ಬೆಂಗಳೂರು: ಕಾಂಗ್ರೆಸ್ ಮುಸ್ಲಿಂ ಶಾಸಕರ ನಿಯೋಗ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಮುಗ್ಧ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿ ಶಾಲು ಮತ್ತು ಪೇಟವನ್ನು ಕೊಟ್ಟವರು ಯಾರೆಂದು ಕೂಡಲೇ ತನಿಖೆ ನಡೆಸಬೇಕೆಂದು ಮನವಿ ಪತ್ರ ಸಲ್ಲಿಸಿದರು.
ವಿಧಾನಸೌಧದಲ್ಲಿ ಗೃಹ ಸಚಿವರನ್ನು ಭೇಟಿಯಾಗಿ ಹಿಜಾಬ್ ವಿವಾದದ ಮೂಲ ಹೇಗೆ ಶುರುವಾಯಿತು. ಉಡುಪಿ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಈ ವಿವಾದ ಶುರುವಾಗಿದೆ ಎಂದು ಮಾಧ್ಯಮದ ಮೂಲಕ ಹೇಳಿಕೆ ಕೊಟ್ಟಿದ್ದೀರಿ. ಈ ಶಾಲೆಗಳಲ್ಲಿ ವಿವಾದ ಆರಂಭವಾಗಿದ್ದು ಹೇಗೆ?. ವಿದ್ಯಾರ್ಥಿಗಳಿಗೆ ಪ್ರಚೋದನೆ ಕೊಟ್ಟವರು ಯಾರು?. ಶಾಲು ಮತ್ತು ಪೇಟ ಕೊಟ್ಟವರು ಯಾರು?. ಈ ರೀತಿಯ ಪ್ರಚೋದನೆಗೆ ಕಾರಣ ಏನು?. ಸೂಕ್ತ ತನಿಖೆ ನಡೆಸಬೇಕೆಂದು ಕೋರಿ ಪತ್ರ ಸಲ್ಲಿಸಿದ್ದಾರೆ.
ಮನವಿ ಪತ್ರದಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರಾರಂಭವಾದಂತಹ ಶಾಲಾ - ಕಾಲೇಜು ವಿದ್ಯಾರ್ಥಿನಿಯರ ಶಿರವಸ್ತ್ರಕ್ಕೆ ಸಂಬಂಧಪಟ್ಟ ವಿವಾದ ಇದೀಗ ರಾಜ್ಯಾದ್ಯಂತ ಪ್ರತಿಧ್ವನಿಸುತ್ತಿದೆ. ಹಾಗೂ ಹೈಕೋರ್ಟ್ ಮೆಟ್ಟಿಲೇರಿದೆ. ಉಡುಪಿಯಲ್ಲಿ ಈ ವಿವಾದ ಹೇಗೆ ಪಾರಂಭವಾಯಿತು?. ಇದರಿಂದ ಯಾರು ಇದ್ದಾರೆ ಎಂಬ ತನಿಖೆ ಮಾಡಬೇಕೆಂದು ಸ್ಥಳೀಯ ಶಾಸಕರ ಕೋರಿಕೆ ಮೇರೆಗೆ ತಾವು ಸೂಕ್ತವಾದ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಾಧ್ಯಮದ ಮುಖಾಂತರ ತಿಳಿಸಿದ್ದೀರಿ.
ಇದರ ಜೊತೆಗೆ ಕುಂದಾಪುರದ ಭಂಡಾರ್ಕರ್ ಕಾಲೇಜು, ಉಡುಪಿಯ ಎಂಜಿಎಂ ಕಾಲೇಜು ಹಾಗೂ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ನಡೆದ ಸಮಸ್ಯೆಗೆ ಕಾರಣಕರ್ತರು ಯಾರು? ಮತ್ತು ಮುಗ್ಧ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿ ಶಾಲು ಮತ್ತು ಪೇಟವನ್ನು ಕೊಟ್ಟವರು ಯಾರೆಂದು ಕೂಡಲೇ ತನಿಖೆ ನಡೆಸಬೇಕೆಂದು ತಮ್ಮಲ್ಲಿ ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ. ನಿಯೋಗದಲ್ಲಿ ಸಲೀಂ ಅಹಮದ್, ಜಮೀರ್ ಅಹಮದ್, ಖನೀಝ್ ಫಾತಿಮಾ, ನಸೀರ್ ಅಹಮದ್, ರಿಜ್ವಾನ್ ಅಹಮದ್, ತನ್ವೀರ್ ಸೇಠ್, ಯು.ಟಿ.ಖಾದರ್ ಇದ್ದರು.
ಓದಿ: ರಾಜ್ಯ ಸರ್ಕಾರ ವಸ್ತ್ರ ಸಂಹಿತೆ ಆದೇಶ ಕೂಡಲೇ ಹಿಂಪಡೆಯಲಿ: ಸಿದ್ದರಾಮಯ್ಯ, ಡಿಕೆಶಿ ಸಲಹೆ