ETV Bharat / state

ಬಡವರಿಗಲ್ಲ, ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಪರಿಹಾರ ಸಾಮಗ್ರಿ ಸಿಕ್ಕಿದೆ: ಕೆಪಿಸಿಸಿ ಸಭೆಯಲ್ಲಿ ಚರ್ಚೆ - ಪ್ರತಿಪಕ್ಷ ಕಾಂಗ್ರೆಸ್

ಲಾಕ್ ಡೌನ್​ನಿಂದ ಜನಜೀವನ ಎಷ್ಟರ ಮಟ್ಟಿಗೆ ಹದಗೆಟ್ಟಿದೆ, ಸರ್ಕಾರ ಯಾವ ರೀತಿ ಬಡವರ ನೆರವಿಗೆ ಬರಬಹುದಿತ್ತು ಎಂಬುದನ್ನು ಪಟ್ಟಿ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ, ತಮಗೆ ಅವಕಾಶ ಸಿಕ್ಕ ಸಂದರ್ಭ ಇದನ್ನು ಸರ್ಕಾರದ ವಿರುದ್ಧದ ಹೋರಾಟದ ಅಸ್ತ್ರವನ್ನಾಗಿ ಬಳಸಿಕೊಳ್ಳಲು ತೀರ್ಮಾನಿಸಿದೆ.

meeting
meeting
author img

By

Published : Apr 28, 2020, 8:08 AM IST

ಬೆಂಗಳೂರು: ದೇಶದ ಕೆಲ ಭಾಗಗಳಿಗೆ ಹೋಲಿಸಿದರೆ ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಸಫಲತೆ ಗಳಿಸಿದೆ. ಆದರೆ ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬಹುದಿತ್ತು ಎಂಬ ವಿಚಾರವನ್ನ ಮುಂದಿಡಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ.

ಮಹಾಮಾರಿ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಎಲ್ಲಾ ಉಪಕ್ರಮಗಳು ಹಾಗೂ ತೀರ್ಮಾನಗಳನ್ನು ಬೆಂಬಲಿಸುತ್ತಿರುವ ಹಾಗೂ ಬೆಂಬಲ ಮುಂದುವರಿಸಲು ನಿರ್ಧರಿಸಿರುವ ಕಾಂಗ್ರೆಸ್, ಈ ನಡುವೆಯೂ ಸರ್ಕಾರ ಎಲ್ಲಿ ಎಡವುತ್ತಿದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುವ ಕಾರ್ಯ ಮಾಡುತ್ತಿದೆ.

ಲಾಕ್ ಡೌನ್ ಘೋಷಣೆಯಾದ ನಂತರ ಜನಜೀವನ ಎಷ್ಟರ ಮಟ್ಟಿಗೆ ಹದಗೆಟ್ಟಿದೆ, ಮನಸ್ಸು ಮಾಡಿದ್ದರೆ ಸರ್ಕಾರ ಯಾವ ರೀತಿ ಬಡವರ ನೆರವಿಗೆ ಬರಬಹುದಿತ್ತು ಎಂಬುದನ್ನು ಪಟ್ಟಿ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ, ತಮಗೆ ಅವಕಾಶ ಸಿಕ್ಕ ಸಂದರ್ಭ ಇದನ್ನು ಸರ್ಕಾರದ ವಿರುದ್ಧದ ಹೋರಾಟದ ಅಸ್ತ್ರವನ್ನಾಗಿ ಬಳಸಿಕೊಳ್ಳಲು ತೀರ್ಮಾನಿಸಿದೆ.

CONGRESS_TASKFORCE_MEETING
ಕಾಂಗ್ರೆಸ್ ಸಭೆ

ಇಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಇಂತಹ ತೀರ್ಮಾನ ಕೈಗೊಳ್ಳಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಭೆಯಲ್ಲಿ ಭಾಗವಹಿಸಿದ್ದ ನಾಯಕರಿಗೆ ಸರ್ಕಾರ ಮಾಡುತ್ತಿದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವಂತೆ ಸೂಚನೆ ನೀಡಿದ್ದಾರೆ.

ವಿಭಾಗವಾರು ಗಮನ

ಬೆಂಗಳೂರು ಸೇರಿದಂತೆ ಐದು ವಿಭಾಗಗಳಲ್ಲಿ ಲಾಕ್ ಡೌನ್ ನಂತರ ಸರ್ಕಾರದ ಪರಿಹಾರ ಹಾಗೂ ಕಾರ್ಯಕ್ರಮಗಳು ಜನರಿಗೆ ತಲುಪಿರುವ ಬಗ್ಗೆ ಇಂದಿನ ಸಭೆಯಲ್ಲಿ ಕೆಪಿಸಿಸಿ ಸಮಿತಿಗಳು ವರದಿ ಸಲ್ಲಿಸಿವೆ.

ಲಾಕ್ ಡೌನ್​ನಿಂದ ಪ್ರಮುಖವಾಗಿ ರೈತರು ಬೆಳೆದ ಬೆಳೆಗೆ ಬೆಲೆ ದೊರಕಿಸಿಕೊಡುವಲ್ಲಿ ಸೂಕ್ತ ಮಾರುಕಟ್ಟೆ ಒದಗಿಸುವಲ್ಲಿ ವಿಫಲವಾಗಿದೆ. ಆಹಾರದ ಕಿಟ್ ಹಾಗೂ ಪರಿಹಾರ ವಿತರಿಸುವಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ ಎಂದು ವರದಿ ಸಲ್ಲಿಸಿದ್ದಾರೆ.

ಅಲ್ಲದೇ ರಾಜ್ಯದ ಕೆಲವು ಕಡೆಗಳಲ್ಲಿ ಕಾನೂನು ಸುವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಆಹಾರದ ಕಿಟ್ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಭ್ರಷ್ಟಾಚಾರವಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಇದೆ.

CONGRESS_TASKFORCE_MEETING
ಕಾಂಗ್ರೆಸ್ ಸಭೆ

ಬಿಜೆಪಿ ಶಾಸಕರು ಹಾಗೂ ಮುಖಂಡರು ಪ್ರಬಲವಾಗಿರುವ ಕಡೆಗಳಲ್ಲಿ ಪರಿಹಾರ ಸಾಮಗ್ರಿಗಳು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಸಿಕ್ಕಿದೆ. ನಿಜವಾದ ಬಡವರಿಗೆ ಸರ್ಕಾರದ ಸವಲತ್ತುಗಳ ಉಪಯೋಗ ಸಿಕ್ಕಿಲ್ಲ ಎಂದು ಸಮಿತಿ ಮುಖಂಡರು ದಾಖಲೆ ಸಮೇತ ಮಾಹಿತಿ ಒದಗಿಸಿದ್ದಾರೆ.

ಐದು ವಿಭಾಗದಿಂದ ಸಿದ್ಧಪಡಿಸಿರುವ ವರದಿಯನ್ನು ಸಮಗ್ರಗೊಳಿಸಿ ಕೆಪಿಸಿಸಿ ವತಿಯಿಂದ ಸರ್ಕಾರಕ್ಕೆ ಸಲ್ಲಿಸಲು ಸೋಮವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಇದೆ.

ಒಂದೆಡೆ ಸರ್ಕಾರ ಮಹಾಮಾರಿ ವಿಚಾರದಲ್ಲಿ ಕೈಗೊಳ್ಳುವ ಎಲ್ಲ ತೀರ್ಮಾನಗಳನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಿದೆ. ಮತ್ತೊಂದೆಡೆ ಎದುರಾಗುವ ಲೋಪಗಳನ್ನು ಎತ್ತಿ ಹಿಡಿದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಾರಿಕೆಯನ್ನು ಪಕ್ಷ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧದ ಪ್ರತಿಪಕ್ಷದ ಹೋರಾಟಕ್ಕೆ ಇದು ಅಗತ್ಯ ಪೂರಕ ಮಾಹಿತಿಗಳನ್ನು ಸಂಗ್ರಹಿಸಿ ಕೊಳ್ಳಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.