.

ಓದಿ: ವಿಜಯಪುರ: ಎದುರಾಳಿಯ ಡಿಚ್ಚಿಗೆ ಕಾಳಗದ ಅಖಾಡದಲ್ಲೇ ಪ್ರಾಣ ಬಿಟ್ಟ ಎರಡು ಟಗರು

Last Updated : Aug 21, 2022, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.