ETV Bharat / state

ಪ್ರತಿಭಟನೆ ವೇಳೆ ಸುಸ್ತಾಗಿ ಬಿದ್ದ ಸೌಮ್ಯ ರೆಡ್ಡಿ: ಕಾರ್ಯಕರ್ತನ ಜೇಬಿಗೆ ಕತ್ತರಿ ಹಾಕಿ ಸಿಕ್ಕಿಬಿದ್ದ ಕಳ್ಳ - ಸೌಮ್ಯ ರೆಡ್ಡಿ ಸುದ್ದಿ

ಸೈಕಲ್ ರ‍್ಯಾಲಿ ಸಂದರ್ಭದಲ್ಲಿ ಕಾರ್ಯಕರ್ತರ ಜೊತೆ ನಡೆದುಕೊಂಡು ಬಂದ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಆಯಾಸದಿಂದ ತಲೆ ಸುತ್ತಿ ಬಿದ್ದರು. ಇದರಿಂದ ಕೆಲಕಾಲ ಆತಂಕ ಉಂಟಾಯಿತು.

ಕಾಂಗ್ರೆಸ್ ಪ್ರತಿಭಟನೆ
ಕಾಂಗ್ರೆಸ್ ಪ್ರತಿಭಟನೆ
author img

By

Published : Jun 30, 2020, 8:23 AM IST

ಬೆಂಗಳೂರು: ಕಾಂಗ್ರೆಸ್ ನಾಯಕರು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ರ‍್ಯಾಲಿ ಕೆಲ ಕಹಿ ಘಟನೆಗಳಿಗೆ ಸಾಕ್ಷಿಯಾಯಿತು.

ಸೈಕಲ್ ರ‍್ಯಾಲಿ ಸಂದರ್ಭದಲ್ಲಿ ಕಾರ್ಯಕರ್ತರ ಜೊತೆ ನಡೆದುಕೊಂಡು ಬಂದ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಆಯಾಸದಿಂದ ತಲೆ ಸುತ್ತಿ ಬಿದ್ದ ಘಟನೆ ನಡೆಯಿತು. ಇದರಿಂದ ಕೆಲಕಾಲ ಆತಂಕ ಉಂಟಾಯಿತು. ತೀವ್ರ ಆಯಾಸಗೊಂಡಿದ್ದ ಅವರಿಗೆ ಕೂಡಲೇ ಆರೈಕೆ ನೀಡಲಾಯಿತು. ಸುಧಾರಿಸಿಕೊಂಡ ನಂತರ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ನಾಯಕರು ಸಾಮಾಜಿಕ ಅಂತರ ಮರೆತಿದ್ದರು. ಈ ಸಂದರ್ಭದಲ್ಲಿ ಕಳ್ಳನೊಬ್ಬ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕಮ್ಮಿಲ್ ಅವರ ಜೇಬಿಗೆ ಕತ್ತರಿ ಹಾಕಿ 10,000 ರೂಪಾಯಿ ಎಗರಿಸಿದ್ದ. ನಂತರ ಆತನನ್ನು ಅಲ್ಲಿದ್ದ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಕಮ್ಮಿಲ್ ನನ್ನ ಜೇಬಿಗೆ ಕೈ ಹಾಕಿ ಹಣ ತೆಗೆದುಕೊಂಡಿದ್ದನ್ನು ಗಮನಿಸಿ ಅವನನ್ನು ಹಿಡಿದುಕೊಂಡು ಕೇಳಿದಾಗ, ನಾನಲ್ಲ ಕದ್ದಿದ್ದು ಅಂತ ಹೇಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಕಾರಿನ ಹಿಂಭಾಗಕ್ಕೆ ಕರೆದೊಯ್ದು ಅಲ್ಲಿ ನೋಟುಗಳನ್ನು ಬಿಸಾಕಿ ಓಡಲು ಪ್ರಾರಂಭಿಸಿದ. ಜೇಬಿನಲ್ಲಿ ಹತ್ತು ಸಾವಿರ ರೂಪಾಯಿ ಹಣ ಇತ್ತು. ಕಳ್ಳತನ ನಡೆದಿದ್ದು ತಿಳಿದ ತಕ್ಷಣ ಪೊಲೀಸರಿಗೆ ಹಿಡಿದು ಕೊಡುವ ಕೆಲಸ ಮಾಡಿದ್ದೇವೆ ಎಂದು ಮುಕಮ್ಮಿಲ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.