ETV Bharat / state

ಕಾಂಗ್ರೆಸ್ 15 ಸ್ಥಾನ ಗೆದ್ದು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ: ಮಲ್ಲಿಕಾರ್ಜುನ ಖರ್ಗೆ - ಬಿಜೆಪಿ ವಿರುದ್ಧ ಗುಡುಗಿದ ಖರ್ಗೆ ಲೆಟೆಸ್ಟ್ ನ್ಯೂಸ್

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ನಾಯಕರ ವಿರುದ್ಧ ಆರೋಪಗಳ ಸುರಿಮಳೆಗೈದರು. ಅಲ್ಲದೇ ಈ ಬಾರಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಿಕೊಂಡರು.

Mallikarjun kharge
ಮಲ್ಲಿಕಾರ್ಜುನ ಖರ್ಗೆ
author img

By

Published : Dec 1, 2019, 3:02 PM IST

ಬೆಂಗಳೂರು: ಮೋದಿಗೆ ಕರ್ನಾಟಕದ ಮೇಲೆ ಸಿಟ್ಟಿದೆ. ಯಾಕೆ ಗೊತ್ತಿಲ್ಲ. ಯಡಿಯೂರಪ್ಪ ಮೇಲಿನ ಸಿಟ್ಟನ್ನು ಜನರ ಮೇಲೆ ತೋರಿಸುತ್ತಿದ್ದಾರೆ ಅನ್ನಿಸುತ್ತಿದೆ ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದ ಹಲವು‌ ಜನಪರ ಯೋಜನೆಗಳು ರಾಜ್ಯಕ್ಕೆ ಸಿಗುವುದೇ ವಿಳಂಬವಾಗುತ್ತಿದೆ. ನನ್ನ ಕ್ಷೇತ್ರದಲ್ಲೇ ಹಲವು ಯೋಜನೆಗಳ ಕಾಮಗಾರಿ ಹಾಗೂ ಅಪರೂಪದ ವಿಮಾನ ನಿಲ್ದಾಣ ಉದ್ಘಾಟನೆಗೂ ಮೋದಿ ಬಂದಿಲ್ಲ. ಜಿಡಿಪಿ ಕುಸಿಯುತ್ತಿದೆ. ದೇಶದ ಆರ್ಥಿಕ ಸ್ಥಿತಿ ಹದಗೆಡುತ್ತಿದೆ. ರಾಜ್ಯಗಳನ್ನು ವಿಶ್ವಾಸಕ್ಕೆ ಪಡೆದು ಮೋದಿ ಕೆಲಸ ಮಾಡುತ್ತಿಲ್ಲ. ಪ್ರತಿಪಕ್ಷ ನಾಯಕರನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ. ನಿರುದ್ಯೋಗ ಹೆಚ್ಚಾಗುತ್ತಿದೆ. ಮೋದಿ‌ ಸರ್ಕಾರ ಹುಸಿ ಭರವಸೆ ನೀಡುತ್ತಿದೆ. ಸರ್ವೆ ವರದಿ, ಎನ್​ಜಿಒಗಳ‌ ವರದಿಯನ್ನು ಕೇಂದ್ರ ಸರ್ಕಾರ ಒಪ್ಪುತ್ತಿಲ್ಲ. ಬೆಲೆ ಏರಿಕೆ ನಿಯಂತ್ರಿಸಲು ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ

ಹಣ ಬಲ ಪ್ರಯೋಗ:
ಹಣ ಬಲದ ಮೇಲೆ ಕಳೆದ ಕೆಲ ವರ್ಷದಲ್ಲಿ ತಮ್ಮ ಕೆಲಸ ಮಾಡಿಕೊಂಡಿದ್ದಾರೆ. ಇದು ಸಾಧ್ಯವಾಗದಿದ್ದಾಗ ಧರ್ಮದ ಹೆಸರಲ್ಲಿ ಜನರನ್ನು ಎತ್ತಿ ಕಟ್ಟಿ ಕೆಲಸ ಮಾಡಿಕೊಂಡಿದ್ದಾರೆ. ಜಾತಿ ಒಡೆಯುವ ಮೂಲಕ ತಮ್ಮ ಕಾರ್ಯ ಸಾಧಿಸಿಕೊಳ್ಳುವ ಕಾರ್ಯ ಆಗುತ್ತಿದೆ. ಈ ಉಪಚುನಾವಣೆ ಕೂಡ ಹಣದಿಂದ ಗೆಲ್ಲಲು ಹೊರಟಿದ್ದಾರೆ. ಇದರಿಂದ ಪ್ರಜಾಪ್ರಭುತ್ವಕ್ಕೆ ಅನ್ಯಾಯ ಆಗುತ್ತಿದೆ. ಇದರ ಪ್ರಭಾವ ರಾಜ್ಯದಲ್ಲಿ ಮಾತ್ರವಲ್ಲ. ಬೇರೆಡೆಗೂ ಪರಿಣಾಮ ಬೀರಲಿದೆ. ಒಂದು ಪಕ್ಷದಿಂದ ಆಯ್ಕೆಯಾಗಿ ನಿಜವಾಗಿ ಸಮಸ್ಯೆ ಆಗಿ ಪಕ್ಷ ಬಿಟ್ಟಿದ್ದರೆ ಸಮಸ್ಯೆ ಇರಲಿಲ್ಲ. ಬಹುತೇಕ ಶಾಸಕರು ಕ್ಷುಲ್ಲಕ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಲಾಭ ಪಡೆದವರೆ ಪಕ್ಷ ಬಿಟ್ಟಿದ್ದಾರೆ. ಇವರಿಗೆ ಜನರೆ ತಕ್ಕ ಪಾಠ ಕಲಿಸುತ್ತಾರೆ. ನಾನು‌ ಕೂಡ ಜನರಿಗೆ ಅರಿವು ಮೂಡಿಸುವ ಹಾಗೂ ನಮ್ಮ ಪಕ್ಷದ ಪರ ಜನರ ಬಳಿ ಮತಯಾಚನೆಗೆ ತೆರಳುತ್ತೇನೆ. ಪಕ್ಷದ ಅಭ್ಯರ್ಥಿಗಳ ನೈತಿಕ ಬಲ ಹೆಚ್ಚಿಸುತ್ತೇನೆ ಎಂದರು.

ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೆ ಹಣದ ಹೊಳೆ ಹರಿದು ಬರಲಿದೆ. ಇಷ್ಟು ದೊಡ್ಡ ನೆರೆ ಸಮಸ್ಯೆ ಕಾಡಿದೆ. ಆದರೆ ಕೇಂದ್ರ ಸರ್ಕಾರ ಇದಕ್ಕೆ ಸ್ಪಂದಿಸಿಲ್ಲ, ರಾಜ್ಯಕ್ಕೆ ಭೇಟಿ ಕೊಟ್ಟಿಲ್ಲ. ಇಲ್ಲಿನ ನಾಯಕರು ಹಣ ತರುವ ಯತ್ನ ಮಾಡಿಲ್ಲ. ಆಡಳಿತ ಯಂತ್ರ ಕುಸಿದು ಬಿದ್ದಿದೆ. ಸರ್ಕಾರ ಭದ್ರಪಡಿಸಿಕೊಳ್ಳುವ ಯತ್ನ ಮಾಡಿದ್ದಾರೆಯೇ ಹೊರತು, ಜನರ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡಿಲ್ಲ ಎಂದು ದೂರಿದರು.

ಈ ಬಾರಿ ಗೆಲುವು ನಮ್ಮದೆ:
ಜನರ ಸಮಸ್ಯೆಗೆ ಸರ್ಕಾರದ ಲಕ್ಷ್ಯವಿಲ್ಲ. ಇದರಿಂದ ಜನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ. ನಾವು ಉಪ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ. ಫ್ಯಾಸಿಸ್ಟ್ ಧೋರಣೆ ಇಟ್ಟುಕೊಂಡಿರುವ ಬಿಜೆಪಿಗೆ ಜನ ಬುದ್ಧಿ ಕಲಿಸುತ್ತಾರೆ. ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ಬಿಜೆಪಿ ಸಂವಿಧಾನದ ದುರುಪಯೋಗ ಹೇಗೆ ಮಾಡಿಕೊಂಡಿತು ಎಂಬ ವಿವರ ಇದೆ. ನಾವು ನಮ್ಮ ಸಮಾನ ಮನಸ್ಕ ಪಕ್ಷಗಳ ಜತೆ ಸಂಪರ್ಕದಲ್ಲಿದ್ದು, ಅಗತ್ಯ ಬಿದ್ದಾಗ ಬಿಜೆಪಿ ದೂರವಿಟ್ಟು ಒಳ್ಳೆಯ ಸರ್ಕಾರ ಅಧಿಕಾರಕ್ಕೆ ತರುವ ಕಾರ್ಯ ಮಾಡುತ್ತೇವೆ. ಮುಂದಿನ ಬೆಳವಣಿಗೆ ನಂತರ ಕಾಂಗ್ರೆಸ್ ಸರ್ಕಾರ ಬರಲಿದೆ. 15 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಮುಂದೆ ಮಾಹಿತಿ ನೀಡಿಯೇ ಮುಂದಿನ ಹೆಜ್ಜೆ ಇಡುತ್ತೇವೆ. ಪಕ್ಷ, ಹೈಕಮಾಂಡ್ ನಿರ್ಧಾರ ಮಾಡಲಿದೆ.

ದೇಶದಲ್ಲಿ ಅಧಿಕಾರ ದುರುಪಯೋಗ :
ದೇಶದಲ್ಲಿ ಅಧಿಕಾರ ದುರುಪಯೋಗ ನಡೆಯುತ್ತಿದೆ. ಅಟೋನಮಸ್ ಬಾಡಿಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಮೂಲಕ ಪ್ರತಿಪಕ್ಷಗಳನ್ನ ಹೆದರಿಸುತ್ತಿದೆ. ಮುಖಂಡರು, ಕಾರ್ಯಕರ್ತರಿಗೆ ಬೆದರಿಕೆ ಒಡ್ಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಕಥೆ ಏನೇನಾಗಿದೆ ಗೊತ್ತಿದೆ. ಎಂಸಿಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಹೋದವರು ಅಲ್ಲಿ ಶೇ.70 ರಷ್ಟು ಮಂದಿ ಸೋತಿದ್ದಾರೆ. ಆದರೆ ರಾಜ್ಯದಲ್ಲಿ ಶೇ.100 ಮಂದಿ ಸೋಲುತ್ತಾರೆ. ಜನರೇ ಅವರನ್ನ ಈ ಬಾರಿ ತಿರಸ್ಕರಿಸುತ್ತಾರೆ. ಮಹಾರಾಷ್ಟ್ರದಲ್ಲಿ ನಾನು ಬ್ಯುಸಿಯಾಗಿದ್ದೆ. ಹೀಗಾಗಿ ಇಲ್ಲಿ ಪ್ರಚಾರಕ್ಕೆ ತೊಡಗಲಾಗಲಿಲ್ಲ. ಇಂದು, ನಾಳೆ ಹಲವು ಸಭೆಗಳಲ್ಲಿ ಭಾಗಿಯಾಗ್ತೇನೆ. ದೇಶದ ಪರಿಸ್ಥಿತಿ ಜನರಿಗೆ ತಿಳಿಸಬೇಕು. ಕಾರ್ಯಕರ್ತನಾಗಿ ನಾನು ಎಲ್ಲವನ್ನ ತಿಳಿಸಬೇಕಾಗಿದೆ ಎಂದರು.

Intro:newsBody:ರಾಜ್ಯದಲ್ಲಿ 15 ಸ್ಥಾನವನ್ನೂ ಗೆಲ್ಲುತ್ತೇವೆ, ಕಾಂಗ್ರೆಸ್ ನೇತೃತ್ವದಲ್ಲಿ ಸರ್ಕಾರ ಬರಲಿದೆ: ಖರ್ಗೆ

ಬೆಂಗಳೂರು: ಮೋದಿಗೆ ಕರ್ನಾಟಕದ ಮೇಲೆ ಸಿಟ್ಟಿದೆ. ಯಾಕೆ ಗೊತ್ತಿಲ್ಲ. ಹಿಂದೆಯೂ ಮಾಡಿಲ್ಲ, ಈಗಲೂ ಮಾಡುತ್ತಿಲ್ಲ. ಅಥವಾ ಯಡಿಯೂರಪ್ಪ ಮೇಲಿನ ಸಿಟ್ಟನ್ನು ಜನರ ಮೇಲೆ ತೋರಿಸುತ್ತಿದ್ದಾರೆ ಅನ್ನಿಸುತ್ತಿದೆ ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೇಂದ್ರದ ಹಲವು‌ ಜನಪರ ಯೋಜನೆಗಳು ರಾಜ್ಯಕ್ಕೆ ಸಿಗುವುದೇ ವಿಳಂಬವಾಗುತ್ತಿದೆ. ನನ್ನ ಕ್ಷೇತ್ರದಲ್ಲೇ ಹಲವು ಯೋಜನೆಗಳು, ರಾಜ್ಯದ ಹಣದಿಂದ ಮಾಡಿದ ಕಾಮಗಾರಿಯ ಉದ್ಘಾಟನೆಗೂ ಮೋದಿ ಬರಲಿಲ್ಲ. ಮೂರುವರೆ ಕಿಮಿ ಉದ್ದನೇ ರನ್ ವೇ ಹೊಂದಿದ ಅಪರೂಪದ ವಿಮಾನ ನಿಲ್ದಾಣ ಉದ್ಘಾಟನೆಗೆ ಮೋದಿ ಬಂದಿಲ್ಲ. ಜಿಡಿಪಿ ಕುಸಿಯುತ್ತಿದೆ, ದೇಶದ ಆರ್ಥಿಕ ಸ್ಥಿತಿ ಹದಗೆಡುತ್ತಿದೆ. ರಾಜ್ಯಗಳ ವಿಶ್ವಾಸಕ್ಕೆ ಪಡೆದು ಮೋದಿ ಕೆಲಸ ಮಾಡುತ್ತಿಲ್ಲ. ಪ್ರತಿಪಕ್ಷ ನಾಯಕರನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ. ನಿರುದ್ಯೋಗ ಹೆಚ್ಚಾಗುತ್ತಿದೆ. ಮೋದಿ‌ ಸರ್ಕಾರ ಹುಸಿ ಭರವಸೆ ನೀಡುತ್ತಿದ್ದಾರೆ. ಸರ್ವೆ ವರದಿ, ಎನ್ಜಿಒಗಳ‌ವರದಿಯನ್ನು ಕೇಂದ್ರ ಸರ್ಕಾರ ಒಪ್ಪುತ್ತಿಲ್ಲ. ಬೆಲೆ ಏರಿಕೆ ನಿಯಂತ್ರಿಸಲು ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಣಬಲ ಪ್ರಯೋಗ
ಹಣ ಬಲದ ಮೇಲೆ ಕಳೆದ ಕೆಲ ವರ್ಷದಲ್ಲಿ ತಮ್ಮ ಕೆಲಸ ಮಾಡಿಕೊಂಡಿದ್ದಾರೆ. ಇದು ಸಾಧ್ಯವಾಗದಿದ್ದಾಗ ಧರ್ಮದ ಹೆಸರಲ್ಲಿ ಜನರನ್ನು ಎತ್ತಿ ಕಟ್ಟಿ ಕೆಲಸ ಮಾಡಿಕೊಂಡಿದ್ದಾರೆ. ಜಾತಿ ಒಡೆಯುವ ಮೂಲಕ ತಮ್ಮ ಕಾರ್ಯ ಸಾಧಿಸಿಕೊಳ್ಳುವ ಕಾರ್ಯ ಆಗುತ್ತಿದೆ. ಈ ಉಪಚುನಾವಣೆ ಕೂಡ ಹಣದಿಂದ ಗೆಲ್ಲಲು ಹೊರಟಿದ್ದಾರೆ. ಇದರಿಂದ ಪ್ರಜಾಪ್ರಭುತ್ವ ಕ್ಕೆ ಧಕ್ಕೆ ಆಗುತ್ತಿದೆ. ಪ್ರಜಾಪ್ರಭುತ್ವದ ಮೇಲೆ ಅನ್ಯಾಯ ಆಗುತ್ತಿದೆ. ಇದರ ಪ್ರಭಾವ ರಾಜ್ಯದಲ್ಲಿ ಮಾತ್ರವಲ್ಲ ಬೇರೆಡೆಗೂ ಪರಿಣಾಮ ಬೀರಲಿದೆ. ಒಂದು ಪಕ್ಷದಿಂದ ಆಯ್ಕೆಯಾಗಿ ನಿಜವಾಗಿ ಸಮಸ್ಯೆ ಆಗಿ ಪಕ್ಷ ಬಿಟ್ಟಿದ್ದರೆ ಸಮಸ್ಯೆ ಇರಲಿಲ್ಲ. ಬಹುತೇಕ ಶಾಸಕರು ಕ್ಷುಲ್ಲಕ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಲಾಭ ಪಡೆದವರೇ ಪಕ್ಷ ಬಿಟ್ಟಿದ್ದಾರೆ. ಇವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ನಾನು‌ಕೂಡ ಜನರಿಗೆ ಸತಗಯದ ಅರಿವು ಮೂಡಿಸುವ ಹಾಗೂ ನಮ್ಮ ಪಕ್ಷದ ಪರ ಜನರ ಬಳಿ ಮತಯಾಚನೆಗೆ ತೆರಳುತ್ತೇನೆ. ಪಕ್ಷದ ಅಭ್ಯರ್ಥಿಗಳ ನೈತಿಕ ಬಲ ಹೆಚ್ಚಿಸುತ್ತೇನೆ.
ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದತೆ ಹಣದ ಹೊಳೆ ಹರಿದು ಬರಲಿದೆ ಎಂದರು. ಇಷ್ಟು ದೊಡ್ಡ ನೆರೆ ಸಮಸ್ಯೆ ಕಾಡಿದೆ. ಆದರೆ ಕೇಂದ್ರ ಸರ್ಕಾರ ಇದಕ್ಕೆ ಸ್ಪಂಧಿಸಿಲ್ಲ, ರಾಜ್ಯಕ್ಕೆ ಭೇಟಿ ಕೊಟ್ಟಿಲ್ಲ. ಇಲ್ಲಿನ ನಾಯಕರು ತಡರಳಿ ಹಣ ತರುವ ಯತ್ನ ಮಾಡಿಲ್ಲ. ಆಡಳಿತ ಯಂತ್ರ ಕುಸಿದು ಬಿದ್ದಿದೆ. ಸರ್ಕಾರ ಭದ್ರಪಡಿಸಿಕೊಳ್ಳುವ ಯತ್ನ ಮಾಡಿದ್ದಾರೆಯೇ ಹೊರತು, ಜನರ ಸಮಸ್ಯೆಗೆ ಸ್ಪಂಧಿಸುವ ಕಾರ್ಯ ಮಾಡಿಲ್ಲ.
ಜನರ ಸಮಸ್ಯೆಗೆ ಸರ್ಕಾರದ ಲಕ್ಷ್ಯವಿಲ್ಲ. ಇದರಿಂದ ಜನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ. ನಾವು ಉಪ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ. ಫ್ಯಾಸಿಸ್ಟ್ ಧೋರಣೆ ಇಟ್ಟುಕೊಂಡಿರುವ ಬಿಜೆಪಿಗೆ ಜನ ಬುದ್ದಿ ಕಲಿಸುತ್ತಾರೆ. ಮಹಾರಾಷ್ಟ್ರದ ಸರ್ಕಾರ ರಚನೆಯಲ್ಲಿ ಬಿಜೆಪಿ ಸಂವಿಧಾನದ ದುರುಪಯೋಗ ಹೇಗೆ ಮಾಡಿಕೊಂಡಿತು ಎಂಬ ವಿವರ ಇದೆ. ನಾವು ನಮ್ಮ ಸಮಾನ ಮನಸ್ಕ ಪಕ್ಷಗಳ ಜತೆ ಸಂಪರ್ಕದಲ್ಲಿದ್ದು, ಅಗತ್ಯ ಬಿದ್ದಾಗ ಬಿಜೆಪಿ ದೂರವಿಟ್ಟು ಒಳ್ಳೆಯ ಸರ್ಕಾರ ಅಧಿಕಾರಕ್ಕೆ ತರುವ ಕಾರ್ಯ ಮಾಡುತ್ತೇವೆ. ಮುಂದಿನ ಬೆಳವಣಿಗೆ ನಂತರ ಕಾಂಗ್ರೆಸ್ ಸರ್ಕಾರ ಬರಲಿದೆ. 15 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಮುಂದೆ ಮಾಹಿತಿ ನೀಡಿಯೇ ಮುಂದಿನ ಹೆಜ್ಜೆ ಇಡುತ್ತೇವೆ. ಪಕ್ಷ, ಹೈಕಮಾಂಡ್ ನಿರ್ಧಾರ ಮಾಡಲಿದೆ.
ರಾಜ್ಯಸಭೆ ಸ್ಪರ್ಧೆ ಬಗ್ಗೆ ಮಾತನಾಡಿ, ಸಂಖ್ಯಾಬಲ ಎಲ್ಲಿದೆ? ಅದನ್ನು ತೋರಿಸಿ ಮಾತನಾಡೋಣ ಎಂದರು.
ದೇಶದಲ್ಲಿ ಅಧಿಕಾರ ದುರುಪಯೋಗ
ದೇಶದಲ್ಲಿ ಅಧಿಕಾರ ದುರುಪಯೋಗ ನಡೆಯುತ್ತಿದೆ. ಅಟೋನಮಸ್ ಬಾಡಿಗಳನ್ನ ಬಿಜೆಪಿ ದುರ್ಬಳಕೆ ಮಾಡಿಕೊಳ್ತಿದೆ. ಈ ಮೂಲಕ ಪ್ರತಿಪಕ್ಷಗಳನ್ನ ಹೆದರಿಸುತ್ತಿದೆ. ಮುಖಂಡರು, ಕಾರ್ಯಕರ್ತರಿಗೆ ಬೆದರಿಕೆ ಒಡ್ಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಕಥೆ ಏನೇನಾಗಿದೆ ಗೊತ್ತಿದೆ. ಎಂಸಿಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಹೋದವರು ಅಲ್ಲಿ ಶೇ.70 ರಷ್ಟು ಮಂದಿ ಸೋತಿದ್ದಾರೆ. ಆದರೆ ರಾಜ್ಯದಲ್ಲಿ ಶೇ.100 ಮಂದಿ ಸೋಲುತ್ತಾರೆ. ಜನರೇ ಅವರನ್ನ ಈ ಭಾರಿ ತಿರಸ್ಕರಿಸುತ್ತಾರೆ ಎಂದರು.
ಮಹಾರಾಷ್ಟ್ರದಲ್ಲಿ ನಾನು ಬ್ಯುಸಿಯಾಗಿದ್ದೆ. ಹೀಗಾಗಿ ಇಲ್ಲಿ ಪ್ರಚಾರಕ್ಕೆ ತೊಡಗಲಾಗಲಿಲ್ಲ. ಇಂದು,ನಾಳೆ ಹಲವು ಸಭೆಗಳಲ್ಲಿ ಭಾಗಿಯಾಗ್ತೇನೆ. ದೇಶದ ಪರಿಸ್ಥಿತಿ ಜನರಿಗೆ ತಿಳಿಸಬೇಕು. ಕಾರ್ಯಕರ್ತನಾಗಿ ನಾನು ಎಲ್ಲವನ್ನ ತಿಳಿಸಬೇಕಾಗಿದೆ ಎಂದರು.

Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.