ETV Bharat / state

ಆರ್​​.ಆರ್​​ ನಗರ "ಕೈ" ಹಿಡಿಯುವ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರು

author img

By

Published : Nov 5, 2020, 10:58 AM IST

ಶಿರಾ ಹಾಗೂ ರಾಜರಾಜೇಶ್ವರಿನಗರ ವಿಧಾನಸಭೆ ಉಪಚುನಾವಣೆಗೆ ನ.3 ರಂದು ಮತದಾನವಾಗಿದ್ದು, ಶಿರಾ ಕ್ಷೇತ್ರದಲ್ಲಿ ಗೆಲುವು ಅನಾಯಾಸವಾಗಿ ಲಭಿಸಲಿದೆ. ಇನ್ನು ರಾಜರಾಜೇಶ್ವರಿನಗರದಲ್ಲಿ ಒಕ್ಕಲಿಗ ಮತದಾರರ ಕೃಪೆ, ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್​​ಗೆ ಮತ ನೀಡಿದ್ದಾರೆ ಎಂಬ ವಿಶ್ವಾಸ ಕಾಂಗ್ರೆಸ್ ನಾಯಕರಲ್ಲಿದೆ.

Congress leaders in the confidence of winning the R R Nagar assembly constituency
ಆರ್​​.ಆರ್​​ ನಗರ "ಕೈ" ಹಿಡಿಯುವ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರು

ಬೆಂಗಳೂರು: ಚುನಾವಣೆ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್ ನಾಯಕರನ್ನು ಸೆಳೆದದ್ದು ಹಾಗೂ ಮಹಿಳೆಗೆ ಟಿಕೆಟ್ ನೀಡಿ ಜನರ ಒಲವು ಗಳಿಸಿದ್ದು, ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದಲ್ಲಿ ತಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂಬ ಲೆಕ್ಕಾಚಾರವನ್ನು ಕಾಂಗ್ರೆಸ್ ಹಾಕುತ್ತಿದೆ.

ಶಿರಾ ಹಾಗೂ ರಾಜರಾಜೇಶ್ವರಿನಗರ ವಿಧಾನಸಭೆ ಉಪಚುನಾವಣೆಗೆ ನ.3 ರಂದು ಮತದಾನವಾಗಿದ್ದು, ಶಿರಾ ಕ್ಷೇತ್ರದಲ್ಲಿ ಗೆಲುವು ಅನಾಯಾಸವಾಗಿ ಲಭಿಸಲಿದೆ, ಇನ್ನು ರಾಜರಾಜೇಶ್ವರಿನಗರದಲ್ಲಿ ಒಕ್ಕಲಿಗ ಮತದಾರರ ಕೃಪೆ, ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್​​ಗೆ ಮತ ನೀಡಿದ್ದಾರೆ ಎಂಬ ವಿಶ್ವಾಸ ಹಾಗೂ ಪಕ್ಷ ತ್ಯಜಿಸಿ ಬಂದ ಜೆಡಿಎಸ್ ನಾಯಕರು ಕಾಂಗ್ರೆಸ್ ಪರ ಉತ್ತಮ ಕಾರ್ಯನಿರ್ವಹಣೆ ಮಾಡಿದ್ದಾರೆ ಎಂಬ ನಂಬಿಕೆ ಕಾಂಗ್ರೆಸ್​​​ಗೆ ಇದೆ. ಅದೇ ರೀತಿ 2013, 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ಗೆಲುವಿಗೆ ಕಾರಣರಾಗಿದ್ದ ಮತದಾರರು ಸದ್ಯ ಬಿಜೆಪಿಯಿಂದ ಸ್ಪರ್ಧಿಸಿರುವ ಮುನಿರತ್ನ ಕೈ ಹಿಡಿಯುವುದಿಲ್ಲ. ಬದಲಾಗಿ ಸಾಂಪ್ರದಾಯಿಕ ಮತಗಳಾಗಿ ತಮ್ಮ ಜತೆ ಉಳಿದುಕೊಳ್ಳಲಿವೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.

ಮಹಿಳೆ ಆದ್ಯತೆ : ಇನ್ನು ಕ್ಷೇತ್ರದಲ್ಲಿ ಮುನಿರತ್ನ ದೌರ್ಜನ್ಯ ಹೆಚ್ಚಾಗಿದೆ, ಅವರ ರೌಡಿಸಂ ಮಿತಿ ಮೀರಿದೆ. ಇದನ್ನು ತಡೆಯಲು ನಾವು ನೊಂದ, ಬೆಂದ, ವಿದ್ಯಾವಂತ ಮಹಿಳೆಯನ್ನು ಕಣಕ್ಕಿಳಿಸಿದ್ದೇವೆ ಎಂದು ಕಾಂಗ್ರೆಸ್ ಪ್ರಚಾರ ಮಾಡಿದೆ. ಇದು ಧನಾತ್ಮಕವಾಗಿ ಲಭಿಸಿದೆ ಎಂಬ ನಂಬಿಕೆಯಲ್ಲಿದೆ. ಅಲ್ಲದೇ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಮನೆ ಮನೆಗೆ ಓಡಾಡಿ ಮಹಿಳೆಯರ ಒಲವು ಗಳಿಸಿದ್ದಾರೆ. ಇದ್ದ ಕಡಿಮೆ ಅವಧಿಯಲ್ಲಿ ಕ್ಷೇತ್ರದೆಲ್ಲೆಡೆ ಒಂದೆರಡು ಸಾರಿ ಸುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಸಾಂಘಿಕವಾಗಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ ಇಲ್ಲಿ ಒಗ್ಗಟ್ಟು ಪ್ರದರ್ಶಿಸಿ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಿದೆ. 59 ಮಂದಿ ಕಾಂಗ್ರೆಸ್ ಮುಖಂಡರನ್ನು ಉಪಚುನಾವಣೆಗೆ ವೀಕ್ಷಕರನ್ನಾಗಿ ನಿಯೋಜಿಸಿ ಕಾರ್ಯ ನಿರ್ವಹಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಾಲಿಗಂತೂ ಇದು ಪ್ರತಿಷ್ಠೆಯ ಕದನವಾಗಿದ್ದರಿಂದ ಹೆಚ್ಚು ಗಮನ ಹಾಗೂ ಆಸಕ್ತಿಯನ್ನು ಈ ಉಪಚುನಾವಣೆಗೆ ತೊಡಗಿಸಲಾಗಿದೆ. ಈ ಹಿಂದೆ 15 ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಪರಿಗಣಿಸಿದ್ದಕ್ಕಿಂತ ಹೆಚ್ಚು ಗಂಭೀರವಾಗಿ ಕಾಂಗ್ರೆಸ್ ಈ ಚುನಾವಣೆಯನ್ನು ಪರಿಗಣಿಸಿದೆ.

ವರವಾಗುತ್ತಾ ಡಿಕೆ ಸೋದರರ ಪರಿಶ್ರಮ : ತಾವು ಮಾಡಿದ ಲೆಕ್ಕಾಚಾರ, ಹಾಕಿದ ಶ್ರಮ, ಕೈಗೊಂಡ ತಂತ್ರಗಾರಿಕೆ ಕೈ ಹಿಡಿಯಲಿದೆ ಎನ್ನುವ ವಿಶ್ವಾಸ ಕಾಂಗ್ರೆಸ್ ನಾಯಕರಿಗೆ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಅವರಂತೂ ಹಗಲು ರಾತ್ರಿ ಅನ್ನದೇ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಪರ ಪ್ರಚಾರ, ತಂತ್ರಗಾರಿಕೆ ನಡೆಸಿದ್ದಾರೆ. ಒಟ್ಟಾರೆ ಎಲ್ಲ ಪ್ರಯತ್ನವೂ ಗೆಲುವಿನ ಮೆಟ್ಟಿಲು ಹತ್ತಿಸಲಿದೆ ಎಂಬ ವಿಶ್ವಾಸ ಕಾಂಗ್ರೆಸ್ ನಾಯಕರದ್ದಾಗಿದೆ. ಅಲ್ಲದೇ ಕಡಿಮೆ ಮತದಾನವಾಗಿರುವುದು ನಮಗೆ ಅಡ್ವಾಂಟೇಜ್ ಎಂದು ಹೇಳಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಹಾಗೂ ಉಪಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂದು ಹೇಳಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತುಗಳು ಇವರಲ್ಲಿ ಗೆಲ್ಲುವ ವಿಶ್ವಾಸ ಹೆಚ್ಚಿದೆ ಎನ್ನುವುದನ್ನು ತೋರಿಸುತ್ತಿದೆ.

ಕೈ ಹಿಡಿಯುತ್ತಾ ಕಡೆಯ ಕ್ಷಣದ ಯತ್ನ : ಕಡೆಯ ಕ್ಷಣದಲ್ಲಿ ಕುಸುಮಾ ಹನುಮಂತರಾಯಪ್ಪರ ಅತ್ತೆ ಗೌರಮ್ಮರನ್ನು ತಮ್ಮ ನಿವಾಸಕ್ಕೆ ಕರೆಸಿ ಡಿ.ಕೆ. ಶಿವಕುಮಾರ್ ಸಮಾಲೋಚಿಸಿ ಮನವೊಲಿಸಿದ್ದು, ಮತದಾನ ಆರಂಭಕ್ಕೆ 12 ಗಂಟೆ ಮುನ್ನ ಗೌರಮ್ಮ ಕೂಡ ಸೊಸೆಯ ಪರ ಮತಯಾಚನೆ ಮಾಡುವ ವಿಡಿಯೋ ಬಿಡುಗಡೆ ಮಾಡಿಸಿದ್ದಾರೆ. ಮತದಾನಕ್ಕೆ ಒಂದು ದಿನ ಮುನ್ನ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಅಭ್ಯರ್ಥಿ ಶೇ.10ರಷ್ಟು ನಕಲಿ ಮತದಾರರನ್ನು ಸೃಷ್ಟಿಸಿದ್ದು, ಇಂತಹವರಿಗೆ ಮತ ಹಾಕಲು ಜನರೇ ಅವಕಾಶ ನೀಡದಂತೆ ತಡೆಯಬೇಕೆಂದು ಮನವಿ ಮಾಡಿದ್ದರು.

ಇದಲ್ಲದೇ ಕಾಂಗ್ರೆಸ್ ಪಕ್ಷದ ನಾಯಕರು ಸಾಕಷ್ಟು ಪ್ರತಿಭಟನೆ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿ ಚುನಾವಣೆಯನ್ನು ನ್ಯಾಯ ಸಮ್ಮತವಾಗಿ ನಡೆಸಲು ಪ್ರಯತ್ನಿಸಿದ್ದೇವೆ ಎಂದು ತೋರಿಸಿಕೊಂಡಿದ್ದೂ ಕಾಂಗ್ರೆಸ್​​ಗೆ ಧನಾತ್ಮಕವಾಗಿ ಲಭಿಸಿದೆ ಎಂಬ ಲೆಕ್ಕಾಚಾರ ಇದೆ. ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಅಸಂವಿಧಾನಾತ್ಮಕ ಮಾತನ್ನಾಡಿರುವುದು ಹಾಗೂ ಜನರಿಗೆ ಹಣ ಹಂಚುತ್ತಿರುವ ವಿಡಿಯೋ ಸಂಗ್ರಹಿಸಿ ಬಿಡುಗಡೆ ಮಾಡಿದ್ದು, ಪ್ರಜ್ಞಾವಂತ ಮತದಾರರ ಕಣ್ಣು ತೆರೆಸಿದೆ. ಜತೆಗೆ ಅಲ್ಪಸಂಖ್ಯಾತ, ಒಕ್ಕಲಿಗ, ಹಿಂದುಳಿದ ವರ್ಗ, ಒಂದಿಷ್ಟು ಪ್ರಮಾಣದಲ್ಲಿ ಲಿಂಗಾಯಿತ ಮತಗಳೂ ತಮ್ಮ ಅಭ್ಯರ್ಥಿಗೆ ಲಭಿಸಿದೆ. ಇದರಿಂದ ಗೆಲುವು ಪ್ರಯಾಸದಾಯಕವಾಗಿಯಾದರೂ ಲಭಿಸಬಹುದು ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ನವೆಂಬರ್​ 10 ಕ್ಕೆ ಇದಕ್ಕೆ ಸೂಕ್ತ ಉತ್ತರ ದೊರೆಯಲಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.