ETV Bharat / state

ಸಚಿವ ಶಿವಳ್ಳಿ ನಿಧನಕ್ಕೆ ಸಿದ್ದು ಸೇರಿ ಕಾಂಗ್ರೆಸ್ ನಾಯಕರ ಕಂಬನಿ - CS Shivalli

ಹೃದಯಾಘಾತದಿಂದ ಸಾವನ್ನಪ್ಪಿರುವ ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕರು ಕಂಬನಿ ಮಿಡಿದಿದ್ದಾರೆ.

ಸಚಿವ ಸಿ ಎಸ್ ಶಿವಳ್ಳಿ ಮೃತದೇಹ
author img

By

Published : Mar 22, 2019, 8:11 PM IST

ಬೆಂಗಳೂರು: ಸಚಿವ ಶಿವಳ್ಳಿ ನಿಧನಕ್ಕೆ ಕಾಂಗ್ರೆಸ್ ನಾಯಕರು ಸಂತಾಪ ಸೂಚಿಸಿದ್ದಾರೆ. ಡಾ.ಜಿ.ಪರಮೇಶ್ವರ್ ಸಂತಾಪ‌ ಸೂಚಿಸುತ್ತಾ, ಖಾಸಗಿ ಕಾರ್ಯಕ್ರಮಕ್ಕೆಂದು ಶುಕ್ರವಾರ ಹುಬ್ಬಳ್ಳಿಗೆ ತೆರಳಿದ್ದ ಅವರಿಗೆ ಹೃದಯಾಘಾತ ಉಂಟಾಗಿರುವ ವಿಷಯ ಅತ್ಯಂತ ಆತಂಕ ಮೂಡಿಸಿದೆ. ಸರಳ, ಸಜ್ಜನಿಕೆಯ ರಾಜಕಾರಣಿಯಾಗಿದ್ದ ಅವರ ಅಗಲಿಕೆ ನೋವುಂಟು ಮಾಡಿದೆ. ಅವರ ನಿಧನದ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಸುದೀರ್ಘ ಕಾಲದ ನನ್ನ ಸ್ನೇಹಿತರಾದ ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಶಿವಳ್ಳಿ ಅವರು ಮೆಲು ಮಾತಿನ, ಸರಳ ವ್ಯಕ್ತಿತ್ವದ, ಜನಾನುರಾಗಿ ನಾಯಕರಾಗಿದ್ದರು. ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ‌ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಕಂಬನಿ ಮಿಡಿದಿದ್ದಾರೆ.

  • ಸುದೀರ್ಘ ಕಾಲದ ನನ್ನ ಸ್ನೇಹಿತರಾದ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಶಿವಳ್ಳಿ ಅವರು ಮೆಲುಮಾತಿನ,ಸರಳ ವ್ಯಕ್ತಿತ್ವದ, ಜನಾನುರಾಗಿ ನಾಯಕರಾಗಿದ್ದರು.
    ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ‌ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ.@INCKarnataka pic.twitter.com/swXAWGNIqJ

    — Siddaramaiah (@siddaramaiah) March 22, 2019 " class="align-text-top noRightClick twitterSection" data=" ">

ಗೃಹ ಸಚಿವ ಎಂ.ಬಿ.ಪಾಟಿಲ್ ಕೂಡ ಸಂತಾಪ ವ್ಯಕ್ತಪಡಿಸಿದ್ದು, ಸಿ.ಎಸ್. ಶಿವಳ್ಳಿ ಅವರ ಅನಿರೀಕ್ಷಿತ ಅಗಲಿಕೆ ತೀವ್ರ ಆಘಾತ ಉಂಟುಮಾಡಿದೆ. ಅವರ ಕುಟುಂಬದ ಸದಸ್ಯರಿಗೆ ಹಾಗೂ ಬಂಧು ಮಿತ್ರರಿಗೆ ಅವರ ಅಕಾಲಿಕ ಸಾವಿನ ನೋವನ್ನು ಸಹಿಸಿಕೊಳ್ಳುವಂತಹ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಕಂಬನಿ‌ ಮಿಡಿದಿದ್ದಾರೆ.

ಸರಳ ಮತ್ತು ಸಜ್ಜನ ಸಚಿವರು ಮತ್ತು ನನ್ನ ಆತ್ಮೀಯ ಸಹೋದ್ಯೋಗಿಗಳಾಗಿದ್ದ ಶ್ರೀ ಸಿ.ಎಸ್. ಶಿವಳ್ಳಿ ಅವರು ಇಂದು ಅಕಾಲಿಕವಾಗಿ ನಿಧನರಾಗಿರುವುದು ನಮಗೆಲ್ಲ ದಿಗ್ಭ್ರಾಂತಿ ಮೂಡಿಸಿದೆ ಎಂದು ಸಚಿವೆ ಜಯಮಾಲಾ ತಿಳಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಹಿರಿಯ ಜನಪ್ರತಿನಿಧಿಯಾಗಿ, ಪೌರಾಡಳಿತ ಸಚಿವರಾಗಿ ನಾಡಿನ ಅಭಿವೃದ್ಧಿಗೆ ಹಲವು ರೀತಿಯಲ್ಲಿ ಕೊಡುಗೆ ಸಲ್ಲಿಸಿದ್ದ ಶ್ರೀ ಶಿವಳ್ಳಿ ಅವರು ಅತ್ಯಂತ ಮಿತ ಭಾಷೆಯಾಗಿದ್ದರು. ಜನಸಾಮಾನ್ಯರ ದುಃಖ ದುಮ್ಮಾನಗಳಿಗೆ ಸದಾ ಸ್ಪಂದಿಸುತ್ತಿದ್ದ ಅವರು, ನಮ್ಮ ಕಾಂಗ್ರೆಸ್ ಪಕ್ಷದ ಬೆಳವಣಿಗೆಯಲ್ಲೂ ಸಾಕಷ್ಟು ಶ್ರಮಿಸಿ ಮಾದರಿಯಾಗಿದ್ದಾರೆ ಎಂದು ನೆನಪಿಸಿದ್ದಾರೆ.

ಇಂತಹ ಅನುಭವಿ ಮತ್ತು ನಿಷ್ಠಾವಂತ ಮುಖಂಡರನ್ನು ಕಳೆದುಕೊಂಡಿರುವುದರಿಂದ ನಮ್ಮ ಸರ್ಕಾರಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ಮತ್ತು ಇಡೀ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ-ಸದ್ಗತಿ ಸಿಗುವಂತಾಗಲಿ. ಶಿವಳ್ಳಿ ಅವರ ಅಗಲಿಕೆಯ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತನು ಅವರ ಕುಟುಂಬದವರಿಗೆ ಮತ್ತು ಅವರ ಅಭಿಮಾನಿಗಳಿಗೆ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸಂತಾಪಿಸಿದ್ದಾರೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.