ETV Bharat / state

ಮಾಜಿ ಸಚಿವರು, ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ಕೊಡಬೇಡಿ.. ಕಾರ್ಯಕರ್ತರನ್ನೇ ಪರಿಗಣಿಸಿ- ಕೈ ಮುಖಂಡರ ಆಗ್ರಹ - etv bharat kannada

ನಿಗಮ ಮಂಡಳಿ, ಸಮಿತಿಗಳಿಗೆ ಶಾಸಕರಿಗಿಂತ ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ಅವಕಾಶ ನೀಡಬೇಕೆಂದು ಎಂದು ಕಾಂಗ್ರೆಸ್ ಮುಖಂಡ ಬಿ ಎಲ್ ಶಂಕರ್ ಸಲಹೆ ನೀಡಿದ್ದಾರೆ.

congress-leaders-demand-for-posts-of-corporation-boards-to-party-workers
ಮಾಜಿ ಸಚಿವರು, ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ಕೊಡಬೇಡಿ.. ಕಾರ್ಯಕರ್ತರನ್ನೇ ಪರಿಗಣಿಸಿ- ಕೈ ಮುಖಂಡರ ಆಗ್ರಹ
author img

By ETV Bharat Karnataka Team

Published : Sep 3, 2023, 5:14 PM IST

ಬೆಂಗಳೂರು: ಕೆಪಿಸಿಸಿ ಕಚೇರಿ ಬಳಿಯ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪಕ್ಷದ ಪ್ರಚಾರ ಸಮಿತಿಗಳ ಪದಾಧಿಕಾರಿಗಳ ಸಭೆಯಲ್ಲಿ ಕೈ ಕಾರ್ಯಕರ್ತರು ನಿಗಮ‌ ಮಂಡಳಿಗೆ ಶಾಸಕರನ್ನು ನೇಮಕ ಮಾಡದಂತೆ ಒಕ್ಕೋರಲಿನ ಆಗ್ರಹ ಮಾಡಿದರು.‌ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಬಿ ಎಲ್ ಶಂಕರ್, ನಿಗಮ ಮಂಡಳಿಗಳ ಅಧ್ಯಕ್ಷ, ಸದಸ್ಯ ಸ್ಥಾನವನ್ನು ಈ ತಿಂಗಳಾತ್ಯಕ್ಕೆ ನೇಮಿಸುವಂತೆ ಸಲಹೆ ನೀಡಿದರು.

ಎಲ್ಲರಿಗೂ ಅವಾಕಶ ಸಿಗುವ ನಿಟ್ಟಿನಲ್ಲಿ ಎರಡೂವರೆ ವರ್ಷದಂತೆ ನಿಗಮ ಮಂಡಳಿ, ಸಮಿತಿಗಳಿಗೆ ನೇಮಕ ಮಾಡಿ. ಶಾಸಕರಿಗಿಂತ ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ಅವಕಾಶ ನೀಡಬೇಕು. ಅಲ್ಪ ಸಂಖ್ಯಾತರಿಗೆ, ಮಹಿಳೆಯರಿಗೆ, ಹಿಂದುಳಿದವರಿಗೆ ನಿಗಮ ಮಂಡಳಿಗಳಲ್ಲಿ ಹೆಚ್ಚಿನ ಅವಕಾಶ ನೀಡಬೇಕು. ಒಂದು ಬಾರಿ ಸಚಿವ ಸ್ಥಾನ ಪಡೆದವರು ಅದಕ್ಕಿಂತ ಕೆಳಗಿನ‌ ಹುದ್ದೆ ಪಡೆಯಬಾರದು. ಮಾಜಿ ಸಚಿವರು ನಿಗಮ ಮಂಡಳಿಗಳ ಸ್ಥಾನ ತೆಗೆದುಕೊಳ್ಳಬಾರದು. ಸಚಿವರನ್ನು ಶಾಸಕರು ದೂರಿದಂತೆ, ಶಾಸಕರನ್ನು ಕಾರ್ಯಕರ್ತರು ದೂರುತ್ತಿದ್ದಾರೆ‌. ಅದಕ್ಕಾಗಿ ರಾಜ್ಯ ಮಟ್ಟದಲ್ಲಿ ಸಣ್ಣ ಸಮಿತಿ ‌ಮಾಡಿದರೆ ಒಳಿತು ಎಂದು ಸಲಹೆಯನ್ನು ನೀಡಿದರು.

ಇಂಡಿಯಾ ಘಟಬಂದನದ ತೀರ್ಮಾನ ಏನೇ ಇರಲಿ, ಕರ್ನಾಟಕದಲ್ಲಿ ಎಲ್ಲಾ 28 ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸೇ ಸ್ಪರ್ಧಿಸಬೇಕು. ಶಾಸಕರಿಗೆ ಪದಾಧಿಕಾರಿಗಳ ಹುದ್ದೆ ಬೇಡ. ಅವರನ್ನು ಮಾರ್ಗದರ್ಶಕರನ್ನಾಗಿ ಮಾಡಬೇಕು. ತಾಲೂಕು, ಜಿಲ್ಲಾ ಮಟ್ಟದಲ್ಲಿ ಜನಸಂಪರ್ಕ ಪಾದಯಾತ್ರೆ ಮಾಡಬೇಕು.‌ ಜಿಲ್ಲಾ ಮಟ್ಟದಲ್ಲಿ ಪಂಚ ಗ್ಯಾರಂಟಿಗಳ ಫಲಾನುಭವಿಗಳ ಸಮಾವೇಶ ಮಾಡಬೇಕು. ಫಲಾನುಭವಿಗಳಿಗೆ ಸಿಎಂ ಪತ್ರ ಬರೆಯಬೇಕು. ಪಂಚ ಗ್ಯಾರಂಟಿ ಬಗ್ಗೆ ಗ್ರಾಮ ಪಂಚಾಯತಿ, ತಾಲೂಕು ಮಟ್ಟದಲ್ಲಿ ಪ್ರಚಾರ ನಡೆಸಬೇಕು. ಹೋರ್ಡಿಂಗ್​ಗಳನ್ನು ಹಾಕಿ ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.

ನಿಗಮ ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಿ: ಸಭೆಯಲ್ಲಿ ಕೆಲ ಜಿಲ್ಲಾ ಪದಾಧಿಕಾರಿಗಳು ಹಾಗೂ ಕೈ ಮುಖಂಡರಿಗೆ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಲಾಯಿತು. ಈ ವೇಳೆ ಬಹುತೇಕರು ಆದಷ್ಟು ಬೇಗ ನಿಗಮ ಮಂಡಳಿಗೆ ನೇಮಕಾತಿ ಮಾಡುವಂತೆ ಒತ್ತಾಯಿಸಿದರು.‌ ಶಾಸಕರಿಗೆ ನಿಗಮ ಮಂಡಳಿ ನೇಮಕಾತಿ ಮಾಡಬಾರದು. ನಾವು 25 ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇವೆ. ಕಳೆದ ಅಧಿಕಾರಾವಧಿಯಲ್ಲಿ ಎರಡು ವರ್ಷ ನೇಮಕಾತಿ ತಡವಾಗಿದೆ. ಈ ಬಾರಿ ಕೂಡಲೇ ನೇಮಕಾತಿ ಮಾಡಿ ಕಾರ್ಯಕರ್ತರಿಗೆ ಅಧಿಕಾರ ನೀಡಬೇಕು. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಅನುಕೂಲಕರವಾಗಿದೆ ಎಂದು ಅಭಿಪ್ರಾಯಪಟ್ಟರು.

ಹೊರಗಿನಿಂದ ಬಂದ ಕೆಲವರು ಡೈರೆಕ್ಟ್ ಎಂಟ್ರಿ ಕೊಟ್ಟು, ಟಿಕೆಟ್ ಪಡೆದು, ಬಳಿಕ ಅಧಿಕಾರವನ್ನೂ ಪಡೆಯುತ್ತಾರೆ. ಮತ್ತೆ ಮುಂದಿನ ಚುನಾವಣೆಗೆ ಮತ್ತೊಂದು ಪಕ್ಷಕ್ಕೆ ಹೋಗುತ್ತಾರೆ. ಪಕ್ಷದ ಕಾರ್ಯಕರ್ತರಿಗೆ ಇದರ ನೋವಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮುಂಚೆನೇ ಅಭ್ಯರ್ಥಿ ಘೋಷಣೆ ಮಾಡಿದರೆ ಉತ್ತಮ. ಯುವ ಮಿತ್ರರು ಬಹಳಷ್ಟು ಬಿಜೆಪಿ ಪರ ಇದ್ದಾರೆ. ಅವರನ್ನು ಕಾಂಗ್ರೆಸ್ ನತ್ತ ಸೆಳೆಯುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಪುಟ್ಟರಂಗ ಶೆಟ್ಟಿ ಮಂತ್ರಿನೂ ಬೇಕು, ನಿಗಮನೂ ಬೇಕು ಅಂತಾರೆ: ಹಳೆ ಮೈಸೂರು ಭಾಗದ ಕೈ ಮುಖಂಡ ಮಾತನಾಡಿ, ಶಾಸಕ ಪುಟ್ಟರಂಗ ಶೆಟ್ಟಿ ಅವರು ಮಂತ್ರಿನೂ ಆಗುತ್ತೇನೆ ಅಂತಾರೆ, ನಿಗಮ ಮಂಡಳಿ ಅಧ್ಯಕ್ಷನೂ ಆಗ್ತೇನೆ ಅಂತಾರೆ. ಆ ತರ ಆಗಬಾರದು ಎಂದು ಅಸಮಾಧಾನ ಹೊರಹಾಕಿದರು. ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

2019-20ಗೆ ಅನ್ವಯವಾಗುವಂತೆ ಯುವನಿಧಿ ಯೋಜನೆ ಜಾರಿಗೊಳಿಸುವಂತೆ ಮಧ್ಯ ಕರ್ನಾಟಕ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮನವಿ ಮಾಡಿದರು. ಯುವಕರು ಯುವನಿಧಿ ನೋಡಿ ಕಾಂಗ್ರೆಸ್​ಗೆ ಮತ ಹಾಕಿದ್ದಾರೆ. ಹೀಗಾಗಿ 2022-23 ಬದಲಿಗೆ 2019-20ಗೆ ಅನ್ವಯವಾಗುವಂತೆ ಯುವನಿಧಿ ಜಾರಿಗೊಳಿಸಿ ಎಂದು ಒತ್ತಾಯಿಸಿದರು.

ಶಿವಲಿಂಗೇಗೌಡರ ವಿರುದ್ಧ ಅಸಮಾಧಾನ: ಹಾಸನ ಭಾಗದ ಕೈ ಮುಖಂಡ ಮಾತನಾಡಿ, ಪಕ್ಷದ ಕಾರ್ಯಕರ್ತರನ್ನು ಗುರುತಿಸಬೇಕು. ಕೆಲ ಮುಖಂಡರು ಪ್ರದರ್ಶನ ಮಾಡುತ್ತಾರೆ. ಕಾರ್ಯಕರ್ತರನ್ನು ಗುರುತಿಸಿದರೆ ಪಕ್ಷ ಬಲವಾಗಿರುತ್ತದೆ. ಕಾರ್ಯಕರ್ತರಿಗೆ ಹೆಚ್ಚಿನ‌ ಮನ್ನಣೆ ಕೊಡುತ್ತಿಲ್ಲ. ಸೋತವರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ಕೊಡಬೇಡಿ.‌ ಕಾರ್ಯಕರ್ತರಿಗೆ ಅವಕಾಶ ಕೊಡಿ ಎಂದು ಆಗ್ರಹಿಸಿದರು. ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಯಾರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಯಾರ ಮಾತು ಕೇಳುತ್ತಿಲ್ಲ. ಕಾರ್ಯಕರ್ತರ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ಪಕ್ಷದಿಂದ ಕಾರ್ಯಕರ್ತರು ಹಿಮ್ಮುಖವಾಗುವ ಸಾಧ್ಯತೆ ಇದೆ ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: ಆಪರೇಷನ್ ಆಗಲು ನನಗೆ ಕ್ಯಾನ್ಸರ್ ಆಗಿಲ್ಲ, ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: 'ಆಪರೇಷನ್ ಹಸ್ತ'ದ ಬಗ್ಗೆ ರಾಜುಗೌಡ ರಿಯಾಕ್ಷನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.