ETV Bharat / state

ಮಿತಿ ಮೀರುತ್ತಿರೋ ಕೊರೊನಾ ಅಟ್ಟಹಾಸ: 'ಕೈ' ನಾಯಕರು ಏನಂತಾರೆ!? - karnataka congress

ರಾಜ್ಯ ಕಾಂಗ್ರೆಸ್ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಮಾಜಿ ಸಂಸದ ಉಗ್ರಪ್ಪ ಹಾಗೂ ಮಾಜಿ ಸಚಿವ ಕೃಷ್ಣಬೈರೇಗೌಡ ಕೊರೊನಾ ನಿಯಂತ್ರಣ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Congress leaders reaction about increasing of corona
ಕ್ಕೆ ನಾಯಕ
author img

By

Published : Jun 26, 2020, 5:36 AM IST

Updated : Jun 26, 2020, 2:23 PM IST

ಬೆಂಗಳೂರು: ದೇಶ ಹಾಗೂ ರಾಜ್ಯದ ಕೊರೊನಾ ಅಟ್ಟಹಾಸಕ್ಕೆ ಬಿಜೆಪಿ ಸರ್ಕಾರಗಳ ಬೇಜವಾಬ್ದಾರಿಯೇ ಕಾರಣ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಬಲವಾಗಿ ಆರೋಪಿಸಿದ್ದು, ನಿಯಂತ್ರಣ ವಿಚಾರದಲ್ಲಿ ಪ್ರತಿ ಪಕ್ಷವನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಮಾಜಿ ಸಂಸದ ಉಗ್ರಪ್ಪ ಹಾಗೂ ಮಾಜಿ ಸಚಿವ ಕೃಷ್ಣಬೈರೇಗೌಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗುವಲ್ಲಿ ಸರ್ಕಾರಗಳ ನಿರ್ಲಕ್ಷ ಹಾಗೂ ಬೇಜವಾಬ್ದಾರಿತನ ಪ್ರಮುಖ ಕಾರಣ ಎಂದು ವಿವರಿಸಿದ್ದಾರೆ.

ಇಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಕ್ರಿಯೆ ಮಾಜಿ ಸಂಸದ ವಿ ಎಸ್ ಉಗ್ರಪ್ಪ ಮಾತನಾಡಿ, ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಬಿಜೆಪಿ ತುಘಲಕ್ ದರ್ಬಾರ್ ನಡೆಸುತ್ತಿದೆ. ಮನುಕುಲಕ್ಕೆ ಕಂಟಕವಾಗಿರುವ ಈ ಮಹಾಮಾರಿ ವಿಚಾರದಲ್ಲಿ ಅಗತ್ಯ ಇಲ್ಲದ ವೇಳೆ ಲಾಕ್ ಡೌನ್ ಘೋಷಿಸಿದ್ದರು. ಈಗ ಅಗತ್ಯವಿದೆ ಲಾಕ್​ಡೌನ್​ ಸಡಿಲೀಕರಣ ಮಾಡಿದ್ದಾರೆ. ಇವರಿಗೆ ಹೇಳುವವರು ಕೇಳುವವರು ಯಾರೂ ಇಲ್ಲ ಅನಿಸುತ್ತದೆ ಎಂದು ಹರಿಹಾಯ್ದರು.

ಕ್ಕೆ ನಾಯಕರು

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಕೋವಿಡ್ ನಿಯಂತ್ರಣ ವಿಚಾರದಲ್ಲಿ ಎಲ್ಲರೂ ಸಹಕಾರ ನೀಡಿದ್ದರೂ ಕೂಡ ನಿಯಂತ್ರಿಸುವ ವಿಚಾರದಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಸೂಕ್ತ ಚಿಕಿತ್ಸೆ ನೀಡುವ ಹಾಗೂ ಸಕಾಲಕ್ಕೆ ಆಂಬುಲೆನ್ಸ್ ಕಳಿಸಿಕೊಡುವ ಕಾರ್ಯಕೂಡ ಇವರಿಂದ ಆಗುತ್ತಿಲ್ಲ. ಇಡೀ ದೇಶಕ್ಕೆ ದೇಶವನ್ನೇ ಇವರು ಕೊಂದು ಬಿಟ್ಟಿದ್ದಾರೆ ಎಂದು ಹರಿಹಾಯ್ದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಕೋವಿಡ್ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳಬೇಕು. ತಜ್ಞರು ಇಲ್ಲವೆ ಜನಪ್ರತಿನಿಧಿಗಳ ಸಲಹೆ ಪಡೆಯಬೇಕು. ಈಗಾಗಲೇ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಎದುರಾಗಿದೆ, ಕೊರೊನಾ ವಾರಿಯರ್​ಗಳಿಗೆ ಸೂಕ್ತ ಸಲಕರಣೆ ಹಾಗೂ ಕಿಟ್​ಗಳು ಸಿಗುತ್ತಿಲ್ಲ. ಕಳಪೆ ಗುಣಮಟ್ಟದ ವಸ್ತುಗಳನ್ನು ನೀಡಲಾಗುತ್ತಿದೆ ಎಂಬ ಆರೋಪ ಇದೆ. ಈ ಬಗ್ಗೆ ಗಮನಹರಿಸಿ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಈ ರೋಗಕ್ಕೆ ಯಾವುದೇ ಔಷಧಿ ಇದುವರೆಗೂ ಪತ್ತೆಯಾಗಿಲ್ಲ. ಇದಕ್ಕೆ ಸೂಕ್ತ ಜಾಗೃತಿ ಮೂಡಿಸುವ ವ್ಯವಸ್ಥೆಯು ನಮ್ಮಲ್ಲಿ ಆಗಿಲ್ಲ. ಇದರಿಂದಲೇ ರೋಗ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸುತ್ತಿದೆ. ಸಾಮಾಜಿಕ ಅಂತರ ಮಾತ್ರವೇ ಇದಕ್ಕೆ ಪರಿಹಾರ ಆಗಬಲ್ಲದು. ಸರ್ಕಾರವೇ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಅವರಿಗೆ ಅವಕಾಶ ಇದೆ. ರಾಜ್ಯವನ್ನಾಳುವ ನಿಯಂತ್ರಣ ಅವರ ಬಳಿ ಇದೆ. ಸರ್ಕಾರ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ಇತ್ತರು.

ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಈ ಸಮಸ್ಯೆ ಸಾಕಷ್ಟು ಉಲ್ಬಣಗೊಳ್ಳುತ್ತಿದೆ. ಆರಂಭದಿಂದಲೂ ನಾವು ಪ್ರತಿಪಕ್ಷದವರ ಆಗಿದ್ದರೂ ಸಹ ಸಮಾಜ ಎದುರಿಸುತ್ತಿರುವ ಕಷ್ಟ ಎಂದು ಹೇಳಿ ಸಹಕಾರ ನೀಡುತ್ತ ಬಂದಿದ್ದೇವೆ. ಸಾಕಷ್ಟು ಸಾರಿ ನಾವು ಸಲಹೆಗಳನ್ನು ನೀಡಿದ್ದರು ಕೂಡ ಪ್ರತಿಪಕ್ಷವಾಗಿ ನಮ್ಮ ಸಲಹೆಯನ್ನು ಅವರು ಸ್ವೀಕರಿಸಿಲ್ಲ. ಇದುವರೆಗೂ ಅವರು ನಮ್ಮನ್ನ ವಿಶ್ವಾಸಕ್ಕೆ ಪಡೆದಿಲ್ಲ. ಅವಶ್ಯಕತೆ ಇದ್ದಾಗ ಹಾಗೂ ತೀರಾ ಅನಿವಾರ್ಯವಾದಾಗ ಮತ್ತು ಪರಿಸ್ಥಿತಿ ಕೈಮೀರಿ ಹೋದಾಗ ನಮ್ಮನ್ನ ಕರೆಸುತ್ತಾರೆ. ನಮಗೆ ಸಕಾಲಕ್ಕೆ ಸೂಕ್ತ ಮಾಹಿತಿಯನ್ನು ಒದಗಿಸುವುದಿಲ್ಲ. ತಜ್ಞರು ಹಾಗೂ ವೈದ್ಯರು ಆರ್ಥಿಕ ಕ್ಷೇತ್ರದ ಪ್ರಮುಖರ ಅಥವಾ ಹಿರಿಯ ಅಧಿಕಾರಿಗಳ ಸಲಹೆ ಏನಿದೆ ಎನ್ನುವುದನ್ನು ನಮ್ಮ ಜೊತೆ ಇದುವರೆಗೂ ಹಂಚಿಕೊಂಡಿಲ್ಲ. ಬೆಂಗಳೂರಿನಲ್ಲಿ ಇವರು ಉದಾಸೀನ ಮಾಡಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದರು.

Last Updated : Jun 26, 2020, 2:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.