ETV Bharat / state

ಮಾಜಿ ಶಾಸಕ ಸಂಜಯ್ ಪಾಟೀಲರ 'ರಾತ್ರಿ ಸಂಸ್ಕೃತಿ' ಹೇಳಿಕೆ.. ಸಿಲಿಕಾನ್‌ ಸಿಟಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ..

ಬಿಜೆಪಿಯವರಿಗೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಹೀಯಾಳಿಸುವುದು ನಿತ್ಯದ ಕಾಯಕವಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಮಹಿಳೆಯರು ಬಿಜೆಪಿಗೆ ಯಾವ ರೀತಿ ಬುದ್ಧಿ ಕಲಿಸುತ್ತಾರೆ ಎಂಬ ಪರಿಜ್ಞಾನವೂ ಬಿಜೆಪಿ ಪಕ್ಷಕ್ಕೆ ಹಾಗೂ ನಾಯಕರಿಗೆ ತಿಳಿಯುತ್ತಿಲ್ಲ. ಬಳಸುವ ಪದಗಳು ಅವರ ಸಂಸ್ಕೃತಿ, ನೀಚತನದ ನಾಲಿಗೆಯಿಂದ ನಿತ್ಯವೂ ಹರಿದಾಡುತ್ತಿದೆ..

congress protest against Sanjay Patil  in bangalore
ಕಾಂಗ್ರೆಸ್ ಪ್ರತಿಭಟನೆ
author img

By

Published : Oct 1, 2021, 3:33 PM IST

ಬೆಂಗಳೂರು : ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ್ ಪಾಟೀಲ್ ನೀಡಿರುವ ಹೇಳಿಕೆ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ ನಡೆಸಿದೆ. ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆಯ ಬಳಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು.

ಬಿಜೆಪಿ ನಾಯಕರಿಗೆ, ಶಾಸಕರಿಗೆ ನಿತ್ಯ ರಾತ್ರಿ ಸಂಸ್ಕೃತಿ ನೆನಪಾಗುತ್ತಿದೆ. ಯಾಕೆಂದರೆ, ಬಿಜೆಪಿಯಲ್ಲಿ ಯಾವ ರೀತಿ ಕಾಮುಕರು ಇದ್ದಾರೆ ಎಂಬುದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲೂ ಈಗ ಬಹಿರಂಗವಾಗಿದೆ. ಆ ಸಂಸ್ಕೃತಿಯ ನೆನಪು ಬಿಜೆಪಿ ನಾಯಕರಿಗೆ ದಿನನಿತ್ಯ ಕಾಡುತ್ತಿದೆ.

ಅದಕ್ಕಾಗಿ ಬಿಜೆಪಿಯ ಕೇಂದ್ರದ ಮಾಜಿ ಸಚಿವರು ರಾಜ್ಯದ ಅನೇಕ ಸಚಿವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ತಮ್ಮ ಖಾಸಗಿತನವನ್ನು ಪ್ರದರ್ಶಿಸಬೇಡಿ ಎಂದು ಮನವಿ ಮಾಡಿರುವ ವಿಷಯ ಬಿಜೆಪಿ ಪಕ್ಷದಲ್ಲೇ ಪ್ರತಿಯೊಬ್ಬ ಕಾರ್ಯಕರ್ತರಿಗೂ ತಿಳಿದಿದೆ. ಆದರೆ, ಆ ಸಂಸ್ಕೃತಿ ಬಿಜೆಪಿ ಪಕ್ಷದ್ದು ಎಂದು ಪ್ರತಿಭಟನಾಕಾರರು ಹರಿಹಾಯ್ದರು.

ಇದನ್ನೂ ಓದಿ: 'ಹೆಣ್ಣಿನ ಬಗ್ಗೆ ಮಾತನಾಡಿದವರ ಪರಿಸ್ಥಿತಿ ಏನಾಗಿದೆ ಅನ್ನೋದನ್ನು ಇತಿಹಾಸದ ಪುಟ ತಿರುವಿ ನೋಡಿ'

ಬಿಜೆಪಿಯವರಿಗೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಹೀಯಾಳಿಸುವುದು ನಿತ್ಯದ ಕಾಯಕವಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಮಹಿಳೆಯರು ಬಿಜೆಪಿಗೆ ಯಾವ ರೀತಿ ಬುದ್ಧಿ ಕಲಿಸುತ್ತಾರೆ ಎಂಬ ಪರಿಜ್ಞಾನವೂ ಬಿಜೆಪಿ ಪಕ್ಷಕ್ಕೆ ಹಾಗೂ ನಾಯಕರಿಗೆ ತಿಳಿಯುತ್ತಿಲ್ಲ. ಬಳಸುವ ಪದಗಳು ಅವರ ಸಂಸ್ಕೃತಿ, ನೀಚತನದ ನಾಲಿಗೆಯಿಂದ ನಿತ್ಯವೂ ಹರಿದಾಡುತ್ತಿದೆ ಎಂದರು.

ಆ ಸಂಸ್ಕೃತಿ ಸಂಜಯ್ ಪಾಟೀಲ್‌ಗೆ ಹಾಗೂ ಆ ಪಕ್ಷದ ಅಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್‌ಗೆ ಬಹಳ ಹತ್ತಿರವಾಗಿದೆ. ಆದ್ದರಿಂದ ರಾತ್ರಿ ಸಂಸ್ಕೃತಿ ಬಗ್ಗೆ ಮಾತನಾಡಿದ್ದಾರೆ. ಇಂತಹ ರಾಜಕಾರಣಿಗಳಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸಲಿದ್ದಾರೆ. ಬಿಜೆಪಿ ಮುಂದಿನ ದಿನಗಳಲ್ಲಿ ಕರ್ನಾಟಕದಿಂದ ನಿರ್ಣಾಮ ಆಗುವುದು ಖಚಿತ ಎಂದು ಕುಟುಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.