ETV Bharat / state

ಅಧಿಕೃತ ಪಟ್ಟಿ ಬಿಡುಗಡೆಗೆ ವಿಳಂಬ : ಬಿ ಫಾರಂ ಪಡೆಯುತ್ತಿರುವ ಪರಿಷತ್ ಕೈ ಅಭ್ಯರ್ಥಿಗಳು - ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

25 ಸ್ಥಾನಗಳಿಗೆ ನಡೆಯುವ ವಿಧಾನಪರಿಷತ್​ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳು ಕಚೇರಿಗೆ ತೆರಳಿ ಬಿ ಫಾರಂ ಪಡೆದಿದ್ದಾರೆ..

council election Congress candidates list
ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
author img

By

Published : Nov 22, 2021, 6:13 PM IST

ಬೆಂಗಳೂರು : ವಿಧಾನಪರಿಷತ್ ಚುನಾವಣೆಗೆ (Karnataka legislative council election) ಕಾಂಗ್ರೆಸ್​​ ಅಧಿಕೃತ ಪಟ್ಟಿ ಪ್ರಕಟವಾಗುವ ಮುನ್ನವೇ ಅಭ್ಯರ್ಥಿಗಳು 'ಬಿ' ಫಾರಂ ಪಡೆಯಲು ಆರಂಭಿಸಿದ್ದಾರೆ.

ವಿಧಾನಪರಿಷತ್ತಿನ 25 ಸ್ಥಾನಗಳಿಗೆ ಡಿಸೆಂಬರ್ 10ಕ್ಕೆ ನಡೆಯುವ ಚುನಾವಣೆಗೆ ನಾಳೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಆದರೆ, ಕಾಂಗ್ರೆಸ್​ನಲ್ಲಿ (Congress) ಹೈಕಮಾಂಡ್​​​ನಿಂದ ಹಸಿರು ನಿಶಾನೆ ಪಡೆದು ಪಟ್ಟಿ ಪ್ರಕಟ ಮಾಡುವುದು ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಟ್ಟಿಯನ್ನು ಪ್ರಕಟಿಸಿದೆ ಅಭ್ಯರ್ಥಿಗಳಿಗೆ ನೇರವಾಗಿ ಬಿ ಫಾರಂ ನೀಡುವ ಕಾರ್ಯ ಮಾಡಲಾಗುತ್ತಿದೆ.

ನಾಳೆ ಸಂಜೆಯೊಳಗೆ ನಾಮಪತ್ರ ಸಲ್ಲಿಕೆ ಮಾಡಬೇಕಿರುವ ಹಿನ್ನೆಲೆಯಲ್ಲಿ ಇಂದು ಅಭ್ಯರ್ಥಿಗಳಿಗೆ 'ಬಿ' ಫಾರಂ ವಿತರಿಸುವ ಕಾರ್ಯ ನಡೆದಿದೆ. ಅಧಿಕೃತ ಪಟ್ಟಿ ಬಿಡುಗಡೆ ಮಾಡುವುದೇ ಅನುಮಾನ ಎಂಬ ಮಾತು ಕೇಳಿ ಬರುತ್ತಿದೆ. ಒಂದೊಮ್ಮೆ ಅದು ಬಿಡುಗಡೆಯಾದರೂ ಔಪಚಾರಿಕವಾಗಿ ಇರಲಿದೆ ಎಂಬ ಮಾಹಿತಿ ಇದೆ.

ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ. 25 ಕ್ಷೇತ್ರಗಳ ಪೈಕಿ 5 ದ್ವಿಸದಸ್ಯತ್ವ ಹೊಂದಿದ ಜಿಲ್ಲೆಗಳು ಇವೆ. ಕಾಂಗ್ರೆಸ್ ಪಕ್ಷದ ಒಟ್ಟು 13 ಸದಸ್ಯರು ಜನವರಿಗೆ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಿದ್ದಾರೆ. ಬಹುತೇಕ ಸದಸ್ಯರು ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಹೊಸ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಪಕ್ಷ ಮಣೆ ಹಾಕಿದೆ.

ಅಧಿಕೃತ ಪಟ್ಟಿ ಪ್ರಕಟವಾಗದಿದ್ದರೂ ಅಭ್ಯರ್ಥಿಗಳ ಮಾಹಿತಿ ಇಂತಿದೆ :

  • ಬೆಂಗಳೂರು ನಗರ- ಕೆಜಿಎಫ್ ಬಾಬು
  • ಬೆಂಗಳೂರು ಗ್ರಾಮಾಂತರ- ರವಿ
  • ಬೆಳಗಾವಿ- ಚನ್ನರಾಜ ಹಟ್ಟಿಹೊಳಿ
  • ಉತ್ತರಕನ್ನಡ- ಸಾಯಿ ಗಾಂವ್ಕರ್
  • ಕೋಲಾರ - ಅನಿಲ್​ ಕುಮಾರ್​​
  • ತುಮಕೂರು-ರಾಜೇಂದ್ರ
  • ಚಿಕ್ಕಮಗಳೂರು -ಗಾಯತ್ರಿ ಶಾಂತೇಗೌಡ
  • ಕಲಬುರಗಿ- ಶಿವಾನಂದ ಪಾಟೀಲ ಮರ್ತೂರು
  • ವಿಜಯಪುರ -ಸುನೀಲ್​ ಗೌಡ
  • ಬೀದರ್- ಭೀಮಗೌಡ
  • ಮಂಡ್ಯ- ದಿನೇಶ ಗೂಳಿಗೌಡ
  • ರಾಯಚೂರು- ಶರಣೇಗೌಡ ಬಯ್ಯಾಪುರ
  • ಮೈಸೂರು-ತಿಮ್ಮಯ್ಯ
  • ಹಾಸನ -ಶಂಕರಪ್ಪ
  • ಕೊಡಗು- ಮಂತರಗೌಡ
  • ಬಳ್ಳಾರಿ -ಕೆ ಸಿ ಕೊಂಡಯ್ಯ
  • ಧಾರವಾಡ- ಸಲೀಂ ಅಹ್ಮ
  • ಶಿವಮೊಗ್ಗ- ಪ್ರಸನ್ನಕುಮಾರ್​​
  • ಮಂಗಳೂರು- ಮಂಜುನಾಥ ಭಂಡಾರಿ

ಈ ಪಟ್ಟಿಯನ್ನು ಗಮನಿಸಿದರೆ ಪ್ರಸನ್ನಕುಮಾರ್, ರವಿ ಹಾಗೂ ಕೆ ಸಿ ಕೊಂಡಯ್ಯ ಅವರು ಮಾತ್ರ ಆಯ್ಕೆಗೆ ಸ್ಪರ್ಧೆಗಿಳಿದಿದ್ದಾರೆ. ಬೆಂಗಳೂರು ಕೈ ಅಭ್ಯರ್ಥಿ ಬದಲು ಬೆಂಗಳೂರು ಪರಿಷತ್ ಅಭ್ಯರ್ಥಿಯಾಗಿ ಕೆಜಿಎಫ್ ಬಾಬು ಆಯ್ಕೆಯಾಗಿದ್ದು, ಇಂದು ಕೆಪಿಸಿಸಿ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆಯ ಬಿ ಫಾರಂ ಪಡೆದಿದ್ದಾರೆ.

ಈ ಹಿಂದೆ ಬೆಂಗಳೂರು ನಗರ ಅಭ್ಯರ್ಥಿಯಾಗಿ ಚೇತನ್ ಗೌಡರಿಗೆ ಟಿಕೆಟ್ ಫಿಕ್ಸ್ ಮಾಡಿದ್ದ ರಾಜ್ಯ ಘಟಕ, ಎಐಸಿಸಿಗೂ ಇವರೊಬ್ಬರ ಹೆಸರನ್ನೇ ಕಳಿಸಿತ್ತು.

ಟಿಕೆಟ್ ದೊರೆಯುವುದು ಖಚಿತವಾದ ಹಿನ್ನೆಲೆ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದ ಚೇತನ್ ಗೌಡ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಅಭ್ಯರ್ಥಿಯ ಹೆಸರು ಬದಲಿಸಿ ಕಾಂಗ್ರೆಸ್ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ಗ್ರಾ.ಪಂ ಸದಸ್ಯರ ಕಡೆ ಮುಖ ಮಾಡಿದ ಮೂರು ಪಕ್ಷಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.