ETV Bharat / state

ಬಿಜೆಪಿ ವಿರುದ್ಧ ಕಾಂಗ್ರೆಸ್​ ಸರಣಿ ಟ್ವೇಟ್... ಕೇಸರಿ ನಾಯಕರ ವಿರುದ್ಧ ಆಕ್ರೋಶ - Congress made series of tweets against BJP Govt and leaders

ರಾಜ್ಯ ಬಿಜೆಪಿ ಸರ್ಕಾರ ಹಾಗೂ ಮುಖಂಡರ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ,  ಕಾಂಗ್ರೆಸ್
BJP , Congress
author img

By

Published : Aug 13, 2021, 10:52 PM IST

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಹಾಗೂ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಜನ ವಿರೋಧಿ ಬಿಜೆಪಿ ಎಂದು ಲೇವಡಿ ಮಾಡಿದೆ. ಸರಣಿ ಟ್ವೀಟ್ ಮೂಲಕ ತನ್ನ ಆಕ್ರೋಶ ಹೊರ ಹಾಕಿರುವ ಕಾಂಗ್ರೆಸ್, ಚಿಕ್ಕಮಗಳೂರಿನ ಮೂಡಿಗೆರೆಗೆ ನೆರೆ ಪರಿಹಾರವಿಲ್ಲ ಎಂದು ಬಿಜೆಪಿ ಶಾಸಕ ತಮ್ಮದೆ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದರೆ, ಅದೇ ಜಿಲ್ಲೆಯ ಸಿಟಿ ರವಿ ಚೆಂಡು ಹೂವಿನ ಗಿಡ ಸೇವಿಸಿ ಬಾಯಿಗೆ ಬಂದಂತೆ ಮಾತನಾಡುತ್ತಾ ತಿರುಗುತ್ತಿದ್ದಾರೆ. ತನ್ನ ಜಿಲ್ಲೆಗೆ ನ್ಯಾಯ ಒದಗಿಸುವ ಕೆಲಸ ಮಾಡುವುದು ಅವರ ಆದ್ಯತೆ ಅಲ್ಲವೇ ಅಲ್ಲ ಎಂದಿದೆ.

  • ಕೊಳಕು ನಾಲಿಗೆಯ ಸಿಟಿ ರವಿ ಹಿಂದೆ ಪ್ರವಾಸೋದ್ಯಮ ಸಚಿವನಾಗಿದ್ದಾಗ ರಾಜ್ಯದಲ್ಲಿ ಕ್ಯಾಸಿನೋ ತೆರೆಯಲು ಮುಂದಾಗಿದ್ದರು.

    Mr. @CTRavi_BJPಅವರೇ, ಆ ನಿಮ್ಮ ಮಹತ್ವಾಕಾಂಕ್ಷಿ ಯೋಜನೆಗೆ 'ದೀನದಯಾಳ್ ಕ್ಯಾಸಿನೋ ಯೋಜನೆ' ಎಂದು ನಾಮಕರಣ ಮಾಡ್ತಿದ್ರಾ!?

    ಕ್ಯಾಸಿನೋ, ಜೂಜು, ಬಾರ್, ಹುಕ್ಕಾ, ಚೆಂಡು ಹೂ! ಇವೆಲ್ಲ ಸಿಟಿ ರವಿಗೆ ಬಹು ಪ್ರಿಯವಾದವು!

    — Karnataka Congress (@INCKarnataka) August 13, 2021 " class="align-text-top noRightClick twitterSection" data=" ">

ಕೊಳಕು ನಾಲಿಗೆ:

ಕೊಳಕು ನಾಲಿಗೆಯ ಸಿಟಿ ರವಿ ಹಿಂದೆ ಪ್ರವಾಸೋದ್ಯಮ ಸಚಿವನಾಗಿದ್ದಾಗ ರಾಜ್ಯದಲ್ಲಿ ಕ್ಯಾಸಿನೋ ತೆರೆಯಲು ಮುಂದಾಗಿದ್ದರು. ಮಿಸ್ಟರ್ ಸಿಟಿ ರವಿ ಅವರೇ, ಆ ನಿಮ್ಮ ಮಹತ್ವಾಕಾಂಕ್ಷೆ ಯೋಜನೆಗೆ 'ದೀನದಯಾಳ್ ಕ್ಯಾಸಿನೋ ಯೋಜನೆ' ಎಂದು ನಾಮಕರಣ ಮಾಡ್ತಿದ್ರಾ!? ವಕ್ಯಾಸಿನೋ, ಜೂಜು, ಬಾರ್, ಹುಕ್ಕಾ, ಚೆಂಡು ಹೂ ಇವೆಲ್ಲ ಸಿಟಿ ರವಿಗೆ ಬಹು ಪ್ರಿಯವಾದವು ಎಂದಿದೆ.

ಸರ್ಕಾರ ಟೇಕಾಫ್ ಆಗಿಲ್ಲ:

ಕೊರೊನಾ 3ನೇ ಅಲೆಯ ಆತಂಕ ಕಾಡುತ್ತಿರುವಾಗ ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕಾದ ಸರ್ಕಾರ ಇನ್ನೂ ಟೇಕಾಫ್ ಆಗಲೇ ಇಲ್ಲ. ಸಚಿವರು ತಮ್ಮ ಕೆಲಸ ಶುರು ಮಾಡಲಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರು ಆಂತರಿಕ ಕಿತ್ತಾಟಗಳ ಸಂಧಾನ ಸಭೆಗಳಲ್ಲಿಯೇ ತಮ್ಮ ಅಧಿಕಾರವಧಿಯನ್ನ ಕಳೆಯುತ್ತಿದ್ದಾರೆ. ಬಿಜೆಪಿ ಪಕ್ಷ ಕೊರೊನಾಗಿಂತಲೂ ಭೀಕರ ಸೋಂಕು ಎಂದಿದೆ.

  • ಇಂದಿರಾ ಕ್ಯಾಂಟಿನ್ ಮಾದರಿಯಾದರೂ ಕಳಪೆ ಗುಣಮಟ್ಟದ 'ದೀನ್ ದಯಾಳ್ ಉಪಾಧ್ಯಾಯ ರಸೊಯ್' ಎಂಬ ಕ್ಯಾಂಟೀನ್ ತೆರೆದಿದೆ ಮಧ್ಯಪ್ರದೇಶದ ಬಿಜೆಪಿ ಸರ್ಕಾರ.

    ಆ ಯೋಜನೆಯ ಹಣ ದೀನದಯಾಳ್ ಆಸ್ತಿ ಮಾರಿದ್ದೇ?
    ಅಥವಾ ಆತ ಮಾಜಿ ಪ್ರಧಾನಿಯೇ? ಸ್ವತಂತ್ರ ಹೊರಾಟಗಾರನೇ? ದೇಶಕ್ಕೆ ಒಂದು ಹನಿ ಕೊಡುಗೆಯನ್ನೂ ಕೊಡದ ಆತನ ಹೆಸರೇಕೆ @CTRavi_BJP @BJP4Karnataka? pic.twitter.com/RqDAnV5HGA

ಇಂದಿರಾ ಕ್ಯಾಂಟೀನ್ ಮಾದರಿಯಾದರೂ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಕಳಪೆ ಗುಣಮಟ್ಟದ 'ದೀನ್ ದಯಾಳ್ ಉಪಾಧ್ಯಾಯ ರಸೊಯ್' ಎಂಬ ಕ್ಯಾಂಟೀನ್ ತೆರೆದಿದೆ. ಆ ಯೋಜನೆಯ ಹಣ ದೀನದಯಾಳ್ ಆಸ್ತಿ ಮಾರಿದ್ದೇ? ಅಥವಾ ಆತ ಮಾಜಿ ಪ್ರಧಾನಿಯೇ? ಸ್ವತಂತ್ರ ಹೊರಾಟಗಾರನೇ? ದೇಶಕ್ಕೆ ಒಂದು ಹನಿ ಕೊಡುಗೆಯನ್ನೂ ಕೊಡದ ಆತನ ಹೆಸರೇಕೆ ಸಿಟಿ ರವಿ ಹಾಗೂ ಬಿಜೆಪಿ ಪಕ್ಷದವರೇ ಎಂದು ಪ್ರಶ್ನಿಸಿದೆ.

  • ಬಿಜೆಪಿ ಸರ್ಕಾರದ ಆಡಳಿತ ಹೇಗಿದೆ ಎಂದರೆ, ಆಡಳಿತ ಪಕ್ಷದ ಶಾಸಕರೇ ಕಣ್ಣೀರು ಹಾಕುವಂತೆ!

    ತಮ್ಮದೇ ಪಕ್ಷದ ಶಾಸಕರ ಅಳಲು ಕೇಳದ ಈ ಸರ್ಕಾರ ಜನರ ನೋವು ಕೇಳಿಸಿಕೊಳ್ಳುವುದು ದೂರದ ಮಾತು,

    ನೆರೆ ಸಂತ್ರಸ್ತರನ್ನು ಕಡೆಗಣಿಸಿದ @BJP4Karnataka ಪಕ್ಷಕ್ಕೆ ನಾಚಿಕೆ ಆಗಬೇಕಿತ್ತು, ಆದರೆ ಅವರು ಲಜ್ಜೆ ಬಿಟ್ಟಿರುವುದರಿಂದ ಆಗುತ್ತಿಲ್ಲ!#ಜನವಿರೋಧಿಬಿಜೆಪಿ pic.twitter.com/oYdQ1DHXao

ಟ್ವೀಟ್ ವಾರ್​ :

ಬಿಜೆಪಿ ಟ್ವೀಟ್ ಮಾಡಿದ್ದನ್ನು ಖಂಡಿಸಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಆರಂಭಿಸುವುದಕ್ಕೂ ಬದಲಾಯಿಸುವುದಕ್ಕೂ ವ್ಯತ್ಯಾಸವಿದೆ. ರಾಜ್ಯ ಬಿಜೆಪಿ ನಾಯಕರೇ ನಿಮಗೆ ತಾಕತ್ತಿದ್ದರೆ ಪರ್ಯಾಯವಾಗಿ ಹೊಸದಾಗಿ ಆರಂಭಿಸಿ ನೋಡೋಣ. ಅನ್ನಭಾಗ್ಯದ ಅಕ್ಕಿ ಕಡಿತಗೊಳಿಸಿ, ಬಿಪಿಎಲ್ ಕಾರ್ಡ್ ರದ್ದುಗೊಳಿಸಿ, ಅಕ್ಕಿ ಕೇಳಿದವರಿಗೆ ಸಾಯುವ ಸಲಹೆ ನೀಡಿದ ನಿಮ್ಮಿಂದ ಅದು ಸಾಧ್ಯವಾಗದು. ನೀವು ಜನರ ಅನ್ನ ಕಿತ್ತುಕೊಳ್ಳುವವರೇ ಹೊರತು ನೀಡುವವರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

  • ಚಿಕ್ಕಮಗಳೂರಿನ ಮೂಡಿಗೆರೆಗೆ ನೆರೆ ಪರಿಹಾರವಿಲ್ಲ ಎಂದು ಬಿಜೆಪಿ ಶಾಸಕ ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದರೆ, ಅದೇ ಜಿಲ್ಲೆಯ ಸಿಟಿ ರವಿ 'ಚೆಂಡು ಹೂವಿನ ಗಿಡ' ಸೇವಿಸಿ ಬಾಯಿಗೆ ಬಂದಂತೆ ಮಾತಾಡುತ್ತಾ ತಿರುಗುತ್ತಿದ್ದಾರೆ!

    ತನ್ನ ಜಿಲ್ಲೆಗೆ ನ್ಯಾಯ ಒದಗಿಸುವ ಕೆಲಸ ಮಾಡುವುದು ಅವರ ಆದ್ಯತೆ ಅಲ್ಲವೇ ಅಲ್ಲ.#ಜನವಿರೋಧಿಬಿಜೆಪಿ

ಮೊದಲು ಟ್ವೀಟ್ ಮಾಡಿದ್ದ ರಾಜ್ಯ ಬಿಜೆಪಿ, ರಾಜ್ಯದಲ್ಲಿ ಅನ್ನಪೂರ್ಣ ಕ್ಯಾಂಟೀನ್ ಆರಂಭಿಸುತ್ತೇವೆ ಎಂಬುದು ನಮ್ಮ ಪಕ್ಷದ ಪ್ರಣಾಳಿಕೆಯ ಭರವಸೆ. ಇದು ನಮ್ಮ ಬದ್ಧತೆ. ಯಾರದೋ ನಕಲಿ ಕುಟುಂಬ ವರ್ಗವನ್ನು ಮೆಚ್ಚಿಸುವುದಕ್ಕೆ ನಾವು ಹೆಸರಿಡುತ್ತಿಲ್ಲ. ಅನ್ನಪೂರ್ಣೇಶ್ವರಿಯನ್ನು ಸ್ಮರಿಸುವುದು ಅಪರಾಧವೇ? ಅನ್ನದಾತೆಯ ಹೆಸರಿಗೇಕೆ ನಿಮ್ಮ ವಿರೋಧ? ಎಂದು ಕೇಳಿತ್ತು.

ಪಕ್ಷದ ಶಾಸಕರ ಕಣ್ಣೀರು:

ಬಿಜೆಪಿ ಸರ್ಕಾರದ ಆಡಳಿತ ಹೇಗಿದೆ ಎಂದರೆ, ಆಡಳಿತ ಪಕ್ಷದ ಶಾಸಕರೇ ಕಣ್ಣೀರು ಹಾಕುವಂತೆ ತಮ್ಮದೇ ಪಕ್ಷದ ಶಾಸಕರ ಅಳಲು ಕೇಳದ ಈ ಸರ್ಕಾರ ಜನರ ನೋವು ಕೇಳಿಸಿಕೊಳ್ಳುವುದು ದೂರದ ಮಾತು. ನೆರೆ ಸಂತ್ರಸ್ತರನ್ನು ಕಡೆಗಣಿಸಿದ ರಾಜ್ಯ ಬಿಜೆಪಿ ಪಕ್ಷಕ್ಕೆ ನಾಚಿಕೆ ಆಗಬೇಕಿತ್ತು.

ಆದರೆ ಅವರು ಲಜ್ಜೆ ಬಿಟ್ಟಿರುವುದರಿಂದ ಆಗುತ್ತಿಲ್ಲ. ಬಿಜೆಪಿ ಆಡಳಿತದಲ್ಲಿ ಮುಖ್ಯಮಂತ್ರಿ ಕಣ್ಣೀರಿಡುತ್ತಾರೆ. ಶಾಸಕರು ಕಣ್ಣೀರಿಡುತ್ತಾರೆ, ರೈತರು ಕಣ್ಣೀರಿಡುತ್ತಿದ್ದಾರೆ, ಮಹಿಳೆಯರು ಕಣ್ಣೀರಿಡುತ್ತಿದ್ದಾರೆ, ನಿರುದ್ಯೋಗಿಗಳು ಕಣ್ಣೀರಿಡುತ್ತಿದ್ದಾರೆ, ವಿದ್ಯಾರ್ಥಿಗಳು ಕಣ್ಣೀರಿಡುತ್ತಿದ್ದಾರೆ, ನೆರೆ ಸಂತ್ರಸ್ತರು ಕಣ್ಣೀರಿಡುತ್ತಿದ್ದಾರೆ, ಕೋವಿಡ್ ಸೋಂಕಿತರು ಕಣ್ಣೀರಿಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದೆ.

ಓದಿ: ಮುಖಂಡರ ಭೇಟಿ ಮೂಲಕ ಗಮನಸೆಳೆದ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ನಿವಾಸ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.