ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿರುವ ಡಿ.ಕೆ.ಶಿವಕುಮಾರ್ ಇಂದು 61ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬೆಂಬಲಿಗರು, ಅಭಿಮಾನಿಗಳು ಸೇರಿದಂತೆ ಪಕ್ಷದ ಕಾರ್ಯಕರ್ತರು ಹುಟ್ಟಿದ ದಿನವನ್ನು ವಿಶೇಷವಾಗಿ ಆಚರಣೆ ಮಾಡುತ್ತಿದ್ದಾರೆ. ಕಳೆದ ರಾತ್ರಿಯೇ ಕೈ ಮುಖಂಡರು ಒಟ್ಟು ಸೇರಿ ಡಿಕೆಶಿ ಹುಟ್ಟುಹಬ್ಬ ಆಚರಿಸಿ ಶುಭ ಹಾರೈಸಿದ್ದಾರೆ.
-
#WATCH | Bengaluru: Karnataka Congress president DK Shivakumar meets his supporters who have gathered at his residence to wish him on his birthday today pic.twitter.com/6DKdXo62qQ
— ANI (@ANI) May 15, 2023 " class="align-text-top noRightClick twitterSection" data="
">#WATCH | Bengaluru: Karnataka Congress president DK Shivakumar meets his supporters who have gathered at his residence to wish him on his birthday today pic.twitter.com/6DKdXo62qQ
— ANI (@ANI) May 15, 2023#WATCH | Bengaluru: Karnataka Congress president DK Shivakumar meets his supporters who have gathered at his residence to wish him on his birthday today pic.twitter.com/6DKdXo62qQ
— ANI (@ANI) May 15, 2023
ತಡರಾತ್ರಿ 12 ಗಂಟೆಯ ಸುಮಾರಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಮುಖಂಡರ ಸಮ್ಮುಖದಲ್ಲಿ ಡಿಕೆಶಿ ಕೇಕ್ ಕತ್ತರಿಸಿದರು. ಇಂದು ಬೆಳಗ್ಗೆಯೂ ಡಿಕೆಶಿ ನಿವಾಸದ ಬಳಿ ಅಭಿಮಾನಿಗಳು ಸೇರಿದಂತೆ ಪಕ್ಷದ ಕಾರ್ಯಕರ್ತರು ಜಮಾಯಿಸಿ ಶುಭ ಕೋರಿದ್ದಾರೆ.
-
My life is dedicated to serving the people of Karnataka.
— DK Shivakumar (@DKShivakumar) May 14, 2023 " class="align-text-top noRightClick twitterSection" data="
On the eve of my birthday, the people of Karnataka gave me the best birthday gift possible.
Thanks to my Congress family for their warm greetings. #JaiKarnataka pic.twitter.com/j6RP30vX8k
">My life is dedicated to serving the people of Karnataka.
— DK Shivakumar (@DKShivakumar) May 14, 2023
On the eve of my birthday, the people of Karnataka gave me the best birthday gift possible.
Thanks to my Congress family for their warm greetings. #JaiKarnataka pic.twitter.com/j6RP30vX8kMy life is dedicated to serving the people of Karnataka.
— DK Shivakumar (@DKShivakumar) May 14, 2023
On the eve of my birthday, the people of Karnataka gave me the best birthday gift possible.
Thanks to my Congress family for their warm greetings. #JaiKarnataka pic.twitter.com/j6RP30vX8k
ಈ ಬಗ್ಗೆ ಡಿಕೆಶಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, "ನನ್ನ ಜೀವನ ಕರ್ನಾಟಕದ ಜನರ ಸೇವೆಗೆ ಮುಡುಪಾಗಿದೆ. ಹುಟ್ಟುಹಬ್ಬದ ಮುನ್ನಾದಿನ ಕರ್ನಾಟಕದ ಜನರು ನನಗೆ ಅತ್ಯುತ್ತಮ ಹುಟ್ಟುಹಬ್ಬದ ಉಡುಗೊರೆ ನೀಡಿದ್ದಾರೆ. ಅವರ ಆತ್ಮೀಯ ಶುಭಾಶಯಗಳಿಗಾಗಿ ಹಾಗೂ ನನ್ನ ಕಾಂಗ್ರೆಸ್ ಕುಟುಂಬಕ್ಕೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.
ಪಕ್ಷದ ಸಭೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ಗೆ ಆಗಮಿಸಿರುವ ಅವರು ಪಕ್ಷದ ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ.
-
#WATCH | Karnataka Congress president DK Shivakumar arrives at Shangri-la Hotel in Bengaluru to meet party MLAs pic.twitter.com/kvY950Smtj
— ANI (@ANI) May 15, 2023 " class="align-text-top noRightClick twitterSection" data="
">#WATCH | Karnataka Congress president DK Shivakumar arrives at Shangri-la Hotel in Bengaluru to meet party MLAs pic.twitter.com/kvY950Smtj
— ANI (@ANI) May 15, 2023#WATCH | Karnataka Congress president DK Shivakumar arrives at Shangri-la Hotel in Bengaluru to meet party MLAs pic.twitter.com/kvY950Smtj
— ANI (@ANI) May 15, 2023
ಮೇ 10 ರಂದು 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆಯಿತು. ಡಿ.ಕೆ.ಶಿವಕುಮಾರ್ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕನಕಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು 1ಲಕ್ಷದ 20 ಸಾವಿರಕ್ಕೂ ಅಧಿಕ ಮತ ಪಡೆದು, 8ನೇ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದಾರೆ. ಇವರ ಪ್ರತಿಸ್ಪರ್ಧಿಗಳಾದ ಜೆಡಿಎಸ್ನ ನಾಗರಾಜ 20,561 ಮತಗಳು ಹಾಗೂ ಆರ್.ಅಶೋಕ್ ಕೇವಲ 19,602 ಮತಗಳನ್ನು ಪಡೆದಿದ್ದರು.
ಇದನ್ನೂ ಓದಿ: ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ, ಶೀಘ್ರದಲ್ಲೇ ಹೊಸ ಸಿಎಂ ಘೋಷಣೆ: ಸುರ್ಜೇವಾಲಾ