ETV Bharat / state

ಕಾಂಗ್ರೆಸ್ ಸರ್ಕಾರದ ಧೋರಣೆ ಕನ್ನಡಕ್ಕೆ ಮನ್ನಣೆ ನೀಡಿಲ್ಲ: ಡಾ.ಅಶ್ವತ್ಥನಾರಾಯಣ್ - Congress Govt

ಕನ್ನಡ ಭಾಷಾ ಬಳಕೆಗೆ ಕ್ರಮ ಕೈಗೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರ ವಿಳಂಬ ಧೋರಣೆ ಅನುಸರಿಸಿದೆ ಎಂದು ಡಾ.ಅಶ್ವತ್ಥನಾರಾಯಣ್ ದೂರಿದರು.

ಮಾಜಿ ಸಚಿವ ಡಾ. ಅಶ್ವತ್ಥನಾರಾಯಣ್
ಮಾಜಿ ಸಚಿವ ಡಾ. ಅಶ್ವತ್ಥನಾರಾಯಣ್
author img

By ETV Bharat Karnataka Team

Published : Dec 29, 2023, 6:54 PM IST

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಧೋರಣೆಯಿಂದ ಕನ್ನಡಕ್ಕೆ‌ ಮನ್ನಣೆ ನೀಡಿಲ್ಲ ಅನ್ನೋದು ಗೊತ್ತಾಗಿದೆ ಎಂದು ಮಾಜಿ ಸಚಿವ ಡಾ.ಅಶ್ವತ್ಥನಾರಾಯಣ್ ಆರೋಪಿಸಿದರು. ಬೆಂಗಳೂರಲ್ಲಿಂದು ಮಾತನಾಡಿದ ಅವರು, ಕನ್ನಡಪರ ಸಂಘಟನೆಗಳು ಸರ್ಕಾರದ ವಿರುದ್ಧ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮ ನಾಡಿನ ಭಾಷೆ ಕನ್ನಡ. ಕನ್ನಡ ಬಳಕೆಗೆ ಸರ್ಕಾರ ಕ್ರಮ ವಹಿಸಬೇಕಿದೆ. ಆದರೆ ಸರ್ಕಾರ ವಿಳಂಬ ಮಾಡಿದೆ. ಹಾಗಾಗಿ ಕನ್ನಡ ನಾಮಫಲಕಗಳಿಗಾಗಿ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ. ಆದರೆ, ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಆಗಬಾರದು. ಈ ಸರ್ಕಾರ ಅಭಿವೃದ್ಧಿ ಕೆಲಸ ಮಾಡದೇ ಮೈ ಮರೆತಿದೆ. ಕನ್ನಡ ಕಡ್ಡಾಯ ಆಗಬೇಕು ಅನ್ನೋದೇ ಬಿಜೆಪಿ ಆಶಯ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಬೆಂಗಳೂರು ಉತ್ತರ ಜಿಲ್ಲೆ ಅಪೇಕ್ಷಿತರು, ಪ್ರಮುಖರ ಕರೆದು ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಅಂತ ಚರ್ಚೆ ಆಗಿದೆ. ಯಾವಾಗ, ಯಾರು ಅಂತ ವರಿಷ್ಠರು ಘೋಷಣೆ ಮಾಡುತ್ತಾರೆ. ಎಲ್ಲರೂ ಅಭಿಪ್ರಾಯ ನೀಡಿದ್ದೇವೆ ಎಂದು ಹೇಳಿದರು.

ಡಿವಿಎಸ್​ ಮರು ಸ್ಪರ್ಧೆ?: ಮಾಜಿ ಸಿಎಂ ಸದಾನಂದ ಗೌಡ ಅವರ ಮರು ಸ್ಪರ್ಧೆಗೆ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ವೈಯಕ್ತಿಕವಾಗಿ ಯಾರನ್ನು ಅಭ್ಯರ್ಥಿ ಮಾಡಬೇಕು ಅನ್ನೋ ವಿಚಾರ ಚರ್ಚೆಯಾಗಿಲ್ಲ. ಸಮಗ್ರವಾಗಿ ಒಗ್ಗಟ್ಟಿನಿಂದ, ಒಮ್ಮತದಿಂದ ಎಲ್ಲರೂ ಕರ್ನಾಟಕದಲ್ಲಿ ಕೆಲಸ ಮಾಡಿ 28 ಲೋಕಸಭೆಯಲ್ಲೂ ಗೆಲ್ಲಬೇಕು. ಬಿಜೆಪಿಗೆ ಮತ ನೀಡಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಿದ್ದಾರೆ. ಜನಪ್ರಿಯ ಸರ್ಕಾರದಲ್ಲಿ ರೈತರ ಸಬಲೀಕರಣ, ಎಲ್ಲ ವರ್ಗದ ಜನರಿಗೆ ತಲುಪುವ ಕೆಲಸ ಆಗಿದೆ. ಅಭ್ಯರ್ಥಿ ಬಗ್ಗೆ ಅಲ್ಲ. ಲೋಕಸಭಾ ಚುನಾವಣೆ ವಿಚಾರ ಮಾತ್ರ ಚರ್ಚೆಯಾಗಿದೆ ಎಂದು ಅಶ್ವತ್ಥನಾರಾಯಣ್ ಹೇಳಿದರು.

ಇದನ್ನೂ ಓದಿ: ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿಗೆ ಸಾವಿರ ಕೋಟಿ ರೂ ಕ್ರಿಯಾ ಯೋಜನೆಗೆ ಸಿಎಂ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.