ಬೆಂಗಳೂರು: ಭಾರತ ಸಂವಿಧಾನ ದಿನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಶುಭಾಶಯ ಸಲ್ಲಿಕೆ ಮಾಡಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್ ಪಾಟೀಲ್ ಸೇರಿದಂತೆ ಹಲವು ನಾಯಕರು ಶುಭಾಶಯ ಸಲ್ಲಿಕೆ ಮಾಡಿದ್ದಾರೆ.
-
ನಮ್ಮ ಸಂವಿಧಾನ ಎಂದರೆ, ಮೌಲ್ಯಗಳ ಉಪದೇಶ ಅಲ್ಲ,
— Siddaramaiah (@siddaramaiah) November 26, 2020 " class="align-text-top noRightClick twitterSection" data="
ಆಶಯಗಳ ಘೋಷಣೆಯೂ ಅಲ್ಲ.
ಇದು ಸಮಾನತೆಯ ನೆಲೆಯಲ್ಲಿ ಸಮಾಜವನ್ನು ಕಟ್ಟುವ ಕಾರ್ಯಕ್ರಮ.
ನಾವೆಲ್ಲರೂ ಈ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತರುವ ಪ್ರತಿಜ್ಞೆಯನ್ನು ಇಂದು ಮಾತ್ರವಲ್ಲ, ನಿತ್ಯವೂ ಮಾಡೋಣ.
ಭಾರತೀಯರಿಗೆಲ್ಲರಿಗೂ ಸಂವಿಧಾನ ದಿನಾಚರಣೆಯ ಶುಭಾಶಯಗಳು. pic.twitter.com/KXQV1oZiYB
">ನಮ್ಮ ಸಂವಿಧಾನ ಎಂದರೆ, ಮೌಲ್ಯಗಳ ಉಪದೇಶ ಅಲ್ಲ,
— Siddaramaiah (@siddaramaiah) November 26, 2020
ಆಶಯಗಳ ಘೋಷಣೆಯೂ ಅಲ್ಲ.
ಇದು ಸಮಾನತೆಯ ನೆಲೆಯಲ್ಲಿ ಸಮಾಜವನ್ನು ಕಟ್ಟುವ ಕಾರ್ಯಕ್ರಮ.
ನಾವೆಲ್ಲರೂ ಈ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತರುವ ಪ್ರತಿಜ್ಞೆಯನ್ನು ಇಂದು ಮಾತ್ರವಲ್ಲ, ನಿತ್ಯವೂ ಮಾಡೋಣ.
ಭಾರತೀಯರಿಗೆಲ್ಲರಿಗೂ ಸಂವಿಧಾನ ದಿನಾಚರಣೆಯ ಶುಭಾಶಯಗಳು. pic.twitter.com/KXQV1oZiYBನಮ್ಮ ಸಂವಿಧಾನ ಎಂದರೆ, ಮೌಲ್ಯಗಳ ಉಪದೇಶ ಅಲ್ಲ,
— Siddaramaiah (@siddaramaiah) November 26, 2020
ಆಶಯಗಳ ಘೋಷಣೆಯೂ ಅಲ್ಲ.
ಇದು ಸಮಾನತೆಯ ನೆಲೆಯಲ್ಲಿ ಸಮಾಜವನ್ನು ಕಟ್ಟುವ ಕಾರ್ಯಕ್ರಮ.
ನಾವೆಲ್ಲರೂ ಈ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತರುವ ಪ್ರತಿಜ್ಞೆಯನ್ನು ಇಂದು ಮಾತ್ರವಲ್ಲ, ನಿತ್ಯವೂ ಮಾಡೋಣ.
ಭಾರತೀಯರಿಗೆಲ್ಲರಿಗೂ ಸಂವಿಧಾನ ದಿನಾಚರಣೆಯ ಶುಭಾಶಯಗಳು. pic.twitter.com/KXQV1oZiYB
-
ವಿಶ್ವದ ಅತಿದೊಡ್ಡ 'ಪ್ರಜಾಪ್ರಭುತ್ವ'ವಾದ 'ಭಾರತ'ವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಮಾರ್ಗದರ್ಶಿಯಾದ,
— D K Shivakumar, President, KPCC (@KPCCPresident) November 26, 2020 " class="align-text-top noRightClick twitterSection" data="
ವಿಶ್ವದ ಶ್ರೇಷ್ಠ ಸಂವಿಧಾನವಾದ 'ಭಾರತದ ಸಂವಿಧಾನ'ವು ಅಂಗೀಕಾರವಾದ ಈ ದಿನದಂದು, ಎಲ್ಲರಿಗೂ 'ಸಂವಿಧಾನ ದಿನ'ದ ಶುಭಾಶಯಗಳು.#ConstitutionDay2020 pic.twitter.com/Psqeb84SgV
">ವಿಶ್ವದ ಅತಿದೊಡ್ಡ 'ಪ್ರಜಾಪ್ರಭುತ್ವ'ವಾದ 'ಭಾರತ'ವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಮಾರ್ಗದರ್ಶಿಯಾದ,
— D K Shivakumar, President, KPCC (@KPCCPresident) November 26, 2020
ವಿಶ್ವದ ಶ್ರೇಷ್ಠ ಸಂವಿಧಾನವಾದ 'ಭಾರತದ ಸಂವಿಧಾನ'ವು ಅಂಗೀಕಾರವಾದ ಈ ದಿನದಂದು, ಎಲ್ಲರಿಗೂ 'ಸಂವಿಧಾನ ದಿನ'ದ ಶುಭಾಶಯಗಳು.#ConstitutionDay2020 pic.twitter.com/Psqeb84SgVವಿಶ್ವದ ಅತಿದೊಡ್ಡ 'ಪ್ರಜಾಪ್ರಭುತ್ವ'ವಾದ 'ಭಾರತ'ವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಮಾರ್ಗದರ್ಶಿಯಾದ,
— D K Shivakumar, President, KPCC (@KPCCPresident) November 26, 2020
ವಿಶ್ವದ ಶ್ರೇಷ್ಠ ಸಂವಿಧಾನವಾದ 'ಭಾರತದ ಸಂವಿಧಾನ'ವು ಅಂಗೀಕಾರವಾದ ಈ ದಿನದಂದು, ಎಲ್ಲರಿಗೂ 'ಸಂವಿಧಾನ ದಿನ'ದ ಶುಭಾಶಯಗಳು.#ConstitutionDay2020 pic.twitter.com/Psqeb84SgV
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಟ್ವೀಟ್ನಲ್ಲಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಮಾರ್ಗದರ್ಶಿಯಾದ, ವಿಶ್ವದ ಶ್ರೇಷ್ಠ ಸಂವಿಧಾನವಾದ ಭಾರತದ ಸಂವಿಧಾನವು ಅಂಗೀಕಾರವಾದ ಈ ದಿನದಂದು, ಎಲ್ಲರಿಗೂ ಸಂವಿಧಾನ ದಿನದ ಶುಭಾಶಯಗಳು ಎಂದಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಟ್ವೀಟ್ನಲ್ಲಿ, ನಮ್ಮ ಸಂವಿಧಾನ ಎಂದರೆ ಮೌಲ್ಯಗಳ ಉಪದೇಶ ಅಲ್ಲ, ಆಶಯಗಳ ಘೋಷಣೆಯೂ ಅಲ್ಲ. ಇದು ಸಮಾನತೆಯ ನೆಲೆಯಲ್ಲಿ ಸಮಾಜವನ್ನು ಕಟ್ಟುವ ಕಾರ್ಯಕ್ರಮ. ನಾವೆಲ್ಲರೂ ಈ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತರುವ ಪ್ರತಿಜ್ಞೆಯನ್ನು ಇಂದು ಮಾತ್ರವಲ್ಲ ನಿತ್ಯವೂ ಮಾಡೋಣ. ಭಾರತೀಯರಿಗೆಲ್ಲರಿಗೂ ಸಂವಿಧಾನ ದಿನಾಚರಣೆಯ ಶುಭಾಶಯಗಳು ಎಂದಿದ್ದಾರೆ.
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ತಮ್ಮ ಟ್ವೀಟ್ನಲ್ಲಿ, ದೇಶಾದ್ಯಂತ ಇಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ. ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಡಾ. ಬಿ.ಆರ್.ಅಂಬೇಡ್ಕರ್ ಅವರು ಮಹಾಜ್ಞಾನಿಯಾಗಿದ್ದು, ಅವರ ದೂರದೃಷ್ಟಿಯ ಫಲವಾಗಿ ಜಗತ್ತಿನ ಸರ್ವಶ್ರೇಷ್ಠ ಸಂವಿಧಾನ ಇಂದು ನಮ್ಮ ಮುಂದಿದೆ. ಸಂವಿಧಾನ ರಚನಾ ಸಭೆಯಲ್ಲಿ 250 ಕ್ಕೂ ಹೆಚ್ಚು ಸದಸ್ಯರು ಇದ್ದರಾದರೂ ಇದರ ಪ್ರಮುಖ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರಾಗಿದ್ದಾರೆ. ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಸಂವಿಧಾನ ಕರ್ತೃ ಎಂದು ಹೇಳಲಾಗುತ್ತದೆ.
ಭಾರತದ ಸಾರ್ವಭೌಮತೆ, ಅಖಂಡತೆ, ಏಕತೆಗಳನ್ನು ಸಾರುವ ಸಂವಿಧಾನವನ್ನು 1949ರ ಈ ದಿನ ಅಂಗೀಕರಿಸಿ ಅನುಮೋದಿಸಲಾಯಿತು. ಜನಸಾಮಾನ್ಯರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಸಂವಿಧಾನ ದಿನವನ್ನು ಬಳಸಿಕೊಳ್ಳಲಾಗುತ್ತಿದೆ. ಜನರು ತಮಗೆ ನೀಡಿರುವ ಹಕ್ಕು, ಸ್ವಾತಂತ್ರ್ಯಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸುವಂತಾಗಲಿ. ಭಾರತ ಇನ್ನಷ್ಟು ಸದೃಢವಾಗಲಿ, ಸಶಕ್ತವಾಗಲಿ. ಭಾರತೀಯ ಸಂವಿಧಾನ ದಿನದ ಶುಭಾಶಯಗಳು ಎಂದಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಮ್ಮ ಟ್ವೀಟ್ನಲ್ಲಿ, ದೇಶದ ಪ್ರತಿಯೊಬ್ಬ ಪ್ರಜೆಗೂ ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆಯನ್ನು ದೊರಕಿಸಿಕೊಟ್ಟು ಸಹೋದರತ್ವ ಮತ್ತು ಸ್ವತಂತ್ರವಾಗಿ ಬದುಕಬೇಕು ಎಂಬ ಆಶಯದೊಂದಿಗೆ ರೂಪುಗೊಂಡ, ವಿಶ್ವದ ಶ್ರೇಷ್ಠ ಸಂವಿಧಾನವಾದ ಭಾರತದ ಸಂವಿಧಾನವು ಅಂಗೀಕಾರವಾದ ಈ ದಿನದಂದು ಎಲ್ಲರಿಗೂ ಸಂವಿಧಾನ ದಿನದ ಶುಭಾಶಯಗಳು ಎಂದಿದ್ದಾರೆ.
ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಡಿಸಿಎಂ ಜಿ.ಪರಮೇಶ್ವರ್ ಮತ್ತಿತರ ನಾಯಕರು ಸಂವಿಧಾನ ದಿನದ ಶುಭಾಶಯ ಸಲ್ಲಿಕೆ ಮಾಡಿದ್ದಾರೆ.