ETV Bharat / state

ಜನರನ್ನು ಮೂರ್ಖರನ್ನಾಗಿ ಮಾಡಿದ್ದೇವೆ ಎಂಬ ಖುಷಿಯಲ್ಲಿ ಸಚಿವರು ಕುಣಿಯುತ್ತಿದ್ದಾರೆ: ಸಂಸದ ಡಿಕೆ ಸುರೇಶ್

author img

By

Published : Sep 10, 2022, 4:29 PM IST

ಜನಸ್ಪಂದನ ಅಂದರೆ ಜನರ‌ ಕಷ್ಟ ಆಲಿಸಬೇಕಾಗಿತ್ತು. ಬೆಂಗಳೂರು ಮುಳುಗಿದೆ. ರಾಜ್ಯದ ವಿವಿಧ ಭಾಗಗಳು ಮುಳುಗುತ್ತಿವೆ. ಆದರೆ, ಸರ್ಕಾರದವರು ಸಮಾವೇಶದಲ್ಲಿ ತೊಡಗಿದ್ದಾರೆ ಎಂದು ಸಂಸದ ಡಿಕೆ ಸುರೇಶ್ ಟೀಕಿಸಿದರು.

congress-mp-dk-suresh-slams-ministers-dance
ಜನರನ್ನು ಮೂರ್ಖರನ್ನಾಗಿ ಮಾಡಿದ್ದೇವೆ ಎಂಬ ಖುಷಿಯಲ್ಲಿ ಸಚಿವರು ಕುಣಿಯುತ್ತಿದ್ದಾರೆ: ಸಂಸದ ಡಿಕೆ ಸುರೇಶ್

ಬೆಂಗಳೂರು: ಜನರನ್ನು ಎಂಥ ಮೂರ್ಖರನ್ನಾಗಿ ಮಾಡಿದ್ದೇವೆ ಎಂಬ ಖುಷಿಯಲ್ಲಿ ಸಚಿವರು ಕುಣಿಯುತ್ತಿದ್ದಾರೆ. ಸಮಾವೇಶ ಮಾಡಿ ಅವರನ್ನು ಅವರೇ ಹೊಗಳಿ ಕೊಳ್ಳುತ್ತಿದ್ದಾರೆ. ಇದನ್ನು ರಾಜ್ಯದ ಜನ ಸಹಿಸುವುದಿಲ್ಲ ಎಂದು ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಜನಸ್ಪಂದನ ಅಲ್ಲ. ಇದು ಸಮಾವೇಶ. ಜನಸ್ಪಂದನ ಅಂದರೆ ಜನರ‌ ಕಷ್ಟ ಆಲಿಸಬೇಕಾಗಿತ್ತು. ಬೆಂಗಳೂರು ಮುಳುಗಿದೆ. ರಾಜ್ಯದ ವಿವಿಧ ಭಾಗಗಳು ಮುಳುಗುತ್ತಿವೆ. ಆದರೆ, ಸರ್ಕಾರದವರು ಸಮಾವೇಶದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.

ಸಂಸದ ಪ್ರತಾಪ್​ ಸಿಂಹ ವಿರುದ್ಧ ಡಿ ಕೆ ಸುರೇಶ್​ ಪರೋಕ್ಷ ವಾಗ್ದಾಳಿ

ಇದನ್ನೂ ಓದಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಎಂಟಿಬಿ, ವಿಶ್ವನಾಥ್

ಬೆಂಗಳೂರು ಮತ್ತು ಮೈಸೂರು ರಾಷ್ಟ್ರೀಯ ಹೆದ್ದಾರಿ ದೇಶದ ರಸ್ತೆ. ಈ ರಾಷ್ಟ್ರೀಯ ಹೆದ್ದಾರಿ ರಸ್ತೆ ಆಗುವ ಮುಂಚೆ ಯಾವುದೇ ಅವಾಂತರ ಇಲ್ಲದೇ 25 ವರ್ಷ ಕಾಲದಿಂದ ಇದೆ. ಸಂಸದ ಪ್ರತಾಪ್ ಸಿಂಹ ಇದು ನಮ್ಮ ರಸ್ತೆ ಎಂದು ಕ್ರೆಡಿಟ್ ತೆಗೆದುಕೊಳ್ಳುವ ಪ್ರಯತ್ನ‌ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಇದ್ದಾಗಲೂ ಸಿದ್ದರಾಮಯ್ಯ, ನಾನು ಅದಕ್ಕೆ ಬೇಕಾದ ಸಹಕಾರ ನೀಡಿದ್ದೇವೆ ಎಂದು ಹೇಳಿದರು.

ಸದ್ಯ ರಸ್ತೆಯಿಂದ ಉಂಟಾದ ಸಮಸ್ಯೆ ಪರಿಹಾರ ಮಾಡಬೇಕಾಗಿರುವುದು ನನ್ನ ಕರ್ತವ್ಯನೂ ಹೌದು, ಕುಮಾರಸ್ವಾಮಿಯವರದ್ದೂ ಹೌದು. ಈ ರಸ್ತೆ ನಮ್ಮದು ಅನ್ನುವವರದ್ದೂ ಹೌದು. ಸಾರ್ವಜನಿಕರಿಗೆ ಒಳ್ಳೆಯದನ್ನು ಮಾಡಬೇಕು ಹೊರತು ಇದು ನನ್ನದು, ನಿನ್ನದು ಎಂದು ಹೇಳುವ ಸಮಯವಲ್ಲ ಎಂದು ಪ್ರತಾಪ್ ಸಿಂಹ ಬಗ್ಗೆ ಟೀಕಿಸಿದರು.

ಇದನ್ನೂ ಓದಿ: ಬಿಟ್ಟಿ ಹಣದಲ್ಲಿ ಜನಸ್ಪಂದನ ಕಾರ್ಯಕ್ರಮ: ಬಿಜೆಪಿ ವಿರುದ್ದ ಸಿದ್ದರಾಮಯ್ಯ ಕಿಡಿ

ಬೆಂಗಳೂರು ಮತ್ತು ಮೈಸೂರು ಹೆದ್ದಾರಿ ಅವ್ಯವಸ್ಥೆ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಗಮನ ಸೆಳೆದಿದ್ದೇನೆ. ಏನು ಸಮಸ್ಯೆ ಎದುರಾಗಿದೆ ಎಂಬ ಬಗ್ಗೆ ಅವರಿಗೆ ತಿಳಿಸಿದ್ದೇವೆ. ಗ್ರಾಮಗಳಲ್ಲಿ ಭಯದ ವಾತಾವರಣ ಹಾಗೂ ಮುಳುಗಡೆ ಬಗ್ಗೆ ತಿಳಿಸಿದ್ದೇವೆ.

ಆದಷ್ಟು ಬೇಗ ಪರಿಹಾರ ಕೊಡಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಈ ಸಂಬಂಧ ಮುಂದಿನ ವಾರ ಸಿಎಂ ಅವರನ್ನೂ ಭೇಟಿಯಾಗಿ ರಾಮನಗರ ಚನ್ನಪಟ್ಟಣದಲ್ಲಾಗಿರುವ ನೆರೆ ನಷ್ಟಕ್ಕೆ ಪರಿಹಾರ ಕೊಡಬೇಕೆಂದು ಮನವಿ ಮಾಡುತ್ತೇವೆ ಎಂದು ತಿಳಿದರು.

ಇದನ್ನೂ ಓದಿ: ಬಿಜೆಪಿ ನಾಯಕನ ಭೇಟಿ ಮಾಡಿದ ಡಿಕೆ ಬ್ರದರ್ಸ್​; ಬೆಂಗಳೂರು ಮಳೆ ಹಾನಿ ಬಗ್ಗೆ ಗಡ್ಕರಿ ಜೊತೆ ಚರ್ಚೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.