ETV Bharat / state

ರೈತರ ಪಂಪ್ ಸೆಟ್​ಗಳಿಗೆ ಅಸಮರ್ಪಕ ವಿದ್ಯುತ್: ಪರಿಷತ್​ನಲ್ಲಿ ಕಾಂಗ್ರೆಸ್, ಬಿಜೆಪಿ ಸದಸ್ಯರ ಜಟಾಪಟಿ - ​ ETV Bharat Karnataka

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತಿನ ಸಮರ ನಡೆದಿದೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ
author img

By ETV Bharat Karnataka Team

Published : Dec 4, 2023, 4:36 PM IST

Updated : Dec 4, 2023, 5:29 PM IST

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ

ಬೆಂಗಳೂರು : ರೈತರ ಪಂಪ್ ಸೆಟ್ ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ನಿಯಂತ್ರಿಸಲು ಸಭಾಪತಿ ಎದ್ದು ನಿಲ್ಲಬೇಕಾಯಿತು. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಅರ್ಧಗಂಟೆ ಚರ್ಚೆಗೆ ಅವಕಾಶ ನೀಡುವ ಭರವಸೆ ಮೂಲಕ ಸದನದಲ್ಲಿನ ಗದ್ದಲವನ್ನು ತಿಳಿಗೊಳಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ರೈತರ ಬೆಳೆಗಳಿಗೆ ನೀರು ಹಾಯಿಸಲು ವಿದ್ಯುತ್ ಕೊರತೆ ಎದುರಾಗಿದೆ. ವಿದ್ಯುತ್ ಪೂರೈಸಲು ತಾರತಮ್ಯವಾಗಿದೆ. ಅವೈಜ್ಞಾನಿಕ ಲೋಡ್ ಶೆಡ್ಡಿಂಗ್ ನಡೆಯುತ್ತಿದೆ. ನೀರಾವರಿ ಆಧರಿಸಿ ಬೆಳೆ ಬೆಳೆಯುವವರಿಗೆ ಅನ್ಯಾಯವಾಗಿದೆ. 7 ಗಂಟೆಗಳ ಕಾಲ ವಿದ್ಯುತ್ ಕೊಡುತ್ತೇವೆ ಎಂದು ಸರ್ಕಾರ ವಾಗ್ದಾನ ಮಾಡಿದೆ. ನಾನು ಬರ ಅಧ್ಯಯನಕ್ಕೆ ಹೋಗಿದ್ದೆ. ಹಗಲು ಎರಡು ಗಂಟೆ, ರಾತ್ರಿ ಒಂದು ಗಂಟೆ ತ್ರೀಫೇಸ್ ವಿದ್ಯುತ್ ಬರುತ್ತಿದೆ. ಆರ್ಜೆಂಟ್​ನಲ್ಲಿ ಪಂಪ್ ಸೆಟ್ ಗಳು ಶುರು ಮಾಡಲು ಹೋದರೆ ಸುಟ್ಟು ಹೋಗುತ್ತಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಇದಕ್ಕೆ ಏನು ಪರಿಹಾರ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ಇಂಧನ ಸಚಿವ ಕೆ.ಜೆ ಜಾರ್ಜ್ ಬದಲಾಗಿ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಬರಗಾಲದ ಕಾರಣ ವಿದ್ಯುತ್ ಉತ್ಪಾದನೆಗೆ ತೊಂದರೆಯಾಗಿದೆ. ವಿದ್ಯುತ್ ಬೇಡಿಕೆಯೂ ಹೆಚ್ಚಾಗಿದೆ‌. ಒಂದೂವರೆ ತಿಂಗಳು ತೊಂದರೆ ಆಗಿತ್ತು. ಈಗ ರೈತರಿಗೆ ವಿದ್ಯುತ್ ನೀಡಲಾಗುತ್ತಿದೆ. ಇದಕ್ಕಾಗಿ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಎಲ್ಲೆಲ್ಲಿ ಬೇಡಿಕೆಯಿದೆಯೋ ಅಲ್ಲಿ ವಿದ್ಯುತ್ ನೀಡುವ ಕೆಲಸ ಆಗುತ್ತಿದೆ. ರಾಜ್ಯದಲ್ಲಿ ಉತ್ಪಾದನೆ ಆಗುವ ವಿದ್ಯುತ್ ಹೊರ ರಾಜ್ಯಗಳಿಗೆ ನೀಡುವಂತಿಲ್ಲ ಎಂದು ಮಾಡಿದ್ದೇವೆ.

ರೈತರಿಗೆ ಏಳು ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ರೈತರ ಕೃಷಿ ಪಂಪ ಸೆಟ್ ಗೆ ಸರ್ಕಾರದಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಭತ್ತ ಮತ್ತು ಕಬ್ಬು ಬೆಳೆಗಳ ಕಟಾವು ಪೂರ್ವ ಅವಧಿಯಲ್ಲಿ 7 ಗಂಟೆಗೂ ಹೆಚ್ಚು ಅವಧಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಕೆಲ ಪ್ರದೇಶಗಳಲ್ಲಿ ಸ್ಥಳೀಯ ಅವಶ್ಯಕತೆಗೆ ತಕ್ಕಂತೆ ರಾತ್ರಿ 3 ಗಂಟೆ, ಹಗಲು 3 ಗಂಟೆ ನೀಡಲಾಗುತ್ತಿದೆ. ಕೆಲ ಸಮಯದಲ್ಲಿ ಲಭ್ಯತೆ ಅಥವಾ ಉತ್ಪಾದನೆ ಕುಂಠಿತಗೊಂಡು ಸೀಮಿತ ಪ್ರಮಾಣದಲ್ಲಿ ವಿದ್ಯುತ್ ಸರಬರಾಜು ಮಾಡಲಾಗಿದೆ ಎಂದು ಸದನಕ್ಕೆ ವಿವರಿಸಿದರು.

ವಿದ್ಯುತ್ ಕೊರತೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ಉತ್ತರಕ್ಕೆ ಬಿಜೆಪಿ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಸುಳ್ಳು ಹೇಳಲು ಒಂದು ಲಿಮಿಟ್​ ಇರಬೇಕು‌ ಎಂದು ಬಿಜೆಪಿ ಸದಸ್ಯರು ವಾಗ್ದಾಳಿ ನಡೆಸಿದರು. ಈ ವೇಳೆ ಅಡಳಿತ ಮತ್ತು ವಿಪಕ್ಷ ಸದಸ್ಯರಿಂದ ಸದನದಲ್ಲಿ ಗದ್ದಲ ಕೋಲಾಹಲದ ವಾತಾವರಣ ಸೃಷ್ಟಿಯಾಯಿತು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಸದನವನ್ನು ನಿಯಂತ್ರಣ ಮಾಡಲು ಎದ್ದು ನಿಂತ ಸಭಾಪತಿ ಬಸವರಾಜ ಹೊರಟ್ಟಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ನಂತರ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸಭಾಪತಿ ಬಸವರಾಜ ಹೊರಟ್ಟಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಗದ್ದಲ ಕೈಬಿಟ್ಟರು.

ಗೃಹಜ್ಯೋತಿ ಯೋಜನೆಗೆ 12 ಲಕ್ಷ ಅರ್ಜಿದಾರರು ಅನರ್ಹ: ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡ 1.62 ಕೋಟಿ ಅರ್ಜಿಗಳಲ್ಲಿ 12 ಲಕ್ಷ ಅರ್ಜಿಗಳನ್ನು ಪರಿಗಣಿಸಿಲ್ಲ. ಯೋಜನೆಯ ಷರತ್ತುಗಳ ವ್ಯಾಪ್ತಿಯ ಹೊರಗೆ ಬರುವ ಕಾರಣ ಅವರಿಗೆ ಯೋಜನೆಯ ಲಾಭ ಸಿಕ್ಕಿಲ್ಲ ಎಂದು ಇಂಧನ ಸಚಿವರ ಪರವಾಗಿ ಸಚಿವ ಪ್ರಿಯಾಂಕ್ ಖರ್ಗೆ ವಿಧಾನ ಪರಿಷತ್ ಗೆ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಎಂ.ನಾಗರಾಜ್ ಮತ್ತು ಬಿಜೆಪಿ ಸದಸ್ಯ ಕೇಶವ ಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದಲ್ಲಿ 2 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಇದೆ. ಇದರಲ್ಲಿ 1.62ಕೋಟಿ ಮನೆಗಳಿಗೆ ಗೃಹಜ್ಯೋತಿಗಾಗಿ ನೋಂದಾಯಿಸಿದ್ದಾರೆ. 1.5 ಕೋಟಿ ಮನೆಗಳ ಜನರು ಯೋಜನೆ ಲಾಭ ಪಡೆದಿದ್ದಾರೆ. 12 ಲಕ್ಷ ಜನರಿಗೆ ಈ ಯೋಜನೆ ಸಿಕ್ಕಿಲ್ಲ. ಇದಕ್ಕೆ ಯೋಜನೆಯ ಷರತ್ತುಗಳ ಪೂರೈಕೆಯಾಗದಿರುವುದು ಕಾರಣ. ಅವರಲ್ಲಿ ಬಹುತೇಕ ಮನೆಗಳವರು ಮಾಸಿಕ 200 ಯೂನಿಟ್ ಬಳಿಕೆ ಮಿತಿಯನ್ನು ದಾಟಿದ್ದಾರೆ. ಇನ್ನು ಕೆಲವು ಹೊಸದಾಗಿ ನೋಂದಾಯಿಸಿದವರಿದ್ದಾರೆ. ಹಾಗಾಗಿ ಅವರಿಗೆ ಇನ್ನು ಯೋಜನೆಯ ಲಾಭ ಸಿಕ್ಕಿಲ್ಲ ಎಂದರು.

ಹೊಸದಾಗಿ ಮನೆಗಳಿಗೆ ಬಂದವರು, ಹೊಸ ಮನೆಗಳ ನಿರ್ಮಾಣ ಮಾಡಿದವರ ಅರ್ಜಿಗಳ ಪರಿಗಣಿಸಿದಾಗ ಅವರ 12 ತಿಂಗಳ ಹಿಂದಿನ ವಿದ್ಯುತ್ ಬಳಕೆ ಮಾಹಿತಿ ಸಿಗದ ಕಾರಣ ಪೂರ್ವನಿರ್ಧಾರಿತದಂತೆ ಅವರಿಗೆಲ್ಲಾ ತಲಾ 53 ಯೂನಿಟ್ ವಿದ್ಯುತ್ ಉಚಿತವವಾಗಿ ಕೊಡಲಾಗುತ್ತಿದೆ. ಯೋಜನೆಗೆ ಯಾವುದೇ ಕಾಲಮಿತಿ ಇಲ್ಲ. ಯಾವಾಗ ಬೇಕಾದರೂ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ ಎಂದು ಹೇಳಿದರು.

ಕೈಗಾರಿಕೆ ಮತ್ತು ರೈತರಿಗೆ ನೀಡುವ ವಿದ್ಯುತ್ ವಿಚಾರ ಕುರಿತ ಪ್ರಶ್ನೆ ಬಿಜೆಪಿ ಸದಸ್ಯರು ಎತ್ತಿದ್ದರಿಂದಾಗಿ ಗೃಹಜ್ಯೋತಿ ಯೋಜನೆ ವ್ಯಾಪ್ತಿಯ ಹೊರಗಿನ ವಿಷಯವಾದ ಕಾರಣ ಅದಕ್ಕೆ ಪ್ರಿಯಾಂಕ್ ಖರ್ಗೆ ಉತ್ತರಿಸಲಿಲ್ಲ. ಸಭಾಪತಿಗಳು ಸಲಹೆ ಮೇರೆಗೆ ಅರ್ಧ ಗಂಟೆ ಚರ್ಚಿಗೆ ಅರ್ಜಿ ಸಲ್ಲಿಸುವ ನಿರ್ಧಾರವನ್ನು ಬಿಜೆಪಿ ಸದಸ್ಯ ಕೇಶವ ಪ್ರಸಾದ್ ಪ್ರಕಟಿಸಿ ಚರ್ಚೆಗೆ ತೆರೆ ಎಳೆದರು.

ಇದನ್ನೂ ಓದಿ : ಕಾಂಗ್ರೆಸ್​ ಪಕ್ಷದ ಪೊಳ್ಳು ಗ್ಯಾರಂಟಿಗಳನ್ನು ಜನ ನಂಬಲಿಲ್ಲ: ಬಿ.ವೈ.ವಿಜಯೇಂದ್ರ

Last Updated : Dec 4, 2023, 5:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.