ETV Bharat / state

ಈ ಹಿಂದಿನಂತೆ ಮುಂದಿನ ಚುನಾವಣೆ ಸುಲಭದ್ದಲ್ಲ: ಈಗಿಂದಲೇ ಸಿದ್ಧರಾಗಿ ಎಂದು ಶಾಸಕರಿಗೆ ರಾಹುಲ್ ಕರೆ - Congress leader rahul gandhi karnataka visit

ಎರಡು ದಿನದ ಭೇಟಿ ಪ್ರಯುಕ್ತ ರಾಜ್ಯಕ್ಕೆ ಆಗಮಿಸಿರುವ ರಾಹುಲ್ ಗಾಂಧಿ ಇಂದು ದಿನವಿಡೀ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಹಿಂಭಾಗದ ರಾಜೀವ್ ಗಾಂಧಿ ಭವನದಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಿದರು.

congress-leader-rahul-gandhi-meeting-with-mlas
ಈ ಹಿಂದಿನಂತೆ ಮುಂಬರುವ ಚುನಾವಣೆ ಸುಲಭದ್ದಲ್ಲ: ಈಗಿಂದಲೇ ಸಿದ್ಧರಾಗಿ ಎಂದು ಶಾಸಕರಿಗೆ ರಾಹುಲ್ ಕರೆ
author img

By

Published : Apr 1, 2022, 5:59 PM IST

ಬೆಂಗಳೂರು: ಬಿಜೆಪಿಯ ತಂತ್ರಗಾರಿಕೆ ಹಾಗೂ ಒಡೆದು ಆಳುವ ನೀತಿಯ ವಿರುದ್ಧ ಹಿಂದಿನಷ್ಟು ಸುಗಮವಾಗಿ ಸೆಣೆಸುವುದು ಕಷ್ಟ. ಕಳೆದ ಚುನಾವಣೆಯಷ್ಟು ಮುಂದಿನ ಚುನಾವಣೆ ಸುಲಭದ್ದಲ್ಲ, ಗೆಲುವಿಗಾಗಿ ಈಗಿನಿಂದಲೇ ಶ್ರಮಿಸಿ ಎಂದು ಮೊದಲ ಬಾರಿ ಆಯ್ಕೆಯಾದ ಕಾಂಗ್ರೆಸ್ ಶಾಸಕರಿಗೆ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ ಕೊಟ್ಟಿದ್ದಾರೆ.

ಎರಡು ದಿನದ ಭೇಟಿ ಪ್ರಯುಕ್ತ ರಾಜ್ಯಕ್ಕೆ ಆಗಮಿಸಿರುವ ರಾಹುಲ್ ಗಾಂಧಿ ಇಂದು ದಿನವಿಡೀ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಹಿಂಭಾಗದ ರಾಜೀವ್ ಗಾಂಧಿ ಭವನದಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಿದ್ದಾರೆ. ಮಧ್ಯಾಹ್ನ ಭೋಜನ ವಿರಾಮದ ವೇಳೆ ರಾಜ್ಯದಲ್ಲಿ ಮೊದಲ ಬಾರಿ ಆಯ್ಕೆಯಾಗಿರುವ 21 ವಿಧಾನಸಭೆ ಸದಸ್ಯರು ಸೇರಿದಂತೆ ಒಟ್ಟು 35ಕ್ಕೂ ಹೆಚ್ಚು ಶಾಸಕರ ಜೊತೆ ಸಭೆ ನಡೆಸಿದ್ದರು.

ನೂತನ ಶಾಸಕರ ಜೊತೆ ನಡೆಸಿದ ಸಂವಾದ ಸಂದರ್ಭದಲ್ಲಿ ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿ. ಬಿಜೆಪಿ ಧರ್ಮ ಹಾಗೂ ಜಾತಿ ಒಡೆದು ಚುನಾವಣೆ ಎದುರಿಸುವ ಪ್ರಯತ್ನ ನಡೆಸಿದೆ. ಜನರನ್ನು ಭಾವನಾತ್ಮಕ ವಿಚಾರಗಳ ಮೂಲಕ ಸೆಳೆಯುತ್ತಿದ್ದು, ಈ ಸಂದರ್ಭದಲ್ಲಿ ತಮ್ಮ ಕ್ಷೇತ್ರಗಳಲ್ಲಿ ಗೆಲುವು ಅಷ್ಟು ಸುಲಭ ಸಾಧ್ಯವಲ್ಲ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ವಿಶ್ವಾಸ ಗಳಿಸುವ ಜೊತೆಗೆ ಮತದಾರರಿಗೆ ಹತ್ತಿರವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಚುನಾವಣೆ ತಯಾರಿ ಆರಂಭಿಸಿ, ಗೆಲ್ಲಲು ರಣತಂತ್ರ ರೂಪಿಸಿ ಎಂದು ಮೊದಲ ಬಾರಿ ಆಯ್ಕೆಯಾದ ಶಾಸಕರಿಗೆ ಕರೆಕೊಟ್ಟರು.

ಕಾರ್ಯತಂತ್ರ ಹೆಣೆಯಿರಿ: ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ, ಕಾರ್ಯಕರ್ತರಿಗೆ ಹುರಿದುಂಬಿಸುವ ಕಾರ್ಯ ರೂಪಿಸಿ. ಕಾಂಗ್ರೆಸ್ ಸಿದ್ಧಾಂತಕ್ಕೆ ಬದ್ಧವಾಗಿ ನಡೆಯಿರಿ. ಹಿರಿಯ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ಪಡೆದು ಮುನ್ನಡೆಯಿರಿ. ಯುವ ನಾಯಕತ್ವ ರೂಪಿಸುವ ಕಾರ್ಯ ಮಾಡಿ. ಬಿಜೆಪಿ ಜಾತಿ ಮತ್ತು ಧರ್ಮ ಆಧಾರಿತ ರಾಜಕಾರಣ ಮಾಡುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಅಭಿವೃದ್ಧಿಪರ ಚಿಂತನೆಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಿ. ಪ್ರತಿಯೊಬ್ಬ ಕಾರ್ಯಕರ್ತನನ್ನು ವಿಶ್ವಾಸಕ್ಕೆ ಪಡೆಯಿರಿ. ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆಯಿರಿ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಿ. ಜನರ ಆಶೋತ್ತರಗಳನ್ನು ಈಡೇರಿಸುವ ಮೂಲಕ ಮನಗೆಲ್ಲಿ. ಹೀಗಾದಲ್ಲಿ ಮತ್ತೊಂದು ಬಾರಿ ಆಯ್ಕೆಯೂ ಸುಲಭವಾಗುತ್ತದೆ ಎಂದು ಕಿವಿಮಾತು ನೀಡಿದರು.

ಸಭೆಯಲ್ಲಿ ಶಾಸಕರಾದ ಸೌಮ್ಯ ರೆಡ್ಡಿ, ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಆನಂದ ನ್ಯಾಮಗೌಡ, ಬಸನಗೌಡ ತುರ್ವೀಹಾಳ, ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ರೂಪಾ ಶಶಿಧರ್, ರಿಜ್ವಾನ್ ಅರ್ಷದ್, ಶ್ರೀನಿವಾಸ್ ಮಾನೆ, ರಾಜೇಗೌಡ ಸೇರಿದಂತೆ ಪ್ರಥಮ ಬಾರಿ ಆಯ್ಕೆಯಾದ ಎಲ್ಲಾ ಕಾಂಗ್ರೆಸ್ ಶಾಸಕರು ಭಾಗಿಯಾಗಿದ್ದರು.

ಇದನ್ನೂ ಓದಿ: ರಷ್ಯಾದ ಮೇಲೆಯೇ ವಾಯುದಾಳಿ ನಡೆಸಿದ ಉಕ್ರೇನ್​...ಇದು ಮೊದಲ ಏರ್​ಸ್ಟ್ರೈಕ್​ ಎಂದ ರಷ್ಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.