ETV Bharat / state

ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಗುಸುಗುಸು.. ಉಗ್ರಪ್ಪ ವಿರುದ್ಧ ಕ್ರಮ ಕೈಗೊಳ್ಳಲು ಸಮಿತಿ ಹಿಂದೇಟು? - ಕಾಂಗ್ರೆಸ್ ಶಿಸ್ತು ಸಮಿತಿ ಕ್ರಮ

ಪಕ್ಷದ ವಿರುದ್ಧ ಮಾತನಾಡಿ ಮುಜುಗರಕ್ಕೊಳಗಾಗಿದ್ದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹಾಗೂ ಸಲೀಂ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕಾಂಗ್ರೆಸ್ ಶಿಸ್ತು ಸಮಿತಿ ಹಿಂದೇಟು ಹಾಕ್ತಿದ್ಯಾ ಅನ್ನೋ ಅನುಮಾನ ಮೂಡಿದೆ.

ಉಗ್ರಪ್ಪ, ಸಲೀಂ
ಉಗ್ರಪ್ಪ, ಸಲೀಂ
author img

By

Published : Oct 21, 2021, 7:32 PM IST

ಬೆಂಗಳೂರು: ಪಕ್ಷದ ಅಧ್ಯಕ್ಷರ ವಿರುದ್ಧ ಇತ್ತೀಚೆಗಷ್ಟೇ ಚರ್ಚಿಸಿ ಮುಜುಗರಕ್ಕೆ ಒಳಗಾಗಿದ್ದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹಾಗೂ ಮಾಧ್ಯಮ ವಿಭಾಗದ ಸಮನ್ವಯಕಾರ ಸಲೀಂ ವಿರುದ್ಧ ಪಕ್ಷದ ಶಿಸ್ತು ಸಮಿತಿ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಹಿಂದೇಟು ಹಾಕಿದೆ ಎಂಬ ಮಾಹಿತಿ ಲಭಿಸಿದೆ.

ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಅವಹೇಳನ ಮಾಡುವ ರೀತಿಯಲ್ಲಿ ಉಭಯ ನಾಯಕರು ಚರ್ಚಿಸಿದ್ದಾರೆ ಎಂಬ ವಿಚಾರ ಮುಂದಿಟ್ಟು ಈಗಾಗಲೇ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಸಲೀಂರನ್ನು ಆರು ವರ್ಷಗಳ ಅವಧಿಗೆ ಉಚ್ಚಾಟಿಸಲಾಗಿದೆ. ಇನ್ನು ಮಾಜಿ ಸಂಸದ ವಿ.ಎಸ್.ಉಗ್ರಪ್ಪಗೆ ಮೂರು ದಿನಗಳ ಒಳಗೆ ಶಿಸ್ತು ಸಮಿತಿ ಮುಂದೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು.

ಮೂರು ದಿನ ಕಳೆದ ಬಳಿಕವೂ ವಿಚಾರಣೆ ನಡೆಯದಿದ್ದಾಗ ಈ ಬಗ್ಗೆ ಮಾಧ್ಯಮಗಳಲ್ಲಿ ಎದುರಾದ ಪ್ರಶ್ನೆಗೆ, ಉಗ್ರಪ್ಪಗೆ ನೀಡಿದ ಕಾಲಾವಧಿಯನ್ನು ಏಳು ದಿನಕ್ಕೆ ವಿಸ್ತರಿಸಲಾಗಿದೆ ಎಂಬ ಮಾಹಿತಿ ಲಭಿಸಿತ್ತು. ಆದರೆ, ಇದೀಗ ಪಕ್ಷದ ಉನ್ನತ ಮೂಲಗಳ ಪ್ರಕಾರ, ಒಟ್ಟಾರೆ ಪ್ರಕರಣವನ್ನೇ ಗೌಣವನ್ನಾಗಿರಿಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ. ಹಂತಹಂತವಾಗಿ ವಿಚಾರಣೆಯನ್ನು ಪಕ್ಷ ನಗಣ್ಯವಾಗಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ಕ್ರಮ ಕೈಗೊಳ್ಳುವುದು ಬೇಡ ಎಂದು ಅಧ್ಯಕ್ಷರೇ ಸೂಚಿಸಿದ್ದಾರಾ?

ಉಗ್ರಪ್ಪ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದು ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಸ್ವತಃ ಶಿಸ್ತು ಸಮಿತಿ ಅಧ್ಯಕ್ಷರಿಗೆ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಅನಗತ್ಯವಾಗಿ ಇತರ ಎರಡು ಪಕ್ಷಗಳ ಮುಖಂಡರ ಟೀಕೆಗೆ ಹಾಗೂ ಚರ್ಚೆಗೆ ಈ ವಿಚಾರ ಒಳಗಾಗುವುದು ಬೇಡ.

ಅಚಾತುರ್ಯದಿಂದ ಇಂಥದ್ದೊಂದು ಪ್ರಸಂಗ ನಡೆದಿದೆ. ಇದನ್ನು ಇನ್ನಷ್ಟು ಬೆಳೆಸುವುದರಿಂದ ಪಕ್ಷಕ್ಕೆ ಹಾನಿ ಹೆಚ್ಚಾಗಲಿದೆ. ಈ ಹಿನ್ನೆಲೆ ಶಿಸ್ತುಕ್ರಮ ಅಥವಾ ವಿಚಾರಣೆ ನೆಪದಲ್ಲಿ ಮತ್ತೆ ಮತ್ತೆ ಈ ವಿಚಾರ ಪ್ರಸ್ತಾಪವಾಗುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಡಿಕೆಶಿ ಬಂದಿದ್ದಾರೆ. ಅಲ್ಲದೇ, ಈ ವಿಚಾರಣೆಯನ್ನ ಇಲ್ಲಿಗೆ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ.

‘ಇದೇನು ಹೊಸತಲ್ಲ’

ವಿಚಾರಣೆ ಆರಂಭಿಸಿ ನಂತರ ಅದನ್ನು ನಗಣ್ಯವಾಗಿಸುವುದು ಕಾಂಗ್ರೆಸ್ ಶಿಸ್ತು ಸಮಿತಿಗೆ ಹೊಸ ವಿಚಾರವೇನೂ ಅಲ್ಲ. ಈ ಹಿಂದೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕಿ ಸೌಮ್ಯಾ ರೆಡ್ಡಿ, ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಮತ್ತಿತರ ನಾಯಕರು ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ವಿಚಾರವನ್ನು ಪ್ರಸ್ತಾಪಿಸಿದ್ದರು.

ಆ ಸಂದರ್ಭ ಮುಖಂಡರ ವಿರುದ್ಧ ಪಕ್ಷದ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಲಿದೆ ಎಂದು ಹೇಳಲಾಗಿತ್ತು. ಆದರೆ, ಅಂಥ ಬೆಳವಣಿಗೆಗಳೇನೂ ನಡೆಯಲಿಲ್ಲ. ಇನ್ನೊಂದು ಪ್ರಕರಣದಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ವಿರುದ್ಧ ಶಿಸ್ತು ಸಮಿತಿ ಕ್ರಮ ಕೈಗೊಳ್ಳಲಿದೆ ಎಂದು ನಂಬಲಾಗಿತ್ತು. ಆದರೆ, ಈ ವಿಚಾರ ಕೂಡ ನಂತರದ ದಿನಗಳಲ್ಲಿ ತೆರೆಮರೆಗೆ ಸರಿದಿದೆ.

ಇದನ್ನೂ ಓದಿ: ಬಿಎಸ್​ವೈ ಆಪ್ತನಿಗೆ ಕೊಕ್.. ಬುಡಾ ಅಧ್ಯಕ್ಷ ಸ್ಥಾನಕ್ಕೆ ಅಭಯ್ ಪಾಟೀಲ್​ ಬೆಂಬಲಿಗನಿಗೆ ಮಣೆ!

ಮುಂದುವರಿದು ಇದೀಗ ಉಗ್ರಪ್ಪ ಮತ್ತು ಸಲೀಂ ವಿರುದ್ಧ ದಾಖಲಾಗಿರುವ ದೂರು ಕೂಡ ಮುಂದಿನ ದಿನಗಳಲ್ಲಿ ಚರ್ಚೆಗೆ ಬಾರದೆ ಕಣ್ಮರೆಯಾಗಲಿದೆ. ಕೇವಲ ಸಣ್ಣಪುಟ್ಟ ಕಾರ್ಯಕರ್ತರು ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಮಾತ್ರ ಕಾಂಗ್ರೆಸ್ ಶಿಸ್ತು ಸಮಿತಿ ಸೀಮಿತವಾಗಿದೆ ಎಂಬ ಆರೋಪ ನಿರಂತರವಾಗಿ ಕೇಳಿಬರುತ್ತಿತ್ತು. ಇದೀಗ ಉಗ್ರಪ್ಪ ವಿರುದ್ಧ ವಿಚಾರಣೆ ಕೂಡ ನಗಣ್ಯವಾಗಲಿದೆ ಎಂಬ ಮಾಹಿತಿ ಕೇಳಿ ಬರುತ್ತಿದ್ದಂತೆ ಇದಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.