ETV Bharat / state

ಕೈ ಶಾಸಕಾಂಗ ಪಕ್ಷದ ಸಭೆ ಮುಕ್ತಾಯ: ಬಿಸಿಬಿಸಿ ಚರ್ಚೆ ಏನು ಗೊತ್ತಾ?

author img

By

Published : Oct 9, 2019, 8:32 PM IST

ಖಾಸಗಿ ಹೋಟೆಲ್​ನಲ್ಲಿ ನಡೆಯುತ್ತಿದ್ದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ ಮುಕ್ತಾಯಗೊಂಡಿದೆ. ಸಿಎಲ್​ಪಿ ನಾಯಕನ ಆಯ್ಕೆ ಮಾತ್ರವಲ್ಲದೆ ಹಲವು ವಿಚಾರಗಳ ಕುರಿತು ಚರ್ಚೆ ನಡೆದಿದೆ.

ಕೈ ಶಾಸಕಾಂಗ ಪಕ್ಷದ ಸಭೆ ಮುಕ್ತಾಯ, ಬಿಸಿಬಿಸಿ ಚರ್ಚೆ ಏನು ಗೊತ್ತಾ?

ಬೆಂಗಳೂರು: ಖಾಸಗಿ ಹೋಟೆಲ್​ನಲ್ಲಿ ನಡೆಯುತ್ತಿದ್ದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ ಮುಕ್ತಾಯಗೊಂಡಿದೆ. ಸಿಎಲ್​ಪಿ ನಾಯಕನ ಆಯ್ಕೆ ಮಾತ್ರವಲ್ಲದೆ ಹಲವು ವಿಚಾರಗಳ ಕುರಿತು ಚರ್ಚೆ ನಡೆದಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಿಎಲ್​​ಪಿ ಸಭೆಯಲ್ಲಿ ನಾಳಿನ ಕಲಾಪದ ಬಗ್ಗೆ ಚರ್ಚೆ, ಪ್ರವಾಹ ಸಂತ್ರಸ್ತರ ವಿಚಾರವೇ ಹೈಲೈಟ್ ಆಗಿದೆ. ನಾಳೆ ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ. ಸರ್ಕಾರದ ಮೇಲೆ ಮುಗಿಬೀಳಲು ಕಾಂಗ್ರೆಸ್ ತೀರ್ಮಾನ ಮಾಡಿದೆ.

ಕೇಂದ್ರದಿಂದ ನೆರೆ ಪರಿಹಾರ ತರುವಲ್ಲಿ ವಿಫಲವಾಗಿದ್ದು, ರಾಜ್ಯ ಸರ್ಕಾರದಿಂದ ಏನೇನೂ ಪರಿಹಾರ ಸಿಕ್ಕಿಲ್ಲ. ಕೊಟ್ಟ 10 ಸಾವಿರ ರೂ. ಫಲಾನುಭವಿಗಳಿಗೆ ಮುಟ್ಟಿಲ್ಲ. 25 ಸಂಸದರನ್ನ ಗೆಲ್ಲಿಸಿದ್ರೂ ಒಬ್ಬರೂ ಈ ಬಗ್ಗೆ ಮಾತನಾಡುತ್ತಿಲ್ಲ. ಪ್ರಧಾನಿ ಕಂಡರೆ ಮಾರುದ್ದ ಸರಿದು ನಿಲ್ಲುತ್ತಾರೆ. ಇದೇ ವಿಚಾರಗಳನ್ನ ಸದನದಲ್ಲಿ ಪ್ರಸ್ತಾಪಿಸೋಣ. ಎಲ್ಲರೂ ಒಗ್ಗಟ್ಟಾಗಿಯೇ ಮುಗಿಬೀಳಬೇಕು. ಇದೊಂದೇ ನಮಗೆ ಸಿಕ್ಕಿರುವ ಉತ್ತಮ ಅವಕಾಶ. ಸದನ ಮೊಟಕುಗೊಳಿಸಿದರೆ ಅವರಿಗೆ ನಷ್ಟ. ಮಾಧ್ಯಮ ನಿರ್ಬಂಧ ವಿಚಾರವನ್ನೂ ಪ್ರಸ್ತಾಪಿಸೋಣ. ಇದನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ತಿರುಗೇಟು ನೀಡೋಣ. ಹಲವು ಜಿಲ್ಲೆಗಳಲ್ಲಿ ಬರಗಾಲವೂ ತಾಂಡವವಾಡುತ್ತಿದೆ. ಮಳೆಯಿಲ್ಲದೆ ಬೆಳೆಯನ್ನೇ ತೆಗೆಯೋಕೆ ಆಗುತ್ತಿಲ್ಲ. ಈ ವಿಚಾರವನ್ನೂ ನಾವು ಸದನದ ಮುಂದಿಡೋಣ ಎಂದು ಪ್ರಸ್ತಾಪ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಜೆಡಿಎಸ್ ಪಕ್ಷ ನಮ್ಮನ್ನ ಬೆಂಬಲಿಸುವ ಸಾಧ್ಯತೆಯಿದೆ. ಅವರು ಬೆಂಬಲಿಸಿದರೆ ಮತ್ತಷ್ಟು ಬಲ ಸಿಗಲಿದೆ. ಇಲ್ಲವಾದರೂ ನಮಗೆ ಹಚ್ಚಿನ ಲಾಭವಾಗಲಿದೆ. ಅನವಶ್ಯಕವಾಗಿ ಯಾರೂ ಬೇರೆ ವಿಚಾರ ಚರ್ಚಿಸಬೇಡಿ. ಎಲ್ಲರ ದೃಷ್ಟಿ ಪ್ರವಾಹ ಸಂತ್ರಸ್ತರ ಮೇಲಿರಲಿ ಎಂದು ಸಿಎಲ್​​ಪಿ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಶಾಸಕರಿಗೆ ಪಾಠ ಹೇಳಿದ್ದಾರೆ ಎನ್ನಲಾಗಿದೆ.

ಮೈತ್ರಿ ಮುರಿದ ಬಿದ್ದ ಹಿನ್ನೆಲೆ ಪರಿಷತ್ ಉಪ ಸಭಾಪತಿ ಸ್ಥಾನ ಪಡೆಯಲು ಕಾಂಗ್ರೆಸ್ ಸಜ್ಜಾಗಿದೆ. ಈ ಸಂಬಂಧ ಶಾಸಕಾಂಗ ಸಭೆಯಲ್ಲಿ ಶಾಸಕರು ಒತ್ತಡ ಹೇರುವ ಕಾರ್ಯ ಮಾಡಿದರು. ಮೈತ್ರಿ ಇದ್ದ ಕಾರಣ ನಮಗೆ ಬಹುಮತ ಇದ್ದರೂ ನಾವು ಹುದ್ದೆಯನ್ನ ಜೆಡಿಎಸ್​​ಗೆ ಬಿಟ್ಟುಕೊಟ್ಟಿದ್ದೇವೆ. ಇದೀಗ ಮೈತ್ರಿ ಇಲ್ಲ.‌ ಆದ್ದರಿಂದ ಆ ಹುದ್ದೆ ಪಕ್ಷಕ್ಕೆ ಇರಲಿ ಎಂದು ಒತ್ತಡ ಹೇರಿದರು.

ಮೇಲ್ಮನೆ ಉಪ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಚಿಂತನೆಯನ್ನು ಸಹ ಸಭೆಯಲ್ಲಿ ನಡೆಸಲಾಯಿತು. ನಾಳೆ ಅವಿಶ್ವಾಸ ನಿರ್ಣಯ ಮಂಡನೆಗೆ ಕೈ ನಿರ್ಧಾರ ಮಾಡಿದೆ ಎಂಬ ಮಾಹಿತಿ ಇದ್ದು, ಇದರಿಂದಾಗಿ ಪ್ರಸ್ತುತ ಉಪ ಸಭಾಪತಿಯಾಗಿರುವ ಧರ್ಮೇಗೌಡ ಸಹಜವಾಗಿ ಇಕ್ಕಟ್ಟಿಗೆ ಸಿಲುಕಲಿದ್ದಾರೆ.

Intro:newsBody:ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಏನೇನೋ ಚರ್ಚೆ ಗೊತ್ತಾ?!

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಖಾಸಗಿ ಹೋಟೆಲ್ ನಲ್ಲಿ ನಡೆದಿದ್ದು ಸಿಎಲ್ ಪಿ ನಾಯಕರ ಆಯ್ಕೆ ಮಾತ್ರವಲ್ಲದೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯುತ್ತಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಿಎಲ್ ಪಿ ಸಭೆಯಲ್ಲಿ, ನಾಳಿನ ಕಲಾಪದ ಬಗ್ಗೆ ಚರ್ಚೆ, ಪ್ರವಾಹ ಸಂತ್ರಸ್ಥರ ವಿಚಾರವೇ ಹೈಲೈಟ್ ಆಗಿದೆ. ನಾಳೆ ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ. ಸರ್ಕಾರದ ಮೇಲೆ ಮುಗಿಬೀಳಲು ಕಾಂಗ್ರೆಸ್ ತೀರ್ಮಾನ ಮಾಡಿದೆ.
ಕೇಂದ್ರದಿಂದ ನೆರೆ ಪರಿಹಾರ ತರುವಲ್ಲಿ ವಿಫಲವಾಗಿದ್ದು, ರಾಜ್ಯ ಸರ್ಕಾರದಿಂದ ಏನೇನೂ ಪರಿಹಾರ ಸಿಕ್ಕಿಲ್ಲ. ಕೊಟ್ಟ 10 ಸಾವಿರ ರೂ. ಫಲಾನುಭವಿಗಳಿಗೆ ಸಿಕ್ಕಿಲ್ಲ. 25 ಸಂಸದರನ್ನ ಗೆಲ್ಲಿಸಿದ್ರೂ ಒಬ್ಬರು ಬಾಯಿ ಬಿಡ್ತಿಲ್ಲ. ಪ್ರಧಾನಿ ಕಂಡರೆ ಮಾರುದ್ದ ದೂರ ನಿಲ್ತಾರೆ. ಇದೇ ವಿಚಾರಗಳನ್ನ ಸದನದಲ್ಲಿ ಪ್ರಸ್ತಾಪಿಸೋಣ. ಎಲ್ಲರೂ ಒಗ್ಗಟ್ಟಾಗಿಯೇ ಮುಗಿಬೀಳಬೇಕು. ಇದೊಂದೇ ನಮಗೆ ಸಿಕ್ಕಿರುವ ಉತ್ತಮ ಅವಕಾಶ. ಸದನ ಮೊಟಕು ಗೊಳಿಸಿದರೆ ಅವರಿಗೆ ನಷ್ಟ. ಮಾಧ್ಯಮ ನಿರ್ಭಂದ ವಿಚಾರವನ್ನೂ ಪ್ರಸ್ತಾಪಿಸೋಣ. ಇದನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ತಿರುಗೇಟು ನೀಡೋಣ. ಹಲವು ಜಿಲ್ಲೆಗಳಲ್ಲಿ ಬರಗಾಲವೂ ತಾಂಡವವಾಡುತ್ತಿದೆ. ಮಳೆಯಿಲ್ಲದೆ ಬೆಳೆಯನ್ನೇ ತೆಗೆಯೋಕೆ ಆಗುತ್ತಿಲ್ಲ.ಈ ವಿಚಾರವನ್ನೂ ನಾವು ಸದನದ ಮುಂದಿಡೋಣ ಎಂಬ ವಿಚಾರವನ್ನ ಪ್ರಸ್ತಾಪ ಮಾಡಲಾಗಿದೆ.
ಜೆಡಿಎಸ್ ಪಕ್ಷ ನಮ್ಮನ್ನ ಬೆಂಬಲಿಸೋ ಸಾಧ್ಯತೆಯಿದೆ. ಅವರು ಬೆಂಬಲಿಸಿದರೆ ಮತ್ತಷ್ಟು ಬಲ ಸಿಗಲಿದೆ. ಇಲ್ಲವಾದರೂ ನಮಗೆ ಹಚ್ಚಿನ ಲಾಭವಾಗಲಿದೆ. ಅನವಶ್ಯಕವಾಗಿ ಯಾರೂ ಬೇರೆ ವಿಚಾರ ಚರ್ಚಿಸಬೇಡಿ. ಎಲ್ಲರ ದೃಷ್ಠಿ ಪ್ರವಾಹ ಸಂತ್ರಸ್ಥರ ಮೇಲಿರಲಿ. ಸಿಎಲ್ ಪಿ ಸಭೆಯಲ್ಲಿ ಸಿದ್ದರಾಮಯ್ಯ, ಪರಮೇಶ್ವರ್ ಶಾಸಕರಿಗೆ ಪಾಠ ಹೇಳಿದ್ದಾರೆ.
ಮೈತ್ರಿ ಮುರಿದ ಬಿದ್ದ ಹಿನ್ನಲೆ, ಪರಿಷತ್ ಉಪಸಭಾಪತಿ ಸ್ಥಾನ ಪಡೆಯಲು ಕಾಂಗ್ರೆಸ್ ಸಜ್ಜಾಗಿದೆ. ಈ ಸಂಬಂಧ ಶಾಸಕಾಂಗ ಸಭೆಯಲ್ಲಿ ಶಾಸಕರು ಒತ್ತಡ ಹೇರುವ ಕಾರ್ಯ ಮಾಡಿದರು. ಮೈತ್ರಿ ಇದ್ದ ಕಾರಣ ನಮಗೆ ಬಹುಮತ ಇದ್ದರೂ ನಾವು ಹುದ್ದೆಯನ್ನ ಜೆಡಿಎಸ್ ಗೆ ಬಿಟ್ಟು ಕೊಟ್ಟಿದ್ದೇವೆ. ಇದೀಗ ಮೈತ್ರಿ ಇಲ್ಲ.‌ ಆದ್ರಿಂದ ಆ ಹುದ್ದೆ ಪಕ್ಷಕ್ಕೆ ಇರಲಿ ಎಂದು ಒತ್ತಡ ಹೇರಿದರು.
ಮೇಲ್ಮನೆ ಉಪಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಚಿಂತನೆ ಕೂಡ ಸಭೆಯಲ್ಲಿ ನಡೆಸಲಾಯಿತು. ನಾಳೆ ಅವಿಶ್ವಾಸ ನಿರ್ಣಯ ಮಂಡನೆಗೆ ಕೈ ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿ ಇದ್ದು, ಪ್ರಸ್ತುತ ಉಪಸಭಾಪತಿಯಾಗಿರುವ ಧರ್ಮೇಗೌಡ ಇದರಿಂದಾಗಿ ಸಹಜವಾಗಿ ಇಕ್ಕಟ್ಟಿಗೆ ಸಿಲುಕಲಿದ್ದಾರೆ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.