ETV Bharat / state

ರಾಷ್ಟ್ರ ಧ್ವಜ ಹಿಡಿದು ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಸದನದ ಬಾವಿಗಿಳಿದು ಕೈ ಶಾಸಕರ ಪ್ರತಿಭಟನೆ - ರಾಷ್ಟ್ರಧ್ವಜ ಹಿಡಿದು ಕಾಂಗ್ರೆಸ್​ ಶಾಸಕರಿಂದ ಸದನದಲ್ಲಿ ಪ್ರತಿಭಟನೆ

ರಾಷ್ಟ್ರಧ್ವಜವನ್ನ ನಿಮ್ಮ ಪ್ರತಿಭಟನೆಗೆ ಬಳಸಿಕೊಳ್ಳೋದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು. ನಿಮ್ಮ ಧರಣಿಗೆ ರಾಷ್ಟ್ರಧ್ವಜ ಬಳಕೆ ಮಾಡಬಾರದು. ಇದೇನು ಪಕ್ಷದ ಧ್ವಜಾನಾ?. ಇದು ರಾಷ್ಟ್ರಧ್ವಜ. ಈ ರೀತಿ ಮಾಡಬಾರದು, ಗೌರವ ತೋರಿಸೋದು ಹೀಗಾ?. ಎಂದು ಕಾಂಗ್ರೆಸಿಗರನ್ನು ತರಾಟೆಗೆ ತೆಗೆದು ಕೊಂಡ ಸ್ಪೀಕರ್​..

CONGPRTEST_FLAG_SCRIPT
ಕೈ ಶಾಸಕರಿಂದ ರಾಷ್ಟ್ರ ಧ್ವಜ ಹಿಡಿದು ಪ್ರತಿಭಟನೆ
author img

By

Published : Feb 16, 2022, 6:11 PM IST

ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧದ ನಿಲುವಳಿ ಸೂಚನೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಭೋಜನದ ಬಳಿಕ ಕಲಾಪ ಆರಂಭವಾಗುತ್ತಿದ್ದ ಹಾಗೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರಿಸಿದರು. ಕೈಯ್ಯಲ್ಲಿ ರಾಷ್ಟ್ರ ಧ್ವಜ ಹಿಡಿದು ಕೊಂಡು ಪ್ರತಿಭಟನೆ ನಡೆಸಿದರು.

ಈ ವೇಳೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಡಿ.ಕೆ ಶಿವಕುಮಾರ್ ಮನೆಯವರ ಬಗ್ಗೆ ಸಚಿವ ಈಶ್ವರಪ್ಪ ಮಾತನಾಡಿದ್ದಾರೆ. ಈಶ್ವರಪ್ಪ ಮಾತನಾಡಿರೋದು‌ ಅಕ್ಷಮ್ಯ ಅಪರಾಧ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರೋ ಈಶ್ವರಪ್ಪ ಅವರನ್ನು ಅರೆಸ್ಟ್ ಮಾಡಿ ಎಂದು ಆಗ್ರಹಿಸಿದರು.

ಇದೇ ವೇಳೆ ಮಧ್ಯಪ್ರವೇಶಿಸಿದ ಸಿಎಂ: ಅಧಿವೇಶನದಲ್ಲಿ ರಾಷ್ಟ್ರ ಧ್ವಜ ಹಿಡಿದು ಪ್ರತಿಭಟಿಸಿದ್ದಕ್ಕೆ, ಇದು ಧ್ವಜ ಸಂಹಿತೆ ಉಲ್ಲಂಘನೆಯಾಗಿದೆ. ರಾಷ್ಟ್ರಧ್ವಜ ಸಂಹಿತೆ ಉಲ್ಲಂಘನೆ ಮಾಡಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ರಾಷ್ಟ್ರಧ್ವಜವನ್ನ ಎಲ್ಲಿ, ಹೇಗೆ ಬಳಕೆ ಮಾಡಬೇಕು ಅಂತಾ ಕೋಡ್ ಇದೆ. ನೀವು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮೂರು ವರ್ಷಗಳ ಕಾಲ ತ್ರಿವರ್ಣ ಧ್ವಜ ಹಾರಿಸಲು ಬಿಟ್ಟಿರಲಿಲ್ಲ.

ಇವರ ಸರ್ಕಾರ ಹೋದ ಬಳಿಕ ರಾಷ್ಟ್ರ ಧ್ವಜ ಹಾರಿಸಬೇಕಾಯ್ತು. ಇವರು ಎಂದೂ ಕೂಡ ರಾಷ್ಟ್ರಕ್ಕಾಗಲಿ ರಾಷ್ಟ್ರ ಧ್ವಜಕ್ಕೆ ಗೌರವ ನೀಡಲಿಲ್ಲ. ಹುಬ್ಬಳ್ಳಿಯಲ್ಲಿ ರಾಷ್ಟ್ರ ಧ್ವಜ ಹಾರಿಸಿದ ಆರು ಜನರನ್ನ ಕಗ್ಗೊಲೆ ಮಾಡಿದ್ದಾರೆ. ಇದು ಧ್ವಜ ಸಂಹಿತೆ ಉಲ್ಲಂಘನೆಯಾಗಿದೆ.‌ ರಾಜಕೀಯ ಉದ್ದೇಶಕ್ಕಾಗಿ ರಾಷ್ಟ್ರಧ್ವಜವನ್ನು ಬಳಸಿದ್ದೀರಾ ಎಂದು ಆಕ್ಷೇಪಿಸಿದರು.

ಸಿಎಂ ಮಾತಿಗೆ ಸ್ಪೀಕರ್ ಧ್ವನಿಗೂಡಿಸಿದರು. ರಾಷ್ಟ್ರಧ್ವಜವನ್ನ ನಿಮ್ಮ ಪ್ರತಿಭಟನೆಗೆ ಬಳಸಿಕೊಳ್ಳೋದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು. ನಿಮ್ಮ ಧರಣಿಗೆ ರಾಷ್ಟ್ರಧ್ವಜ ಬಳಕೆ ಮಾಡಬಾರದು. ಇದೇನು ಪಕ್ಷದ ಧ್ವಜಾನಾ?. ಇದು ರಾಷ್ಟ್ರಧ್ವಜ. ಈ ರೀತಿ ಮಾಡಬಾರದು, ಗೌರವ ತೋರಿಸೋದು ಹೀಗಾ?. ನೀವು ಮಾಡ್ತಿರೋದು ಸರಿಯಲ್ಲ.

ಇದಕ್ಕಿಂತ ದೇಶದ್ರೋಹದ ಚಟುವಟಿಕೆ ಬೇರೆ ಇಲ್ಲ ಅಂತಾ ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದರು. ಆದ್ರೂ ಪ್ರತಿಭಟನೆ ಬಿಡದ ಕಾಂಗ್ರೆಸ್ ಸದಸ್ಯರು, ಸರ್ಕಾರದ ವಿರುದ್ಧ ಕಾಂಗ್ರೆಸಾ ಧಿಕ್ಕಾರ ಕೂಗಿದರು.

ನಿಲುವಳಿ ಸೂಚನೆ ತಿರಸ್ಕಾರ: ನಿಮ್ಮ ಪ್ರಿಲಿಮಿನರಿ ಸಬ್‌ಮಿಷನ್ ಹಾಕಿದ್ದೀರಾ, ಸರ್ಕಾರ ಇದು ಬರೋದಿಲ್ಲ ಅಂತ ತಿಳಿಸಿದೆ. ನಿಲುವಳಿ ಸೂಚನೆಗೆ ಇದು ಯೋಗ್ಯವಲ್ಲ ಎಂದು ಈ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದ್ದೇನೆ ಎಂದು ಸ್ಪೀಕರ್ ರೂಲಿಂಗ್ ನೀಡಿದರು.

ಇದನ್ನೂ ಓದಿ: ಸಚಿವ ಕೆ ಎಸ್​ ಈಶ್ವರಪ್ಪ ಹೇಳಿಕೆಗೆ ತೀವ್ರ ವಿರೋಧ : 3 ಗಂಟೆಗೆ ಸದನ ಮುಂದೂಡಿದ ಸ್ಪೀಕರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.