ETV Bharat / state

ಬಿಜೆಪಿ ಸರ್ಕಾರದ ಪ್ರಹಾರ ತಡೆಯಲು ಕಾಂಗ್ರೆಸ್-ಜೆಡಿಎಸ್ ವಿಫಲ!?

ಜೆಡಿಎಸ್ ಸದಸ್ಯರು ತಮ್ಮ ಸ್ವಂತ ಅಭಿಪ್ರಾಯಗಳ ಮೇಲೆ ಈ ಬಾರಿ ವಿಧಾನಪರಿಷತ್‍ನಲ್ಲಿ ವಿಧೇಯಕಕ್ಕೆ ಬೆಂಬಲ ನೀಡಿದ್ದರು. ಹೀಗಾಗಿ ಭೂ ಸುಧಾರಣಾ ವಿಧೇಯಕ ಅಂಗೀಕಾರಗೊಂಡಿತ್ತು. ಎಪಿಎಂಸಿ ಕಾಯ್ದೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ವಿರೋಧಿಸಿದ್ದವಾದರೂ ವಿಭಜನೆಯ ಮತಕ್ಕೆ ಹಾಕದೆ ಪರೋಕ್ಷವಾಗಿ ವಿಧೇಯಕ ಜಾರಿಯಾಗಲು ಸಹಕಾರ ನೀಡಿದ್ದವು.

congress-jds-fails-to-stop-bjp-govt-lash
ಬಿಜೆಪಿ ಸರ್ಕಾರದ ಪ್ರಹಾರ ತಡೆಯಲು ಕಾಂಗ್ರೆಸ್-ಜೆಡಿಎಸ್ ವಿಫಲ
author img

By

Published : Dec 10, 2020, 6:04 PM IST

ಬೆಂಗಳೂರು: ರಾಜಕೀಯವಾಗಿ ಪ್ರತಿಪಕ್ಷಗಳ ಮೇಲೆ ನಡೆಸುತ್ತಿರುವ ಬಿಜೆಪಿ ಸರ್ಕಾರದ ಪ್ರಹಾರವನ್ನು ತಡೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ವಿಫಲವಾಗಿವೆ ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ.

ಒಂದು ಹಂತದಲ್ಲಿ ಆಡಳಿತಾರೂಢ ಬಿಜೆಪಿ ಜತೆ ಜೆಡಿಎಸ್ ಕೈಜೋಡಿಸಿದಂತೆ ಕಂಡುಬಂದರೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಲೇ ತನ್ನ ಧ್ವನಿ ಕಳೆದುಕೊಳ್ಳುತ್ತಿದೆ.
ಐತಿಹಾಸಿಕ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಮಸೂದೆಗಳ ವಿರುದ್ಧ ಕಾಂಗ್ರೆಸ್ ಸದನದ ಒಳಗೆ ಮತ್ತು ಹೊರಗೆ ಗರಿಷ್ಠ ಮಟ್ಟದ ಹೋರಾಟ ನಡೆಸಿತ್ತು. ಆದರೆ, ಸದನದ ಒಳಗೆ ವಿಧೇಯಕ ಅಂಗೀಕಾರ ತಡೆಯುವಲ್ಲಿ ವಿಫಲವಾಯಿತು. ವಿಧಾನಸಭೆಯಲ್ಲಿ ಸಂಖ್ಯಾಬಲದ ಕೊರತೆ ಇದೆ ಎಂಬ ಕಾರಣಕ್ಕಾಗಿ ಮಸೂದೆ ಅಂಗೀಕಾರವಾದರೂ ಕಾಂಗ್ರೆಸ್ ತನ್ನ ಮೇಲಿನ ಆರೋಪದಿಂದ ವಿನಾಯಿತಿ ಪಡೆಯಲು ಅವಕಾಶವಿತ್ತು. ಆದರೆ, ವಿಧಾನ ಪರಿಷತ್‍ನಲ್ಲಿ ಸ್ಪಷ್ಟವಾದ ಕಾರ್ಯತಂತ್ರ ರೂಪಿಸದೆ ಭೂ ಸುಧಾರಣೆ ಮತ್ತು ಎಪಿಎಂಸಿ ವಿಧೇಯಕಗಳು ಅಂಗೀಕಾರಗೊಳ್ಳಲು ಅವಕಾಶ ನೀಡಿದೆ. ಮತ್ತೊಂದು ಪ್ರತಿಪಕ್ಷ ಜೆಡಿಎಸ್ ಜತೆ ಮುಂಚಿತವಾಗಿ ಮಾತುಕತೆ ನಡೆಸಿ ಬೆಂಬಲ ಪಡೆದುಕೊಂಡಿದ್ದರೆ ವಿಧಾನ ಪರಿಷತ್‍ನಲ್ಲಿ ಮತ್ತೊಂದು ಬಾರಿ ವಿಧೇಯಕವನ್ನು ಸೋಲಿಸಲು ಎಲ್ಲಾ ಅವಕಾಶಗಳಿದ್ದವು. ಆದರೆ, ಅದು ಕಾಂಗ್ರೆಸ್​ಗೆ ಸಾಧ್ಯವಾಗಲಿಲ್ಲ.

ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಅರ್ಧ ರಾತ್ರಿವರೆಗೂ ಅಧಿವೇಶನ ನಡೆದರೂ ಭೂ ಸುಧಾರಣೆ ಮತ್ತು ಎಂಪಿಎಂಸಿ ವಿಧೇಯಕಗಳು ಅಂಗೀಕಾರಗೊಂಡಿರಲಿಲ್ಲ. ಆ ಸಂದರ್ಭದಲ್ಲಿ ಜೆಡಿಎಸ್ ನಾಯಕರು ವಿಧೇಯಕಕ್ಕೆ ವಿರುದ್ಧವಾಗಿದ್ದರು. ನಂತರದ ಹೋರಾಟ ಅಥವಾ ಹೇಳಿಕೆಗಳಲ್ಲಿ ಕಲಾಪದಲ್ಲಿ ವಿಧೇಯಕಕ್ಕೆ ಉಂಟಾದ ಸೋಲನ್ನು ಕಾಂಗ್ರೆಸ್ ತನ್ನ ಸಾಧನೆ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡಿತ್ತು.

ಜೆಡಿಎಸ್ ಸದಸ್ಯರು ತಮ್ಮ ಸ್ವಂತ ಅಭಿಪ್ರಾಯಗಳ ಮೇಲೆ ಈ ಬಾರಿ ವಿಧಾನಪರಿಷತ್‍ನಲ್ಲಿ ವಿಧೇಯಕಕ್ಕೆ ಬೆಂಬಲ ನೀಡಿದ್ದರು. ಹೀಗಾಗಿ ಭೂ ಸುಧಾರಣಾ ಕಾಯ್ದೆ ಅಂಗೀಕಾರಗೊಂಡಿತ್ತು, ಎಪಿಎಂಸಿ ಕಾಯ್ದೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ವಿರೋಧಿಸಿದ್ದವಾದರೂ ವಿಭಜನೆಯ ಮತಕ್ಕೆ ಹಾಕದೆ ಪರೋಕ್ಷವಾಗಿ ಕಾಯ್ದೆ ಜಾರಿಯಾಗಲು ಸಹಕಾರ ನೀಡಿದ್ದವು.

ಓದಿ: 'ಶೈಕ್ಷಣಿಕ ವರ್ಷ ಪ್ರಾರಂಭದ ಬಳಿಕ ಅತಿಥಿ ಉಪನ್ಯಾಸಕರ ನೇಮಕ'

ಈ ಮಧ್ಯೆ ಆಡಳಿತಾರೂಢ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಿಕೊಂಡಿದೆ. ವಿಧಾನಪರಿಷತ್‍ನಲ್ಲಿ ಈ ಮಸೂದೆ ಮಂಡನೆಯಾದಾಗ ಮತ್ತೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸಭಾತ್ಯಾಗ ಮಾಡಿ ಕಾಯ್ದೆ ಅಂಗೀಕಾರಕ್ಕೆ ಅವಕಾಶ ನೀಡಿವೆ. ವಿಧಾನಸಭೆಯಲ್ಲಂತೂ ಬಿಜೆಪಿಗೆ ಪೂರ್ಣ ಪ್ರಮಾಣದ ಬೆಂಬಲವಿದೆ. ಆದರೆ, ವಿಧಾನಪರಿಷತ್‍ನಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ನಿಂತಿದ್ದರೆ ವಿಧೇಯಕಗಳು ಗೆಲ್ಲಲು ಅವಕಾಶಗಳು ಇರುತ್ತಿರಲಿಲ್ಲ. ಆದರೆ, ಎರಡು ಪಕ್ಷಗಳ ನಾಯಕರ ಸ್ವ ಪ್ರತಿಷ್ಠೆಯಿಂದಾಗಿ ಜನರ ವಿರೋಧಕ್ಕೆ ಕಾರಣವಾಗಿದ್ದ ವಿಧೇಯಕಗಳು ಅಂಗೀಕಾರಗೊಂಡಿವೆ.

ಮುಂದಿನ ದಿನಗಳಲ್ಲಿ ವಿಧೇಯಕಗಳನ್ನು ಮುಂದಿಟ್ಟುಕೊಂಡೇ ರಾಜಕಾರಣ ಮಾಡುವುದಾಗಿ, ಜನತಾ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಕೈಯಲ್ಲಿದ್ದ ಅವಕಾಶಗಳನ್ನು ಸುಲಭವಾಗಿ ಕೈ ಚೆಲ್ಲಿ ಜನತಾ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇವೆ ಎಂಬ ಕೈ ನಾಯಕರ ಧೋರಣೆ ಚರ್ಚೆಗೆ ಗ್ರಾಸವಾಗಿದೆ.
ವಿಧಾನಪರಿಷತ್‍ನಲ್ಲಿ ಸಭಾಪತಿ ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್ಸಿಗರು ತೆರೆಮರೆಯಲ್ಲಿ ಜೆಡಿಎಸ್ ನಾಯಕರ ಜತೆ ಸಂಧಾನದ ಪ್ರಯತ್ನ ನಡೆಸಲು ಪ್ರಯತ್ನಿಸಿದ್ದಾರೆ. ಆದರೆ, ಜನವಿರೋಧಿ ಎಂಬ ಟೀಕೆಗೆ ಒಳಗಾಗಿದ್ದ ಕಾಯ್ದೆಗಳನ್ನು ಹಿಮ್ಮೆಟ್ಟಿಸುವಾಗ ಈ ರೀತಿಯ ಸಂಧಾನ ಮಾತುಕತೆ ಏಕೆ ನಡೆಯಲಿಲ್ಲ ಎಂಬ ಪ್ರಶ್ನೆಗಳು ಎದುರಾಗಿವೆ.

ಬಿಜೆಪಿ ಹೇಳುವಂತೆ ಈ ಕಾಯ್ದೆಗಳ ಮೂಲ ಜನಕ ಕಾಂಗ್ರೆಸ್ ಪಕ್ಷ. ಅದರ ಪರಿಷ್ಕೃತ ವಿಧೇಯಕವನ್ನು ಮಾತ್ರ ಜಾರಿಗೆ ತರುತ್ತಿರುವುದಾಗಿ ಸರ್ಕಾರ ಹೇಳುತ್ತಿದೆ.
ಕಾಯ್ದೆ ಅಂಗೀಕಾರಗೊಳ್ಳಲು ಕಾಂಗ್ರೆಸ್ ಅವಕಾಶ ಕೊಟ್ಟಿದ್ದನ್ನು ನೋಡಿದರೆ ಇವರ ವಿರೋಧ ರಾಜಕೀಯ ಬೂಟಾಟಿಕೆ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಸದನದ ಒಳಗಿದ್ದು ಕಾಂಗ್ರೆಸ್‍ನ ನಿಲುವನ್ನು ಸ್ಪಷ್ಟಪಡಿಸಬೇಕಿತ್ತು. ಸದನ ಬಹಿಷ್ಕರಿಸಿ ಬಿಜೆಪಿ ಸರ್ಕಾರಕ್ಕೆ ಅನುಕೂಲ ಮಾಡಿಕೊಟ್ಟಂತಾಗಿದೆ ಎಂದು ಕೆಲ ಕಾಂಗ್ರೆಸ್ ನಾಯಕರೇ ಗೊಣಗುಟ್ಟಿದ್ದಾರೆ.

ವಿಧಾನಸಭೆಯಲ್ಲಿ ಬಹುತೇಕ ಕುರ್ಚಿಗಳು ಖಾಲಿ: ವಿಧಾನಸಭೆಯಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ವಿಧೇಯಕ ಮಂಡಿಸುವ ವೇಳೆ ವಿರೋಧ ಪಕ್ಷದ ಎಲ್ಲಾ ಕುರ್ಚಿಗಳು ಖಾಲಿ, ಖಾಲಿಯಾಗಿದ್ದವು. ಇದರ ಜೊತೆಗೆ ಜೆಡಿಎಸ್ ನಾಯಕರು ಹಾಗೂ ಬಹುತೇಕ ಶಾಸಕರು ಸದನಕ್ಕೆ ಗೈರಾಗಿದ್ದರು.
ಕೇವಲ ಪಕ್ಷೇತರ ಶಾಸಕರಾದ ಶರತ್ ಬಚ್ಚೇಗೌಡ, ಎನ್ ಮಹೇಶ್ ಮಾತ್ರ ಭಾಗಿಯಾಗಿದ್ದರು.

ಅಧಿವೇಶನಕ್ಕೆ ಬಾರದ ಜೆಡಿಎಸ್ ನಾಯಕರು : ವಿಧಾನ ಮಂಡಲ ಅಧಿವೇಶನ ಆರಂಭವಾದಾಗಿನಿಂದಲೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಬಂಡೆಪ್ಪ ಕಾಶಂಪೂರ ಸೇರಿದಂತೆ ಕೆಲ ಶಾಸಕರು ಹಾಜರಾಗಲೇ ಇಲ್ಲ. ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಗಾಗ ಬಂದು ಹೋಗುತ್ತಿದ್ದರು. ಇನ್ನು ಜೆಡಿಎಸ್ ನಾಯಕರಿಂದ ಅಂತರ ಕಾಯ್ದುಕೊಂಡಿದ್ದ ಜಿ.ಟಿ.ದೇವೇಗೌಡರು ಸದನಕ್ಕೆ ಹಾಜರಾಗಿದ್ದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.