ETV Bharat / state

ಪರೇಶ್ ಮೇಸ್ತಾ ಪ್ರಕರಣ: ಬಿಜೆಪಿ ವಿರುದ್ಧ ಕಾಂಗ್ರೆಸ್​ ಟ್ವೀಟ್

ಪರೇಶ್ ಮೇಸ್ತಾ ಪ್ರಕರಣ ಸಂಬಂಧ ಸಿಬಿಐ ಬಿ ರಿಪೋರ್ಟ್ ಹಿನ್ನೆಲೆ ಬಿಜೆಪಿ ವಿರುದ್ಧ ಕಾಂಗ್ರೆಸ್​ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ.

congress tweet against bjp
ಬಿಜೆಪಿ ವಿರುದ್ಧ ಕಾಂಗ್ರೆಸ್​ ಟ್ವೀಟ್
author img

By

Published : Oct 4, 2022, 3:10 PM IST

ಬೆಂಗಳೂರು: ಪರೇಶ್ ಮೇಸ್ತಾ ಸಾವು ಆಕಸ್ಮಿಕ ಎಂದು ಸಿಬಿಐ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ ಹಿನ್ನೆಲೆ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

congress tweet against bjp
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಪರೇಶ್ ಮೇಸ್ತಾ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಇದು ಹತ್ಯೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದ ಹಿನ್ನೆಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಸುಧೀರ್ಘ ವಿಚಾರಣೆ ಬಳಿಕ ಸಿಬಿಐ ತನ್ನ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದು, ಇದು ಹತ್ಯೆಯಲ್ಲ ಆಕಸ್ಮಿಕ ಸಾವು ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ವರದಿ ಸಲ್ಲಿಕೆ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಹಾಗೂ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಹೊನ್ನಾವರದ ಪರೇಶ್ ಮೇಸ್ತಾ ಅವರದ್ದು ಹತ್ಯೆ ಅಲ್ಲ, ಆಕಸ್ಮಿಕ‌ ಸಾವು ಎಂಬ ಸಿಬಿಐನ ವಿಚಾರಣಾ ವರದಿ ರಾಜ್ಯ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ. ಬಿಜೆಪಿಗೆ ಮಾನ - ಮರ್ಯಾದೆ ಇದ್ದರೆ ನಮ್ಮ ಮೇಲೆ ಮಾಡಿದ್ದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು. ಬಿಜೆಪಿ ಗೆದ್ದಿರುವ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್ ಮೇಸ್ತಾನಂತಹ ಅಮಾಯಕ ಯುವಕರ ರಕ್ತ ಇದೆ. ರಾಜ್ಯ ಬಿಜೆಪಿ ನಾಯಕರೇ, ನೀವು ಅನುಭವಿಸುತ್ತಿರುವ ಅಧಿಕಾರದ ಕುರ್ಚಿಗೆ ಮೇಸ್ತಾನಂತಹ ಯುವಕರ ರಕ್ತದ ಕಲೆ ಅಂಟಿಕೊಂಡಿದೆ ಎಂದು ಹೇಳಿದ್ದಾರೆ.

  • 1
    ಪರೇಶ್ ಮೇಸ್ತಾ ಸಾವು ಸ್ವಾಭಾವಿಕ ಎಂದು CBI ವರದಿ ನೀಡಿದೆ.
    ನಮ್ಮ ಸರ್ಕಾರವಿದ್ದಾಗ ಸಂಭವಿಸಿದ್ದ ಮೇಸ್ತಾ ಸಾವಿಗೆ #BJP ನಾಯಕರು ಹಿಂದುತ್ವದ ಬಣ್ಣ ಕಟ್ಟಿ‌ ಕರಾವಳಿ ಭಾಗದಲ್ಲಿ ಕೋಮು ಸಂಘರ್ಷ, ಗಲಭೆ ಸೃಷ್ಟಿಸಿದ್ದರು. ಅಂದಿನ ಗಲಭೆಯಲ್ಲಿ IGP ಕಾರಿಗೆ ಕಲ್ಲು ತೂರಿ ಲಾಟಿಚಾರ್ಜ್ ಕೂಡ ನಡೆದಿತ್ತು.‌ ಅಂದಿನ ದೊಂಬಿ ಮತ್ತು ಗಲಾಟೆಗೆ ಯಾರು ಹೊಣೆ?

    — Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 4, 2022 " class="align-text-top noRightClick twitterSection" data=" ">

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು, ಪರೇಶ್ ಮೇಸ್ತಾ ಸಾವು ಸ್ವಾಭಾವಿಕ ಎಂದು ಸಿಬಿಐ ವರದಿ ನೀಡಿದೆ. ನಮ್ಮ ಸರ್ಕಾರವಿದ್ದಾಗ ಸಂಭವಿಸಿದ್ದ ಈ ಸಾವಿಗೆ ಬಿಜೆಪಿ ನಾಯಕರು ಹಿಂದುತ್ವದ ಬಣ್ಣ ಕಟ್ಟಿ‌ ಕರಾವಳಿ ಭಾಗದಲ್ಲಿ ಕೋಮು ಸಂಘರ್ಷ, ಗಲಭೆ ಸೃಷ್ಟಿಸಿದ್ದರು. ಅಂದಿನ ಗಲಭೆಯಲ್ಲಿ ಐಜಿಪಿ ಕಾರಿಗೆ ಕಲ್ಲು ತೂರಿ ಲಾಟಿಚಾರ್ಜ್ ಕೂಡ ನಡೆದಿತ್ತು.‌ ಅಂದಿನ ದೊಂಬಿ ಮತ್ತು ಗಲಾಟೆಗೆ ಯಾರು ಹೊಣೆ?

  • 3
    ಪರೇಶ್ ಮೇಸ್ತಾ ಸಾವು ಸ್ವಾಭಾವಿಕ ಎಂದು CBI ತನಿಖೆಯಿಂದ ಗೊತ್ತಾಗಿದೆ.
    ಆದರೆ ಈ ಸಾವನ್ನು ರಾಜಕೀಯಗೊಳಿಸಿ ದೊಂಬಿ ಎಬ್ಬಿಸಿದ್ದ BJPಯವರು ನಿಜವಾದ ಸಮಾಜ ಘಾತಕರಲ್ಲವೆ?
    ಸುಳ್ಳು ಅಪಾದನೆ ಮಾಡಿ ಶಾಂತಿ ಭಂಗ ಮಾಡಿದ್ದು ಅಪರಾಧವಲ್ಲವೆ? BJPಯವರಿಗೆ ಆತ್ಮಸಾಕ್ಷಿಯಿದ್ದರೆ ಬಹಿರಂಗ ಕ್ಷಮೆ ಕೇಳಲಿ.

ಪರೇಶ್ ಮೇಸ್ತಾ ಸಾವನ್ನು ಧಾರ್ಮಿಕ ಹತ್ಯೆ ಎಂದು ಬಿಂಬಿಸಿದ್ದ ಬಿಜೆಪಿ ಯವರು ಇಡೀ ಕರಾವಳಿಯನ್ನೇ ಕೋಮುದಳ್ಳುರಿಗೆ ತಳ್ಳಿದ್ದರು. ಅಂದಿನ ನಮ್ಮ ಸರ್ಕಾರ ಯಾವ ಹಿಂಜರಿಕೆಯೂ ಇಲ್ಲದೇ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಈಗ ಸಿಬಿಐ ಮೇಸ್ತಾ ಸಾವು ಸ್ವಾಭಾವಿಕ ಎಂದು ನ್ಯಾಯಾಲಯಕ್ಕೆ ವರದಿ ನೀಡಿದೆ.

ಈಗ ಎಲ್ಲಿದ್ದಾರೆ ಬಿಜೆಪಿಯ ಕೂಗುಮಾರಿ ನಾಯಕರು? ಪರೇಶ್ ಮೇಸ್ತಾ ಸಾವು ಸ್ವಾಭಾವಿಕ ಎಂದು ಸಿಬಿಐ ತನಿಖೆಯಿಂದ ಗೊತ್ತಾಗಿದೆ. ಆದರೆ, ಈ ಸಾವನ್ನು ರಾಜಕೀಯಗೊಳಿಸಿ ದೊಂಬಿ ಎಬ್ಬಿಸಿದ್ದ ಬಿಜೆಪಿಯವರು ನಿಜವಾದ ಸಮಾಜ ಘಾತಕರಲ್ಲವೇ? ಸುಳ್ಳು ಅಪಾದನೆ ಮಾಡಿ ಶಾಂತಿ ಭಂಗ ಮಾಡಿದ್ದು ಅಪರಾಧವಲ್ಲವೇ? ಬಿಜೆಪಿಯವರಿಗೆ ಆತ್ಮಸಾಕ್ಷಿಯಿದ್ದರೆ ಬಹಿರಂಗ ಕ್ಷಮೆ ಕೇಳಲಿ ಎಂದು ಹೇಳಿದ್ದಾರೆ.

  • ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಲೇ ಇವೆ.

    ⭕ ಡಿ.ಕೆ ರವಿ ಪ್ರಕರಣ - ವೈಯುಕ್ತಿಕ ಕಾರಣಗಳಿಗೆ ಆತ್ಮಹತ್ಯೆ

    ⭕ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ - ಸರ್ಕಾರಕ್ಕೆ ಸಂಬಂಧವಿಲ್ಲ

    ⭕ಪರೇಶ್ ಮೇಸ್ತಾ ಪ್ರಕರಣ - ಸಹಜ ಸಾವು

    ಸುಳ್ಳು ಹೇಳಿದ್ದ @BJP4Karnataka ರಾಜ್ಯದ ಕ್ಷಮೆ ಕೇಳಬೇಕು.

    — Karnataka Congress (@INCKarnataka) October 4, 2022 " class="align-text-top noRightClick twitterSection" data=" ">

ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದ್ದು, ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಲೇ ಇವೆ. ಡಿ.ಕೆ ರವಿ ಪ್ರಕರಣ - ವೈಯುಕ್ತಿಕ ಕಾರಣಗಳಿಗೆ ಆತ್ಮಹತ್ಯೆ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ - ಸರ್ಕಾರಕ್ಕೆ ಸಂಬಂಧವಿಲ್ಲ, ಪರೇಶ್ ಮೇಸ್ತಾ ಪ್ರಕರಣ - ಸಹಜ ಸಾವು, ಸುಳ್ಳು ಹೇಳಿದ್ದ ಬಿಜೆಪಿ ರಾಜ್ಯದ ಕ್ಷಮೆ ಕೇಳಬೇಕು ಎಂದಿದೆ.

ಇದನ್ನೂ ಓದಿ: ಪರೇಶ್ ಮೇಸ್ತ ಪ್ರಕರಣ: ಬಿಜೆಪಿ ನಾಯಕರು ಮೀನುಗಾರರ, ಸಾರ್ವಜನಿಕರ ಕ್ಷಮೆಯಾಚಿಸಲಿ-ಯುಟಿ‌ ಖಾದರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.