ETV Bharat / state

ಒಂದೆಡೆ ಅತೃಪ್ತರ ಅನರ್ಹತೆ ದೂರು, ಮತ್ತೊಂದೆಡೆ ಮನವೊಲಿಕೆಗೆ ಬಾಗಿಲು ಕಾಯುತ್ತಿರುವ ಡಿಕೆಶಿ!

ಅತೃಪ್ತ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡ ಇರುವುದನ್ನೂ ಬಹಿರಂಗಗೊಳಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅತೃಪ್ತರು ದೋಸ್ತಿಗಳ ಬೆದರಿಕೆಗೂ ಬಗ್ಗದೆ, ಮನವೊಲಿಕೆಗೂ ಜಗ್ಗದೇ ತಮ್ಮ ನಿಲುವಿಗೆ ಬದ್ಧರಾಗಿರುವುದು ದೋಸ್ತಿ ಸರಕಾರದ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ

ಕಾಂಗ್ರೆಸ್​
author img

By

Published : Jul 10, 2019, 2:58 PM IST

ಬೆಂಗಳೂರು: ಅತೃಪ್ತ ಶಾಸಕರ ಬಗ್ಗೆ ಮೈತ್ರಿ ಪಕ್ಷಗಳ ನಾಯಕರು ದ್ವಿಮುಖ ನೀತಿ ಅನುಸರಿಸುತ್ತಿರುವುದು ಈಗ ಬಹಿರಂಗವಾಗಿದೆ.

ರೆಬೆಲ್ ಶಾಸಕರನ್ನು ಅನರ್ಹಗೊಳಿಸಬೇಕೆಂದು ವಿಧಾನಸಭಾಧ್ಯಕ್ಷರಿಗೆ ದೂರು ನೀಡಿರುವ ಕಾಂಗ್ರೆಸ್ ಪಕ್ಷ ಮತ್ತೊಂದೆಡೆ ಮುಂಬೈನಲ್ಲಿ ತಂಗಿರುವ ಅತೃಪ್ತರ ಹೋಟೆಲ್ ಬಾಗಿಲನ್ನು ಟ್ರಬಲ್ ಶೂಟರ್ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಜೆಡಿಎಸ್ ನಾಯಕರಾದ ಸಚಿವ ಜಿ.ಟಿ ದೇವೇಗೌಡ, ಶಾಸಕ ಶಿವಲಿಂಗೇಗೌಡ ಕಾಯುತ್ತಿದ್ದಾರೆ.

ರಾಜೀನಾಮೆ ವಾಪಾಸ್​​ ಪಡೆಯಲು ನಿರಾಕರಿಸಿದ ಬಂಡಾಯ ಶಾಸಕರ ಮೇಲೆ ಶಿಸ್ತು ಕ್ರಮ ಜರುಗಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ತೀರ್ಮಾನಿಸಿದೆ. ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಅತೃಪ್ತ ಶಾಸಕರ ಅನರ್ಹತೆಗೆ ದೂರು ನೀಡಲಾಗುತ್ತದೆ. ಅವರು ಆರು ವರ್ಷ ಚುನಾವಣೆಗೆ ನಿಲ್ಲುವುದನ್ನು ನಿಷೇಧಿಸಬೇಕು ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರು ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಇದು ಒಂದೆಡೆ ಆದರೆ ಸಿದ್ದರಾಮಯ್ಯ ಹೇಳಿಕೆ ನೀಡಿದ ಮರುಕ್ಷಣವೇ ಕಾಂಗ್ರೆಸ್ ಪಕ್ಷದ ಇತರ ನಾಯಕರು ಅತೃಪ್ತರ ಮನವೊಲಿಕೆಗೆ ತೊಡಗಿದ್ದಾರೆ. ಸಚಿವರನ್ನಾಗಿ ಮಾಡುವ ಆಫರ್ ನೀಡಿದರೂ ರೆಬೆಲ್ ಶಾಸಕರು ಬಗ್ಗದಿದ್ದಾಗ ಟ್ರಬಲ್ ಶೂಟರ್ ಎಂದು ಕಾಂಗ್ರೆಸ್ ಪಕ್ಷದಲ್ಲಿ ಹೆಸರಾದ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಇಂದು ಬೆಳಗ್ಗೆ ನೇರವಾಗಿ ಅತೃಪ್ತರು ವಾಸ ಮಾಡಿರುವ ಮುಂಬೈ ಹೋಟೆಲ್​ಗೆ ತೆರಳಿ ರೆಬೆಲ್ ಶಾಸಕರ ಮನವೊಲಿಸಲು ಹೋಟೆಲ್ ಗೇಟ್ ಕಾಯುತ್ತಿದ್ದಾರೆ.

ಸಚಿವ ಡಿಕೆಶಿ ಜತೆಗೆ ಜೆಡಿಎಸ್ ಹಿರಿಯ ನಾಯಕರಾದ ಸಚಿವ ಜಿ.ಟಿ ದೇವೇಗೌಡ, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮುಂಬಯಿಗೆ ತೆರಳಿ ಬಂಡಾಯ‌ ಶಾಸಕರ ಮನವೊಲಿಸಲು, ಬೆಂಗಳೂರಿಗೆ ಕರೆತರಲು ಕಸರತ್ತು ನಡೆಸಿದ್ದಾರೆ. ಅತೃಪ್ತರ ಬಗ್ಗೆ ಮೈತ್ರಿ ನಾಯಕರು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ. ಬಹಿರಂಗವಾಗಿ ಶಾಸಕರಿಗೆ ಶಿಸ್ತು ಕ್ರಮದ ಬೆದರಿಕೆ ಹಾಕಿದರೆ ಆಂತರಿಕವಾಗಿ ಕೈ ಕಾಲು ಹಿಡಿಯುತ್ತಿದ್ದಾರೆ.

ಅತೃಪ್ತರು ರಾಜೀನಾಮೆ ವಾಪಾಸ್​​ ಪಡೆಯದಿದ್ದರೆ ಸಮ್ಮಿಶ್ರ ಸರಕಾಕ್ಕೆ ಕುತ್ತು ಬರಲಿದೆ ಎನ್ನುವುದು ಖಚಿತವಾಗಿದೆ. ಹಾಗಾಗಿ ಬೆದರಿಸುವ ಮತ್ತು ಮನವೊಲಿಸುವ ತಂತ್ರಕ್ಕೆ ಎರಡೂ ಪಕ್ಷಗಳ ಮುಖಂಡರು ಮೊರೆಹೋಗಿದ್ದಾರೆ. ಶಾಸಕರ ಮನವೊಲಿಕೆ - ಬೆದರಿಕೆ ನಡುವೆ ಪ್ರತಿಭಟನೆ ನಡೆಸುವ, ಸ್ಪೀಕರ್​ಗೆ ಪ್ರತಿ ದೂರು ನೀಡುವ, ರಾಜ್ಯಪಾಲರಿಗೆ ಬಿಜೆಪಿ ವಿರುದ್ಧ ದೂರು ನೀಡುವ ಪ್ರಯತ್ನವನ್ನೂ ದೋಸ್ತಿ ನಾಯಕರು ಮಾಡುತ್ತಿದ್ದಾರೆ.

ಅತೃಪ್ತ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡ ಇರುವುದನ್ನೂ ಬಹಿರಂಗಗೊಳಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅತೃಪ್ತರು ದೋಸ್ತಿಗಳ ಬೆದರಿಕೆಗೂ ಬಗ್ಗದೆ, ಮನವೊಲಿಕೆಗೂ ಒಳಗಾಗದೇ ತಮ್ಮ ನಿಲುವಿಗೆ ಬದ್ಧರಾಗಿರುವುದು ದೋಸ್ತಿ ಸರಕಾರದ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

Intro:ಒಂದೆಡೆ ಅತೃಪ್ತರ ಅನರ್ಹತೆ ದೂರು , ಮತ್ತೊಂದೆಡೆ
ಮನವೊಲಿಕೆಗೆ ಬಾಗಿಲು ಕಾಯುತ್ತಿರುವ ಡಿಕೆಶಿ

ಬೆಂಗಳೂರು : ಅತೃಪ್ತ ಶಾಸಕರ ಬಗ್ಗೆ ಮೈತ್ರಿ ಪಕ್ಷಗಳ ನಾಯಕರು ದ್ವಿಮುಖ ನೀತಿ ಅನುಸರಿಸುತ್ತಿರುವುದು ಈಗ ಬಹಿರಂಗ ವಾಗಿದೆ.

ರೆಬೆಲ್ ಶಾಸಕರನ್ನು ಅನರ್ಹಗೊಳಿಸಬೇಕೆಂದು ವಿಧಾನಸಭಾದ್ಯಕ್ಷರಿಗೆ ದೂರು ನೀಡಿರುವ ಕಾಂಗ್ರೆಸ್ ಪಕ್ಷ ಮತ್ತೊಂದೆಡೆ ಮುಂಬೈನಲ್ಲಿ ತಂಗಿರುವ ಅತೃಪ್ತರ ಹೋಟೆಲ್ ಬಾಗಿಲನ್ನು ಬಂಡಾಯ ಶಾಸಕರ ಮನವೊಲಿಸಲು ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಸಚಿವ ಡಿ.ಕೆ ಶಿವಕುಮಾರ್ ಹಾಗು ಜೆಡಿಎಸ್ ನಾಯಕರಾದ ಸಚಿವ ಜಿ.ಟಿ ದೇವೇಗೌಡ, ಶಾಸಕ ಶಿವಲಿಂಗೇಗೌಡ ಕಾಯುತ್ತಿದ್ದಾರೆ.

Body: ರಾಜೀನಾಮೆ ವಾಪಾಸು ಪಡೆಯಲು ನಿರಾಕರಿಸಿದ ಬಂಡಾಯ ಶಾಸಕರ ಮೇಲೆ ಶಿಸ್ತು ಕ್ರಮ ಜರುಗಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ತೀರ್ಮಾನಿಸಿದೆ. ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ನವರು ಅತೃಪ್ತ ಶಾಸಕರ ಅನರ್ಹತೆ ಗೆ ದೂರು ನೀಡಲಾಗುತ್ತದೆ. ಅವರು ಆರು ವರ್ಷ ಚುನಾವಣೆಗೆ ನಿಲ್ಲುವುದನ್ನು ನಿಷೇಧಿಸಬೇಕು ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರು ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಇದು ಒಂದೆಡೆ ಯಾದರೆ ಸಿದ್ದರಾಮಯ್ಯ ಹೇಳಿಕೆ ನೀಡಿದ ಮರುಕ್ಷಣವೇ ಕಾಂಗ್ರೆಸ್ ಪಕ್ಷದ ಇತರ ನಾಯಕರು ಅತೃಪ್ತರ ಮನವೊಲಿಕೆಗೆ ತೊಡಗಿದ್ದಾರೆ. ಸಚಿವರನ್ನಾಗಿ ಮಾಡುವ ಆಫರ್ ನೀಡಿದರೂ ರೆಬೆಲ್ ಶಾಸಕರು ಬಗ್ಗದಿದ್ದಾಗ ಟ್ರಬಲ್ ಶೂಟರ್ ಎಂದು ಕಾಂಗ್ರೆಸ್ ಪಕ್ಷದಲ್ಲಿ ಹೆಸರಾದ ಜಲಸಂಪನ್ಮೂಲ ಎಚಿವ ಡಿಕೆ ಶಿವಕುಮಾರ್ ಇಂದು ಬೇಳಿಗ್ಗೆ ನೇರವಾಗಿ ಅತೃಪ್ತರು ವಾಸ ಮಾಡಿರುವ ಮುಂಬಯಿ ಹೋಟೆಲ್ ಗೆ ತೆರಳಿ ರೆಬೆಲ್ ಶಾಸಕರ ಮನವೊಲಿಸಲು ಹೋಟೆಲ್ ಗೇಟ್ ಕಾಯುತ್ತಿದ್ದಾರೆ.

ಸಚಿವ ಡಿಕೆಶಿ ಜತೆಗೆ ಜೆಡಿಎಸ್ ಹಿರಿಯ ನಾಯಕರಾದ ಸಚಿವ ಜಿ.ಟಿ ದೇವೇಗೌಡ, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮುಂಬಯಿ ಗೆ ತೆರಳಿ ಬಂಡಾಯ‌ ಶಾಸಕರ ಮನವೊಲೊಸಲು ಬೆಂಗಳೂರಿಗೆ ಕರೆತರಲು ಕಸರತ್ತು ನಡೆಸಿದ್ದಾರೆ.

ಅತೃಪ್ತರ ಬಗ್ಗೆ ಮೈತ್ರಿ ನಾಯಕರು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ. ಬಹಿರಂಗವಾಗಿ ಶಾಸಕರಿಗೆ ಶಿಸ್ತು ಕ್ರಮದ ಬೆದರಿಕೆ ಹಾಕಿದರೆ ಆಂತರಿಕವಾಗಿ ಕೈ ಕಾಲು ಹಿಡಿಯುತ್ತಿದ್ದಾರೆ.

ಮೈತ್ರಿ ಪಕ್ಷಗಳಿಗೆ ಅತೃಪ್ತರು ರಾಜೀನಾಮೆ ವಾಪಾಸ್ಸು ಪಡೆಯದಿದ್ದರೆ ಸಮ್ಮಿಶ್ರ ಸರಕಾಕ್ಕೆ ಕುತ್ತು ಬರಲಿದೆ ಎನ್ನುವುದು ಖಚಿತವಾಗಿದೆ. ಹಾಗಾಗಿ ಬೆದರಿಸುವ ಮತ್ತು ಮನವೊಲಿಸುವ ತಂತ್ರಕ್ಕೆ ಎರಡೂ ಪಕ್ಷಗಳ .ಮುಖಂಡರು ಮೊರೆಹೋಗಿದ್ದಾರೆ.

Conclusion: ಶಾಸಕರ ಮನವೊಲಿಕೆ - ಬೆದರಿಕೆ ನಡುವೆ ಪ್ರತಿಭಟನೆ ನಡೆಸುವ , ಸ್ಪೀಕರ್ ಗೆ ಪ್ರತಿ ದೂರು ನೀಡುವ , ರಾಜ್ಯಪಾಲರಿಗೆ ಬಿಜೆಪಿ ವಿರುದ್ಧ ದೂರು ನೀಡುವ ಪ್ರಯತ್ನವನ್ನೂ ದೋಸ್ತಿ ನಾಯಕರು ಮಾಡುತ್ತಿದ್ದಾರೆ.

ಅತೃಪ್ತ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡ ಇರುವುದನ್ನೂ ಬಹಿರಂಗಗೊಳಿಸಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಗಳು ಪ್ರಯತ್ನಿಸುತ್ತಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅತೃಪ್ತರು ದೋಸ್ತಿಗಳ ಬೆದರಿಕೆಗೂ ಬಗ್ಗದೆ...ಮನವೊಲಿಕೆಗೂ ಮರುಗಾಗದೇ ತಮ್ಮ ನಿಲುವಿಗೆ ಬದ್ದರಾಗಿರುವುದು ದೋಸ್ತಿ ಸರಕಾರದ ಸಂಕಷ್ಟವನ್ನು ಮುಂದುವರಿಸಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.