ETV Bharat / state

ವಲಸೆ ಕಾರ್ಮಿಕರ ವಿಚಾರದಲ್ಲಿ ಕಾಂಗ್ರೆಸ್ ಆರೋಪ ಸುಳ್ಳು.. ಸಚಿವ ಆರ್.ಅಶೋಕ್​ - ವಲಸೆ ಕಾರ್ಮಿಕರ ವಿಚಾರದಲ್ಲಿ ಕಾಂಗ್ರೆಸ್ ಆರೋಪ ಸುಳ್ಳು: ಸಚಿವ ಆರ್.ಅಶೋಕ್​

ಮೇ 8ರಿಂದ ಮೇ 15ರವೆರೆಗೆ ವಿಶೇಷ ಟ್ರೈನ್ ಬುಕ್ ಮಾಡಲಾಗಿದೆ‌. ಬಿಹಾರ ಒಂದು ಟ್ರೈನ್​ಗೆ ಮಾತ್ರ ಅನುಮತಿ ಕೊಟ್ಟಿದೆ. ನಾಳೆ ಆ ರೈಲಿನಲ್ಲಿ ವಲಸಿಗರನ್ನು ಕಳಿಸಿಕೊಡಲಾಗುತ್ತದೆ‌. ಉಳಿದ ರಾಜ್ಯಗಳಿಗೆ ಪತ್ರ ಬರೆದು ಅನುಮತಿ ಕೇಳಲಾಗಿದೆ.

Minister R. Ashok
ವಲಸೆ ಕಾರ್ಮಿಕರ ವಿಚಾರದಲ್ಲಿ ಕಾಂಗ್ರೆಸ್ ಆರೋಪ ಸುಳ್ಳು: ಸಚಿವ ಆರ್.ಅಶೋಕ್​
author img

By

Published : May 7, 2020, 4:54 PM IST

ಬೆಂಗಳೂರು : ವಲಸೆ ಕಾರ್ಮಿಕರ ವಿಚಾರದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಆರೋಪ ಸುಳ್ಳು ಎಂದು ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟನೆ ನೀಡಿದರು‌.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವು ಆಯಾ ರಾಜ್ಯಗಳಿಗೆ‌ ಕಾರ್ಮಿಕರನ್ನು ವಿಶೇಷ ರೈಲು ಮೂಲಕ ಕಳುಹಿಸಿಕೊಡಲು ಪತ್ರ ಬರೆದಿದ್ದೇವೆ. ಆದರೆ, ಕೆಲ ರಾಜ್ಯಗಳಿಂದ ಯಾವುದೇ ಉತ್ತರ ಬಂದಿಲ್ಲ‌. ಅವರ ಒಪ್ಪಿಗೆಗೆ ಕಾಯುತ್ತಿದ್ದೇವೆ. ಜೊತೆಗೆ ಫೋನ್ ಸಹ ಮಾಡಿದರೂ ಅದಕ್ಕೆ ಉತ್ತರ ಕೊಡುತ್ತಿಲ್ಲ. ಆದರೆ, ಬಿಹಾರ್ ಸರ್ಕಾರ ಮಾತ್ರ‌ ಅಷ್ಟು ಜನರನ್ನು ಒಂದೇ ಬಾರಿ ಕಳಿಸಬೇಡಿ ಎಂದು ಹೇಳಿದೆ. ದಿನಕ್ಕೆ ಒಂದು ಟ್ರೈನ್​ನಲ್ಲಿ ಮಾತ್ರ ಕಳಿಸಿದರೆ ಇಲ್ಲಿ ಅವರನ್ನು ಕ್ವಾರೆಂಟೈನ್ ಮಾಡಲು ವ್ಯವಸ್ಥೆ ಮಾಡಬಹುದು. ಒಂದು ಪಕ್ಷ ಜಾಸ್ತಿ ಜನರನ್ನು ಕಳಿಸಿದ್ರೆ ತುಂಬ ಸಮಸ್ಯೆ ಆಗುತ್ತದೆ. ಹೀಗಾಗಿ ನಾಳೆ ಎರಡು ಟ್ರೈನ್ ಹೋಗಬೇಕಿತ್ತು. ಆದರೆ, ಅವರ ಕೋರಿಕೆ ಮೇರೆಗೆ ನಾಳೆ ಒಂದು ಟ್ರೈನ್ ಬಿಹಾರ್​ಗೆ ಹೋಗಲಿದೆ ಎಂದು ಸ್ಪಷ್ಟಪಡಿಸಿದರು.

ಯಾರು, ಯಾರು ದಾಖಲಾತಿಗಳ ಮೂಲಕ ರಿಜಿಸ್ಟರ್ ಮಾಡಿಕೊಂಡಿದ್ದೀರೋ ಅವರ ಫೋನ್​ಗೆ ಮೆಸೇಜ್ ಬರುತ್ತದೆ. ಅಂತವರು ಮಾತ್ರ ಹೋಗಬೇಕು. ಹೀಗಾಗಿ ನಾವು ಯಾರನ್ನೂ ಇಲ್ಲಿ ಬಲವಂತವಾಗಿ ಇಟ್ಟು ಕೊಂಡಿಲ್ಲ. ಕಾಂಗ್ರೆಸ್ ಈ ಬಗ್ಗೆ ರಾಜಕಾರಣ ಮಾಡಬಾರದು ಎಂದು ತಿಳಿಸಿದರು.

ವಿಶೇಷ ರೈಲುಗಳ ವಿವರ ಹೀಗಿದೆ : ಮೇ 8ರಿಂದ ಮೇ 15ರವೆರೆಗೆ ವಿಶೇಷ ಟ್ರೈನ್ ಬುಕ್ ಮಾಡಲಾಗಿದೆ‌. ಬಿಹಾರ ಒಂದು ಟ್ರೈನ್​ಗೆ ಮಾತ್ರ ಅನುಮತಿ ಕೊಟ್ಟಿದೆ. ನಾಳೆ ಆ ರೈಲಿನಲ್ಲಿ ವಲಸಿಗರನ್ನು ಕಳಿಸಿಕೊಡಲಾಗುತ್ತದೆ‌. ಉಳಿದ ರಾಜ್ಯಗಳಿಗೆ ಪತ್ರ ಬರೆದು ಅನುಮತಿ ಕೇಳಲಾಗಿದೆ. ಆ ರಾಜ್ಯಗಳು ಅನುಮತಿ ಕೊಟ್ರೆ ಟ್ರೈ‌ನ್​ನಲ್ಲಿ ಕಳಿಸುತ್ತೇವೆ ಎಂದು ತಿಳಿಸಿದರು.

ಜಾರ್ಖಾಂಡ್-2 ವಿಶೇಷ ಟ್ರೈನ್ ಬುಕ್( ಆ ರಾಜ್ಯದಿಂದ ಅನುಮತಿ ಸಿಕ್ಕಿಲ್ಲ)

ಬಿಹಾರ- 2 ವಿಶೇಷ ಟ್ರೈನ್( ಒಂದು ಟ್ರೈನ್‌ಗೆ ಮಾತ್ರ ಅನುಮತಿ ಸಿಕ್ಕಿದೆ. ನಾಳೆ ಆ ಟ್ರೈನ್ ಹೊರಡುತ್ತೆ)

ಉತ್ತರ ಪ್ರದೇಶ - 2 ವಿಶೇಷ ಟ್ರೈನ್ ಬುಕ್( ಆ ರಾಜ್ಯದಿಂದ ಅನುಮತಿ ಸಿಕ್ಕಿಲ್ಲ)

ಮಣಿಪುರ -1 ವಿಶೇಷ ಟ್ರೈನ್ ಬುಕ್( ಆ ರಾಜ್ಯದಿಂದ ಅನುಮತಿ ಸಿಕ್ಕಿಲ್ಲ)

ತ್ರಿಪುರಾ - 1 ವಿಶೇಷ ಟ್ರೈನ್ ಬುಕ್.( ಆ ರಾಜ್ಯದಿಂದ ಅನುಮತಿ ಸಿಕ್ಕಿಲ್ಲ)

ಪಶ್ಚಿಮ ಬಂಗಾಳ -2 ವಿಶೇಷ ಟ್ರೈನ್ ಬುಕ್. ( ಆ ರಾಜ್ಯದಿಂದ ಅನುಮತಿ ಸಿಕ್ಕಿಲ್ಲ)

ಮಧ್ಯಪ್ರದೇಶ -1 ವಿಶೇಷ ಟ್ರೈನ್ ಬುಕ್.( ಆ ರಾಜ್ಯದಿಂದ ಅನುಮತಿ ಸಿಕ್ಕಿಲ್ಲ)

ರಾಜಸ್ಥಾನ -1 ವಿಶೇಷ ಟ್ರೈನ್ ಬುಕ್( ಆ ರಾಜ್ಯದಿಂದ ಅನುಮತಿ ಸಿಕ್ಕಿಲ್ಲ)

ಒಡಿಶಾ -2 ವಿಶೇಷ ಟ್ರೈನ್ ಬುಕ್‌( ಆ ರಾಜ್ಯದಿಂದ ಅನುಮತಿ ಸಿಕ್ಕಿಲ್ಲ)

ಕೋವಿಡ್​ಗಾಗಿ 208.01 ಕೋಟಿ ಬಿಡುಗಡೆ: ಕೋವಿಡ್-19ಗಾಗಿ ಒಟ್ಟು ‌ 208.01 ಕೋಟಿ ಈವರೆಗೆ ರಿಲೀಸ್ ಮಾಡಲಾಗಿದೆ ಎಂದು ತಿಳಿಸಿದರು. ವಿಪತ್ತು ನಿರ್ವಹಣಾ ಕೇಂದ್ರದ ವತಿಯಿಂದ ಈ ಹಣ ರಿಲೀಸ್ ಮಾಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ₹20 ಕೋಟಿ ರಿಲೀಸ್‌ ಮಾಡಲಾಗಿದೆ‌. ಬೆಂಗಳೂರು ನಗರ ಜಿಲ್ಲೆಗೆ 25 ಕೋಟಿ ರಿಲೀಸ್ ಮಾಡಲಾಗಿದೆ‌. ಪೊಲೀಸರಿಗೆ ರಕ್ಷಣಾ ಕವಚ ಖರೀದಿಗೆ ₹5 ಕೋಟಿ ರಿಲೀಸ್ ಆಗಿದೆ ಎಂದರು.

ಎಲ್ಲಾ ಜಿಲ್ಲೆಗಳ ಡಿಸಿಗಳಿಗೆ 153 ಕೋಟಿ ರೂ. ರಿಲೀಸ್ ಮಾಡಲಾಗಿದೆ. ಇಂದು ಜೈಲು ಸಿಬ್ಬಂದಿಗೆ ರಕ್ಷಣಾ ಕವಚ ಖರೀದಿಗೆ 2 ಕೋಟಿ ರೂ. ನೀಡಿದ್ದೇವೆ. ಚಾಮರಾಜನಗರದಲ್ಲಿ ಲ್ಯಾಬ್​ಗಾಗಿ ₹1.79 ಕೋಟಿ ರಿಲೀಸ್ ಮಾಡಿದ್ದೇವೆ. ರಾಮನಗರದಲ್ಲಿ ಟೆಸ್ಟಿಂಗ್ ಪ್ರಯೋಗಾಲಯಕ್ಕಾಗಿ ₹1.1 ಕೋಟಿ ಬಿಡುಗಡೆ ಮಾಡಿದ್ದೇವೆ ಎಂದು ವಿವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.