ETV Bharat / state

ಕಾಂಗ್ರೆಸ್ ಟಿಕೆಟ್ ಸಿಗುವುದು ಅಷ್ಟು ಸುಲಭವಲ್ಲ.. ಇದಕ್ಕಾಗಿ ಹಲವಾರು ನಿಯಮ ಪಾಲಿಸಲೇಬೇಕು..! - ಕಾಂಗ್ರೆಸ್ ಟಿಕೆಟ್ ಸಿಗುವುದು ಅಷ್ಟು ಸುಲಭವಲ್ಲ

ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸುವ ಅಭ್ಯರ್ಥಿಗಳು ಅರ್ಜಿ ಸಮೂನೆ ಪಡೆಯಲು 5 ಸಾವಿರ ರೂ. ಶುಲ್ಕ ಪಾವತಿಸಬೇಕು. ಅದನ್ನು ಭರ್ತಿ ಮಾಡಿ ಪಕ್ಷದ ಕಚೇರಿಗೆ ಸಲ್ಲಿಸಲು ನಿಗದಿತ ಮೊತ್ತ ಪಾವತಿಸಬೇಕಾಗಿದೆ.

KN_BNG_
ಕಾಂಗ್ರೆಸ್
author img

By

Published : Nov 2, 2022, 10:48 PM IST

ಬೆಂಗಳೂರು: ಐದಾರು ತಿಂಗಳು ಮುನ್ನವೇ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆ ಅಭ್ಯರ್ಥಿ ಆಯ್ಕೆಗೆ ವಿವಿಧ ಆಯಾಮಗಳಲ್ಲಿ ಪ್ರಕ್ರಿಯೆ ಶುರುವಿಟ್ಟುಕೊಂಡಿದೆ. ಸಾಮಾನ್ಯವಾಗಿ ಕಡೆಯ ಕ್ಷಣದವರೆಗೂ ಕಾಯ್ದು, ಅಭ್ಯರ್ಥಿ ಘೋಷಿಸುವ ಸಂಪ್ರದಾಯ ಕಾಂಗ್ರೆಸ್​ನಲ್ಲಿ ಹಿಂದಿನಿಂದಲೂ ಬೆಳೆದುಬಂದಿತ್ತು.

ಆದರೆ ಇಂದು ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಸ ವಿಚಾರ ತಿಳಿಸಿದ್ದಾರೆ. ಅಲ್ಲದೇ ಆದಷ್ಟು ಬೇಗ ಅಭ್ಯರ್ಥಿ ಆಯ್ಕೆ ಸಹ ಮಾಡುತ್ತೇವೆ. ಹಿಂದೆಲ್ಲ ಆದಂತೆ ಈಗ ವಿಳಂಬ ಆಗಲ್ಲ. ಒಮ್ಮತದ ಅಭ್ಯರ್ಥಿಯನ್ನು ಒಗ್ಗಟ್ಟಿನಿಂದ ಆಯ್ಕೆ ಮಾಡುತ್ತೇವೆ ಎಂದು ಕಾಂಗ್ರೆಸ್​ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ.

ಹಿಂದೆಂದಿಗಿಂತ ಹೆಚ್ಚಿನ ಹೊರೆ: ಕಾಂಗ್ರೆಸ್ ಪಕ್ಷ ಈ ಸಾರಿ ಪಕ್ಷದ ಟಿಕೆಟ್ ಪಡೆಯುವವರಿಗೆ ಹಿಂದೆಂದಿಗಿಂತ ಹೆಚ್ಚಿನ ಹೊರೆ ಹೊರಿಸುತ್ತಿದೆ. ಇತ್ತೀಚಿನ ವರ್ಷದವರೆಗೂ ಟಿಕೆಟ್ ಆಯ್ಕೆಗೆ ಪಕ್ಷದ ನಾಯಕರು ಕೂತು ತೀರ್ಮಾನಿಸುವ ಸ್ಥಿತಿ ಇತ್ತು. ಆದರೆ, ಈಗ ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ವಿವಿಧ ಮಾನದಂಡ ಅನುಸರಿಸಲಾಗುತ್ತದೆ. ಯಾರೆಂದರೆ ಅವರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಏಕೆಂದರೆ ಅರ್ಜಿ ಸಮೂನೆ ಪಡೆಯಲು 5 ಸಾವಿರ ರೂ. ಶುಲ್ಕ ಪಾವತಿಸಬೇಕು. ಅದನ್ನು ಭರ್ತಿ ಮಾಡಿ ಪಕ್ಷದ ಕಚೇರಿಗೆ ಸಲ್ಲಿಸಲು ಮತ್ತೆ ಲಕ್ಷಾಂತರ ರೂ. ಪಾವತಿಸಬೇಕು.

ಸಾಮಾನ್ಯ ವರ್ಗದವರಿಗೆ 2, ಎಸ್​​ಸಿ ಎಸ್​ಟಿಗೆ 1 ಲಕ್ಷ: ಹೌದು, ಅರ್ಜಿ ಸಲ್ಲಿಸುವ ವ್ಯಕ್ತಿ ಸಾಮಾನ್ಯ ವರ್ಗದವರಾಗಿದ್ದರೆ 2 ಲಕ್ಷ ರೂ. ಪರಿಶಿಷ್ಟ ವರ್ಗದವರಾದರೆ 1 ಲಕ್ಷ ರೂ. ಪಾವತಿ ಮಾಡಬೇಕು. ಅದೂ ಪಕ್ಷದ ಕಚೇರಿಗೆ ಡಿಡಿ ಮೂಲಕ ಸಲ್ಲಿಕೆ ಮಾಡಬೇಕು. ಈ ಹಣ ಪಕ್ಷದ ಕಟ್ಟಡ ಕಾಮಗಾರಿ ನಿಧಿಗೆ ಜಮೆ ಆಗಲಿದೆ. ವಿಶೇಷ ಅಂದರೆ ಇದು ಎಲ್ಲರಿಗೂ ಅನ್ವಯ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಪ್ರತಿಯೊಬ್ಬರೂ ಈ ನಿಯಮ ಪಾಲಿಸಬೇಕು.

2023ರ ಚುನಾವಣೆಯಲ್ಲಿ ಹಾಲಿ ಶಾಸಕರ ಸಮೇತ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು. ನಾನು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಅರ್ಜಿ ಹಾಕಬೇಕು. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ಮಾತನ್ನು ಒತ್ತಿ ಹೇಳಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಸುದ್ದಿಗೋಷ್ಠಿಯಲ್ಲಿ ಇದೇ ವಿವರ ನೀಡಿದ್ದಾರೆ.

ಪಕ್ಷಕ್ಕಾಗಿ ಈ ಹಣ ವಿನಿಯೋಗ: ನಾವು ಡಿಡಿ ರೂಪದಲ್ಲಿ ಸಂದಾಯವಾದ ಹಣವನ್ನು ಸ್ವಂತ ಖರ್ಚಿಗೆ ಬಳಸುವುದಿಲ್ಲ. ಪಕ್ಷಕ್ಕಾಗಿ ವಿನಿಯೋಗಿಸುತ್ತೇವೆ. ಪಕ್ಷದ ಕಟ್ಟಡ, ಪಕ್ಷದ ನಿಧಿ, ಚುನಾವಣಾ ಪ್ರಚಾರ, ಜಾಹೀರಾತು ನೀಡಲು ಹಣ ಬೇಕಿದೆ. ಪತ್ರಿಕೆಗಳ ಮುಖಪುಟದ ಜಾಹೀರಾತು ನೀಡಲು ನಮ್ಮ ಬಳಿ ಸರ್ಕಾರ ಇಲ್ಲ. ಪಕ್ಷಕ್ಕೆ 20 ಸಾವಿರಕ್ಕಿಂತ ಹೆಚ್ಚಿನ ನಗದು ಪಡೆಯುವಂತಿಲ್ಲ. ನಮಗೆ ಯಾವುದೇ ಚುನಾವಣಾ ಬಾಂಡ್ ಬರುತ್ತಿಲ್ಲ. ಎಲ್ಲ ಬಿಜೆಪಿಗೆ ಹೋಗುತ್ತಿದೆ. ಹೀಗಾಗಿ ಕಾರ್ಯಕರ್ತರಾದರೂ ಪಕ್ಷಕ್ಕೆ ಹಣ ನೀಡಲಿ ಎಂಬುದು ಆಶಯ ಎಂದಿದ್ದಾರೆ.

ಒಟ್ಟಾರೆ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಟಿಕೆಟ್​ಗೆ ಈ ಮೊತ್ತದ ಹಣ ನಿಗದಿಪಡಿಸಿರುವುದು ಇದೇ ಮೊದಲು ಎನ್ನುವ ಮಾತು ಕೇಳಿಬರುತ್ತಿದೆ. ಇದು ಪಕ್ಷದ ಹೈಕಮಾಂಡ್ ನಾಯಕರ ಜತೆ ರಾಜ್ಯ ನಾಯಕರು ಚರ್ಚಿಸಿ ಕೈಗೊಂಡ ನಿರ್ಣಯ ಆಗಿರುವುದರಿಂದ ಟಿಕೆಟ್ ಆಕಾಂಕ್ಷಿಗಳು ಈ ನಿಯಮವನ್ನು ಪಾಲಿಸಲೇಬೇಕು.

ಇದನ್ನೂ ಓದಿ: ಪ್ರಭಾವಿ ಹುದ್ದೆಗೆ ಅಕ್ರಮ ನೇಮಕಾತಿ: ಸಿದ್ದರಾಮಯ್ಯ ವಿರುದ್ಧ ಎನ್ ಆರ್ ರಮೇಶ್ ಲೋಕಾಯುಕ್ತಕ್ಕೆ ದೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.