ETV Bharat / state

ತೇಜಸ್ವಿ ಸೂರ್ಯ ಎಲ್ಲೆಡೆ ಮಕ್ಕಳಾಟ ಆಡಲು ಹೋಗುವುದೇಕೆ? ಕಾಂಗ್ರೆಸ್ ಟೀಕೆ

author img

By

Published : Jan 18, 2023, 10:41 AM IST

Updated : Jan 18, 2023, 4:29 PM IST

ಕಳೆದ ತಿಂಗಳು ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವೊಂದರ ತುರ್ತು ನಿರ್ಗಮನ ದ್ವಾರವನ್ನು ಪ್ರಯಾಣಿಕರೊಬ್ಬರು ಎಳೆದಿದ್ದರು ಎಂದು ನಿನ್ನೆಯಷ್ಟೇ ವರದಿಯಾಗಿತ್ತು. ಇದನ್ನು ಸಂಸದ ತೇಜಸ್ವಿ ಸೂರ್ಯ ಎಳೆದಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಈ ವಿಚಾರವನ್ನು ಕಾಂಗ್ರೆಸ್ ಈಗ ಟೀಕಾಸ್ತ್ರವನ್ನಾಗಿ ಮಾಡಿಕೊಂಡಿದೆ.​

Congress
ಕಾಂಗ್ರೆಸ್

ಬೆಂಗಳೂರು : ’’ಆಡೋ ಮಕ್ಕಳಿಗೆ ಯಜಮಾನಿಕೆ ಕೊಟ್ರೆ ಏನಾಗಲಿದೆ ಎಂಬುದಕ್ಕೆ ತೇಜಸ್ವಿ ಸೂರ್ಯ ನಿದರ್ಶನ’’ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ. ಇಂಡಿಗೋ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ಪ್ರಯಾಣಿಕರೊಬ್ಬರು ತೆರೆದಿದ್ದರು ಎಂದು ವರದಿಯಾಗಿತ್ತು. ಇದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರೇ ತೆಗೆದಿದ್ದಾರೆ ಎಂದು ಹೇಳಲಾಗಿತ್ತು. ಇದನ್ನೇ ಅಸ್ತವನ್ನಾಗಿಸಿ ಕೊಂಡಿರುವ ಕಾಂಗ್ರೆಸ್​, ಟ್ವೀಟ್​​ ಮೂಲಕ ಟೀಕಾ ಪ್ರಹಾರ ನಡೆಸಿದೆ. ‘‘ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದೇಕೆ?. ದೋಸೆ ತಿನ್ನುವ ಚಪಲ ಹೆಚ್ಚಾಗಿ ಎಮರ್ಜೆನ್ಸಿ ಎಕ್ಸಿಟ್ ಆಗಲು ಹೊರಟಿದ್ದಾ?‘‘ ಎಂದು ಕೈ ಪಕ್ಷ ಕುಟುಕಿದೆ.

  • ತೇಜಸ್ವಿ ಸೂರ್ಯನಿಗೆ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವಂತಹ ತುರ್ತು ಏನಿತ್ತು @BJP4Karnataka?

    ಎದೆ ಸೀಳಿದರೆ ನಾಲ್ಕಕ್ಷರ ಇಲ್ಲ ಎಂದವರ ತಲೆ ಸೀಳಿದರೆ ನಯಾಪೈಸೆ ಬುದ್ದಿ ಇಲ್ಲದಾಗಿದೆ!

    ಅನಾಹುತ ಸಂಭವಿಸಿದ್ದರೆ ಬಲಿಯಾಗುವ ಜೀವಗಳಿಗೆ ಹೊಣೆ ಯಾರಾಗುತ್ತಿದ್ದರು?

    ತೇಜಸ್ವಿ ಸೂರ್ಯ ಎಲ್ಲಾ ಕಡೆಯೂ ತನ್ನ ಮಕ್ಕಳಾಟ ಆಡಲು ಹೋಗುವುದೇಕೆ?

    — Karnataka Congress (@INCKarnataka) January 18, 2023 " class="align-text-top noRightClick twitterSection" data=" ">

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್​ ಮಾಡಿ, ಬಿಜೆಪಿಯ ವಿಐಪಿ ಹುಡುಗನನ್ನು ಯಾವ ಧೈರ್ಯದಲ್ಲಿ ವಿಮಾನ ಸಂಸ್ಥೆ ದೂರುತ್ತಿದೆ?. ಬಿಜೆಪಿಯ ಪ್ರಬಲರಿಗೆ ಇದು ಹೊಸ ನಿಯಮವೇ? ಪ್ರಯಾಣಿಕರ ಸುರಕ್ಷತೆಯಲ್ಲಿ ರಾಜಿ ಮಾಡಿದ್ದಾರೆಯಾ? ಬಿಜೆಪಿಯ ಬಲಾಢ್ಯ ವಿಐಪಿಗಳ ಬಗ್ಗೆ ನೀವು ಪ್ರಶ್ನೆ ಮಾಡುವಂತಿಲ್ಲ ಎಂದು ಲೇವಡಿ ಮಾಡಿದೆ.

  • ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆದದ್ದು ಶಿಕ್ಷಾರ್ಹ ಅಪರಾಧ, ವಿಮಾನಯಾನ ಸಂಸ್ಥೆ ಈ ಪ್ರಕರಣ ಮುಚ್ಚು ಹಾಕಲು ಯತ್ನಿಸಿದ್ದೇಕೆ?
    ಬಿಜೆಪಿಗೊಂದು ಕಾನೂನು, ಇತರರಿಗೊಂದು ಕಾನೂನು ಇದೆಯೇ @BJP4Karnataka?

    ಎದೆ ಸೀಳಿದರೆ ನಾಲ್ಕಕ್ಷರ ಬರುವುದಿಲ್ಲ ಎನ್ನುವ @Tejasvi_Surya ಅವರಲ್ಲಿ ಈಗ ಬಾಯಿ ತೆರೆದರೆ ನಾಲ್ಕು ಮಾತೇ ಹೊರಡುತ್ತಿಲ್ಲವೇಕೆ?

ಏನಿದು ಘಟನೆ?: ಕಳೆದ ಡಿಸೆಂಬರ್‌ 10 ರಂದು ಪ್ರಯಾಣಿಕರೊಬ್ಬರು ಚೆನ್ನೈನಿಂದ ತಿರುಚಿರಾಪಳ್ಳಿಗೆ ತೆರಳಲು ಅಣಿಯಾಗಿ ನಿಂತಿದ್ದ ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರ ಎಳೆದಿದ್ದಾರೆ ಎಂದು ವರದಿಯಾಗಿತ್ತು. ವಿಮಾನದ ಸಿಬ್ಬಂದಿ ಪ್ರಯಾಣಿಕರಿಗೆ ಸುರಕ್ಷತೆಗೆ ಸಂಬಂಧಿಸಿದ ಶಿಷ್ಟಾಚಾರ ಕುರಿತು ಮಾಹಿತಿ ನೀಡುತ್ತಿರುವಾಗ ಘಟನೆ ನಡೆದಿದೆ. ಪ್ರಯಾಣಿಕರ ತುರ್ತು ನಿರ್ಗಮನದ ಬಳಿ ಕುಳಿತಿದ್ದ ಪ್ರಯಾಣಿಕ , ಇದ್ದಕ್ಕಿದ್ದಂತೆ ಲಿವರ್ ಎಳೆದು ನಿರ್ಗಮನ ದ್ವಾರ ತೆರೆದಿದ್ದರು ಎಂದು ಹೇಳಲಾಗಿದೆ.

  • ಆಡೋ ಮಕ್ಕಳಿಗೆ ಯಜಮಾನಿಕೆ ಕೊಟ್ಟರೆ ಏನಾಗಲಿದೆ ಎಂಬ ಮಾತಿಗೆ @Tejasvi_Surya ನಿದರ್ಶನವಾಗಿದ್ದಾರೆ!

    ವಿಮಾನದ ತುರ್ತು ನಿರ್ಗಮನ ಬಾಗಿಲು ತೆಗೆದು ಮಕ್ಕಳ ಚೇಷ್ಟೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ

    ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದೇಕೆ?

    ದೋಸೆ ತಿನ್ನುವ ಚಪಲ ಹೆಚ್ಚಾಗಿ "ಎಮರ್ಜೆನ್ಸಿ ಎಕ್ಸಿಟ್" ಅಗಲು ಹೊರಟಿದ್ದೇ? pic.twitter.com/jeZPeVtwcb

    — Karnataka Congress (@INCKarnataka) January 17, 2023 " class="align-text-top noRightClick twitterSection" data=" ">

ತಕ್ಷಣ ಪ್ರಯಾಣಿಕರನ್ನೆಲ್ಲ ವಿಮಾನದಿಂದ ಕೆಳಗಿಳಿಸಿ ಬಸ್ಸಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಲಾಗಿತ್ತು. ಏರ್‌ಲೈನ್ ಅಧಿಕಾರಿಗಳು ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸ್ಥಳಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮತ್ತೆ ವಿಮಾನ ಹಾರಾಟ ಆರಂಭಿಸಲು ಕನಿಷ್ಠ ಎರಡು ಗಂಟೆ ಬೇಕಾಯಿತು. ನಿಯಮ ಉಲ್ಲಂಘನೆಗೆ ಕೂಡಲೇ ಸಂಬಂಧಪಟ್ಟ ಪ್ರಯಾಣಿಕ ಕ್ಷಮೆಯಾಚಿಸಿದ್ದರು ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.

  • The BJP VIP Brats !

    How dare the airline complain?

    Is it the norm for the BJP power elite?

    Did it compromise passenger safety?

    Ohhh!
    U can’t ask questions about BJP’s entitled VIP’s !https://t.co/BbyJ0oEcN6

    — Randeep Singh Surjewala (@rssurjewala) January 17, 2023 " class="align-text-top noRightClick twitterSection" data=" ">

ಇದನ್ನೂ ಓದಿ: ವಿಮಾನದ ತುರ್ತು ಬಾಗಿಲು ತೆರೆದ ಪ್ರಯಾಣಿಕ..ಹೇಳಿಕೆ ನೀಡಿದ ಡಿಜಿಸಿಎ

Last Updated : Jan 18, 2023, 4:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.