ಬೆಂಗಳೂರು: ಕಾಂಗ್ರೆಸ್ ಶಾಸಕರು ತಂಗಿರುವ ತಾಜ್ ವಿವಾಂತ ಹೋಟೆಲ್ ನಗರದ ಒಳಗಡೆ ಇರುವ ಕಾರಣ ಸಮಸ್ಯೆ ಆಗ್ತಿದ್ದು, ಎಲ್ಲರೂ ಸುಲಭವಾಗಿ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ. ಹಾಗಾಗಿ ರೆಸಾರ್ಟ್ ಬದಲಿಸುವ ಬಗ್ಗೆ ಕಾಂಗ್ರೆಸ್ ಮುಖಂಡರು ಹೋಟೆಲ್ನಲ್ಲಿ ಸಭೆ ನಡೆಸುತ್ತಿದ್ದಾರೆ.
ಅಷ್ಟೇ ಅಲ್ಲದೇ ಶಾಸಕರು ಕೂಡ ಮನೆ ಹತ್ತಿರ ಇದೆ ಎಂದು ಮನೆಗೆ ಹೋಗುತ್ತಾರೆ. ಇದರಿಂದ ಶಾಸಕರ ಒಗ್ಗಟ್ಟಿಗೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಹೋಟೆಲ್ನಲ್ಲೇ ಇರೋದಾ ಅಥವಾ ಬೇರೆಡೆಗೆ ಹೋಗೋದಾ ಎಂದು ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಸಭೆಗೆ ಸಿಎಲ್ಪಿ ನಾಯಕ ಸಿದ್ದರಾಮಯ್ಯ, ಹೆಚ್.ಕೆ.ಪಾಟೀಲ್, ಐವನ್ ಡಿಸೋಜ, ದಿನೇಶ್ ಗುಂಡೂರಾವ್, ಜಯಮಾಲಾ ಆಗಮಿಸಿದ್ದಾರೆ. ಇನ್ನು ಸಭೆಗೆ ಕೆಲವೇ ಕೈ ಶಾಸಕರು ಆಗಮಿಸಿದ್ದು, ಶಾಸಕರಿಂದ ಸಿಎಲ್ಪಿ ಮುಖಂಡ ಸಿದ್ದರಾಮಯ್ಯ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಗುರುವಾರದವರೆಗೆ ಕಾಂಗ್ರೆಸ್ ಶಾಸಕರ ಒಗ್ಗಟ್ಟು ಕಾಪಾಡಬೇಕಾದ ಹಿನ್ನಲೆ ಅಲ್ಲಿತನಕ ರೆಸಾರ್ಟ್ ವಾಸ ಪಕ್ಕಾ ಎನ್ನಲಾಗ್ತಿದೆ.