ಬೆಂಗಳೂರು: ವಿಕಾಸಸೌಧದಲ್ಲಿ ಸಚಿವ ವಿ.ಸೋಮಣ್ಣ ಕಚೇರಿ ಪೂಜೆಯಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಸಚಿವ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಇಂಥ ದಾಳಿಗಳು ಆಗಿವೆ. ಬಿಜೆಪಿ ಸರ್ಕಾರವಿದ್ದಾಗ ಮಾತ್ರ ಈ ಥರ ನಡೆಯುತ್ತಿಲ್ಲ. ಇಡಿ, ಸಿಬಿಐ ಸ್ವಾಯತ್ತ ಸಂಸ್ಥೆಗಳಾಗಿವೆ. ಅದಕ್ಕೆ ರಾಜಕೀಯ ಲೇಪ ನೀಡುವುದು ಸರಿಯಲ್ಲ ಎಂದರು.
ಈಗ ಕಾನೂನಾತ್ಮಕವಾಗಿ ನಡೆಯುತ್ತಿದೆ. ಅವರು ವಿವರಣೆಗಾಗಿ ನೋಟಿಸ್ ನೀಡಿದ್ದಾರೆ. ಬೇರೆ ಏನೂ ಆಗಿಲ್ಲ. ಅದನ್ನೇ ರಾಜಕಾರಣ ಅನ್ನೋದು ಸರಿಯಲ್ಲ. ಹಾಗಾದರೆ ಯಡಿಯೂರಪ್ಪ ಅವರ ಮೇಲೂ ಬಹಳಷ್ಟು ಪ್ರಕರಣಗಳು ದಾಖಲಾಗಿವೆ. ಆವಾಗ ಇವರ್ಯಾರೂ ಅದು ರಾಜಕರಣ ಅಂಥ ಹೇಳಿಲ್ಲ. ಇವರ ಮೇಲೆ ಏನಾದರು ಆದರೆ ಅದನ್ನು ರಾಜಕಾರಣ ಅಂತಾರೆ. ಅದೇ ಯಡಿಯೂರಪ್ಪ, ಅಮಿತ್ ಶಾ, ಮೋದಿ ಮೇಲೆ ಏನಾದರು ಆದರೆ ಅದನ್ನು ಯಾರೂ ರಾಜಕಾರಣ ಅಂಥ ಅವರು ಅನ್ನಲ್ಲ. ಇದರಿಂದ ರಾಜಕೀಯ ಲಾಭ ಪಡೆಯುವ ಅವಶ್ಯಕತೆಯೂ ನಮಗೆ ಇಲ್ಲ. ಇದರಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲ. ಅದನ್ನು ಮಾಡುವುದೂ ಇಲ್ಲ ಎಂದು ತಿಳಿಸಿದರು.
ಮತ್ತೆ ಡಿಕೆಶಿ ಬೆನ್ನಿಗೆ ನಿಂತ ಮಾಜಿ ಸಿಎಂ... ಟ್ವೀಟ್ ಮೂಲಕ ಹೆಚ್ಡಿಕೆ ಹೇಳಿದ್ದೇನು?
ಮಧ್ಯಂತರ ಚುನಾವಣೆ ಬರುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ, ಅವರ ಸರ್ಕಾರ ಈಗ ಹೋಗಿದೆ. ಅವರ ಕೈಯ್ಯಲ್ಲಿ ಸುಮ್ಮನೆ ನಿಲ್ಲಕ್ಕೆ ಆಗುತ್ತಿಲ್ಲ. ಅಧಿಕಾರ ಬಿಟ್ಟು ಅವರಿಗೆ ಇರುವುದಕ್ಕೆ ಸಾಧ್ಯವೇ ಇಲ್ಲ. ಅಧಿಕಾರ ಹೋಗಿದೆ ಎಂಬ ವ್ಯಥೆಗೆ ಈ ರೀತಿ ಹೇಳುತ್ತಿದ್ದಾರೆ. ಅದರಲ್ಲಿ ಯಾವುದೇ ರೀತಿಯ ಹುರುಳೂ ಇಲ್ಲ ತಿರುಳೂ ಇಲ್ಲ. ಮಧ್ಯಂತರ ಚುನಾವಣೆ ಬರಲ್ಲ ಎಂದು ಸ್ಪಷ್ಟಪಡಿಸಿದರು.
ಪಿಎಂ ರಾಜ್ಯಕ್ಕೆ ಬಂದಾಗ ಮನವಿ ಮಾಡುತ್ತೇವೆ:
ಪ್ರಧಾನಮಂತ್ರಿ ರಾಜ್ಯಕ್ಕೆ ಬರಲಿದ್ದಾರೆ. ಆವಾಗ ನಾವು ಪರಿಹಾರ ಸಂಬಂಧ ಮನವಿ ಮಾಡಲಿದ್ದೇವೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಬಹಳಷ್ಟು ರಾಜ್ಯಗಳಲ್ಲಿ ಪ್ರವಾಹ ಉಂಟಾಗಿದೆ. ನಾವು ಪ್ರವಾಹ ಹಾನಿ ಸಂಬಂಧ ಮನವಿಯನ್ನು ಸಲ್ಲಿಕೆ ಮಾಡಿದ್ದೇವೆ. ಸುಮಾರು 38 ಸಾವಿರ ಕೋಟಿ ರೂ. ನಷ್ಟ ಆಗಿದೆ. ಮೊದಲ ಕಂತಿನಲ್ಲಿ ಪರಿಹಾರ ನೀಡುವ ವಿಶ್ವಾಸ ಇದೆ ಎಂದರು.
ಈಗಾಗಲೇ ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡುತ್ತಿದ್ದಾರೆ. ನಾನು ಮತ್ತು ಸಿಎಂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ನಮ್ಮ ಮೊದಲ ಆದ್ಯತೆ ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಹತ್ತು ಸಾವಿರ ರೂ. ನೀಡುವುದು. ಅದು ಫಲಾನುಭವಿಗಳಿಗೆ ಮುಟ್ಟಬೇಕು. ಅದು ದುರುಪಯೋಗ ಆಗಬಾರದು. ಆದ್ಯತೆ ಮೇರೆಗೆ ಅದನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಯಾರ ಮೃತದೇಹ ಸಿಕ್ಕಿಲ್ಲ. ಅಂಥ ಪ್ರಕರಣಗಳಲ್ಲಿ ಕಾನೂನಾತ್ಮಕವಾಗಿ ಪೊಲೀಸ್ ಇಲಾಖೆ ಮೃತರಾಗಿರುವ ಬಗ್ಗೆ ಘೋಷಿಸಬೇಕು. ಅವರಿಗೂ ಐದು ಲಕ್ಷ ರೂ. ಪರಿಹಾರ ನೀಡಲಾಗುವುದು. ಪ್ರವಾಹ ಪೀಡಿತ ಅಧಿಕಾರಿಗಳು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಮಾಡಬೇಕು. ಮಾಡಿಸುವಂಥ ಜವಾಬ್ದಾರಿ ಸರ್ಕಾರದ್ದು. ಯಾವುದೇ ರಜೆ, ಗೈರಾಗದೇ ಕೆಲಸ ನಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.