ETV Bharat / state

ಕಾಂಗ್ರೆಸ್ ರೌಡಿಗಳನ್ನು ತಯಾರು ಮಾಡುವ ಫ್ಯಾಕ್ಟರಿ ಇದ್ದಂತೆ: ಸಚಿವ ಅಶೋಕ್ - Minister R Ashok

ಕೇಸರಿ ಹಾಕಿದ ತಕ್ಷಣ ಅವರು ಬಿಜೆಪಿ ಸೇರಿದರು ಅಂತಾ ಅರ್ಥವಲ್ಲ. ಯಾವುದೇ ರೌಡಿ ಹಿನ್ನೆಲೆಯುಳ್ಳವರು, ಸಮಾಜಘಾತುಕರಿಗೆ ಪಕ್ಷದಲ್ಲಿ ಅವಕಾಶವಿಲ್ಲ. ಹಾಗೊಂದು ವೇಳೆ ಯಾರಾದರೂ ಸೇರ್ಪಡೆಯಾಗಿದ್ದರೆ, ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗುವುದು ಎಂದು ಸಚಿವ ಅಶೋಕ್​ ಹೇಳಿದ್ದಾರೆ.

ಸಚಿವ ಅಶೋಕ್
ಸಚಿವ ಅಶೋಕ್
author img

By

Published : Dec 2, 2022, 7:22 PM IST

Updated : Dec 2, 2022, 7:56 PM IST

ಬೆಂಗಳೂರು: ಕಾಂಗ್ರೆಸ್ ರೌಡಿಗಳನ್ನು ತಯಾರಿಸುವ ಫ್ಯಾಕ್ಟರಿ ಇದ್ದಂತೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್​ನಂತೆ ನಮ್ಮದು ಗೂಂಡಾ ರಾಜಕಾರಣ ಅಲ್ಲ.‌ ಕೇಸರಿ ಹಾಕಿದ ತಕ್ಷಣ ಅವರು ಬಿಜೆಪಿ ಸೇರಿದ್ರು ಅಂತಾ ಅರ್ಥವಲ್ಲ.

ಯಾವುದೇ ರೌಡಿ ಹಿನ್ನೆಲೆಯುಳ್ಳವರು, ಸಮಾಜಘಾತುಕರಿಗೆ ಪಕ್ಷದಲ್ಲಿ ಅವಕಾಶವಿಲ್ಲ. ಹಾಗೊಂದು ವೇಳೆ ಯಾರಾದರೂ ಸೇರ್ಪಡೆಯಾಗಿದ್ದರೆ, ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ದೇಶದಲ್ಲಿ 50 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ರೌಡಿಗಳ ಬೆಳವಣಿಗೆಗೆ ಅವಕಾಶ ನೀಡಿದೆ. ಅವರ ಬೆಂಬಲ ಪಡೆದು ಅಧಿಕಾರ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಕಂದಾಯ ಸಚಿವ ಆರ್ ಅಶೋಕ್ ತಿರುಗೇಟು

ಕಾಂಗ್ರೆಸ್​​ನವರು ಅವರ ಜಾತಕ ನೋಡಿಕೊಳ್ಳಲಿ: ಬಿಜೆಪಿ ನಾಯಕರೊಂದಿಗೆ ರೌಡಿ ಹಿನ್ನೆಲೆಯುಳ್ಳವರು ಇರುವ ಫೋಟೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ನೂರಾರು ಫೋಟೋಗಳು ನಮ್ಮ ಬಳಿ ಇದೆ. ಕಾಂಗ್ರೆಸ್‍ನವರು ಅವರ ಜಾತಕವನ್ನು ನೋಡಿಕೊಳ್ಳಲಿ ಎಂದು ಟೀಕಿಸಿದರು.

ಸಚಿವ ಸೋಮಣ್ಣ ಅವರ ಮನೆಗೆ ಒಬ್ಬ ರೌಡಿ ಹೋಗಿದ್ದ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಸೋಮಣ್ಣ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಸೋಮಣ್ಣ ಅವರಿಗೆ ಅಂತಹ ರಾಜಕೀಯ ಹಿನ್ನೆಲೆ ಇಲ್ಲ. ಅವರು ಬಸವ ತತ್ವದ ಆಧಾರದ ಮೇಲೆ ಇರುವವರು ಎಂದರು.

ಬಿಜೆಪಿ ಸದಸ್ಯತ್ವ ಪಡೆದಿರಬೇಕು: ಗೂಂಡಾಗಳನ್ನು ಬಿಜೆಪಿ ಬೆಂಬಲಿಸುವುದಿಲ್ಲ, ಪ್ರೋತ್ಸಾಹಿಸುವುದಿಲ್ಲ, ಕೇಸರಿ ಶಾಲು ಹಾಕಿದವರಲ್ಲ ಬಿಜೆಪಿಯವರಲ್ಲ. ಕೇಸರಿ ಹೆಸರಿನ ಜೊತೆಗೆ ಕಮಲದ ಚಿಹ್ನೆ ಇರಬೇಕು. ಬಿಜೆಪಿ ಸದಸ್ಯತ್ವ ಪಡೆದಿರಬೇಕು ಎಂದು ಹೇಳಿದರು.

ಧರ್ಮ ಆಧಾರಿತ ಶಿಕ್ಷಣ ವ್ಯವಸ್ಥೆ ನಮ್ಮ ಬಿಜೆಪಿಯಲ್ಲಿ ಇಲ್ಲ: ಹಲವಾರು ಮುಸ್ಲಿಂ ಕಾಲೇಜುಗಳೂ ಇವೆ. ಆದರೆ, ಅಲ್ಲಿ ಕೂಡ ಎಲ್ಲ ಧರ್ಮದವರೂ ಓದಬಹುದು. ಒಂದೇ ಧರ್ಮಕ್ಕೆ ಆಧಾರಿತ ಶಾಲೆಗಳು ಎಲ್ಲೂ ಇಲ್ಲ. ಇದು ಪಾಕಿಸ್ತಾನ ಅಥವಾ ಇರಾನ್ ಅಲ್ಲ. ಅಲ್ಪ ಸಂಖ್ಯಾತರು ಶಾಲಾ ಕಾಲೇಜು ನಡೆಸಲು ಅನುಮತಿ ಕೊಡುತ್ತೇವೆ. ಆದರೆ, ಅಲ್ಲಿ ಎಲ್ಲಾ ಧರ್ಮದವರೂ ಓದಬಹುದು ಎಂದರು.

ಕಾಂಗ್ರೆಸ್​​ ನಾಯಕರ ವಿರುದ್ಧ ಬಿಜೆಪಿ ಕಿಡಿ: ರೌಡಿ ಶೀಟರ್ ರಾಜಕಾರಣ ಕುರಿತ ಕಾಂಗ್ರೆಸ್ ಆರೋಪಗಳಿಗೆ ಭ್ರಷ್ಟಾಚಾರದ ಅಸ್ತ್ರಗಳ ಪ್ರಯೋಗಿಸಿರುವ ಬಿಜೆಪಿ ಸರಣಿ ಟ್ವೀಟ್​ಗಳ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದೆ.

ತಾನೇ ಚಾಣಕ್ಯ ಎಂಬ ಭ್ರಮೆಯಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಜೈಲಿಗೆ ಹೋಗಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಯಲ್ಲ. ಇದೇ ಭ್ರಷ್ಟಾಚಾರದಿಂದ. 20 ಬ್ಯಾಂಕಿನಲ್ಲಿ 200 ಕೋಟಿ ಹೂತಿಟಿದ್ದು, ನಿಮ್ಮ ಆದಾಯ 800 ಪಟ್ಟು ಹೆಚ್ಚಾಗಿರೋದು ಭ್ರಷ್ಟಾಚಾರದಿಂದ. ಭ್ರಷ್ಟಾಚಾರದ ಬಗ್ಗೆ ಖುದ್ದು ಭ್ರಷ್ಟಾಚಾರಿಯ ಅನುಭವ ಕೇಳುವುದೇ ಚಂದ ಎಂದು ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.

ಇದನ್ನೂ ಓದಿ: ಸೈಲೆಂಟ್ ಸುನೀಲ್ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ವಿವರಣೆ ಕೇಳಿದ ಕಟೀಲ್

ನಿಮ್ಮ ವಿರೋಧಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ, ಬೆಂಗಳೂರಿಗರ ಸೂರಿನ ಕನಸಿಗೆ ಕನ್ನ ಹಾಕಿದ್ರಿ. ಈ ಮೂಲಕ 943 ಎಕರೆಯ ಅರ್ಕಾವತಿ ಡಿ-ನೋಟಿಫಿಕೇಷನ್ ಮಾಡಿ, ಪ್ರಕರಣ ತಮ್ಮ ಕಡೆ ತಿರುಗಿದಾಗ ಕಡತಗಳನ್ನೇ ಎಗರಿಸಿದ್ದು. ಇದೇ ಸಿದ್ದರಾಮಯ್ಯನವರ ಭ್ರಷ್ಟ 'ಕೈ'ಗಳೇ ಡಿಕೆ ಶಿವಕುಮಾರ್ ಅವರೇ ಎಂದು ಟಾಂಗ್ ನೀಡಿದೆ.

ಕಾಂಗ್ರೆಸ್​ಗೆ ಬಿಜೆಪಿ ಪ್ರಶ್ನೆ: ಬಾಕಿಯವರದ್ದು ಭ್ರಷ್ಟಾಚಾರ ತಮ್ಮದು ಬೊಂಬೆ ಮಿಠಾಯಿಯೇ? ಭ್ರಷ್ಟರ ರಾಜ ಕೆಜೆ ಜಾರ್ಜ್ ತಮ್ಮ ಐಟಿ ಪಾರ್ಕ್‌ಗೆ ರಕ್ಷಣಾ ಇಲಾಖೆಯ ಭೂಮಿಯನ್ನೇ ನುಂಗಿದ್ದು ಭ್ರಷ್ಚಾಚಾರವಲ್ಲವೇ? ವೈಲ್ಡ್ ಫ್ಲವರ್ ಎಸ್ಟೇಟ್ ಅನ್ನೋ ಸಂಸ್ಥೆ ಕಟ್ಟಿಕೊಂಡು 140 ಕೋಟಿ ಮೊತ್ತದ ಭೂಮಿ ಲಪಟಾಯಿಸಿ, ರಾಜ್ಯದ ಜನರ ಕಿವಿ ಮೇಲೆ ಹೂವು ಇಟ್ಟ ಜಾರ್ಜ್‌ರನ್ನು ಏಕೆ ಮರೆತಿರಿ? ನಿಮಗೆಷ್ಟು ಪರ್ಸೆಂಟ್‌ ಬಂದಿದೆ..?

ನಿಮ್ಮದೇ ಪಕ್ಷದ ಇನ್ನೊಬ್ಬ ಮಹಾಪುರುಷ ಎಂಬಿ ಪಾಟೀಲ್ ನೀರಾವರಿ ಸಚಿವರಾಗಿದ್ದಾಗ ಧಾರವಾಡದ ಜನರ ನೀರ ದಾಹದಲ್ಲೂ ದುಡ್ಡು ಹೊಡೆದರು. ಮಲಪ್ರಭಾ ಕಾಲುವೆ ಆಧುನೀಕರಣ ಕಾಮಗಾರಿಯಲ್ಲಿ 400 ಕೋಟಿ ಲಪಟಾಯಿಸಿದ್ದು ಭ್ರಷ್ಚಾಚಾರವಲ್ಲವೇ? ಎಂದು ಪ್ರಶ್ನಿಸಿದೆ.

159 ಕೋಟಿ ನೀರಾವರಿ ಯೋಜನೆಗಳಿಗೆ 25 ಕೋಟಿ ಕಿಕ್ ಬ್ಯಾಕ್ ತಗೊಂಡಿದ್ರಂತಲ್ಲ ಅದೇನು?. ಇಷ್ಟಾಗಿ ಇಂದಿರಾ ಗಾಂಧಿ ಚುನಾವಣೆ ಗೆದಿದ್ದು ಭ್ರಷ್ಟಾಚಾರದಿಂದಲ್ಲದೇ ಗಾಂಧಿವಾದದಿಂದಲ್ಲ. ಯಂಗ್ ಇಂಡಿಯಾ ಮೂಲಕ ನ್ಯಾಷನಲ್ ಹೆರಾಲ್ಡ್ ಎಂಬ ಬಹುಕೋಟಿ ಹಗರಣಕ್ಕೆ ಆಶ್ರಯದಾತೆ ಸೋನಿಯಾ ಗಾಂಧಿ. ಇಂಥ ಭ್ರಷ್ಟಾಚಾರಿಗಳ ಬಾಯಲ್ಲೂ ಭ್ರಷ್ಟಾಚಾರ ವಿರೋಧ ಬರುವಂತಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿ ಎಂದು ಕಾಂಗ್ರೆಸ್ ಕಾಲದ ಭ್ರಷ್ಟಾಚಾರ ಉಲ್ಲೇಖದ ಮೂಲಕ ಬಿಜೆಪಿ ತಿರುಗೇಟು ನೀಡಿದೆ.

Last Updated : Dec 2, 2022, 7:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.