ಬೆಂಗಳೂರು: ತುಮಕೂರಿನ ಸಿದ್ದಗಂಗಾ ಮಠದ ಪೀಠಾಧಿಪತಿಗಳಾಗಿದ್ದು, ಲಿಂಗೈಕ್ಯರಾದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಕಾಂಗ್ರೆಸ್ ಒತ್ತಡ ಹಾಕಿದೆ.
ಸಿಎಂ ಎಚ್.ಡಿ. ಕುಮಾರಸ್ವಾಮಿ ನಿನ್ನೆ ಪ್ರಧಾನಿ ಮೋದಿಗೆ ಈ ವಿಚಾರವಾಗಿ ಪತ್ರ ಬರೆದ ಬೆನ್ನಲ್ಲೇ ಕಾಂಗ್ರೆಸ್ ಕೂಡ ಮೈತ್ರಿ ಧರ್ಮ ಪಾಲಿಸುವ ನಿಟ್ಟಿನಲ್ಲಿ ಸಿಎಂ ಬೆಂಬಲಕ್ಕೆ ನಿಂತಿದ್ದು, ಟ್ವೀಟ್ ಮೂಲಕ ಸಹಮತ ವ್ಯಕ್ತಪಡಿಸಿದೆ. ಈ ಹಿಂದೆ ಅಂದರೆ 2018 ರ ಜ. 24 ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಹಾಗೂ ಇಂದಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಬರೆದ ಪತ್ರವನ್ನು ಲಗತ್ತಿಸಿ, ನಿನ್ನೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಬರೆದ ಪತ್ರವನ್ನೂ ಲಗತ್ತಿಸಿ ಟ್ವೀಟ್ ಮಾಡಿದೆ.
-
ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ @narendramodi ಸರ್ಕಾರ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸಬೇಕು.
— Karnataka Congress (@INCKarnataka) June 4, 2019 " class="align-text-top noRightClick twitterSection" data="
ತ್ರಿವಿಧ ದಾಸೋಹಕ್ಕೆ ಬದುಕನ್ನೇ ಮುಡುಪಿಟ್ಟಿದ್ದ ಅವರ ಸೇವೆ ಸ್ಮರಣೀಯ.
ಈ ಹಿಂದೆಯೇ @siddaramaiah , ಕಾಂಗ್ರೆಸ್ ಸರ್ಕಾರ ಕೇಂದ್ರವನ್ನು ಒತ್ತಾಯಿಸಿತ್ತು.@hd_kumaraswamy , ಮೈತ್ರಿ ಸರ್ಕಾರದ ಆಗ್ರಹವೂ ಅದೇ ಆಗಿದೆ. pic.twitter.com/fo74o6glcr
">ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ @narendramodi ಸರ್ಕಾರ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸಬೇಕು.
— Karnataka Congress (@INCKarnataka) June 4, 2019
ತ್ರಿವಿಧ ದಾಸೋಹಕ್ಕೆ ಬದುಕನ್ನೇ ಮುಡುಪಿಟ್ಟಿದ್ದ ಅವರ ಸೇವೆ ಸ್ಮರಣೀಯ.
ಈ ಹಿಂದೆಯೇ @siddaramaiah , ಕಾಂಗ್ರೆಸ್ ಸರ್ಕಾರ ಕೇಂದ್ರವನ್ನು ಒತ್ತಾಯಿಸಿತ್ತು.@hd_kumaraswamy , ಮೈತ್ರಿ ಸರ್ಕಾರದ ಆಗ್ರಹವೂ ಅದೇ ಆಗಿದೆ. pic.twitter.com/fo74o6glcrಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ @narendramodi ಸರ್ಕಾರ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸಬೇಕು.
— Karnataka Congress (@INCKarnataka) June 4, 2019
ತ್ರಿವಿಧ ದಾಸೋಹಕ್ಕೆ ಬದುಕನ್ನೇ ಮುಡುಪಿಟ್ಟಿದ್ದ ಅವರ ಸೇವೆ ಸ್ಮರಣೀಯ.
ಈ ಹಿಂದೆಯೇ @siddaramaiah , ಕಾಂಗ್ರೆಸ್ ಸರ್ಕಾರ ಕೇಂದ್ರವನ್ನು ಒತ್ತಾಯಿಸಿತ್ತು.@hd_kumaraswamy , ಮೈತ್ರಿ ಸರ್ಕಾರದ ಆಗ್ರಹವೂ ಅದೇ ಆಗಿದೆ. pic.twitter.com/fo74o6glcr
ಅಂದು ಸಿದ್ದಗಂಗಾ ಶ್ರೀಗಳು ಬದುಕಿದ್ದರು. ಅವರಿಗೆ ಭಾರತ ರತ್ನ ನೀಡಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ದರು. ಆದರೆ ಇಂದು ಶ್ರೀಗಳು ಇಲ್ಲ. ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿ ಎಂದು ಇಂದಿನ ಸಿಎಂ ಒತ್ತಾಯಿಸಿದ್ದಾರೆ. ಈ ಎರಡೂ ಪತ್ರ ಮುಂದಿಟ್ಟು ಪ್ರಧಾನಿಗೆ ಒತ್ತಾಯ ಹೇರುವ ಕಾರ್ಯವನ್ನು ರಾಜ್ಯ ಕಾಂಗ್ರೆಸ್ ಪಕ್ಷ ಟ್ವಿಟರ್ ಮೂಲಕ ಮಾಡಿದೆ.
ತ್ರಿವಿಧ ದಾಸೋಹಕ್ಕೆ ಬದುಕನ್ನೇ ಮುಡುಪಾಗಿಟ್ಟಿದ್ದ ಅವರ ಸೇವೆ ಸ್ಮರಣೀಯ. ಈ ಹಿಂದೆಯೇ ಕಾಂಗ್ರೆಸ್ ಸರ್ಕಾರ ಕೇಂದ್ರವನ್ನು ಒತ್ತಾಯಿಸಿತ್ತು. ಈಗ ಮೈತ್ರಿ ಸರ್ಕಾರದ ಆಗ್ರಹವೂ ಅದೇ ಆಗಿದೆ. ಈಗಲಾದರೂ ರಾಜ್ಯದ ಮನವಿಯನ್ನು ಪುರಸ್ಕರಿಸಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.