ETV Bharat / state

ಮಾಜಿ ಸಚಿವ ಅಮರನಾಥ್ ಶೆಟ್ಟಿ ನಿಧನಕ್ಕೆ ಕಾಂಗ್ರೆಸ್ ನಾಯಕರ ಸಂತಾಪ - ಮಾಜಿ ಸಚಿವ ಅಮರನಾಥ ಶೆಟ್ಟಿ ನಿಧನಕ್ಕೆ ಸಂತಾಪ

ಮಾಜಿ ಸಚಿವ ಅಮರನಾಥ್ ಶೆಟ್ಟಿ ನಿಧನಕ್ಕೆ ಕಾಂಗ್ರೆಸ್ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.

Congress leaders condole death of former minister Amarnath Shetty
ಕಾಂಗ್ರೆಸ್ ನಾಯಕರು
author img

By

Published : Jan 27, 2020, 8:25 PM IST

ಬೆಂಗಳೂರು: ಮಾಜಿ ಸಚಿವ ಅಮರನಾಥ್ ಶೆಟ್ಟಿ ನಿಧನಕ್ಕೆ ಕಾಂಗ್ರೆಸ್ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಜಾತ್ಯತೀತ ಜನತಾ ದಳದ ಹಿರಿಯ ನಾಯಕ, ಮಾಜಿ ಸಚಿವ ಕೆ.ಅಮರನಾಥ್ ಶೆಟ್ಟಿ ಅವರ ನಿಧನದ ಸುದ್ದಿ ಕೇಳಿ ದು:ಖವಾಯಿತು. ಜನತಾ ದಳದಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಶೆಟ್ಟರು ತಮ್ಮ ಸರಳ-ಸಜ್ಜನಿಕೆಯ ಸ್ವಭಾವದಿಂದ ಜನಾನುರಾಗಿಯಾಗಿದ್ದರು. ಇವರ ಸಾವಿನ ಶೋಕದಲ್ಲಿರುವ ಕುಟುಂಬ ವರ್ಗದ ಜೊತೆ ನಾನೂ ಭಾಗಿಯಾಗಿದ್ದೇನೆ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

  • ಜಾತ್ಯತೀತ ಜನತಾ ದಳದ ಹಿರಿಯ ನಾಯಕ,
    ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅವರ ನಿಧನದ ಸುದ್ದಿ ಕೇಳಿ ದು:ಖವಾಯಿತು. ಜನತಾದಳದಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಶೆಟ್ಟರು ತಮ್ಮ ಸರಳ-ಸಜ್ಜನಿಕೆಯ ಸ್ವಭಾವದಿಂದ ಜನಾನುರಾಗಿಯಾಗಿದ್ದರು. ಇವರ ಸಾವಿನ ಶೋಕದಲ್ಲಿರುವ ಕುಟುಂಬ ವರ್ಗದ ಜೊತೆ ನಾನೂ ಭಾಗಿಯಾಗಿದ್ದೇನೆ,
    ನನ್ನ ಸಂತಾಪಗಳು. pic.twitter.com/j5cPg5NUPB

    — Siddaramaiah (@siddaramaiah) January 27, 2020 " class="align-text-top noRightClick twitterSection" data=" ">
  • ಇಂದು‌ ನಿಧನರಾದ ಸ್ನೇಹಿತ ಕೆ.ಅಮರನಾಥ ಶೆಟ್ಟಿ ಅವರ ಜೊತೆಗಿದ್ದ ಈ ಪೋಟೊ ಒಂದಷ್ಟು ಹಳೆಯ‌ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು.
    ಅಗಲಿದ ಜೀವಕ್ಕೆ ಮತ್ತೊಮ್ಮೆ ನನ್ನ ಸಂತಾಪಗಳು. pic.twitter.com/ilhdQ1Uwt9

ನಿಧನರಾದ ಸ್ನೇಹಿತ ಕೆ.ಅಮರನಾಥ್ ಶೆಟ್ಟಿ ಅವರ ಜೊತೆಗಿದ್ದ ಈ ಫೋಟೋ ಒಂದಷ್ಟು ಹಳೆಯ‌ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು. ಅಗಲಿದ ಜೀವಕ್ಕೆ ಮತ್ತೊಮ್ಮೆ ನನ್ನ ಸಂತಾಪಗಳು ಎಂದು ತಾವು ಅಮರನಾಥ್​ ಶೆಟ್ಟಿ ಹಾಗೂ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಇದ್ದ ಚಿತ್ರವನ್ನು ಸಿದ್ದರಾಮಯ್ಯ ಲಗತ್ತಿಸಿದ್ದಾರೆ.

ಇನ್ನು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ತಮ್ಮ ಟ್ವೀಟ್​ನಲ್ಲಿ, ಹಿರಿಯ ಮುಖಂಡ ಮತ್ತು ಮಾಜಿ ಸಚಿವ ಅಮರನಾಥ್​ ಶೆಟ್ಟಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಈ ನಷ್ಟವನ್ನು ಭರಿಸಲು ಸರ್ವಶಕ್ತನು ತನ್ನ ಕುಟುಂಬ ಮತ್ತು ಸ್ನೇಹಿತರಿಗೆ ಶಕ್ತಿಯನ್ನು ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.

  • Deeply saddened by the passing of Senior JD(S) leader and former minister Shri Amarnath Shetty. May the Almighty grant his family and friends the strength to bear this loss. My sincere condolences. #AmarnathShetty

    — Dr. G Parameshwara (@DrParameshwara) January 27, 2020 " class="align-text-top noRightClick twitterSection" data=" ">

ಇನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್, ಹೆಚ್.ಕೆ. ಪಾಟೀಲ್, ಆರ್.ವಿ ದೇಶಪಾಂಡೆ ಸೇರಿದಂತೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.

Intro:newsBody:ಮಾಜಿ ಸಚಿವ ಅಮರನಾಥ ಶೆಟ್ಟಿ ನಿಧನಕ್ಕೆ ಕಾಂಗ್ರೆಸ್ ನಾಯಕರು ಸಂತಾಪ

ಬೆಂಗಳೂರು: ಮಾಜಿ ಸಚಿವ ಅಮರನಾಥ ಶೆಟ್ಟಿ ನಿಧನಕ್ಕೆ ಕಾಂಗ್ರೆಸ್ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಜಾತ್ಯತೀತ ಜನತಾ ದಳದ ಹಿರಿಯ ನಾಯಕ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅವರ ನಿಧನದ ಸುದ್ದಿ ಕೇಳಿ ದು:ಖವಾಯಿತು. ಜನತಾದಳದಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಶೆಟ್ಟರು ತಮ್ಮ ಸರಳ-ಸಜ್ಜನಿಕೆಯ ಸ್ವಭಾವದಿಂದ ಜನಾನುರಾಗಿಯಾಗಿದ್ದರು. ಇವರ ಸಾವಿನ ಶೋಕದಲ್ಲಿರುವ ಕುಟುಂಬ ವರ್ಗದ ಜೊತೆ ನಾನೂ ಭಾಗಿಯಾಗಿದ್ದೇನೆ, ನನ್ನ ಸಂತಾಪಗಳು ಎಂದಿದ್ದಾರೆ.
ಇಂದು‌ ನಿಧನರಾದ ಸ್ನೇಹಿತ ಕೆ.ಅಮರನಾಥ ಶೆಟ್ಟಿ ಅವರ ಜೊತೆಗಿದ್ದ ಈ ಪೋಟೊ ಒಂದಷ್ಟು ಹಳೆಯ‌ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು.
ಅಗಲಿದ ಜೀವಕ್ಕೆ ಮತ್ತೊಮ್ಮೆ ನನ್ನ ಸಂತಾಪಗಳು ಎಂದು ತಾವು ಅಮರ್ನಾಥ್ ಶೆಟ್ಟಿ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಇದ್ದ ಚಿತ್ರವನ್ನು ಲಗತ್ತಿಸಿದ್ದಾರೆ.
ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ತಮ್ಮ ಟ್ವೀಟ್ ನಲ್ಲಿ, ಹಿರಿಯ ಜೆಡಿಯು ಮುಖಂಡ ಮತ್ತು ಮಾಜಿ ಸಚಿವ ಶ್ರೀ ಅಮರನಾಥ ಶೆಟ್ಟಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಈ ನಷ್ಟವನ್ನು ಭರಿಸಲು ಸರ್ವಶಕ್ತನು ತನ್ನ ಕುಟುಂಬ ಮತ್ತು ಸ್ನೇಹಿತರಿಗೆ ಶಕ್ತಿಯನ್ನು ನೀಡಲಿ. ನನ್ನ ಪ್ರಾಮಾಣಿಕ ಸಂತಾಪ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಮಾಜಿ ಸಚಿವರಾದ ಡಿ ಕೆ ಶಿವಕುಮಾರ್ ಎಂಬಿ ಪಾಟೀಲ್ ಎಚ್.ಕೆ. ಪಾಟೀಲ್ ಆರ್ ವಿ ದೇಶಪಾಂಡೆ ಸೇರಿದಂತೆ ಹಲವು ನಾಯಕರು ಸಂತಾಪ ಸಂತಾಪ ಸೂಚಿಸಿದ್ದಾರೆ.

Conclusion:news

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.