ETV Bharat / state

ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ಬಿಸಿ ಬಿಸಿ ಚರ್ಚೆ: ಶಾಸಕರ ಮನವೊಲಿಕೆಗೆ ಕಸರತ್ತು

ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಸಚಿವ ಡಿ.ಕೆ.ಶಿವಕುಮಾರ್ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಭೇಟಿ ಕೊಟ್ಟು ಮಾತುಕತೆ ನಡೆಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ನಾಯಕರ ಮಾತುಕತೆ
author img

By

Published : Jul 7, 2019, 10:01 PM IST

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಸಚಿವ ಡಿ.ಕೆ.ಶಿವಕುಮಾರ್ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಭೇಟಿ ಕೊಟ್ಟು ಮಾತುಕತೆ ನಡೆಸಿದ್ದಾರೆ.

ಮೈತ್ರಿ ಸರ್ಕಾರ ಕಾಪಾಡಿಕೊಳ್ಳುವುದು, ನಾಯಕತ್ವ ಬದಲಾವಣೆ ಹಾಗೂ ಕಾಂಗ್ರೆಸ್​​ನಿಂದ ರಿವರ್ಸ್ ಆಪರೇಷನ್ ನಡೆಸುವ ವಿಚಾರವಾಗಿ ಚರ್ಚಿಸಲು ಡಿಕೆಶಿ ಹಾಗೂ ಅವರ ಸೋಹೋದರ ಮತ್ತು ಸಂಸದ ಡಿ.ಕೆ.ಸುರೇಶ್ ಆಗಮಿಸಿದ್ದಾರೆ ಎನ್ನಲಾಗಿದೆ. ಇದಲ್ಲದೆ ಶಾಸಕರಾದ ಶರಣಬಸಪ್ಪ ದರ್ಶನಾಪೂರ, ಮಾಜಿ ಸಂಸದರಾದ ಆರ್.ಧ್ರುವನಾರಾಯಣ್, ಚಂದ್ರಪ್ಪ ಹಾಗೂ ವಿ.ಎಸ್.ಉಗ್ರಪ್ಪ, ಯು.ಬಿ.ವೆಂಕಟೇಶ್ ಮತ್ತಿತರರು ಸದಾಶಿವನಗರದ ಮಲ್ಲಿಕಾರ್ಜುನ ಖರ್ಗೆಯವರ ನಿವಾಸಕ್ಕೆ ಆಗಮಿಸಿದ್ದು, ಸುದೀರ್ಘ ಚರ್ಚೆ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆ ಹಿಂದೆ ಸ್ಪಷ್ಟವಾಗಿ ಬಿಜೆಪಿ ಕೈವಾಡ ಕಂಡುಬರುತ್ತಿದೆ. ಇದಲ್ಲದೆ ಶಾಸಕರು ವಿಶೇಷ ವಿಮಾನದಲ್ಲಿ ಮುಂಬೈಗೆ ಹೇಗೆ ತೆರಳುತ್ತಿದ್ದರು. ಅಲ್ಲಿ ಹೇಗೆ ವಾಸ್ತವ್ಯ ಹೂಡಲು ಸಾಧ್ಯ. ಅವರು ಅಷ್ಟೊಂದು ಸ್ಥಿತಿವಂತರಲ್ಲ. ರಾಜೀನಾಮೆ ನೀಡಿದ ಶಾಸಕರನ್ನು ಮುಂಬೈಗೆ ಬರಮಾಡಿಕೊಂಡವರು ಯಾರು ಎನ್ನುವುದನ್ನು ಗಮನಿಸಿದರೆ ಇದರ ಹಿಂದೆ ಯಾರಿದ್ದಾರೆ ಎನ್ನುವುದು ತಿಳಿಯುತ್ತದೆ. ಬಿಜೆಪಿಯವರಿಂದ ಸಂಚು ನಡೆಯುತ್ತಿದೆ ಎಂದು ದೂರಿದರು.

ರಾಮಲಿಂಗಾರೆಡ್ಡಿ ಅವರನ್ನ ಸಮಾಧಾನಿಸುತ್ತೇವೆ

ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ರಾಮಲಿಂಗಾರೆಡ್ಡಿಗೆ ಬೇಸರವಾಗಿದೆ. ಅದನ್ನ ಸರಿಪಡಿಸುವ ಕೆಲಸ ಮಾಡುತ್ತೇವೆ. ನಮ್ಮ ಶಾಸಕರು ಒಂದೇ ಬಾರಿ ರಾಜೀನಾಮೆ ಕೊಟ್ಟು ಮುಂಬೈಗೆ ಒಂದೇ ಫ್ಲೈಟ್​​ನಲ್ಲಿ ಹೋಗುತ್ತಾರೆ ಅಂದ್ರೆ ಇದರ ಹಿಂದೆ ಬೇರೆ ಶಕ್ತಿ ಇದೆ. ನಮ್ಮ ಶಾಸಕರನ್ನ ಸಂಪರ್ಕ ಮಾಡುವ ಕೆಲಸ ಮುಂದುವರೆದಿದೆ. ನಮ್ಮ ಶಾಸಕರು ವಾಪಸ್​​ ಬರುತ್ತಾರೆ. ರಾಮಲಿಂಗಾರಡ್ಡಿ ಸೇರಿದಂತೆ ಬೆಂಗಳೂರು ಶಾಸಕರು ವಾಪಸ್​​ ಬರುತ್ತಾರೆ ಎಂದರು.

ನಾಳೆ ನಾಡಿದ್ದು ಸಭೆಗಳಿವೆ. ಅಲ್ಲಿ ನಮ್ಮ ಶಾಸಕರ ಮನವೊಲಿಕೆ ಕಾರ್ಯ ಮುಂದುವರೆಯುತ್ತೆ. ಪರಮೇಶ್ವರ್ ನಿವಾಸದಲ್ಲಿ ಸಭೆ ನಡೆಸಿ ಎಲ್ಲವೂ ಫೈನಲ್ ಮಾಡುತ್ತೇವೆ. ಇಂದು ಡಿಕೆಶಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರಲ್ಲಿ ವಿಶೇಷ ಅರ್ಥವೇನು ಇಲ್ಲ ಎಂದಿದ್ದಾರೆ.

Intro:newsBody:ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ಮಿನಿ ರಾಜಕೀಯ ಬೆಳವಣಿಗೆ

ಬೆಂಗಳೂರು: ರಾಜ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಸಚಿವ ಡಿಕೆ ಶಿವಕುಮಾರ್ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಭೇಟಿ ಕೊಟ್ಟು ಮಾತುಕತೆ ನಡೆಸಿದ್ದಾರೆ.
ಮೈತ್ರಿ ಸರ್ಕಾರ ಕಾಪಾಡಿಕೊಳ್ಳುವುದು ನಾಯಕತ್ವ ಬದಲಾವಣೆ ಹಾಗೂ ಕಾಂಗ್ರೆಸ್ ನಿಂದ ರಿವರ್ಸ್ ಆಪರೇಷನ್ ನಡೆಸುವ ವಿಚಾರವಾಗಿ ಚರ್ಚಿಸಲು ಡಿಕೆಶಿ ಹಾಗೂ ಅವರ ಸೋದರ ಮತ್ತು ಸಂಸದ ಡಿಕೆ ಸುರೇಶ್ ಆಗಮಿಸಿದ್ದಾರೆ.
ಇದಲ್ಲದೆ ಶಾಸಕರಾದ ಶರಣಬಸಪ್ಪ ದರ್ಶನಾಪೂರ, ಮಾಜಿ ಸಂಸದರಾದ ಆರ್ ಧ್ರುವ ನಾರಾಯಣ್ ಚಂದ್ರಪ್ಪ ಹಾಗೂ ವಿ. ಎಸ್. ಉಗ್ರಪ್ಪ, ಯು.ಬಿ. ವೆಂಕಟೇಶ್ ಮತ್ತಿತರರು ಮಲ್ಲಿಕಾರ್ಜುನ ಖರ್ಗೆಯವರ ಸದಾಶಿವನಗರ ನಿವಾಸಕ್ಕೆ ಆಗಮಿಸಿದ್ದು ಸುದೀರ್ಘ ಚರ್ಚೆ ನಡೆಸಿದ್ದಾರೆ.
ಸರ್ಕಾರವನ್ನು ಉಳಿಸಿಕೊಳ್ಳಲು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸರ್ವ ರೀತಿಯಲ್ಲೂ ಪ್ರಯತ್ನ ನಡೆಸಿದ್ದು ಈ ಮಾತುಕತೆ ಕೂಡ ಅದರ ಒಂದು ಭಾಗವಾಗಿದೆ.
ಬಿಜೆಪಿ ಕೈವಾಡ ಸ್ಪಷ್ಟವಾಗಿದೆ
ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆ ಹಿಂದೆ ಸ್ಪಷ್ಟವಾಗಿ ಬಿಜೆಪಿ ಕೈವಾಡ ಇದೆ. ಇದಿಲ್ಲದೆ ಶಾಸಕರು ವಿಶೇಷ ವಿಮಾನದಲ್ಲಿ ಮುಂಬೈಗೆ ಹೇಗೆ ತೆರಳುತ್ತಿದ್ದರು ಅಲ್ಲಿ ಹೇಗೆ ವಾಸ್ತವ್ಯ ಹೂಡಲು ಸಾಧ್ಯ. ಅಷ್ಟೊಂದು ಸ್ಥಿತಿವಂತರು ಇಲ್ಲ. ವಿಮಾನ ನಿಲ್ದಾಣದಲ್ಲಿ ಹಾಗೂ ಅಲ್ಲಿ ಮುಂಬೈ ಹೋಟೆಲ್ ನಲ್ಲಿ ರಾಜೀನಾಮೆ ನೀಡಿದ ಶಾಸಕರನ್ನು ಬರಮಾಡಿಕೊಂಡವರು ಯಾರು ಎನ್ನುವುದನ್ನು ಗಮನಿಸಿದರೆ ಇದರ ಹಿಂದೆ ಯಾರಿದ್ದಾರೆ ಎನ್ನುವುದು ತಿಳಿಯುತ್ತದೆ. ಬಿಜೆಪಿಯವರನ್ನು ಸಂಚು ನಡೆಯುತ್ತಿದೆ ನಡೆಯಲಿ ಎಂದರು.
ನಮ್ಮ ಶಾಸಕರನ್ನ ಮನವೊಲಿಸುತ್ತಿದ್ದೇವೆ. ಖರ್ಗೆ ಅವರು ನಮ್ಮ ಹಿರಿಯ ನಾಯಕರು. ನಿನ್ನೆ ನಾವು ಭೇಟಿ ಮಾಡಬೇಕಿತ್ತು, ಆಗಿರಲಿಲ್ಲ ಹೀಗಾಗಿ ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ. ನಾಳೆ ಪರಮೇಶ್ವರ್ ನಿವಾಸದಲ್ಲಿ ತಿಂಡಿ ಸಭೆ ಇದೆ. ನಾಡಿದ್ದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ನೋಡೋಣ ನಾವು ಏನಾದರೂ ಮಾಡಬೇಕಲ್ಲ ಎಂದರು.
ರಾಮಲಿಂಗರೆಡ್ಡಿ ಸಮಾಧಾನಿಸುತ್ತೇವೆ
ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ರಾಮಲಿಂಗ ರೆಡ್ಡಿ ಗೆ ಬೇಸರವಾಗಿದೆ. ಅದನ್ನ ಸರಿಪಡಿಸುವ ಕೆಲಸ ಮಾಡುತ್ತೇವೆ. ನಮ್ಮ ಶಾಸಕರು ಒಂದೇ ಬಾರಿ ರಾಜೀನಾಮೆ ಕೊಟ್ಟು ಮುಂಬೈಗೆ ಒಂದೇ ಫ್ಲೈಟ್ ಲ್ಲಿ ಹೋಗುತ್ತಾರೆ ಅಂದ್ರೆ ಇದರ ಹಿಂದೆ ಬೇರೆ ಶಕ್ತಿ ಇದೆ. ನಮ್ಮ ಶಾಸಕರನ್ನ ಸಂಪರ್ಕ ಮಾಡುವ ಕೆಲಸ ಮುಂದೂವರೆದಿದೆ. ನಮ್ಮ ಶಾಸಕರು ವಾಪಸು ಬರುತ್ತಾರೆ. ರಾಮಲಿಂಗರಡ್ಡಿ ಸೇರಿದಂತೆ ಬೆಂಗಳೂರು ಶಾಸಕರು ವಾಪಸು ಬರುತ್ತಾರೆ ಎಂದರು.
ನಾಳೆ ನಾಡಿದ್ದು ಸಭೆಗಳಿವೆ ಅಲ್ಲಿ ನಮ್ಮ ಶಾಸಕರ ಮನವೊಲಿಕೆ ಕಾರ್ಯ ಮುಂದೂವರೆಯುತ್ತೆ. ಪರಮೇಶ್ವರ್ ನಿವಾಸದಲ್ಲಿ ಸಭೆ ನಡೆಸಿ ಎಲ್ಲವೂ ಫೈನಲ್ ಮಾಡುತ್ತೇವೆ. ನನ್ನ ಜತೆ ಡಿಕೆಶಿ ನಿನ್ನೆ ಇಂದ ಮುಖಾಮುಖಿ ಭೇಟಿ ಆಗಿರಲಿಲ್ಲ. ಹೀಗಾಗಿ ಇವತ್ತು ಬಂದು ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರಲ್ಲಿ ವಿಶೇಷ ಅರ್ಥವೇನು ಇಲ್ಲ ಎಂದಿದ್ದಾರೆ.

Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.