ETV Bharat / state

ಕಾಂಗ್ರೆಸ್​ಗೆ ಬಂಡವಾಳ ಇಲ್ಲ, ಜೆಡಿಎಸ್​ಗೆ ಅಸ್ತಿತ್ವ ಇಲ್ಲ: ಡಿ.ವಿ. ಸದಾನಂದ ಗೌಡ ವ್ಯಂಗ್ಯ - ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸುದ್ದಿ

ನಾಲ್ಕು ವಿಧಾನ ಪರಿಷತ್​ ಕ್ಷೇತ್ರಗಳು ಮತ್ತು ಎರಡು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತವೆಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್​ಗೆ ಬಂಡವಾಳ ಇಲ್ಲ, ಜೆಡಿಎಸ್​ಗೆ ಅಸ್ತಿತ್ವವೇ ಇಲ್ಲವೆಂದು ಅವರು ವ್ಯಂಗ್ಯವಾಡಿದ್ದಾರೆ.

dvs
ಡಿ.ವಿ ಸದಾನಂದಗೌಡ
author img

By

Published : Oct 26, 2020, 4:14 PM IST

ಬೆಂಗಳೂರು: ಹಿಂದಿನ ಉಪಚುನಾವಣೆಗಳ‌ ರೀತಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಪೈಪೋಟಿ ಕಾಣುತ್ತಿಲ್ಲ. ಕಾಂಗ್ರೆಸ್, ಜೆಡಿಎಸ್​ನವರು ಚುನಾವಣೆಯಲ್ಲಿ ಕಾಣಿಸುತ್ತಲೇ ಇಲ್ಲ. ಕಾಂಗ್ರೆಸ್​ಗೆ ಬಂಡವಾಳ‌ ಇಲ್ಲದ ಕಾರಣ, ಜೆಡಿಎಸ್​ಗೆ ಅಸ್ತಿತ್ವ ಇಲ್ಲದ ಕಾರಣ ಅವರು ಅಖಾಡದಲ್ಲಿ ಕಾಣಿಸುತ್ತಿಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ವ್ಯಂಗ್ಯವಾಡಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ನಗರ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಯಾವಾಗಲೂ ನೆಗೆಟಿವ್ ಮಾತುಗಳ ಮೂಲಕವೇ ಚುನಾವಣೆ ಮಾಡುವುದು ಸೂಕ್ತವಲ್ಲ. ಇಂದು ಒಂದು ಕೆಜಿ ಈರುಳ್ಳಿ ಬೆಲೆ ಎಷ್ಟು? ರೈತನಿಗೆ ಸಿಗುವ ಬೆಲೆ ಎಷ್ಟು? ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ದೇವೇಗೌಡ, ಕುಮಾರಸ್ವಾಮಿ ಅವರಿಗೆ ಪ್ರಶ್ನಿಸುತ್ತೇನೆ. ಮೊನ್ನೆ‌ ಎಲ್ಲಾ ರೈತರನ್ನು ಬೀದಿಗಿಳಿಸಿದ್ರಲ್ಲಾ, ಅವರನ್ನು ಬೀದಿಯಲ್ಲೇ ಬಿಡಬೇಕು ಅಂದ್ಕೊಂಡ್ರಾ? ಮೊನ್ನೆ‌ ರೈತ ಹೋರಾಟಗಾರ ಮಾರುತಿ ಮಾನ್ಪಡೆ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಮಾನ್ಪಡೆ ಸಾವಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಕಾರಣ. ಹಳ್ಳಿಗಳಿಂದ ಇವರು ರೈತರನ್ನು ಕರೆತಂದರು ಕೆಲವು ರೈತ ಹೋರಾಟಗಾರರನ್ನು ಬಾಡಿಗೆಗೆ‌ ಕರೆತಂದು ಪ್ರತಿಭಟನೆ ಮಾಡಿಸಿ ಕೊರೊನಾ ಹಬ್ಬಿಸಿದ್ದರು ಎಂದರು.

ವಿದ್ಯಾ ಕ್ಷೇತ್ರದ ಆಮೂಲಾಗ್ರ ಬದಲಾವಣೆಗೆ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ ಏಕ ರೂಪ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ, ಕೌಶಲ್ಯಾಭಿವೃದ್ದಿಗೆ ಉತ್ತೇಜನ ನೀಡಲಾಗಿದೆ. 20 ಲಕ್ಷ ಕೋಟಿಯ ಆತ್ಮ ನಿರ್ಭರ್​ ಯೋಜನೆಯಡಿ ಸಮಗ್ರ ಶಿಕ್ಷಣ ನೀತಿ ರೂಪಿಸಲಾಗಿದೆ. ವರ್ಗಾವಣೆ ನೀತಿ ರೂಪಿಸಿ, ಶಿಕ್ಷಣ ಸ್ನೇಹಿ ವರ್ಗಾವಣೆ ನೀತಿ ಜಾರಿಗೆ ರಾಜ್ಯ ಸರ್ಕಾರ ಚಿಂತನೆ ಮಾಡಿದೆ. ಪ್ರಾಂಶುಪಾಲರ ಹುದ್ದೆಗೆ ಬಡ್ತಿ ನೀಡಲಾಗಿದೆ. ಉಪ ನಿರ್ದೇಶಕರ ಹುದ್ದೆಗೆ ಬಡ್ತಿ ನೀಡಲಾಗಿದೆ. 5 ಸಾವಿರ ಪ್ರೌಢ ಶಾಲೆಯ ಶಿಕ್ಷಕರ ನೇಮಕಕ್ಕೆ ಸಂಪುಟ ಸಭೆ ನಿರ್ಣಯ ಮಾಡಿದೆ. ನನ್ನ ಶಾಲೆ ನನ್ನ ಕೊಡುಗೆ ಯೋಜನೆ ಜಾರಿಗೆ ತರಲಾಗಿದೆ. ಅಥಿತಿ ಉಪನ್ಯಾಸಕರ ವೇತನ ಹೆಚ್ಚಳ ಮಾಡಲಾಗಿದೆ. ಇದರ ಆಧಾರದ ಮೇಲೆ ನಮಗೆ ಮತ ನೀಡಿ ಎಂದು ಪುಟ್ಟಣ್ಣ ಪರ ಮತ ಯಾಚನೆ ಮಾಡುತ್ತೇವೆ. ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಬಿಜೆಪಿ ಗೆಲುವು ದಾಖಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್​ನವರಿಗೆ ರಾಜರಾಜೇಶ್ವರಿ ನಗರದಲ್ಲಿ ಜಾತಿ ಬಿಟ್ಟು ಬೇರೆ ವಿಷಯ ಇಲ್ಲ. ಈ ಬಾರಿಯ ಚುನಾವಣೆ ಡಿ.ಕೆ. ಶಿವಕುಮಾರ್ ಜಾತಿ ರಾಜಕಾರಣಕ್ಕೂ ಇತಿಶ್ರೀ ಆಗುತ್ತದೆ. ಶಿವಕುಮಾರ್ ಭವಿಷ್ಯಕ್ಕೂ ಇತಿಶ್ರೀ ಆಗುತ್ತದೆ. ಸಮಯ ಸಾಧಕತನದ ರಾಜಕಾರಣ ಎನ್ನುವುದು ಇದಕ್ಕೇ. ಮೊನ್ನೆಯವರೆಗೆ ಡಿ.ಕೆ.‌ ಶಿವಕುಮಾರ್ ಎಲ್ಲಾ ಪಾರ್ಟಿಯವರ ಜೊತೆ ಚೆನ್ನಾಗಿದ್ದರೂ ಯಾವಾಗ ಅಧ್ಯಕ್ಷ ಆದರೋ‌ ಅವರಿಗೇನಾಯ್ತೋ ಗೊತ್ತಿಲ್ಲ. ಅವರ ಮನಸ್ಥಿತಿ ಮಾತ್ರ ಬದಲಾಗಿದೆ. ಈ‌ ರೀತಿಯ ರಾಜಕಾರಣಿಗಳಿಗೆ ಇತಿಶ್ರೀ ಆಗಬೇಕು ನಮ್ಮ ಜೊತೆ ಹದಿನೇಳು ಜನ ಶಾಸಕರು ಅಲ್ಲಿರಲು ಸಾಧ್ಯವಿಲ್ಲ ಎಂದು ರಾಜೀನಾಮೆ ಕೊಟ್ಟು ಬಂದರು. ಅದು ಇವತ್ತಿನ ರಾಜನೀತಿ ಆಗಬೇಕು ಎಂದರು.

ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಅವರು ಡಿ.ಕೆ. ಶಿವಕುಮಾರ್ ಶಿಷ್ಯ. ಏಕೆಂದರೆ ಅಲ್ಲಿ ಕೂಡಾ ಜಾತಿ ರಾಜಕಾರಣ ನೋಡುತ್ತಿದ್ದಾರೆ. ಶ್ರೀನಿವಾಸ್ ಈವರೆಗೆ ಯಾರೂ ಪಡೆಯದಷ್ಟು ಕೆಳ ಹಂತದ ಮತ ಪಡೆಯುತ್ತಾರೆ ಎಂದು ಸದಾನಂದ ಗೌಡ ಭವಿಷ್ಯ ನುಡಿದರು.

ಕಾಂಗ್ರೆಸ್​ನಲ್ಲಿ ಹಲವರಿಗೆ ಭ್ರಮನಿರಸನ ಆಗಿದೆ. ಆದರೆ ಒಂದು ಪಕ್ಷದಿಂದ ಆಯ್ಕೆ ಆಗಿದ್ದೀವಲ್ಲಾ ಎಂಬ ಮಾನಸಿಕ ನೋವು ಇದೆ. ಕಾಂಗ್ರೆಸ್​ನ ಶೇ.50ಕ್ಕಿಂತಲೂ ಹೆಚ್ಚಿನ ಶಾಸಕರು ಮೋದಿ ಮತ್ತು ಯಡಿಯೂರಪ್ಪ ಅಡಳಿತದ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ಕಾಲ ಬಂದಾಗ ಮುಂದಿನ ಚುನಾವಣೆಯಲ್ಲಿ ನೋಡೋಣ ಎಂದು ಕಾಯುತ್ತಿದ್ದಾರೆ. ಐದು, ಹತ್ತು, ಹದಿನೈದು ಇರಬಹುದು, ಲಿಸ್ಟ್ ಜಾಸ್ತಿ‌ ಆಗುತ್ತಿದೆ ಎಂದರು.

ರಾಜ್ಯಕ್ಕೆ ಪ್ರವಾಹ ನೆರವು ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ‌ ಡಿವಿಎಸ್, ನಾವು ಕೇಂದ್ರದಿಂದ ನೆರವು ಖಂಡಿತ ಕೊಡುತ್ತೇವೆ ಆದರೆ ಇಂದು ಬೇರೆ ಬೇರೆ ಚುನಾವಣೆಗಳು ನಡೆಯುತ್ತಿವೆ. ನಾವು ನಾಳೆ ಬಿಡುಗಡೆ ಮಾಡಿದರೆ ನಾಡಿದ್ದು ಬೆಳಗ್ಗೆ ಚುನಾವಣೆಗೊಸ್ಕರ ಹಣ ಮಂಜೂರು ಎಂದು ಆಗುತ್ತದೆ. ಇದೆಲ್ಲವೂ ನಮ್ಮ ರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ನಿಲುವುಗಳು, ಚುನಾವಣೆಯ ಮೇಲೆ ಪರಿಣಾಮ ಬೀರುವ ವಿಚಾರಗಳನ್ನು ಸೂಕ್ಷ್ಮವಾಗಿ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ. ಯಾವಾಗಲೂ ಪ್ರಾಥಮಿಕ ಹಣ ಬಿಡುಗಡೆ ಆಗುತ್ತದೆ. ಪೂರ್ಣ ಹಣ ಕೇಂದ್ರ ತಂಡ ಬಂದು ಅಧ್ಯಯನ ಮಾಡಿ ಹೋದ ಬಳಿಕ ಬಿಡುಗಡೆ ಅಗುತ್ತದೆ. ಕಳೆದ ಬಾರಿ ಕೂಡಾ ನಮಗೆ ತಡವಾಗಿ ಕೊಟ್ಟಿದ್ದಾರೆ. ಆದರೆ ತುಂಬಾ ಹಣ ಕೊಡಿಸಿಲ್ವಾ? ಈ ಬಾರಿ ಕೂಡಾ ರಾಜ್ಯದಲ್ಲಿ ವಿಪತ್ತು ನಿರ್ವಹಣೆಗೆ ಬೇಕಾದಷ್ಟು ಹಣ ರಾಜ್ಯ ಸರ್ಕಾರದ ಬಳಿ ಇದೆ ದೊಡ್ಡ ಹಾನಿ ಆಗಿದೆ ಎಂದು ನಿನ್ನೆ ಸಿಎಂ ಹೇಳುತ್ತಿದ್ದರು, ಅದರ ಪ್ರಕ್ರಿಯೆ ನಡೆದಿದೆ ಎಂದು ಕೇಂದ್ರ ಸಚಿವರು ಹೇಳಿದರು.

ರಾಜಕಾರಣದಲ್ಲಿ ತೆರೆಗಳು ಬರುತ್ತಲೇ ಇರುತ್ತವೆ ದೊಡ್ಡ ತೆರೆಗಳು, ಸಣ್ಣ ತೆರೆಗಳು ಬರುತ್ತಲೇ ಇರುತ್ತವೆ ಇದೊಂದು ಸಣ್ಣ ತೆರೆ ಬಂದಿದೆ, ಅದು ಹೋಗುತ್ತದೆ ನನ್ನ ರಾಜ್ಯಕ್ಕೆ ಹೆಚ್ಚು ಅನುದಾನ ಬೇಕು ಎಂದು ಕೇಳುವುದು ಶಾಸಕನ ಕರ್ತವ್ಯ. ಅನುದಾನ ಬೇಕು ಎಂದು ಕೇಂದ್ರವನ್ನು ಕೇಳುವುದರಲ್ಲಿ ತಪ್ಪೇನಿದೆ? ಯಾರ್ಯಾರ ಮಾತಿಗೆ ಎಷ್ಟೆಷ್ಟು ಪ್ರಾಮುಖ್ಯತೆ ಕೊಡಬೇಕು ಅನ್ನೋದು ಗೊತ್ತಿದೆ. ಈಗ ಇವರು ಒಂದಷ್ಟು ಹೇಳಿಕೆ ಕೊಡುವುದರ ಮೂಲಕ ತನ್ನ ಅಸ್ತಿತ್ವವನ್ನು ಬೇರೆಯವರು ಗಮನಿಸಲಿ ಎಂಬ ಕಾರಣಕ್ಕೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.