ETV Bharat / state

ಪಾಲಿಕೆಯಿಂದ ಬಿಡುಗಡೆಗೊಳಿಸಿದ ಎಂಜಿನಿಯರ್​ಗಳ ಮರುನೇಮಕಾತಿ ವಿಚಾರದಲ್ಲಿ ಗೊಂದಲ - bangalore latest news

ಆ ನಾಲ್ವರು ಅಭಿಯಂತರರನ್ನು ಮತ್ತೆ ಪಾಲಿಕೆ ಸೇವೆಗೆ ನೇಮಿಸಿಕೊಳ್ಳುವ ಬಗ್ಗೆ ಗೊಂದಲ ಉಂಟಾಗಿದ್ದು, ಸ್ಪಷ್ಟನೆ ಕೊಡುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಪತ್ರ ಬರೆದಿದ್ದಾರೆ.

Confusion over engineers appointment
ಪಾಲಿಕೆಯಿಂದ ಬಿಡುಗಡೆಗೊಳಿಸಿದ ಇಂಜಿನಿಯರ್​ಗಳ ಮರುನೇಮಕಾತಿ ವಿಚಾರ ಗೊಂದಲ
author img

By

Published : Sep 17, 2020, 1:13 PM IST

ಬೆಂಗಳೂರು: ಬಿಬಿಎಂಪಿಯ ಮಲ್ಲೇಶ್ವರಂ, ಗಾಂಧಿನಗರ, ಆರ್.ಆರ್. ನಗರ ವಲಯದ ಕಾಮಗಾರಿಗಳ ಅಕ್ರಮದಲ್ಲಿ ಭಾಗಿಯಾದ ನಾಲ್ವರನ್ನು ಜಸ್ಟಿಸ್ ನಾಗಮೋಹನ್ ದಾಸ್ ವರದಿ ಆಧರಿಸಿ ಪಾಲಿಕೆ ಸೇವೆಯಿಂದ ಬಿಡುಗಡೆಗೊಳಿಸಲಾಗಿತ್ತು. ಆದರೀಗ ಮತ್ತೆ ಅವರನ್ನು ಪಾಲಿಕೆ ಸೇವೆಗೆ ನೇಮಿಸಿಕೊಳ್ಳುವ ಬಗ್ಗೆ ಗೊಂದಲ ಉಂಟಾಗಿದ್ದು, ಸ್ಪಷ್ಟನೆ ಕೊಡುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಪತ್ರ ಬರೆದಿದ್ದಾರೆ.

ಆ ನಾಲ್ವರು ಅಭಿಯಂತರರಾದ ಹರೀಶ್ ಕುಮಾರ್, ವಿ.ಮೋಹನ್, ಜೆ.ಆರ್.ಕುಮಾರ್, ರೇವಣ್ಣರನ್ನು ಪಾಲಿಕೆ ಸೇವೆಯಿಂದ ಬಿಡುಗಡೆಗೊಳಿಸಿದ ಮೇಲೆ ಮಾತೃ ಇಲಾಖೆಗೆ ವರದಿ ಮಾಡಿಕೊಳ್ಳದೆ ಪುನಃ ಪಾಲಿಕೆಯಲ್ಲಿ ಮುಂದುವರೆಸಲು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಮೊರೆ ಹೋಗಿದ್ದರು. ಆದರೆ ಆ ಅರ್ಜಿಯನ್ನು ನ್ಯಾಯ ಮಂಡಳಿ ವಜಾಗೊಳಿಸಿದ್ದು, ಮತ್ತೆ ಪಾಲಿಕೆ ಸೇವೆಗೆ ನಿಯೋಜಿಸಿಕೊಳ್ಳಲು ಪಾಲಿಕೆಗೆ ಯಾವುದೇ ನಿರ್ದೇಶನ ಬಂದಿಲ್ಲ. ಹೀಗಾಗಿ ಸೇವೆಯಿಂದ ಬಿಡುಗಡೆ ಮಾಡಿದ 7-11-19ರಿಂದ ಯಾವ ಪ್ರಾಧಿಕಾರದಿಂದ ವೇತನ ಪಾವತಿಸಬೇಕೆಂದು ಸ್ಪಷ್ಟನೆ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಪಾಲಿಕೆಯಲ್ಲಿ ಕರ್ತವ್ಯದ ಮೇಲೆ ತೆಗೆದುಕೊಳ್ಳುವ ಬಗ್ಗೆಯೂ ಸ್ಪಷ್ಟನೆ ಕೊಡುವಂತೆ ಮನವಿ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.