ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ವಿಶ್ವಾಸಮತ ಯಾಚನೆ ಸಂಬಂಧ ಬೆಳಗ್ಗೆಯಿಂದಲೂ ಚರ್ಚೆ ನಡೆಯುತ್ತಿದ್ದು, ವಿಧಾನಸಭೆ ಕಲಾಪವನ್ನು ಸ್ಪೀಕರ್ ರಮೇಶ್ ಕುಮಾರ್ ಮಧ್ಯಾಹ್ನ 3ಗಂಟೆಗೆ ಕಲಾಪ ಮುಂದೂಡಿದ್ದಾರೆ.
ಇದರ ಮಧ್ಯೆ ಕಾಂಗ್ರೆಸ್ ಡಿಕೆ ಶಿವಕುಮಾರ್ ಹಾಗೂ ಬಿಜೆಪಿ ಶ್ರೀರಾಮುಲು ಸದನದಲ್ಲಿ ಪರಸ್ಪರ ಭೇಟಿ ಮಾಡಿ ಮಾತನಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸದನ ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಿಕೆಯಾಗುತ್ತಿದ್ದಂತೆ ಉಭಯ ನಾಯಕರು ಒಂದೇ ಸ್ಥಳದಲ್ಲಿ ನಿಂತು ಕೆಲ ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಆದರೆ ಅವರು ಯಾವ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಶ್ರೀರಾಮುಲು ಸ್ಪಷ್ಟನೆ
ನಾನು ಊಟಕ್ಕೆ ಹೋಗುವುದು ತಡವಾಗಿತ್ತು. ಆಗ ಸಿಎಂ ಕುಮಾರಸ್ವಾಮಿ ಮಾತನಾಡುತ್ತಿದ್ದರು. ಇದೇ ವೇಳೆ ಡಿಕೆಶಿ ಮಾತನಾಡಿದರು. ಹೀಗಾಗಿ ಡಿಕೆಶಿ ಮಾತನಾಡಿಸಿದರು. ಅದು ನನಗೆ ಅರ್ಥವಾಗಲಿಲ್ಲ .ಹೀಗಾಗಿ ನಾನು ಮಾತನಾಡಿರುವೆ. ನಾನು ಟಿವಿ ನೋಡಿದ ಮೇಲೆ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಬೇಕಾದರೆ ಅವರೇ ನಮ್ಮ ಪಕ್ಷಕ್ಕೆ ಬರಲಿ. ನಾನು ಯಾಕೆ ಅಲ್ಲಿಗೆ ಹೋಗಲಿ ಎಂದು ಶ್ರೀರಾಮುಲು ಹೇಳಿದ್ದಾರೆ.