ETV Bharat / state

ಕಾಂಗ್ರೆಸ್ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ: ಬಿ ಎಸ್​ ಯಡಿಯೂರಪ್ಪ

ಇಡೀ ಪ್ರಪಂಚ ಅಚ್ಚರಿ ಪಡುವ ಮಹಾನ್ ನಾಯಕ ಮೋದಿ, ಮೋದಿ ನೇತೃತ್ವದಲ್ಲಿ ಗುಜರಾತ್​ನಲ್ಲಿ ದೊಡ್ಡ ಗೆಲುವು ಸಿಕ್ಕಿದೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಸಾಕಷ್ಟು ಕಾರ್ಯಕ್ರಮ ಕೊಟ್ಟಿದೆ. ಕರ್ನಾಟಕದಲ್ಲಿ 140+ ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರುವ ಸಂಕಲ್ಪ ಮಾಡೋಣ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಕರೆ ನೀಡಿದ್ದಾರೆ.

ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ
author img

By

Published : Dec 18, 2022, 3:01 PM IST

ಬೆಂಗಳೂರು: ಯಂಕ, ನಾಣಿ, ಸೀನ ಎರಡು ಮೂರು ಜನ ತಾವೇ ಸಿಎಂ ಅಂತಾ ಹೇಳುತ್ತಿದ್ದಾರೆ. ಕಾಂಗ್ರೆಸ್ ನ ಮಿತ್ರರು ಮತ್ತೆ ಅಧಿಕಾರಕ್ಕೆ ಬರುವ, ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ. ಆದರೆ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಡೀ ಪ್ರಪಂಚ ಅಚ್ಚರಿ ಪಡುವ ಮಹಾನ್ ನಾಯಕ ಮೋದಿ, ಮೋದಿ ನೇತೃತ್ವದಲ್ಲಿ ಗುಜರಾತ್​ನಲ್ಲಿ ದೊಡ್ಡ ಗೆಲುವು ಸಿಕ್ಕಿದೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಸಾಕಷ್ಟು ಕಾರ್ಯಕ್ರಮ ಕೊಟ್ಟಿದೆ. ಕರ್ನಾಟಕದಲ್ಲಿ 140+ ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

ಇತ್ತೀಚೆಗೆ ಸರ್ವೇ ಮಾಡಿದ ಪ್ರಕಾರ, ದೇಶದ 73% ಜನ ಮೋದಿ ಪರ ಇದ್ದಾರೆ. ಕಾಂಗ್ರೆಸ್ ಧೂಳಿಪಟ ಆಗುವುದರಲ್ಲಿ ಅನುಮಾನ ಇಲ್ಲ. ಇನ್ನು ಕೇವಲ ನಾಲ್ಕು ತಿಂಗಳಿದೆ. ಚುನಾವಣೆಗೆ ಈ ನಾಲ್ಕು ತಿಂಗಳಲ್ಲಿ ಮನೆಮನೆಗೆ ಹೋಗಿ ಕೇಂದ್ರದ ಕೆಲಸಗಳನ್ನು ಮನವರಿಕೆ ಮಾಡಬೇಕು. ಇದು ಮತ್ತೆ ಬಿಜೆಪಿ ಗೆಲ್ಲಲು ಸಹಕಾರ ಆಗುತ್ತದೆ. ಕಾಂಗ್ರೆಸ್ ನ ಮಿತ್ರರು ಮತ್ತೆ ಅಧಿಕಾರಕ್ಕೆ ಬರುವ, ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ. ಮೂರು ತಲೆಮಾರಿಗೆ ಆಗುವಷ್ಟು ಸಂಪತ್ತು ಮಾಡಿರೋದಾಗಿ ಮಾಜಿ ಸ್ಪೀಕರ್​ರಮೇಶ್ ಕುಮಾರ್ ಹೇಳಿದ್ದರು. ಇದನ್ನು ಕಾಂಗ್ರೆಸ್​ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಲ್ಲಗಳೆದಿಲ್ಲ. ಇದರಿಂದ ಅವರು ಅಧಿಕಾರದಲ್ಲಿದ್ದಾಗ ಲೂಟಿ ಮಾಡಿದ್ದರು ಎಂಬುದು ಗೊತ್ತಾಗುತ್ತದೆ ಎಂದು ಬಿಎಸ್​ವೈ ಟಾಂಗ್​ ಕೊಟ್ಟರು.

ಜನರಿಗೆ ಕೇಂದ್ರ, ರಾಜ್ಯ ಸರ್ಕಾರಗಳ ಸಾಧನೆ ತಿಳಿಸಿ.. ಜನರ ಪ್ರೀತಿ ವಿಶ್ವಾಸ ಗಳಿಸಿ ಮತ್ತೆ ನಾವು ಅಧಿಕಾರಕ್ಕೆ ಬರುವುದರಲ್ಲಿ ಸಂಶಯ ಇಲ್ಲ. ವಿಧಾನಸಭೆಯಲ್ಲಿ ಆರಂಭದಲ್ಲಿ ಎರಡು ಕ್ಷೇತ್ರದಲ್ಲಿ ಗೆದ್ದಾಗಿಂದಲೂ ಬಿಜೆಪಿ ಕಟ್ಟಲು ಶ್ರಮ ಪಟ್ಟಿದ್ದೇವೆ. ಹಲವರು ಪಕ್ಷ ಕಟ್ಟಲು ನೆರವಾಗಿದ್ದಾರೆ. ಎಲ್ಲರೂ ರಾಜ್ಯದ ಉದ್ದಗಲಕ್ಕೂ ಓಡಾಡಿ ಬಿಜೆಪಿ ಕಟ್ಟಿದೆವು. ಅದರ ಪರಿಣಾಮ ಬಿಜೆಪಿ ರಾಜ್ಯದಲ್ಲಿ ಎದ್ದು ನಿಂತಿದೆ. ಇನ್ನು, ನಾಲ್ಕು ತಿಂಗಳಲ್ಲಿ ಬಿಜೆಪಿ ಮತ್ತೊಮ್ಮೆ ಗೆಲ್ಲಲಿದೆ. ಕರ್ನಾಟಕದ ಜನ ನೆಮ್ಮದಿಯಾಗಿ ಇರಬಹುದು. ರಾಜ್ಯದ ಅಭಿವೃದ್ಧಿ ಮಾಡಿದ್ದೇವೆ. ಏನೂ ಕಮ್ಮಿ ಮಾಡಿಲ್ಲ ಎಂದು ಮಾಜಿ ಸಿಎಂ ಹೇಳಿದರು.

ಭಾಗ್ಯಲಕ್ಷ್ಮಿ ಯೋಜನೆ ತಂದಿದ್ದೇವೆ. ಭಾಗ್ಯಲಕ್ಷ್ಮಿ ಫಲಾನುಭವಿಗಳ ಸಭೆ ಮಾಡಿ ಆಗ ಅವರಿಗೆ ಇದು ನಮ್ಮ ಬಿಜೆಪಿ ಅನ್ನೋ ಭಾವನೆ ಬರುತ್ತದೆ. ಉಚಿತ ಬೈಸಿಕಲ್, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಸಹಕಾರ ವಲಯದವರಿಗೆ ನೆರವು. ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ತಂದಿದ್ದೇವೆ. ಯಾರೂ ಮೈಮರೆಯದೇ ಕೆಲಸ ಮಾಡಬೇಕು.

ರಾಜಕಾರಣದಲ್ಲಿ ಎಷ್ಟು ಜಾಗೃತವಾಗಿದ್ದರೂ ಕಡಿಮೆಯೇ. ವಿಪಕ್ಷಗಳ ಚಟುವಟಿಕೆಗಳ ಮೇಲೆ ಕಣ್ಣಿಡಬೇಕು. ಪಕ್ಷದ ಮಹಿಳಾ ಸಂಘಟನೆ ಇನ್ನಷ್ಟು ಬಲಗೊಳ್ಳಬೇಕು. ಪ್ರತಿ ಊರಿನಲ್ಲಿ ಕನಿಷ್ಠ 120 ಯುವಕರಿರುವ ತಂಡ ರೆಡಿಯಾಗಬೇಕು. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನಾನು ಸಿಎಂ ಅಗಿದ್ದಾಗ 4000 ಹೆಚ್ಚುವರಿ ಕೊಟ್ಟಿದ್ದೇನೆ. ಇದು ಸಣ್ಣ ವಿಷಯ ಅಲ್ಲ. ಬೊಮ್ಮಾಯಿ‌ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿರುವ ಕಾರಣ ಎಸ್​ಸಿ ಎಸ್ ಟಿ ಜನ ನಮ್ಮ ಜೊತೆ ಬರುತ್ತಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಈ ಒಂದು ಸಲ ಕಾಂಗ್ರೆಸ್ ಸೋಲಿಸಿದರೆ ದೇಶದಲ್ಲಿ ಕಾಂಗ್ರೆಸ್ ಧೂಳಿಪಟ ಆಗುತ್ತದೆ. ಇಲ್ಲಿ ಸ್ವಲ್ಪ ಮಾತ್ರ ಕಾಂಗ್ರೆಸ್ ಉಸಿರಾಡುತ್ತಿದೆ ಎಂದು ಯಡಿಯೂರಪ್ಪ ಟೀಕಿಸಿದರು.

ಓದಿ: ಬಿಜೆಪಿ ಜನಸಂಕಲ್ಪ ಯಾತ್ರೆ: ಸಕ್ಕರೆ ನಾಡಿನಲ್ಲಿ ರಣ ಕಹಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.